ಮಂಜ ಬ್ಯಾಂಕ್ ನಿಂದ ಫೋನ್ ಮಾಡಿದ್ದ. 'ಶರ್ಮ ಸರ್ ಬೇಗ ಬ್ಯಾಂಕ್ ಗೆ ಬನ್ನಿ' ಅಂತ. ಸ್ಪೀಕರ್ ಫೋನ್ ನಲ್ಲಿಟ್ಟು ಮೊಬೈಲ್ ಆಲಿಸುವ ಶರ್ಮರಿಗೆ ಬಂದ ಕರೆಯಿಂದ, ಮಂಜ ನ ಬೆದರಿದ ದನಿ ಎಲ್ಲರಿಗೂ ಕೇಳಿಸಿತ್ತು. ಮಂಜ ಆ ಸಂಸ್ಥೆಯಲ್ಲಿ 7 ವರ್ಷಕ್ಕಿಂತ ಹೆಚ್ಚಾಗಿ ಕೆಲಸಕ್ಕಿದ್ದಾನೆ. ಆಫಿಸ್ ನ ಕ್ಯಾಶ್ ಎಲ್ಲ ಅವನೇ ಹ್ಯಾಂಡಲ್ ಮಾಡೋದು.
ಮಂಜನನ್ನು ಕಂಡರೆ ಶರ್ಮರಿಗೆ ಮಗನಂತಹ ಅಕ್ಕರೆ. ಅವನೂ ತನಗೆ ತೊಂದರೆ ಏನಾದರೂ ಇದ್ದಲ್ಲಿ ಶರ್ಮರ ಬಳಿ ಅದನ್ನು ಶೇರ್ ಮಾಡಿ ತನ್ನ ದುಗುಡ ಕಡಿಮೆ ಮಾಡಿಕೊಳ್ಳುತ್ತಿದ್ದ. ಮನೆಯಲ್ಲಿ ಮಂಜ ಮತ್ತು ಅವನ ತಾಯಿ ಅಷ್ಟೆ ಇರುವುದು.
ಆಫಿಸ್ ಗೆ ತರುವ ಕ್ಯಾಶ್ ಏನಾದರೂ ಕಳುವಾಯಿತೆ? ಯಾಕೆ ಹುಡುಗ ಅಷ್ಟು ಹೆದರಿಕೊಂಡಿದ್ದಾನೆ ಅಂತ ಹೇಳುತ್ತಲೇ ಶರ್ಮ ಬ್ಯಾಂಕ್ ತಲುಪಿದಾಗ ಮಂಜ ನ ಮೇಲೆ ಕಳ್ಳತನದ ಆರೋಪ ಹೊರಿಸಿ ಅವನಿಗೆ ಥರ್ಡ್ ಡಿಗ್ರೀ ನೀಡ್ತಾ ಇದ್ದರು.
ಮಂಜ ಅಳುತ್ತಾ ಇದ್ದ. 'ಸರ್ ನಾನೇನೂ ಮಾಡಿಲ್ಲ, ಬ್ಯಾಂಕ್ ಹೊರಗೆ ನಿಂತ ಒಬ್ಬರು, 'ಗುರು ಪ್ಲೀಸ್ ಆ ಕಪ್ಪು ಬ್ಯಾಗ್ ಇತ್ತ ತಾ' ಅಂದಾಗ ನಾನು ಅದನ್ನು ಒಯ್ದು ಕೊಟ್ಟೆ ಆತನಿಗೆ. ಆದರೆ ಅದು- ಅಲ್ಲಿದ್ದ ಮಹಿಳೆಯ ಕಡೆ ಬೊಟ್ಟು ಮಾಡುತ್ತ -'ಈಯಮ್ಮನದಂತೆ ಆ ಬ್ಯಾಗ್', ನಾನು ಆ ಬ್ಯಾಗ್ ತೆಗೆದುಕೊಂಡು ಹೋದವರು ಇಬ್ಬರೂ ಸೇರಿ ಕಳ್ಳತನ ಮಾಡಿದ್ದೇನಂತ, ಯಾರು ಅವರು ಅಂತ ಹೇಳು ಅಂತ ನನಗೆ ಬೆದರಿಸ್ತಿದ್ದಾರೆ ಸರ್, ನನಗೇನೂ ಗೊತ್ತಿಲ್ಲ. ಪೋಲಿಸ್ ಗೆ ಕೊಡ್ತಾರಂತೆ.'
ಅಷ್ಟರಲ್ಲಿ ಶರ್ಮ ಅವರು ಆಫಿಸ್ ನ ಇತರೇ ಸೀನಿಯರ್ಸ್ ಗೆ ಎಲ್ಲ ಹೇಳಿದ್ದರಿಂದ ಅವರೆಲ್ಲ ಬ್ಯಾಂಕ್ ತಲುಪಿ, ಮಂಜ ನ ಪರವಾಗಿ ವಾದಿಸ ಹತ್ತಿದರು. ಅವನು ಚಿಕ್ಕ ವಯಸ್ಸಿನಿಂದ ಆ ಆಫಿಸ್ ನಲ್ಲಿ ಕೆಲಸಕ್ಕಿರೋದು, ಆಫಿಸ್ ನ ಜವಾಬ್ದಾರಿಯುತ ಕೆಲಸಗಳನ್ನು ಮಾಡುತ್ತಿರುವುದು, ನಮ್ಮ ಸಂಸ್ಥೆ ಬ್ಯಾಂಕಿನ್ ಹೆಮ್ಮೆಯ ಕಸ್ಟಮರ್ಸ್ ಮುಂತಾದು.
'ಸಿ ಸಿ ಟಿ ವಿ footage ನೋಡಿ, ಆ ಮಹಿಳೆ ಕಂಪ್ಲೈನ್ ಲಾಜ್ ಮಾಡಿದರೆ, ಪೋಲಿಸ್ ಗೆ ಕರೆ ಮಾಡುವ ಅಂದಾಜಿನಲ್ಲಿದ್ದರು ಬ್ಯಾಂಕ್ ಮ್ಯಾನೇಜರ್'
ಅಷ್ಟರಲ್ಲಿ ಶರ್ಮ ರು ಕಳವಾದ ಬ್ಯಾಗ್ ನ ಮಾಲೀಕಳಾದ ಆ ಹೆಂಗಸನ್ನು ನೋಡಿದರು, ಆಕೆ ಸುಮ್ಮನೆ ನಿಂತಿದ್ದರು
'ಏನಮ್ಮ ಬ್ಯಾಗ್ ನಲ್ಲಿ ಬೆಳೆ ಬಾಳುವ ವಸ್ತು, ದುಡ್ಡು, ಬಂಗಾರ ಮುಂತಾದ್ದು ಇತ್ತೆ?
'ಇಲ್ಲ ಸರ್ ನಮ್ಮ ತಂದೆ ಇದ್ ಹಬ್ಬದ ಉಡುಗೊರೆಯಂತ ಆ ಬ್ಯಾಗ್, ಅದರಲ್ಲಿ ಮಕ್ಕಳಿಗೆ ಒಂದು ಜೊತೆ ಬಟ್ಟೆ, ಮತ್ತು ಸ್ವೀಟ್ ಅಷ್ಟೆ ಇದ್ದದ್ದು' ನಾನು ಅಬ್ಬು ಕೊಟ್ಟ ಉಡುಗೊರೆ ಕಾಣೆಯಾದದ್ದಕ್ಕೆ ಸ್ವಲ್ಪ ಗಲಾಟೆ ಮಾಡಿದ್ದು ಹೌದು ಮತ್ತು ನಿಮ್ಮ ಹುಡುಗ ಅದನ್ನು ಹೊರಗೆ ನಿಂತವರಿಗೆ ರವಾನಿಸುವುದನ್ನು ನೋಡಿದ್ದೆ'
ನೋಡಮ್ಮ ಅವನೇನೂ ಆ ಬ್ಯಾಗ್ ಹೊರಗೆ ಕಳಿಸಿಲ್ಲ ಅಂತ ಹೇಳಿಲ್ಲ, ಆದರೆ ತುಂಬ ಕಷ್ಟ ಪಟ್ಟು ಮೇಲೆ ಬರುತ್ತಿರುವ ಹುಡುಗ, ನಮ್ಮ ಸಂಸ್ಥೆಯಲ್ಲಿ ಹಲವಾರು ವರ್ಷಗಳಿಂದ ದುಡೀತಿದ್ದಾನೆ, ನಮಗೆ ಅವನ ಮೇಲೆ ನಂಬಿಕೆಯಿದೆ. ನಿಮ್ಮ ನಷ್ಟ ನಾವು ಭರಿಸುತ್ತೇವೆ, ಪೋಲಿಸ್ ಕಂಪ್ಲೈನ್ ಕೊಟ್ಟು ಅವನ ಜೀವನ ಹಾಳು ಮಾಡಬೇಡಿ ಅನ್ನುವುದು ನಮ್ಮ ಕಳಕಳಿಯ ವಿನಂತಿ' ಮುಂದೆ ನಿಮ್ಮ ಇಚ್ಛೆ' ಅಂದರು
ಅಷ್ಟರೊಳಗೆ ಸಿ ಸಿ ಟಿ ವಿ ಫೂಟೇಜ್ ನೋಡ ಸಿಕ್ಕಿತ್ತು. ಎಷ್ಟು ಸಹಜವಾಗಿತ್ತು ಆ ಹೆಳ್ಮೆಟ್ ಧಾರಿ ಮನುಷ್ಯನ 'ಗುರು ಪ್ಲೀಸ್ ಆ ಬ್ಯಾಗ್ ಕೊಡು ಅಂತ ಗಡಿಬಿಡಿಯಿಂದ ಕೇಳಿದ್ದು ಮತ್ತು reflex action ನಲ್ಲಿ ಮಂಜ ಹಿಂದುಮುಂದೆ ಯೋಚಿಸದೆ ಆ ಬ್ಯಾಗ್ ಕೌಂಟರ್ ಕೆಳಗಿನಿಂದ ಅದನ್ನು ಅವನಿಗೆ ರವಾನಿಸಿದ್ದು ಅಂದರೆ, ಮಂಜ ನ ಜಾಗ ದಲ್ಲಿ ಯಾರೇ ಇದ್ದರೂ ಅದನ್ನೆ ಮಾಡುತ್ತಿದ್ದರು. ಕಳ್ಳ ಹೆಲ್ಮೆಟ್ ಹಾಕಿದ್ದರಿಂದ ಅವನ ಮುಖ ಕ್ಯಾಮೆರಾದಲ್ಲಿ ಕಾಣಿಸುತ್ತಿರಲಿಲ್ಲ.
ಕೊನೆಗೆ ಆ ಮಹಿಳೆ 'ಸರ್ ನಿಮ್ಮ ಆಫಿಸ್ ನ ಹುಡುಗನೊಬ್ಬನ ಪರವಾಗಿ ನೀವೆಲ್ಲ ಬಂದು ಆತನ ಒಳ್ಳೆಯತನ ಬಗ್ಗೆ ನುಡಿಯುವಾಗ ನನಗೆ ಸೋಜಿಗ. ಈಗಿನ ಕಾಲದಲ್ಲಿ ಯಾರೂ ಹೀಗೆ ತಮಗಿಂತ ಕೆಳಗಿನವರನ್ನು ವಹಿಸಿ ಸಹಾಯಮಾಡಲ್ಲ. ನಾ ಕಂಪ್ಲೈನ್ ಕೊಟ್ಟರೆ ಅಲ್ಲಾಹು ಮೆಚ್ಚಲ್ಲ. ಹೋಗ್ಲಿ ಬಿಡಿ ಸರ್. ನನ್ನ ಲಾಸ್ ನ್ನು ನೀವೂ ಭರಿಸುವುದು ಬೇಡ. ನನ್ನ ಈದ್ ನ ಕಾಣಿಕೆ ಅಂದಾಗ ಆಫಿಸ್ ನ ಹಿರಿಯರೆಲ್ಲ ಆಕೆಗೆ ತುಂಬು ಹೃದಯದ ಧನ್ಯವಾದ ಹೇಳಿದರು. ಎಲ್ಲರೂ ಚದುರುವಾಗ ಬಾಗಿಲ ಬಳಿ ಆ ಬ್ಯಾಗ್ ಪುನ: ಪ್ರತ್ಯಕ್ಷವಾಗಿತ್ತು. ಬಹುಶ: ಆ ಕಳ್ಳನಿಗೆ ಅದರಲ್ಲಿ ಬೆಲೆಬಾಳುವುದು ಏನೂ ಕಂಡಿಲ್ಲದೇ, ಪುಟ್ಟ ಮಕ್ಕಳ ಬಟ್ಟೆಗಳನ್ನು ಕಂಡು ಏನನ್ನಿಸಿತೋ, ಆ ಬ್ಯಾಗ್ ನ್ನು ವಾಪಸ್ ಅಲ್ಲಿಟ್ಟು ಹೋದನೋ ಗೊತ್ತಿಲ್ಲ. ಅದೂ ಸಿ ಸಿ ಟಿ ವಿ ಯಲ್ಲಿ capture ಆಗಿರಬಹುದೇನೋ...
anyways once again 'all is well that ends well'
ಮಂಜ ಮಾತ್ರ ಸಖತ್ ಹೆದರಿದಾನೆ ಈ ಪ್ರಕರಣದಿಂದ, 'ಆಕಸ್ಮಾತ್ ಅದರಲ್ಲಿ ದುಡ್ಡು ಬಂಗಾರ ಇದ್ದಿದ್ದರೆ?'
this post is for you dear Anonymous...
(ಅಲ್ಲ ಯಾವ ಯಾವ ತರಹ ಕದಿಯೋರು ಇದ್ದಾರಲ್ಲವಾ?? ಎಲ್ಲ ನಮ್ಮ psychology ಮೇಲೆ ಆಟ ಆಡುವುದನ್ನು ಕಲಿತು ಕಳ್ಳ
ತನಕ್ಕೆ ಧುಮುಕುತ್ತಾರೆ ಅನ್ನಿಸುತ್ತೆ.)
(ಅಲ್ಲ ಯಾವ ಯಾವ ತರಹ ಕದಿಯೋರು ಇದ್ದಾರಲ್ಲವಾ?? ಎಲ್ಲ ನಮ್ಮ psychology ಮೇಲೆ ಆಟ ಆಡುವುದನ್ನು ಕಲಿತು ಕಳ್ಳ
ತನಕ್ಕೆ ಧುಮುಕುತ್ತಾರೆ ಅನ್ನಿಸುತ್ತೆ.)
ಈ ದಿನಗಳಲ್ಲಿ ಹಲವು ಕಳ್ಳತನ - ಕೊಲೆ ಪ್ರಕರಣಗಳನ್ನು ಬೇಧಿಸಲು ಪೊಲೀಸರು ಸಿ ಸೀ ಟೀವಿ ಕ್ಯಾಮರಾ ಮೊರೆ ಹೋಗುತ್ತಿದ್ದಾರೆ. ಸಾಧ್ಯ ಮಂಜ ಬಚಾವಾದನಲ್ಲ ನಮಗೆ ಅದೇ ನೆಮ್ಮದಿ. ಆಕೆಯದೂ ದೊಡ್ಡ ಮನಸು :)
ReplyDeleteಕಳ್ಳರು ಎಷ್ಟೋಂದು ತರ ಇದ್ದಾರೆ... ಒಳ್ಳೆಯವರಿಗೆ ಕಾಲವಿದೆ ಎಂದು ತೋರಿಸುತ್ತದೆ.. ಒಳ್ಳೆಯ ಕಥೆ ಅಕ್ಕಾ
ReplyDeleteಅಯ್ಯೋ ಪ್ರಾಮಾಣಿಕತೆ ಕೆಲವೊಮ್ಮೆ ನುಂಗಲಾರದ ತುತ್ತಾಗುತ್ತೆ.!!!...ನನಗೆ ಹಾಗೇ ಆಗಿತ್ತು... ನನ್ನ ಬ್ಲಾಗಲ್ಲಿ ಹಾಕಿದ್ದೀನಿ ಆ ಲೇಖನ...
ReplyDeleteಆದರೂ ಪೇಚಾಟ ಆಗಬಹುದು ಅಂತ ಪ್ರಾಮಾಣಿಕತೆ ಬಿಡೋಕೆ ಆಗೊಲ್ಲ... ಚನ್ನಾಗಿದೆ ಲೇಖನ.
ಮನುಷ್ಯ ಮನುಜ ಆಗುವುದು ಅಂತಃಕರಣ ತುಂಬಿಕೊಂಡಾಗ ಅನ್ನುವ ಮಾತು ಎಷ್ಟು ನಿಜ. ಒಂದು ಸುಂದರ ಘಟನೆ ಮನದೊಳಗಿನ ಪರಮಾತ್ಮನನ್ನು ತಣಿಸುವ ಕೆಲಸ ಮಾಡುತ್ತದೆ. ಸುಂದರ ನಿರೂಪಣೆ.
ReplyDeleteGood story:) and thanks for the dedication :) adre ee kathe specially last sentences odi ondu question... Mayi khayin assa Bangalore ki ?! Bombay tu baisunu crime patrol palaitasa?!
ReplyDeleteThank you Badari bhaiyya, Suguna, Azad Bhai, Srikanth Manjunath..
ReplyDeleteDear Anonymous:
we r very much in bengaLooru and i do not have TV at home...
:-)
ms