"A walk in the garden is refreshing and sometimes depressing
ಇವತ್ತು ವಾಕ್ ಮುಗಿಸಿ ಕೂತಿದ್ದೆ. ನನ್ನ ಪಕ್ಕದ ಸೀಟ್ ನಲ್ಲಿ ಕೆಲವು ಹಿರಿಯರು ಕೂತಿದ್ದರು. ಕತ್ತಲೆಯಾಗ್ತಾ ಒಬ್ಬೊಬ್ಬರೆ ಜಾಗ ಖಾಲಿ ಮಾಡಿ ಹೊರಟ್ರು. ಕೊನೆಗೆ ಇಬ್ರು ಮಾತ್ರ ಉಳಿದರು. ಅವರಲೊಬ್ಬರು , 'ಹಾಂ, ಇನ್ನು ಕತ್ತಲಾಯ್ತು ನಾ ಕೂಡ ಮನೆಗೆ ಹೊರಟೆ, ಬನ್ನಿ ಹೊರಡುವ' ಅಂದ್ರು. ಅದಕ್ಕೆ ಆ ಹಿರಿಯ ವ್ಯಕ್ತಿ, 'ಇಲ್ಲ ನಾ ಮನೆಗೆ ಹೋಗಲಿಕ್ಕೆ ಇನ್ನೂ ಅರ್ಧ ಗಂಟೆ ಇದೆ. ಸೊಸೆ ನನಗೆ 7.30 ಗೆ ಮುಂಚೆ ಮನೆಗೆ ಬರಬಾರದೆಂದು ವಾರ್ನಿಂಗ್ ಕೊಟ್ಟಿದಾಳೆ' ಅಂದಾಗ ಒಂತರಹ ಆಯ್ತು ಕೇಳಿ"......
ಮೇಲೆ ನಮೂದಿಸಿದ್ದು ನನ್ನ ಫೇಸ್ ಬುಕ್ ಸ್ಟೇಟಸ್. ಅದಕ್ಕೆ ಒಂದಷ್ಟು ಸ್ಯಾಡ್ ಫೇಸ್ ಐಕನ್ ಕಮೆಂಟ್ ಮೂಲಕ. ಅವಧಿ ಮ್ಯಾಗ್ ನ ಜಿ.ಎನ್. ಮೋಹನ್ ಅವರು ಈ ಸ್ಟೇಟಸ್ ಅನ್ನು ಅವಧಿಯಲ್ಲಿ ಹಾಕಿಕೊಂಡಿದ್ದಾರೆ. ಅವರೆಲ್ಲರಿಗೂ ಬೇಜಾರಾಗಿದ್ದು ನನಗೆ ಕರುಳು ಚುರುಕ್ಕೆಂದಿತು. ಅದಕ್ಕೆ ಆ ಸಂಭಾಷಣೆಗೆ ನನ್ನದೇ ಆದ ಸುಖಾಂತ್ಯ ತೋರಿಸುವ ಪ್ರಯತ್ನ. ನಿಜವಾಗಿ ಅಲ್ಲಿ ಏನೇ ನಡೆಯಲಿ. ನಾವು ಪೊಸಿಟಿವ್ ಆಗಿ ವಿಚಾರ ಮಾಡಬಹುದಲ್ಲವಾ?
continued.....
'ಏನು ಕಾಲ ಬಂತಪ್ಪ? ನಮಗಿಂತ ಕಿರಿಯರಿಂದ ಇಂತಹುದ್ದೆಲ್ಲ ಕೇಳಬೇಕಾಗಿದೆ'
"ಛೆ ಛೆ ಅಂತಾದ್ದೇನೂ ಆಗಿಲ್ಲ. ನನ್ನ ಮಗನಿಗಿಂತ ನನ್ನ ಸೊಸೆಗೆ ನನ್ನ ಬಗ್ಗೆ ಹೆಚ್ಚಿನ ಕಾಳಜಿ. ಅವಳ ತಂದೆ ವೈದ್ಯರು. ಹಿಂದಿನ ತಿಂಗಳ ನನ್ನ ಆರೋಗ್ಯ ತಪಾಸಣೆಯಾದಾಗ ನನ್ನ ಮೈಯಲ್ಲಿ ವಿಟಮಿನ್ ಡಿ ಯ ಕೊರತೆ ಕಂಡು ಬಂದಿದೆ.
ನನ್ನ ಮಗ ಚಿಕ್ಕವನಿರುವಾಗಲೇ ನನ್ನ ಹೆಂಡತಿ ತೀರಿಕೊಂಡಳು. ನಾನೊಬ್ಬನೇ ಅವನ ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡೆ. ಅವನು ಎಷ್ಟು ಬೇಕು ಅಷ್ಟು ಓದಲು ಅನುವು ಮಾಡಿಕೊಟ್ಟೆ. ಕೊನೆಗೆ ಒಳ್ಳೆಯ ಕೆಲಸ ಸಿಕ್ಕಿ, ಅವನ ಕಛೇರಿಯಲ್ಲಿರುವ ಹುಡುಗಿಯನ್ನೇ ಮದುವೆಯಾದನು. ನನಗೆ ಸ್ವಲ್ಪ ಅಳುಕೇನೋ ಇತ್ತು. ಮತ್ತು ನಾನು ಅವರಿಬ್ಬರಿಗೆ 'ನೀವು ಬೇರೆ ಮನೆ ಮಾಡಿ ಇರಿ ಅಂತೆ ಸಲಹೆ ನೀಡಿದೆ. ಅದಕ್ಕೆ ಸೊಸೆ ನೆ ಮೊದಲಾಗಿ 'ಛೆ ಏನಂತ ಮಾತಾಡ್ತೀರಿ ಅಪ್ಪ' (ನನಗೆ ಮಾವ ಅಂತ ಕರೀದೆ, ಅಪ್ಪ ಅಂತಲೇ ಸಂಭೋದಿಸುವುದು ಅವಳು.)ನನ್ನ ಅಪ್ಪ ಬೇರೆ ನೀವು ಬೇರೆ ಅಂತ ನಾನು ಯಾವತ್ತು ತಿಳಕೊಂಡಿಲ್ಲ. ಎಲ್ಲರೂ ಒಟ್ಟಿಗೆ ಇರುವ ಬೇರೆ ಮನೆ ಗಿನೆ ಬೇಡ." ದೊಡ್ಡ ಮನೆ ಖರೀದಿಸಿ ನಾವು ಒಟ್ಟಿಗೆ ಇರ್ತೇವೆ.
ಇಬ್ಬರೂ ಕೆಲಸಕ್ಕೆ ಹೋಗ್ತಾರೆ. ಬೆಳಿಗ್ಗೆ 8 ಮನೆ ಬಿಟ್ಟರೆ ಸೊಸೆ 6.30 ಗೆಲ್ಲ ಮನೆಗೆ ಬಂದು ಅಡಿಗೆ ಗಿಡಿಗೆ ಮಾಡ್ತಾಳೆ. ಉಳಿದ ಕೆಲಸಕ್ಕೆ ಜನ ಇದ್ದಾರೆ. ಮಧ್ಯಾಹ್ನ ಬಿಸಿ ಬಿಸಿ ಚಪಾತಿ ಮಾಡಿಕೊಡಲು ಓರ್ವ ಮಹಿಳೆ ಬಂದು ಹೋಗುತ್ತಾಳೆ. ಈಗ ಮೊಮ್ಮಗ ಶಾಲೆಯಿಂದ ಮಧ್ಯಾಹ್ನವೆ ಬಂದು ಬಿಡುತ್ತಾನೆ. ಮಹಾ ತಂಟೆ ಖೋರ. ನನಗೆ ತೊಂದರೆಯಾಗುತ್ತೇನೋ ಅಂತ ಅವನಿಗೆ ಮನೆ ಬಳಿಯ creche ನಲ್ಲಿ ಹಾಕುತ್ತೇನೆ ಅಂದಾಗ ನಾನೇ ಬೇಡ ಅಂದೆ. ನಮ್ಮ ಮನೆಯೇನೋ ದೊಡ್ಡದಿದೆ ಆದರೆ ಅಕ್ಕ ಪಕ್ಕದ ಮನೆಗಳ ಹಾವಳಿಯಿಂದ ಗಾಳಿ ಬೆಳಕಿಗೆ ಸ್ವಲ್ಪ ಕೊರತೆ. ಅದಕ್ಕೆ ನನ್ನ ಸೊಸೆಯಿಂದ ನನಗೆ ಕಡ್ಡಾಯ ವಾಕಿಂಗ್." ಸ್ವಲ್ಪ ಹೊತ್ತು ಮೊಮ್ಮಗನ ಹಾವಳಿಯಿಂದ ಮುಕ್ತಿ, ವಾಕ್ ಮಾಡ್ತೀರಾ ಬಿಡ್ತೀರಾ ಅದು ನಿಮಗೆ ಬಿಟ್ಟಿದ್ದು, ಆದರೆ ಸ್ವಲ್ಪನಾದರೂ ತಾಜ ಗಾಳಿಗೆ ಇದ್ದು ಬನ್ನಿ "ಅಂತ ಅವಳು ಹೇಳೋದು. ಇವತ್ತು ನನ್ನ ಹುಟ್ಟು ಹಬ್ಬ. ಏನೋ ಸರ್ಪ್ರೈಸ್ ಇದೆ. ಅದಕ್ಕೆ 7.30 ನಂತರ ನನಗೆ ಬರಲು ಹೇಳಿದ್ದಾಳೆ ಎಂದು ಗಹಗಹಿಸಿ ನಕ್ಕರು ಆ ಹಿರಿಯರು
ಸರ್ಪ್ರೈಸ್ ಏನಂತ ನಿಮಗೆ ಬೇಕಾದನ್ನು ಊಹಿಸಿ.
:-)
Ha ideega kathe sogasagi poornagoltu Mal. Howdu jeevanadalli Aashabhavane belisikolluvudu tumba mukhya.
ReplyDeleteVeda
ಹಲವು ಬಾರಿ ಇಂತವೂ ನಿಜವಿದ್ದೀತು ಮಾಲತೀಯವರೇ. ಯಾಕೆ ಸುಖಾಸುಮ್ಮನೆ ಎಲ್ಲರೂ ಹಳಿಯುವುದು?
ReplyDeleteನೇಗಿಟಿವ್ ಇದ್ದಲ್ಲಿ ಪಾಸಿಟೀವ್ ನೋಡುವ ನಿಮ್ಮ ಮನಸಿಗೆ ನನ್ನ ಶರಣು...
Admire your positive attitude:-)
ReplyDeleteನೋಡುವ ಮನಸ್ಸು ಒಳ್ಳೆಯದನ್ನೇ ಯೋಚಿಸುವ ಹಂಬಲ ವ್ಯಕ್ತಪಡಿಸಿದಾಗ ಎಂತಹ ಸುಂದರ ಪ್ರಪಂಚ ನಮ್ಮದಾಗುತ್ತದೆ. ನಿಜ ಒಳ್ಳೆಯದನ್ನೇ ಯೋಚಿಸಿದರೆ ಒಳ್ಳೆಯಾದಾಗುತ್ತೆ ಅಥವಾ ಮನಸ್ಸು ಉಲ್ಲಾಸಿತವಾಗಿರುತ್ತೆ. ನಮ್ಮ ಮನಕ್ಕೆ ನಾವು ನಮನ ಸಲ್ಲಿಸುವ ಬಗೆ ಅಂದರೆ ಸುಂದರವಾದ ಒಳ್ಳೆಯ ನಿಟ್ಟಿನಲ್ಲಿ ಯೋಚಿಸುವುದು. ಸುಂದರ ಲೇಖನ ಮೇಡಂ ಇಷ್ಟವಾಯಿತು (ಇದೆ ಎಳೆ ಧಾರಾವಾಹಿಯ ನಿರ್ಮಾಪಕರಿಗೆ ಸಿಕ್ಕಿದ್ದರೆ.....ಯಪ್ಪಾ...?)
ReplyDelete