August 5, 2013

ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು- ಬ್ಲಾಗ್ ಲೋಕದಲ್ಲಿ 5 ನೇ ವರ್ಷಕ್ಕೆ


ನೇಮಿಚಂದ್ರರ ಬರಹಗಳ ಬಗ್ಗೆ ಹಲವಾರು ಸ್ನೇಹಿತರಿಂದ ಕೇಳಿದ್ದೆ. ಶ್ರೀಕಾಂತ ಕೂಡ ವರ್ಷಗಳ ಹಿಂದೆ ಅವರ ಧಾರಾವಾಹಿಯೊಂದನ್ನು ಸುಧಾ ವಾರ ಪತ್ರಿಕೆಯಲ್ಲಿ ಓದಿದ್ದು, 'ನೀನು ಅವರ ಪುಸ್ತಕ ಓದಲೇ ಬೇಕು ತುಂಬಾ ಚೆನ್ನಾಗಿ ಬರೀತಾರೆ' ಅಂದಿದ್ದರು. ಆದರೂ ಪ್ರತಿ ಸಲ ಪುಸ್ತಕದಂಗಡಿಗೆ ಭೇಟಿ ಕೊಟ್ಟಾಗ ಅವರ ಪುಸ್ತಕದ ಬಗ್ಗೆ ಮರೆತು ಹೋಗುತ್ತಿತ್ತು.
ತಂಗಿ ಬಂದಾಗ ಹೊರಟಿದ್ದು ಅಂಕಿತಾಗೆ ಆದ್ರೆ ಮಳೆಯರಾನ ಕೃಪೆ, ಹೊಕ್ಕಿದ್ದು ಬೆಳೆಗೆರೆ ಬುಕ್ಸ್ ಎಂಡ್ coffee. ನನ್ನ ತಂಗಿಯ ಮಕ್ಕಳು 8 ಹಾಗೂ11 ವರ್ಷದವರು. ಅವರಿಬರಿಗೂ ಸಿಕ್ಕಾಪಟ್ಟೆ ಓದುವ ಹುಚ್ಚು. ಅಷ್ಟೆ ಅಲ್ಲ ಚಿಕ್ಕವಳು ಆಗಲೇ ಎರಡು ಪುಸ್ತಕ ಪಬ್ಲಿಷ್ ಮಾಡಿದ್ದಾಳೆ. ಅವರಿಗೆ ಕೆಲವು ಇಂಗ್ಲಿಷ್ ಪುಸ್ತಕ ತೆಗೆಸಿಕೊಡ್ತೇನೆ ಅಂದಿದ್ದೆ. ಅದಕ್ಕೆ ಆ ದಿನ ಪುಸ್ತಕ ಅಂಗಡಿಗೆ ಭೆಟ್ಟಿ ನೀಡಿದ್ದು.
so  BBC ಯಲ್ಲಿ ಸಿಕ್ಕಿತು ಚಂದದ ಮುಖಪುಟದ 'ಇಲ್ಲಿಯವರೆಗಿನ ನೇಮಿಚಂದ್ರರ ಕತೆಗಳು’. ತೆಗೆದುಕೊಂಡು ಬಿಟ್ಟೆ. ಮತ್ತು ಅದನ್ನು ಹಾಗೆ ಕಪಾಟೊಳಗೆ ತುರುಕಿಸಿಟ್ಟೆ.
ಇತ್ತೀಚಿಗೆ ನಟರಾಜು (ಪಂಜು ಇ- magazine) ಫೋನ್ ಮಾಡಿದಾಗ 'mom 25 ನೇ ಸಂಚಿಕೆ ಹೊರ ಬರ್ತಾ ಇದೆ ಪ್ಲೀಸ್ ಏನಾದರೂ ಬರೆದುಕೊಡಿ ಅಂದಾಗ 'ನನಗೆ ಹಾಗೆಲ್ಲ ಬರೆಯಲಿಕ್ಕೆ ಬರಲ್ಲ ನನ್ನ ಬರಹ ಸ್ಲೋ. ನಾನು ಇಂಗ್ಲಿಷ್ ನಲ್ಲಿ ಆಲೋಚನೆ ಮಾಡಿ ಅದನ್ನು ಕನ್ನಡಕ್ಕಿಳಿಸಬೇಕು. ಆದರೆ ಏನಾದರೂ ಬರೆದ್ರೆ first preference ನಿಮ್ಮ ಪತ್ರಿಕೆಗೆ ಅಂತ ಹೇಳಿದ್ದೆ. ಅದೇ ಸಮಯ ನಾನು 'Women Writing in India-600 BC to the present' ಪುಸ್ತಕ ಓದುತ್ತ ಇದ್ದೆ. ಕ್ರಿಸ್ತ ಪೂರ್ವ 600 ನಿಂದ  ಇತ್ತೀಚಿನ ವರೆಗಿನ ಭಾರತದ ಎಲ್ಲೆಡೆಯಿಂದ ಕಲೆ ಹಾಕಿದ ಮಹಿಳಾ ಬರಹಗಳು- ಕವನಗಳು/ಕತೆಗಳು . ಅದರಲ್ಲಿ ನನಗೆ ಕಾಡಿಸಿದ ಎರಡು ಕತೆಗಳಲ್ಲಿ ಒಂದನ್ನು ತರ್ಜುಮೆ ಮಾಡಿ ಕಳುಹಿಸಿದೆ. ಅವರು ಪ್ರಕಟಿಸಿದ ಮೇಲೆ ಅದರ ಕೊಂಡಿಯನ್ನು ನನ್ನ ಬ್ಲಾಗ್ ನಲ್ಲಿ ಹಾಕ್ಕೊಂಡಿದ್ದೆ. ಆ ಬರಹಕ್ಕೆ ರವೀಂದ್ರ ವಳಗೆರೆ ಅವರ ಪ್ರತಿಕ್ರಿಯೆ ಹೀಗಿತ್ತು :
narration is good.ಒಂದು ರೀತಿಯಲ್ಲಿ ನೇಮಿಚಂದ್ರರ ಕಥೆ ಓದಿದ ಹಾಗಾಯಿತು
ಇದು ನನ್ನ ಕುತೂಹಲ ಕೆರಳಿಸಿತ್ತು. ಸರಿ ಪುಸ್ತಕ ಹುಡುಕಿಕೊಂಡು ಓದಿದೆ. ಪುಸ್ತಕ ಮುಗಿಯುವವರೆಗೆ ನಾನು ಅದನ್ನು ಕೆಳಗಿಡಲಿಲ್ಲ. ಅಷ್ಟು ಚೆಂದದ ಕತೆಗಳು. ಅವರ ಕತೆಗಳು ನನ್ನನ್ನು ತುಂಬ ಕಾಡಿದವು. ಬರಹ ಚಂದ ಇದ್ರೆ ಮಾತ್ರ ಸಾಕಾಗಲ್ಲ ಅದು ಚಿಂತನೆಗೂ ಹಚ್ಚಬೇಕು. ಅವರ ಕತೆಯ ಪಾತ್ರಧಾರಿ 'ಮಹಿಳೆ' ಯಾದರೂ ಅದನ್ನು ವೈಭವೀಕರಿಸಿಲ್ಲ. ಪರಿಸರಕ್ಕೆ ತಕ್ಕ ಹಾಗೆ ಅವಳ ಸಂಬಂಧ/ ಮನಸ್ಸನ್ನು ಎಳೆ ಎಳೆಯಾಗಿ, ಆಳವಾಗಿ ಸರಳವಾಗಿ ವಿಶ್ಲೇಷಿಸಿ ನಮ್ಮುಂದೆ ಇಡುವ ಕಲೆಗೆ ನಾನು dumbstruck. ನನಗೆ ತುಂಬಾsssss ಅಂದ್ರೆ ತುಂಬ ಇಷ್ಟವಾದ ಕತೆ 'ಓ ನನ್ನ ಪೀಯರಿ' 1990 ನಲ್ಲಿ ಬರೆದದ್ದಾದರೂ ಈಗಲೂ ಎಷ್ಟು ಪ್ರಸ್ತುತ ಎನಿಸಿತು. ಖಂಡಿತ ಓದದೆ ಇರುವವರು ಅವರ ಪುಸ್ತಕವನ್ನು ಓದಲೇ ಬೇಕು. ನಾನು ಮುಂದಿನ ಬಾರಿ ಅವರ ಎಲ್ಲ ಪುಸ್ತಕಗಳನ್ನು ಕೊಳ್ಳುವ ಪಣ ತೊಟ್ಟಿದ್ದೇನೆ. ಅದು ಹೇಗೆ ಅವರು ನನಗೆ ಮಿಸ್ ಆದರೂ ಗೊತ್ತಿಲ್ಲ. ಆದರೆ ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂಬುದು ನಿಜ. i am glad i came across her book. ನನ್ನಲೇನೋ ಬದಲಾವಣೆಯಾದ ಅನುಭವ. ಈಗ ನನಗಿಷ್ಟವಾದ ಬರಹಗಾರರಾದ ವಸುಧೇಂದ್ರ, ಯಶವಂತ ಚಿತ್ತಾಲ, ಶ್ರೀನಿವಾಸ ವೈದ್ಯ, ಯು. ಆರ್. ಅನಂತಮೂರ್ತಿ, ವೈದೇಹಿ, ವಿವೇಕ ಶಾನಭಾಗ ಇವರ ಪಟ್ಟಿಯಲ್ಲಿ ನೇಮಿಚಂದ್ರರೂ ಕೂಡ ಸೇರಿದ್ದಾರೆ.
ನಮ್ಮ ಸಂಸ್ಥೆಯ 10 ನೆ ವರ್ಷದ ಹುಟ್ಟುಹಬ್ಬದ ಸಂದರ್ಭಕ್ಕೆ ನೇಮಿಚಂದ್ರರನ್ನು chief guest ಆಗಿ ಕರೆಸುವ ಪ್ಲ್ಯಾನ್ ಹಾಕಿಕೊಂಡಿದ್ದೆವು. ಮಿತ್ರ ವಸುಧೇಂದ್ರ ಕೂಡ ಇದಕ್ಕೆ ಸಹಕರಿಸಿದ್ದರು. ಆದರೆ ಅವರು ಉತ್ತರ ಭಾರತಕ್ಕೆ ಯಾವುದೋ ಪ್ರಾಜೆಕ್ಟ್ ನಲ್ಲಿ ನಿರತರಾದ್ದರಿಂದ ಅವರಿಗೆ ಬರಲಾಗಲಿಲ್ಲ. ಆಗ ಏನಾದ್ರೂ ಅವರು ಬಂದಿದ್ದರೆ ಅವರ ಬಗ್ಗೆ ಏನೂ ಗೊತ್ತಿಲ್ಲ ಅಂತಲೇ ಹೇಳಬೇಕಾಗ್ತಿತ್ತು. ಈಗ ಸಿಕ್ಕಿದರೆ ಅವರ ಕೆಲವು ಕತೆಗಳನ್ನಾದ್ರೂ ಓದಿದರಿಂದ ಮಾತನಾಡಲೂ ಟಾಪಿಕ್ ಇದೆ ಅಂತ ನನ್ನಷ್ಟಕ್ಕೆ ನಾನು ಆಲೋಚಿಸ್ತಾ ಇದ್ದೆ. ಶ್ರೀಕಾಂತ ಗೆ ಬೆಳಿಗ್ಗೆ ಅವರ ಕತೆಗಳ ಬಗ್ಗೆ ಹೇಳಿದಾಗ ಅವರು 'ಅವರು ವರ್ಷಕ್ಕೆ ಒಂದೆ ಕತೆ ಬರೆಯೋದು' ಅದಕ್ಕೆ ಅಷ್ಟು ಆಳವಾದ ವಿಚಾರಗಳು ಅವರ ಕತೆಯಲ್ಲಿರುತ್ತದೇನೋ ಅಂದರು'  ನನಗೆ ಅವರ ಹಾಗೆಲ್ಲ ಬರೀಲಿಕ್ಕೆ ಸಾಧ್ಯಾನೇ ಇಲ್ಲ. ನನಗೆ ಮನುಷ್ಯರ psyche ಒಳಹೊಕ್ಕುವ ಕಲೆ ಇಲ್ಲ. ನಾ ಏನಾದರೂ ನನ್ನ ಬ್ಲಾಗ್ ನಲ್ಲಿ ನನಗೆ ಅನಿಸಿದ್ದನ್ನು ಚಿಕ್ಕ ಚಿಕ್ಕ ತುಣುಕುಗಳನ್ನಾಗಿ ಹಾಕಬಲ್ಲೆಯಷ್ಟೆ. ಆದರೂ ನನಗೆ ಆಶ್ಚರ್ಯ ನಾನೀಗ ಬ್ಲಾಗ್ ಲೋಕದಲಿ 5 ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಹಲವಾರು ಚೆನ್ನಾಗಿರುವ ಬ್ಲಾಗ್ ಗಳಲ್ಲಿ ಸುಮಾರು ಸಮಯದಿಂದ ಬರಹಗಳು ನಿಂತು ಹೋಗಿವೆ. ಹಲವಾರು ಕಾರಣಗಳಲ್ಲಿ ಫೇಸ್ ಬುಕ್ ಕೂಡ ಒಂದು ಅಂತ ನಾನು ಸಂಪರ್ಕಿಸಿದ ಕೆಲ ಬ್ಲಾಗ್ ಮಿತ್ರರು ಹಂಚಿಕೊಂಡಿದ್ದಾರೆ.  ನನ್ನ ತಂಗಿ ಬಂದ ಸಂದರ್ಭದಲ್ಲಿ ನಾನು ಫೇಸ್ ಬುಕ್ ಎಕೌಂಟ್ ಡಿ ಎಕ್ಟಿವೇಟ್ ಮಾಡಿದ್ದೀನಿ ನಿಜ. ಆದರೆ ನಾನು ಫೇಸ್ ಬುಕ್ ನಲ್ಲಿ ಅತ್ಯಂತ ಕ್ರಿಯಾಶೀಲೆಯಾಗಿದ್ರೂ (ಅಲ್ಲಿ ನನ್ನ ಬಗ್ಗೆ ನಾನೇ ಟಾಮ್ ಟಾಮ್ ಮಾಡ್ತಿದ್ದೆ ಈಗ ನಿಜಕ್ಕೂ ನಾಚಿಕೆಯಾಗ್ತಿದೆ. ಅದು ನನಗೆ ಚಟ ಆಗಿತ್ತು. ಬೆಳಿಗ್ಗೆ ಎದ್ದ ಕೂಡಲೆ ಫೇಸ್ ಬುಕ್ ಹಾಕಿಕೊಂಡಿರುತ್ತಿದ್ದೆ ) ಕೂಡ ನನ್ನ ಬ್ಲಾಗ್ ಬರಹ ಬಿಟ್ಟಿರಲಿಲ್ಲ. ನನಗೆ ತೋಚಿದ್ದನ್ನು ಗೀಚ್ತಾ ಹೋಗಿದ್ದೇನೆ. ಹಲವಾರು ಬಾರಿ ಶ್ರೀಕಾಂತ ನನಗೆ ಸುಮ್ಮ ಸುಮ್ಮನೆ ಏನೆನೋ ಬರಿತೀಯಾ ಅಂದಿದ್ದಾರೆ. ನನ್ನ ಬ್ಲಾಗ್ ಹೆಚ್ಚು ಕಡಿಮೆ ನನ್ನ extended Diary ಅಂತ್ಲೆ ಹೇಳಬಹುದು. ನನ್ನ ಟ್ರಾವೆಲ್, ನಾನು ಅಡಿಗೆ ಮನೆಯಲ್ಲಿ ಮಾಡುವ ತಿಂಡಿಗಳು, ನನಗೆ ಸಿಕ್ಕಿದಂತಹ ವ್ಯಕ್ತಿಗಳ ಬಗ್ಗೆ ನನಗನ್ನಿಸಿದ ಹಾಗೆ ಬರಹಗಳು. ಯಾರು ಓದುತ್ತಾರೆಂದರೂ ಕೂಡ ನನ್ನ ಬ್ಲಾಗ್ ಹಿಟ್ ಸಂಖ್ಯೆ 60000+ ದಾಟಿದೆ.85 ಜನ ನನ್ನ ಹಿಂಬಾಲಿಸುವವರೂ ಇದ್ದಾರೆ. ಯಾವ್ ಯಾವುದೋ ಹುಡುಕು ಪದ ಹಾಕಿಕೊಂಡು ಬರುವವರಿದ್ದಾರೆ. ಮೊದಲ ಪೋಸ್ಟ್ ನಿಂದ ಓದಿಕೊಂಡು ಬಂದು ಮೈಲ್ ಹಾಕುವವರಿದ್ದಾರೆ, sunnyvale, california ದಿಂದ ’ಬೀಹಾರ್ -ಕೆಲವು random ನೆನಪುಗಳು' ಜಾಡು ಹಿಡಿದುಕೊಂಡು ಓದುಗರೊಬ್ಬರು ದಿನಾ ಬಂದು ಹೋಗುತ್ತಾರೆ. ಅಥವಾ ಇಲ್ಲಿಗೆ ಬಂದು ನನ್ನ ಬ್ಲಾಗ್ ಲಿಸ್ಟ್ ನಲ್ಲಿ ಹಾಕಿದ ಇತರರ ಬ್ಲಾಗ್ ನ ಜಾಡು ಅರಸಿ ಹೊರಡುತ್ತಾರೆ. ಹೆಚ್ಚಿನ ಓದುಗರು 'ಅವರೆಕಾಳು ಸೀಸನ್' ಕೊಂಡಿಯನ್ನೂ, ಇನ್ನೂ ಕೆಲವರು 'tribute to Ravindranath Tagore' ಜಾಡನ್ನು ಹಿಡಿದು ಬರುತ್ತಾರೆ. ಎರಡೆ ದಿನಗಳಲ್ಲಿ 240 ಓದುಗರು 'ಹೇಳತೇವ ಕೇಳ ಓದಿದ ಮೇಲೆ' ಪೋಸ್ಟ್ ಅನ್ನು ಓದಿದ್ದು ಒಂದು ದಾಖಲೆ ದೇಶದ ಎಲ್ಲೆಡೆಯಿಂದ ಬಂದು ಓದುವವರನ್ನು ಕಂಡು ನಾನು ಮೂಕವಿಸ್ಮಿತಳಾಗಿದ್ದೇನೆ, ಅವರಿಂದ ಒಂದೆರಡು ಸಾಲುಗಳ ಮೈಲ್ ಬಂದಾಗಲೂ ಖುಶಿಪಟ್ಟಿದ್ದೇನೆ. ನನ್ನ ಇಷ್ಟದ ಬರಹಗಾರರು ಹೊಗಳಿ ಮೈಲ್ ಹಾಕಿದ್ದಾಗ ಒಂದೆರಡು ದಿನ ಗಾಳಿಯಲ್ಲಿ ಹಾರಾಡಿದ್ದೇನೆ. 
ಈ ತರಹದ ಬೆಂಬಲದ ಮೈಲ್ ಗಳೆ ನನ್ನ ಬ್ಲಾಗ್ ಬರಹಗಳಿಗೆ ಕಾರಣ:

":) Channagidey :) nimma baravaNigeyalli kaaNisikoLLuva lavalavike, jeewantike, mughdateya kuritu onderDu saalu irabekittu anta annistu. adu biTTre tumba channage parichayisiddare nimma blog-annu :) congrats :)" (ಇದು ಪುಣೆಯಿಂದ ಬಂದ ಮೈಲ್ ನ ಒಕ್ಕಣೆ ನನ್ನ ಬ್ಲಾಗ್ ಬಗ್ಗೆ ಪ್ರಜಾವಣಿಯಲ್ಲಿ ಬಂದಾಗ

"And you thought my praise was too much, too soon!

You know what, when you write something it is as though you are talking right here in front of us.

And your blogposts, your SMSes all come directly from your heart to go straight touching ours !

May your tribe increase! "(ಇದು ಮಂಗಳೂರಿನ ಬ್ಲಾಗ್ ಓದುಗರ ಮೈಲ್ ನ ತುಣುಕು)

ಆಪ್ತ ಮಿತ್ರರು ನನ್ನ ಕನ್ನಡ ಬಹಳಷ್ಟು ಸುಧಾರಿಸಿದೆ ಅಂದಾಗ ಖುಶಿಯಾಗಿದೆ.
ನಿಮ್ಮ ಅತ್ಯಮೂಲ್ಯ ಸಮಯದಲ್ಲಿ ನನ್ನ ಬ್ಲಾಗ್ ಪೋಸ್ಟ್ ಗಳಿಗೆ ಸ್ವಲ್ಪ ಸಮಯಕೊಡುವುದಲ್ಲದೇ ಕಮೆಂಟ್ ಕೂಡ ಮಾಡುತ್ತೀರಿ ಅದಕ್ಕೂ ಧನ್ಯವಾಗಳು.
ಪುನ: ರಘು ಅಪಾರ, ಶ್ರೀಕಾಂತ ರಾಯರು, ಶ್ಯಾಮ್- thatskannada, ಅವಧಿ ಮ್ಯಾಗ್, ಪ್ರಜಾವಾಣಿ, ವಿಜಯಕರ್ನಾಟಕ, ಓದುಗ ಮಿತ್ರರಾದ ನಿಮಗೆ ನನ್ನ ಹೃದಯಾಳದ ಕೃತಜ್ಞತೆಗಳು.
:-)
P.S: ಶನಿವಾರ exciting ದಿನವಾಗಿತ್ತು. ಮಾಲವಿಕಾ, ಅಮ್ಮ, ದೀಪಾ (ತಮ್ಮ ಕೃಷ್ಣನ ಹೆಂಡತಿ) ಪದ್ಮಾ (ತಮ್ಮ ಪಾಂಡುವಿನ ಹೆಂಡತಿ) ಇಷ್ಟು ಜನರ ಹುಟ್ಟುಹಬ್ಬ ಒಂದೇ ದಿನ ಮಾತ್ರವಲ್ಲ, PRCI (Press relations council of India) ದ ಭಾಗವಾದ Young Communicators Club (YCC) ವತಿಯಿಂದ ನಿಹಾರಿಕಾಗೆ Young Achievers Award 2013 ಪ್ರಶಸ್ತಿ ನೀಡಲಾಯಿತು.


8 comments:

  1. ಐದನೇ ವರ್ಷ.... ಒಹ್ its great... carry on pacchi... Lots more to come .... :)

    ReplyDelete
  2. Congratulations:) on fifth year! I type nenapina stanchi on google and enter ur blog every time :) had first got introduced like that only when two years back was reading something on Thirthahalli!!

    And thru your blog read many you follow... Best one is Prashantavana :)

    I don't have time for fat books these days... So prefer something short and sweet... Blogs are the answer

    Your blogs are easy goin.. Thou sometimes I feel.. Few are like a school kid writing a story during summer holidays ;) they are close to heart due to the very reason of being direct dil se!

    Continue writing....

    ReplyDelete
  3. Malathi, hearty congratulations on the 5th anniversary. Nemichandra is my favourite author from my high school days. I've read all of her stories except her novel.
    Congrats to Niharika too. Please do share more about the achievement and award.

    ReplyDelete
  4. ನಿಮಗಿಬ್ಬರಿಗೂ ಅಭಿನಂದನೆಗಳು.ನೇಮಿಚಂದ್ರ ನಂಗೂ ತುಂಬಾ ಇಷ್ಟ ...

    ReplyDelete
  5. Happy 5th Blogoversary!! I am also one the visitor landed here following "Avarekalu.." link :-)

    ReplyDelete
  6. ಮೊದಲಿಗೆ 5ನೇ ಸಂಕ್ರಮಣದ ಶುಭಾಶಯಗಳು.
    ಅಭಿಮಾನಿಗಲಾಡ ನಮಗೆ ಇದೇ ಸಂಭ್ರಮಾಚರಣೆ.

    ReplyDelete
  7. ನೇಮಿಚಂದ್ರ ನನ್ನಿಷ್ಟದ ಲೇಖಕಿ ಮಾಲತಕ್ಕ ...ಅವರ ಪ್ರವಾಸ ಕಥನಗಳು , ಸಾಧಕಿಯರ ಬಗ್ಗೆ ಬರೆದಿರುವ ಲೇಖನಗಳು , ಯಾದೆ ವಶೀಮ್ ಎಂಬ ಕಾದಂಬರಿ ಎಲ್ಲವೂ ತುಂಬಾ ಚೆನ್ನಾಗಿವೆ ...ಓದಿ ಖಂಡಿತಾ ನಿಮಗೂ ಇಷ್ಟವಾಗುತ್ತವೆ. ಐದನೇ ಹುಟ್ಟುಹಬ್ಬದ ಶುಭಾಶಯಗಳು :)

    ReplyDelete
  8. ellarigoo tumba tumba thanks
    :-)
    malathi S

    ReplyDelete