ಇವತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ. ನಾವು ಇಡೀ ದಿನ ಉಪವಾಸ. ರಾತ್ರಿ ಅವಲಕ್ಕಿ ಉಸ್ಲಿ, ಕಡಲೆ ಉಸ್ಲಿ, ಕಡಲೆ ಬೇಳೆ ಪಂಚಕಜ್ಜಾಯ, ಸಿಹಿ ಅವಲಕ್ಕಿ, ಎಳ್ಳಿನ ಉಂಡೆ ಮತ್ತು ಪಂಚಾಮೃತ ನೈವೈದ್ಯ ಶ್ರೀ ಕೃಷ್ಣನಿಗೆ. ಹೆಚ್ಚಾಗಿ ಮನೆಯ ಯಜಮಾನ ಅಥವಾ ಮಗ ರಾತ್ರಿಯ ಪೂಜೆ ಮಾಡಬೇಕು. ಅಂತದರಲ್ಲಿ ಶ್ರೀಕಾಂತ ಪರ ಊರಲ್ಲಿ ಇರುವುದೇ ಹೆಚ್ಚು. ಈ ದಿನ ಇಲ್ಲೇ ಇದ್ದಾರೆ. ಆದರೆ ಕೈ ಬೆರಳು ಫ್ರಾಕ್ಚರ್ ಮಾಡಿಕೊಂಡು ಈ ವರ್ಷದ ಪೂಜೆಯೂ ನನ್ನ ಪಾಲಿಗೆ. ಇಗೋ ಇಲ್ಲಿದೆ ನಮ್ಮ ದೇವರ ಮನೆ.
ಈವಾಗ್ ಈವಾಗ ಯಾರಿಗೆ ನೋಡಿದರೂ ಎಸಿಡಿಟಿ ಪ್ರಾಬ್ಲಮ್. ಆದ್ದರಿಂದ ಉಪವಾಸ ಇರಕ್ಕಾಗಲ್ಲ. ನಾವು ಮಧ್ಯಾಹ್ನ್ ಚಪಾತಿ ಮಾಡುತ್ತೇವೆ. ಅದಕ್ಕೆ ಮಿಶ್ರ ತರಕಾರಿಗಳ ಹುಳಿ- ಕೊಂಕಣಿಯಲ್ಲಿ ಗಜಬಜೋ ಅನ್ನುತ್ತೇವೆ. ಅದನ್ನೇ ಮಾಡಿದೆ. ಮತ್ತು ಕೆಸುವಿನ ಎಲೆ + ಆಮ್ಟೆ ಕಾಯಿಯ ಆಳ್ವತಿ. ಇಲ್ಲಿದೆ ಅದರ ಚಿತ್ರ.
ಮತ್ತೆ ಎಲ್ಲರೂ ತಮ್ಮ ಮಕ್ಕಳು ಚಿಕ್ಕವರಿರುವಾಗ ಒಂದಲ್ಲ ಒಂದು ಸಲ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿಕೊಂಡು ಫೋಟೊ ತೆಗೆಸಿರಬೇಕು. ನಾನು ಮಾಡಿಲ್ಲ. ಮಾಲವಿಕಳ ಉದ್ದ ಕೂದಲಿಗೆ ಮೊಗ್ಗಿನ ಜಡೆ ಬಿಟ್ಟರೆ ನನಗೆ ಅಂತದ್ದರಲ್ಲಿ ಇಂಟರೆಸ್ಟ್ ಏ ಇಲ್ಲ. ಮಕ್ಕಳ ಬಳಿ ಮಾತನಾಡುವಾಗ did you miss such stuffs (ಹೌದು ಎಲ್ಲದ್ದಕ್ಕೂ stuff ಅಂತ ಹೇಳಿ ಹೇಳಿ ಈಗಾಗಲೇ ಹಲವಾರು ಬಾರಿ ರಾಯರಿಂದ ಬೈಸಿಕೊಂಡಾಯ್ತು :-) ) ಅಂತ ಕೇಳಿದ್ರೆ. Not really..its too boring ಅಂದ್ರು. ಮನಸ್ಸಿಗೆ ಸಮಾಧಾನ ಆಯ್ತು. ಮಾಲವಿಕಾ ಇದನ್ನೂ ಸೇರಿಸಿದ್ಲು then i don't count you among normal people ಅಂತ. whatever that means..ನಾ ತಲೆ ಕೆಡಿಸ್ಕೊಳ್ಳಕ್ಕೆ ಹೋಗಲ್ಲಪ್ಪಾ..:-)
ಸೋ ಹಬ್ಬಕ್ಕೆ ಸ್ಪೆಷಲ್ ಆಗಿ ಒಂದು ರೆಸಿಪಿ. ನಿಹಾ and freinds ರ ಲಂಚ್ ಬಾಕ್ಸ್ ಗೆ ಮಾಡಿ ಕೊಟ್ಟಿದ್ದೆ
ನನ್ನ ಅಜ್ಜ ಇಂಜಿನಿಯರ್ ಅಂತ ಹಳೆ ಪೋಸ್ಟ್ ಗಳಲ್ಲಿ ನಿಮ್ಮ ಜತೆ ಹಂಚಿಕೊಂಡಿದ್ದೇನಲ್ಲವೇ? ಹಾಗೆ ಅವರು great foodie ಕೂಡ ಆಗಿದ್ದರು. ಭಾರತದ ಉದ್ದಗಲ ಅವರ ಕೆಲಸದ ನಿಮಿತ್ತ ತಿರುಗಾಟದಲ್ಲಿ ಅವರು ತಿಂದ ತಿಂಡಿಗಳಲ್ಲೇ ನನಗೆ ವಿಶಿಷ್ಟ ಅನಿಸಿದ್ದು ಈ ’ವಸ್ತಾದ್/ವಸ್ತಾದಿ ರೊಟ್ಟಿ. ತಿಂಡಿಯನ್ನು ಎಂಜಾಯ್ ಮಾಡುವುದು ಮಾತ್ರವಲ್ಲ ಅದನ್ನು ತಯಾರಿಸುವ ವಿಧಾನ ಕೂಡ ಕಲಿತು ರಾಜೀವಿಯಿಂದ ಮಾಡಿಸಿಕೊಳ್ಳುತ್ತಿದ್ದರು. ಅವರ ಮೂಲಕ ನಮ್ಮ ಅಮ್ಮ ಕಲಿತು ನಮ್ಮ ಮೇಲೆ ಪ್ರಯೋಗ ಮಾಡುತ್ತಿದ್ದಳು. mom is a great cook. But then all moms are!! :-)
Krishnaaaaaaaaaaaaaaaaa...ಎನಬಾರದೆ??
ಈವಾಗ್ ಈವಾಗ ಯಾರಿಗೆ ನೋಡಿದರೂ ಎಸಿಡಿಟಿ ಪ್ರಾಬ್ಲಮ್. ಆದ್ದರಿಂದ ಉಪವಾಸ ಇರಕ್ಕಾಗಲ್ಲ. ನಾವು ಮಧ್ಯಾಹ್ನ್ ಚಪಾತಿ ಮಾಡುತ್ತೇವೆ. ಅದಕ್ಕೆ ಮಿಶ್ರ ತರಕಾರಿಗಳ ಹುಳಿ- ಕೊಂಕಣಿಯಲ್ಲಿ ಗಜಬಜೋ ಅನ್ನುತ್ತೇವೆ. ಅದನ್ನೇ ಮಾಡಿದೆ. ಮತ್ತು ಕೆಸುವಿನ ಎಲೆ + ಆಮ್ಟೆ ಕಾಯಿಯ ಆಳ್ವತಿ. ಇಲ್ಲಿದೆ ಅದರ ಚಿತ್ರ.
the stuffs we Konkanis eat!! :-) mmmm love this though. eating colocasia leaves once in a while cleanses the stomach of stray hair and stuffs that we consume unknowingly :-(
ಮತ್ತೆ ಎಲ್ಲರೂ ತಮ್ಮ ಮಕ್ಕಳು ಚಿಕ್ಕವರಿರುವಾಗ ಒಂದಲ್ಲ ಒಂದು ಸಲ ಮಕ್ಕಳಿಗೆ ಕೃಷ್ಣನ ವೇಷ ಹಾಕಿಸಿಕೊಂಡು ಫೋಟೊ ತೆಗೆಸಿರಬೇಕು. ನಾನು ಮಾಡಿಲ್ಲ. ಮಾಲವಿಕಳ ಉದ್ದ ಕೂದಲಿಗೆ ಮೊಗ್ಗಿನ ಜಡೆ ಬಿಟ್ಟರೆ ನನಗೆ ಅಂತದ್ದರಲ್ಲಿ ಇಂಟರೆಸ್ಟ್ ಏ ಇಲ್ಲ. ಮಕ್ಕಳ ಬಳಿ ಮಾತನಾಡುವಾಗ did you miss such stuffs (ಹೌದು ಎಲ್ಲದ್ದಕ್ಕೂ stuff ಅಂತ ಹೇಳಿ ಹೇಳಿ ಈಗಾಗಲೇ ಹಲವಾರು ಬಾರಿ ರಾಯರಿಂದ ಬೈಸಿಕೊಂಡಾಯ್ತು :-) ) ಅಂತ ಕೇಳಿದ್ರೆ. Not really..its too boring ಅಂದ್ರು. ಮನಸ್ಸಿಗೆ ಸಮಾಧಾನ ಆಯ್ತು. ಮಾಲವಿಕಾ ಇದನ್ನೂ ಸೇರಿಸಿದ್ಲು then i don't count you among normal people ಅಂತ. whatever that means..ನಾ ತಲೆ ಕೆಡಿಸ್ಕೊಳ್ಳಕ್ಕೆ ಹೋಗಲ್ಲಪ್ಪಾ..:-)
ಸೋ ಹಬ್ಬಕ್ಕೆ ಸ್ಪೆಷಲ್ ಆಗಿ ಒಂದು ರೆಸಿಪಿ. ನಿಹಾ and freinds ರ ಲಂಚ್ ಬಾಕ್ಸ್ ಗೆ ಮಾಡಿ ಕೊಟ್ಟಿದ್ದೆ
ನನ್ನ ಅಜ್ಜ ಇಂಜಿನಿಯರ್ ಅಂತ ಹಳೆ ಪೋಸ್ಟ್ ಗಳಲ್ಲಿ ನಿಮ್ಮ ಜತೆ ಹಂಚಿಕೊಂಡಿದ್ದೇನಲ್ಲವೇ? ಹಾಗೆ ಅವರು great foodie ಕೂಡ ಆಗಿದ್ದರು. ಭಾರತದ ಉದ್ದಗಲ ಅವರ ಕೆಲಸದ ನಿಮಿತ್ತ ತಿರುಗಾಟದಲ್ಲಿ ಅವರು ತಿಂದ ತಿಂಡಿಗಳಲ್ಲೇ ನನಗೆ ವಿಶಿಷ್ಟ ಅನಿಸಿದ್ದು ಈ ’ವಸ್ತಾದ್/ವಸ್ತಾದಿ ರೊಟ್ಟಿ. ತಿಂಡಿಯನ್ನು ಎಂಜಾಯ್ ಮಾಡುವುದು ಮಾತ್ರವಲ್ಲ ಅದನ್ನು ತಯಾರಿಸುವ ವಿಧಾನ ಕೂಡ ಕಲಿತು ರಾಜೀವಿಯಿಂದ ಮಾಡಿಸಿಕೊಳ್ಳುತ್ತಿದ್ದರು. ಅವರ ಮೂಲಕ ನಮ್ಮ ಅಮ್ಮ ಕಲಿತು ನಮ್ಮ ಮೇಲೆ ಪ್ರಯೋಗ ಮಾಡುತ್ತಿದ್ದಳು. mom is a great cook. But then all moms are!! :-)
ಇಲ್ಲಿದೆ ವಸ್ತಾದ್ ರೊಟ್ಟಿ ಮಾಡುವ ವಿಧಾನ
ಒಂದು ಕಪ್ ಮೈದಾ, ಎರಡು ದೊಡ್ಡ ಚಮಚೆ ಮೊಸರು, ಅರ್ಧ ಟೀ ಸ್ಪೂನ್ ಅಡಿಗೆ ಸೋಡಾ, ಒಂದು ಟೀ ಸ್ಪೂನ್ ಜೀರಿಗೆ, ಮಿಕ್ಸಿಯಲ್ಲಿ ಹಾಕಿದ ಎರಡು ಹಸಿ ಮೆಣಸು, ಉಪ್ಪು , ಚಿಟಿಕೆ ಸಕ್ಕರೆ
ಮೊದಲಿಗೆ ಮೊಸರಿನಲ್ಲಿ ಉಪ್ಪು ಸಕ್ಕರೆ ಮತ್ತು ಸೋಡಾ ಪುಡಿ ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿ. ಅದು ಬುರುಗು ಬರುತ್ತೆ. ಇದಕ್ಕೆ ಹಸಿಮೆಣಸಿನಕಾಯಿಯ ಪೇಸ್ಟ್ ಬೆರೆಸಿ, ಆಮೇಲೆ ಜೀರಿಗೆ, ಕೊನೆಯಲ್ಲಿ ಮೈದಾ ಬೆರೆಸಿ, ನೀರು ಹಾಕಿ ತುಂಬಾ ಅಂದ್ರೆ ತುಂಬಾsssss ಮೆತ್ತಗಿನ ಕಣಕ (dough)ತಯಾರಿಸಿ. 6 ಗಂಟೆಗಳ ಕಾಲ ಇದನ್ನು ಹುದುಗಲು ಬಿಡಿ. ನಾನು ರಾತ್ರಿ ಹಿಟ್ಟು ತಯಾರಿಸಿ ಬೆಳಗ್ಗೆ ಈ ರೊಟ್ಟಿಯನ್ನು ತಯಾರಿಸುವುದು.
6 ಗಂಟೆಗಳ ನಂತರ ಹಿಟ್ಟು ಉಬ್ಬಿ ಎರಡರಷ್ಟಾಗುತ್ತದೆ. ಹಿಟ್ಟಿನ ದೊಡ್ಡ ಗಾತ್ರದ ಉಂಡೆ ಮಾಡಿ. ಸ್ವಲ್ಪವೆ ತಟ್ಟಿ ಕಾವಲಿಯ ಮೇಲೆ ಚಪಾತಿ ತರಹ ಬೇಯಿಸಿ. ಮೊದಲಿಗೆ ಸ್ವಲ್ಪ ಹೊತ್ತು ಮುಚ್ಚಿ ಬೇಯಿಸಿ, ರೊಟ್ಟಿ ಚೆನ್ನಾಗಿ ಉಬ್ಬುತ್ತೆ. ಆಮೇಲೆ ಎಣ್ಣೆ ಹಾಕಿ ಕವುಚಿ ಹಾಕಿ. ಎರಡು ಬದಿ ಕೆಂಪಾಗುವವರೆಗೆ ಬೇಯಿಸಿ. ಒಳಗಡೆ ಸಾಫ್ಟ್ ಬನ್ ತರಹ ಆಗುತ್ತೆ
ಇದನ್ನು ಬಿಸಿ ಬಿಸಿ ಇದ್ದಾಗ ಬೆಣ್ಣೆ ಮೆತ್ತಿ ತಿನ್ನ ಬಹುದು ಅಥವಾ ಮಾಲವಿಕಾಳ fav ದಾಲ್ ತೊವ್ವೆ ಜತೆ. ನಿಹಾಳ ಫ್ರೆಂಡ್ಸ್ ಗೆ ಇದು ತುಂಬಾ ಇಷ್ಟ ಆಗಿದೆ. ನೀವು ಮಾಡಿ ನೋಡಿ. ಹೇಗೂ ರಜೆಗಳ ಸಾಲು. ನೀರುಳ್ಳಿಗೂ ರೇಟ್ ಏರಿದೆ. ಹಾಗಾಗಿ ಬ್ರೇಕ್ ಫಾಸ್ಟ್ ಗೆ ರೂಟಿನ್ ದೋಸೆ, ಉಪ್ಪಿಟ್ಟು, ಪೂರಿ-ಪಲ್ಯ ದಿಂದ ಚೆಂಜ್ ಇರುತ್ತೆ. ಇದನ್ಯಾಕೆ ಟ್ರೈ ಮಾಡಬಾರದು?
ತಿಂದಾದ ಮೇಲೆ ’ಅರೇ ಹುಜುರ್ ವಾಹ್ ಉಸ್ತಾದ್ ನಹೀಂ ವಾಹ್ ’ವಸ್ತಾದ್’ ಬೊಲಿಯೇ ಅನ್ನಲು ಹರಕತ್ ಇಲ್ಲ..:-) :-)
ನೀವು ಇದನ್ನು ಟ್ರೈ ಮಾಡಿ ನೋಡಿ, ನಾವು ಒಂದು ರೌಂಡ್ ಊರಿಗೆ ಹೋಗಿ ಬರುತ್ತೇವೆ..ಆಗಬಹುದಾ??
see you when i see you, bye
ನಿಹಾ ಕ್ಲಿಕ್ಕಿಸಿದ ಕೃಷ್ಣಾವತಾರಗಳು ಕೇವಲ ನಿಮಗೋಸ್ಕರ...:-) enjoy. Happy Krishnasthami. ಕಿಟಕಿ, ಬಾಗಿಲು, ಧೂಪ ದೀಪ ಎಲ್ಲೆಂದರಲ್ಲಿ ಕೃಷ್ಣ.......
come back and save the world: my favorite by Harharan and Leslie Lewis: ಕೃಷ್ಣಾ ನಿ ಬೇಗನೆ ಬಾರೋ...
Krishna nee begane baro
:-)