ನನಗೆ 'ಸಿ' ಪರಿಚಯ ಫೇಸ್ ಬುಕ್ ಮೂಲಕ ಆಗಿದ್ದು. ಆವಾಗಿನ್ನೂ ನನಗೆ ಪ್ರೈವಸಿ ಸೆಟ್ಟಿಂಗ್ಸ್ ಬಗ್ಗೆ ತಿಳಿದಿರಲಿಲ್ಲ. ಅವರು ಕಳುಹಿಸಿದ್ದ ಪ್ರೆಂಡ್ ರಿಕ್ವೆಸ್ಟ್ ನಾನು ಅಂಗೀಕರಿಸಿರಲಿಲ್ಲ. ಏನಾದರು thoughts to brighten up your day ಮೆಸೆಜ್ ಅವರಿಂದ ನನ್ನ ಇನ್ ಬಾಕ್ಸ್ನ್ ನಲ್ಲಿರುತ್ತಿತ್ತು. ಒಂದು ದಿನ ಅವರ ಪ್ರೊಫೈಲ್ ಗೆ ಹೋಗಿ ಅವರ ವಿವರಗಳನ್ನು ಓದಿಕೊಂಡೆ. ನಮ್ಮಿಬ್ಬರ ಮಧ್ಯೆ ಯಾವುದೇ ಕಾಮನ್ ಫ್ರೆಂಡ್ ಇರಲಿಲ್ಲ. ಅದಕ್ಕೆ ನಾನು ಅವರಲ್ಲಿ ನನಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದರ ಬಗ್ಗೆ ಕೇಳಿದೆ. ಅದಕ್ಕೆ ಅವರು 'ಯಾರಾದರೂ ಮೊದಲ ಸಲ ಫೇಸ್ ಬುಕ್ ಜಾಯಿನ್ ಆಗಿದಾಗ ಫೇಸ್ ಬುಕ್ ಸಜೆಸ್ಟ್ ಮಾಡುತ್ತದಂತೆ. 'malathi shenoy has no friends yet, please suggest friends to her ಅಂತ'..:-) ಅದಕ್ಕೆ ನಮ್ಮ ಕ್ಲಾಸ್ ನಲ್ಲಿ ಒಬ್ಬ ಮಾಲತಿ ಅಂತ ಇದ್ರು. ಅದು ನೀವೆ ಅಂದುಕೊಂಡು ನಿಮಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದೆ ಅಂದ್ರು. ಮಾಲವಿಕ ಳಿಗೆ ಇದೆಲ್ಲ ಹೇಳಿದಾಗ ಅವಳು, ಅಮ್ಮ ಇದಕ್ಕೆಲ್ಲ ಫಿಶಿಂಗ್ ಅಂತಾರೆ, ಅಂದ್ರೆ ಗಾಳ ಹಾಕೋದು ಅಂತ ಹೇಳಿದ್ಲು. ಕೆಲದಿನಗಳಾದ ಮೇಲೆ ಅವರು ಅವರ ಆರನೆ ಕ್ಲಾಸ್ ನ ಫೋಟೊ ಕಳಿಸಿದ್ರು. ಮೇಲ್ಗಡೆ ಮೌಂಟ್ ನಲ್ಲಿ ಫೋಟೊ ಇದ್ರೆ ಕೆಳಗಡೆ ಎಲ್ಲರ ಹೆಸರುಗಳು ಇದ್ವು. ಹೈದರಾಬಾದಿನ ಸ್ಕೂಲ್. ಅದರಲ್ಲಿ ಮಾಲತಿ ಅನ್ನುವ ಹುಡುಗಿಯ ಹೆಸರು ಕೂಡ ಇತ್ತು. ಆಗ ಅವರ ಪ್ರೊಫೈಲ್ ಗೆ ಪುನ: ಭೇಟಿ ನೀಡಿದೆ. ಅವರು ಬೆಂಗಳೂರಿನ ಹೈ ಫಂಡಾ ಬುಕ್ ಹೌಸ್ ನ ಎಕೌಂಟ್ಸ್ ನಿರ್ವಹಿಸತ್ತಾ ಇದ್ರು. ಆ ಹೆಸರು ಓದಿ ಗಟ್ಟಿಯಾಗಿ ವೌ ಎಂದಿದ್ದು ಈಗಲೂ ನೆನಪಿಗೆ ಬರ್ತದೆ.
ಅವರು ಇನ್ ಬಾಕ್ಸ್ ನಲ್ಲಿ ಏನಾದರೂ thoughts for the day ಮೆಸೇಜ್ ಕಳಿಸ್ತಾ ಇದ್ರು, ಅಥವಾ ಅವರೇ ಬರಿದಿದ್ದ ಇಂಗ್ಲೀಷ್ ಪದ್ಯಗಳು ಕೂಡ... ತುಂಬ ಇಷ್ಟ ಆದ್ರೆ ನಾನು ಅದಕ್ಕೆ ಪ್ರತಿಕ್ರಿಯಿಸ್ತಾ ಇದ್ದೆ. ಆಗಲೇ ಒಂದು ದಿನ ನಮ್ಮ ಸಂಸ್ಥೆಗೆ ಒಂದು ಪುಸ್ತಕ ಬೇಕಾಗಿ ಬಂತು. ಅದು ಎಲ್ಲೂ ಸಿಗಲಿಲ್ಲ. ಆಗ ನನಗೆ 'ಸಿ' ನೆನಪಾಗಿ ಅವರಿಗೊಂದು ಮೆಸೇಜ್ ಕಳಿಸಿದ್ದೆ, ಹಾಗೆ ನನ್ನ ಇ ಮೈಲ್ ಐಡಿ ಕೂಡ ಕೊಟ್ಟೆ.. ಸುಮಾರು ದಿನಗಳು ಅವರಿಂದ ರೆಸ್ಪಾನ್ಸ್ ಇರಲಿಲ್ಲ. ಅಂತೂ ಮರೆತು ಬಿಟ್ರು ಅನ್ನಿಸುತ್ತೆ ಅಂತ ನಾನು ಸುಮ್ಮನಾದೆ.
ಸಾಧಾರಣ 15 ದಿನಗಳ ನಂತರ ನನಗೆ ಜಿ ಮೈಲ್ ಗೆ ಅವರು ಪತ್ರ ಬರೆದರು. ಟ್ರೈನಿಂಗ್ ಅಂತ ಹೊರಗೆ ಎಲ್ಲೋ ಹೋಗಿದ್ದು ಮತ್ತು ಆ ಪುಸ್ತಕಗಳು ಅವರಲ್ಲಿ ಇದ್ದುದಾಗಿಯೂ ಬರೆದರು. ಅಷ್ಟರಲ್ಲೇ ನಮ್ಮ ಸಂಸ್ಥೆಯಿಂದ ಒಂದು ಟಾಕ್ ಪ್ರೋಗ್ರಾಮ್ followed by dinner ಹಮ್ಮಿಕೊಂಡಿದ್ದೆವು. ಅವರಿಗೆ ಅಲ್ಲಿಗೆ ಬರಲು ಹೇಳಿದ್ದೆ. ಅವರು ಪುಸ್ತಕ ತೆಗೆದುಕೊಂಡು ಬಂದರು. ಅವರು ಯಾವಾಗಲೂ ನನಗೆ 'ಮಾಲ್ತಿ' ಅಂತ ಸಂಭೋಧಿಸುತ್ತಿದ್ದರಿಂದ ನನಷ್ಟೆ ಅಥವ ನನಗಿಂತ ದೊಡ್ಡವರೇನೋ ಅಂದುಕೊಂಡಿದ್ದೆ. ನೋಡಿದರೆ ನನಗಿಂತ ಅವರು ಹಲವು ವರ್ಷ ಕಿರಿಯರಾಗಿದ್ದರು. ನನ್ನನ್ನು ನೋಡಿಯಾದ ಮೇಲೆ, ನನ್ನ ಹಲವಾರು ಮಿತ್ರರ ತರಹ ಅಕ್ಕ, ಅಮ್ಮ, ಮೇಡಂ ಅಂತಾರೇನೋ ಅಂದುಕೊಂಡಿದ್ದೆ, ಆದರೆ ಅವರು 'ಮಾಲತಿ' ಸಂಭೋದನೆ ಮುಂದುವರೆಸಿದ್ರು. ನನಗೂ ಒಂದು ತರಹ ಖುಶಿ.ಆದ್ರೂ ಈ ಬಗ್ಗೆ ಅವರಲ್ಲಿ ಕೇಳಿದೆ. ಅದಕ್ಕೆ ಅವರು 'ಅರೇ ಮಿತ್ರರೆಂದರೆ ಮಿತ್ರರು ಅದರಲ್ಲಿ ವಯಸ್ಸು ಯಾಕೆ ಅಡ್ಡ ಬರಬೇಕು?' ಅಂತ. ನನ್ನ ಬ್ಲಾಗ್ ಓದುಗರಲ್ಲಿ ರಾಧಿಕ ಕೂಡ ನನಗಿಂತ ವಯಸ್ಸಿನಲ್ಲಿ ತುಂಬ ಕಿರಿಯರಾದರೂ ನನ್ನ ಹೆಸರು ಹಿಡಿದೇ ಕರೆಯೋದು.:-) ಊಟ ಮಾಡ್ತಾ ಅವರ ಬಗ್ಗೆ ಇನ್ನಷ್ಟು ತಿಳಿಕೊಂಡೆ. ಶ್ರೀಕಾಂತ ಹತ್ತಿರ ಕೂಡ ಮಾತನಾಡಿದರು. ನಮಗೆ ಬೇಕಾಗಿರುವ ಒಂದು ಸಾಫ್ಟ್ ವೇರ್ ತಯಾರಿಕೆಗೆ ಸಹಕರಿಸಲು ಒಪ್ಪಿಕೊಂಡರು. ಹಾಗೆ ಪರಿಚಯ ಇನ್ನಷ್ಟು ಬೆಳೆಯಿತು.
ದಿನಾ ಅವರ HR ಡಿಪಾರ್ಟ್ ಮೆಂಟ್ ನಿಂದ ಬರುವ ಮೈಲ್ ಗಳನ್ನು ನನಗೆ ಫಾರ್ರ್ವಡ್ ಮಾಡುತ್ತಿದ್ದರು. ಪುನ: ಸ್ವಲ್ಪ ದಿನ ಮೌನವಾಗಿದ್ದರು. ಎಲ್ಲಾದರೂ ಟ್ರೈನಿಂಗ್ ಕಳುಸಿದ್ದಾರೇನೋ ಅಂದುಕೊಂಡೆ. ಆದರೆ ಐದು ದಿನದ ನಂತರ ಬಂದ ಪತ್ರಗಳು ತುಂಬ depressive ಆಗಲಿಕ್ಕೆ ಶುರು ಆದವು. ಅವರ ತಂದೆ ತಾಯಿ, ಅಣ್ಣ ತಂಗಿಯರ ಕಂಪ್ಲೈನ್ ಗಳು. ಕೆಳಗಡೆ ಸ್ಥೂಲವಾಗಿ ಅದನ್ನು ಹೇಳುತ್ತೇನೆ.
'ಸಿ' ,ಮೂಲತಃ ಆಂಧ್ರಾ ದಲ್ಲಿನ ಹಳ್ಳಿಯವರು. ಅವರ ತಂದೆ ಅವಕಾಶ ಹುಡುಕಿ ಮೊದಲಿಗೆ ಹೈದರಾಬಾದ್ ನಂತರ ಬೆಂಗಳೂರಿಗೆ ಬಂದವರು. ಮಕ್ಕಳೆಲ್ಲ (ಮೂವರು) ಚಿಕ್ಕವರಾಗಿದ್ದಾಗಲೇ ಬೆಂಗಳೂರಿನಲ್ಲಿ ಸೆಟ್ಟಲ್ ಆಗಿದ್ದರು. ಅವರದ್ದು ಪ್ರೈವೆಟ್ ಫರ್ಮ್ ನಲ್ಲಿ ಚಿಕ್ಕ ಕೆಲಸ. ಅತ್ಯಂತ ಕಡಿಮೆ ಸಂಬಳ. ಅದರಿಂದಲೇ ಇಡಿ ಕುಟುಂಬದ ನಿರ್ವಹಣೆ ಆಗಬೇಕಿತ್ತು. ಅಂತಹದ್ದರಲ್ಲಿ ಹಿರಿಮಗನಿಗೆ ಸಾಲ ಸೋಲ ಮಾಡಿ ಇಂಜಿನಿಯರಿಂಗ್ ಕಲಿಸಿದ್ದರು. ಕಲಿತು ಒಳ್ಳೆ ಕೆಲಸ ಸಿಕ್ಕಿದ ಎರಡೇ ತಿಂಗಳಿಗೆ, ಇನ್ನೇನು ಸಾಲವನ್ನು ತೀರಿಸಲು ಸಹಾಯ ಮಾಡಬಹುದು ಅಂದುಕೊಳ್ಳುವಾಗಲೇ, ಅವನು ಅನ್ಯಜಾತಿಯವಳೊಂದಿಗೆ ಮದುವೆ ಮಾಡಿಕೊಂಡು, ಅವಳು ಇವರ ಮನೆಯಲ್ಲಿರಲು ಒಪ್ಪಿಕೊಳ್ಳದೆ ಅವನು ಬೇರೆ ಮನೆ ಮಾಡಿ ಇರಲಾರಂಭಿಸಿದ.ಅಷ್ಟಲ್ಲದೇ ಸಂಬಳ ಕೂಡ ಅವನು ತನ್ನ ತಂದೆಗೆ ಕೊಡದಂತೆ ನೋಡಿಕೊಳ್ಳುತ್ತಿದ್ದಳಂತೆ ಇವರ ಅತ್ತಿಗೆ. ಕೆಲವು ತಿಂಗಳಲ್ಲೇ 'ಸಿ' ತಂದೆಗೆ ಕೆಲಸದಿಂದ ನಿವೃತ್ತಿ ಆಯಿತು. ಅವರಿಗೆ ಸಿಕ್ಕ ಪಿ ಎಫ್ ಎಲ್ಲ ಸಾಲಕ್ಕೆ ಹೋಯಿತು. ಮನೆಯೆನೋ ಸ್ವಂತದಿತ್ತು.ಆದರೆ ಅದರ ಮೇಲೆ ಕೂಡ ಸಾಲ ತೆಗೆದಿದ್ದರು.'ಸಿ' ಹಾಗೂ ಅವರ ಅಣ್ಣನ ಮಧ್ಯೆ 6 ವರ್ಷದ difference. 'ಸಿ' ಗೆ ಮುಂದಕ್ಕೆ ಓದಿಸಲಾಗದೆ, ಅವರು ಕೆಲ್ಸಕ್ಕೆ ಸೇರಿಕೊಂಡರು. ಮನೆ ಈಗ ಅವರ ಖರ್ಚಿನಲ್ಲೆ ನಡೆಯಲಾರಂಭಿಸಿತು. ಅವರ ಆಫಿಸ್ ನವರು ಒಳ್ಳೆಯವರಾದ್ದರಿಂದ ಅವರಿಗೆ ಓದು ಪೂರ್ಣಗೊಳಿಸಲು ಆರ್ಥಿಕ ಸಹಾಯ ನೀಡಿ ಅವರು ಓದು ಪೊರೈಸಿದ ಮೇಲೆ ಈಗ ಸಾಕಷ್ಟು ಒಳ್ಳೆ ಸಂಬಳದಲ್ಲಿ ಇದ್ದಾರೆ. ಈ ಸಂಗತಿಗಳು ನಡೆದು. 7 ವರ್ಷಗಳೆ ಕಳೆದುಹೋಗಿವೆ. ಮನೆ ಮೇಲೆ ಅವರ ತಂದೆ ತೆಗೆದ ಸಾಲ ಎಲ್ಲ ತೀರಿಸಿದ್ದಾರೆ. ಆರ್ಥಿಕವಾಗಿ ಚೆನ್ನಾಗಿದ್ದು ಈಗ 'ಸಿ' ಬಳಿ ಚಂದದ ಕಾರ್ ಕೂಡ ಇದೆ.
ಈಗ 'ಸಿ' ತಲೆನೋವೇನೆಂದರೆ, ಇತ್ತೀಚಿಗೆ, ಅಂದ್ರೆ ಇವರ ಆರ್ಥಿಕ ಮಟ್ಟ ಸುಧಾರಿಸಿದ ಮೇಲೆ, ಆಗಾಗ ಶನಿವಾರ ಭಾನುವಾರ ಮನೆಗೆ ಆಗಮಿಸುವ ಅಣ್ಣ ಮತ್ತು ಅವನಿಗೆ ರಾಜೋಪಚಾರ ಮಾಡುವ ಅಮ್ಮ.ಅವನು ವಾಪಸ್ ಅವನ ಮನೆಗೆ ಹೋದ ಮೇಲೆ 'ಸಿ' ಅಮ್ಮ ಕಣ್ಣೀರು ಹಾಕುವುದು, ಕೆಲ ಮಾತಿನಿಂದ 'ಸಿ' ಗೆ ಕೀಳರಿಮೆ ಮೂಡಿಸುವುದು ಇಂತಹುದನ್ನೆಲ್ಲ ಮಾಡುತ್ತಿದ್ದಾರೆ ಅಂತ 'ಸಿ' ಗೆ ತುಂಬ ನೋವಾಗಿದೆ. 'ಸಿ' ಗೆ ಮೂವತ್ತೆರಡು ವರ್ಷ ವಯಸ್ಸು. ಅವರ ತಂಗಿಗೆ ಮೂವತ್ತು. ತಂಗಿಗೆ epilepsy ಕಾಯಿಲೆ ಆದ್ದರಿಂದ ಇನ್ನೂ ಮದುವೆ ಆಗಿಲ್ಲ.ಅವಳು ಮನಸ್ಸಿದ್ದರೆ ಸರಿಯಾಗಿ ಇರುತ್ತಿದ್ದಳಂತೆ ಇಲ್ಲದಿದ್ದರೆ ಮೌನವಾಗಿ ಒಂದು ಮೂಲೆಯಲ್ಲಿ ಕೂತಿರುತ್ತಿರುತ್ತಾಳಂತೆ. ಅಮ್ಮ ಅವಳಿಗೂ ಹೀಯಾಳಿಸುತ್ತಿದ್ದರಂತೆ. ಮತ್ತು ಇತ್ತೀಚೆಗೆ 'ಸಿ' ಅಣ್ಣನಿಗೆ ಗಂಡು ಮಗು ಹುಟ್ಟಿದೆ. ಅತ್ತಿಗೆನೂ ಈಗ ಕೆಲವು ಸಲ special appearance ಹಾಕುತ್ತಾರಂತೆ ಇವರ ಮನೆಯಲ್ಲಿ.
'ಸಿ' ಗೆ ಕಿರಿಕಿರಿಯೆಂದರೆ ಅವನ ಅಣ್ಣ ಇವರ ಮನೆಗೆ ಬರಕೂಡದೆಂದು.ಅವನು ಬಂದು ಹೋದ ಮೇಲೆ 'ಸಿ' ಅಮ್ಮನ behaviour ಬದಲಾಗುತ್ತದಂತೆ. ಕಷ್ಟದಲ್ಲಿದ್ದಾಗ ತಿರುಗಿ ಕೂಡ ನೋಡದವ, ಈಗ ನಾವು ಚೆನ್ನಾಗಿದ್ದೇವೆ ಅಂತ, ಒಂದು ಚೂರು ಪಾಪಪ್ರಜ್ಞೆ ಕೂಡ ಇಲ್ಲದವ,ಈಗ ಪದೇ ಪದೇ ಮನೆಗೆ ಬರುತ್ತಾನೆ'. ಸೂಕ್ಷ್ಮವಾಗಿ ಅವನು ಅಣ್ಣನಿಗೆ ಹೀಗೆ ಹೇಳುವಾಗ ಅಮ್ಮ ಕೇಳಿಸಿಕೊಂಡು ಇವನಿಗೆ ಛಿ ಮಾರಿ ಹಾಕಿದ್ದರಂತೆ. ಅಣ್ಣನಿಗೆ ಇಷ್ಟವಾಗುವ ಅಡಿಗೆಯನ್ನು ಮಾಡುವುದು, ಅವನನ್ನು, ಅವನ ಕೆಲಸವನ್ನು ಸಿಕ್ಕಾಪಟ್ಟೇ ಹೊಗಳುವುದು 'ಸಿ' ಗೆ ಕಿರಿಕಿರಿಯೆನಿಸಿದೆ. ಸಿಗುವ ವಾರ್ಯಾಂತದಲ್ಲಿ ಅವನ ಅಣ್ಣನೂ ಇವರ ಮನೆಯಲ್ಲೆ ಇರುವುದು ಅವನಿಗೆ ಬೇಡವಾಗಿದೆ. ಅವನು ಬಂದು ಹೋದ ಮೇಲೆ ಅವನ ತಂಗಿ ಇನ್ನಷ್ಟು ಖಿನ್ನಳಾಗುತ್ತಿದ್ದಳಂತೆ. ಯಾಕೆಂದರೆ ಅವಳಿಗೆ ಅಪಸ್ಮಾರ ಇರುವುದರಿಂದ (ಔಷಧಿಯಿಂದ ಅದು ಹಿಡಿತದಲ್ಲಿದ್ದರೂ) ಮಗುವನ್ನು ಮುಟ್ಟಲು ಬಿಡುತ್ತಿರಲಿಲ್ಲವಂತೆ.
ನಾನು, "ಏನ್ರೀ, ಯಾವಾಗಲೂ ನನ್ನ ಬಳಿ ಕಂಪ್ಲೈನ್ ಮಾಡುವುದು ಬಿಟ್ಟು ಏನಾದರೂ ಉಪಾಯ ನೀವೇ ಕಂಡುಕೊಳ್ಳಬಹುದಲ್ಲ. ವಾರ್ಯಾಂತದಲ್ಲಿ ನೀವು ಫ್ರೆಂಡ್ಸ್ ಜತೆ ಎಲ್ಲಾದರೂ ಹೋಗಿ ಮನೆಯಲ್ಲಿರಬೇಡಿ. ಹಾಗೇ ಅಮ್ಮ ಪುನ: ಕಿರಿಕಿರಿ ಮಾಡಿದ್ರೆ ಅಣ್ಣನ ಮನೆಗೆ ಹೋಗಿ ಇರಲು ಸ್ವಲ್ಪ ಗಟ್ಟಿದನಿಯಲ್ಲಿ ಹೇಳಿ. ಅಷ್ಟಕ್ಕೂ ನಮ್ಮ ಮನೆಯಂದ್ರೆ, 'ನಾನು ಬೇರೆ ಮನೆ ಮಾಡಿರ್ತೀನಿ' ಅನ್ನಿ ಮುಂತಾದ ಬಿಟ್ಟಿ ಸಲಹೆ ಕೊಡಲಾರಂಭಿಸಿದೆ. ಅಷ್ಟೆ ಅಲ್ಲ ಒಂದು ತಿಂಗಳು ಟ್ರೈ ಮಾಡಿ ಅಂತ ಕೂಡ ಸೇರಿಸಿದೆ. ಮತ್ತೆ ಅಣ್ಣ ಬಂದಾಗ ತಂಗಿಯನ್ನು ಕಾರ್ ನಲ್ಲಿ ಎಲ್ಲಾದರೂ ಕರೆದುಕೊಂಡು ಹೋಗಿ ಬನ್ನಿ, ಮಾಲ್(mall), ಶಾಪಿಂಗ್, ಏನಾದರೂ ಕೊಡಿಸಿ, ಅವಳ ಮದುವೆಗೆ ಪ್ರಯತ್ನ ಮಾಡಿ...ಅಮ್ಮನೊಂದಿಗೆ ಮಾತನ್ನು ಕಡಿಮೆಮಾಡಿ. ಮುದ್ದುಗರೆಯಬೇಡಿ. ಎಷ್ಟು ಬೇಕು ಅಷ್ಟೆ ಮಾತಾಡಿ (ಸಿ ಗೆ ಕಂಡಾಪಟ್ಟೆ ಮಾತಾಡಬೇಕು:-)) this will definitely work out., ಅಂದೆ.'ಸಿ' ಪ್ರಾಬ್ಲಮ್ ಸಾಲ್ವ್ ಮಾಡುವಲ್ಲಿ ನನಗೇನೋ ಹುಮ್ಮಸ್ಸು, ಒಂದು challenge. ಯಾಕಂದ್ರೆ 'ಸಿ' ಒಬ್ಬ ಒಳ್ಳೆ ವ್ಯಕ್ತಿ. ಅವರ ಮನಸ್ಸಿನಲ್ಲಿ ಅವರ ಅಣ್ಣನ ಬಗೆಗಿರುವ ವೈಷಮ್ಯ ಕೂಡ ತೆಗೆದುಹಾಕಬೇಕೆಂದಿತ್ತು ನನಗೆ..
ಇನ್ನೊಂದು ಮೈಲ್ ನ ಒಕ್ಕಣೆ ಹೀಗಿತ್ತು, 'ಅಪ್ಪ ಅಮ್ಮ ನಿಗೆ ಬಿಪಿ ಶುಗರ್. ಡಾಕ್ಟರ್ ಹತ್ತ್ತಿರಕ್ಕೆ ಒಯ್ಯಲು ನಾನು. ನನ್ನ ಅಣ್ಣ ಕೂಡ ಮಾಡಬಹುದಲ್ವಾ ?"
ಅದಕ್ಕೆ ನನ್ನ ಉತ್ತರ " come on 'C' dont be mean. What if you did not have any brother. Then you would have done it naa?' stop complaining'
"if your brother wants to make amends and rejoin the family don't thwart him." ಅಂತ ಒಂದು ಸಲ ಹೇಳಿದ್ದೆ. ಅದರ ಮುಂದಿನ ಸಲ ಮನೆಗೆ ಬಂದಾಗ ಏನು ಮಾಡಬೇಕೆಂದು ಈ ಸಲಹೆ ಇತ್ತೆ. 'ಈ ಸಲ ಅಣ್ಣ ಬಂದಾಗ ಪ್ರೀತಿಯಿಂದ ಒಂದೆರಡು ಮಾತಾಡಿ, ಅತ್ತಿಗೆಗೆ ಹಾಯ್ ಅನ್ನಿ, ಕಷ್ಟ ಅನ್ನಿಸಬಹುದು, ಆದರೆ ಸ್ವಲ್ಪ acting ಮಾಡಿ...(ಬಿಟ್ಟಿ ಸಲಹೆಗೆ ಏನಿದೆ ಬಿಡಿ)..:-)ಹಾಡು ಗುನುಗುನಿಸ್ತಾ ತಂಗಿಯನ್ನು ಕರೆದುಕೊಂಡು ಹೊರಗೆ ಹೋಗಿ. ಅಂತ. ಆ ಒಂದು ಭಾನುವಾರ ಅವರು, ತಂಗಿಯನ್ನು ಕಂಠಿರವ ಇಂಡೋರ್ ಸ್ಟೆಡಿಯಮ್ ನಲ್ಲಿದ ಲೈಫ್ ಸ್ಟೈಲ್ ಎಕ್ಸಿಭಿಷನ್ ಗೆ ಕರೆದುಕೊಂಡು ಹೋಗಿ, ತಂಗಿ ಮನೆಗೆ ಬಂದು ಅದರ ಬಗ್ಗೆ ಎಷ್ಟು ಮಾತನಾಡಿದಳಂದ್ರೆ, 'ಸಿ' ಅಮ್ಮನಿಗೂ ಅದರ ಬಗ್ಗೆ ಕುತೂಹಲ ಬೆಳೆಯಿತಂತೆ. ಆಗ 'ಸಿ' 'ಅಮ್ಮನಿಗೆ, ಮುಂದಿನ ಭಾನುವಾರ 'ನಾವೆಲ್ಲರೂ ಹೋಗೋಣ' ಹಾಗೇ ಹೊರಗಡೆ ಎಲ್ಲಾದರೂ ಊಟ ಮಾಡಿಕೊಂಡು ಸಂಜೆ ವಾಪಸ್ ಬರುವಾ ಅಂದನಂತೆ. ಅಮ್ಮ್ನನಿಗೆ ಸಂಬ್ರಮವೋ ಸಂಭ್ರಮ. (ಹೊಸದಾಗಿ ಖರೀದಿಸಿದ ಕಾರ್ ನಲ್ಲಿ ಅವರನ್ನೆಲ್ಲ 'ಸಿ' ಇನ್ನೂ ಎಲ್ಲೂ ಕರೆದುಕೊಂಡು ಹೋಗಿರಲಿಲ್ಲವಂತೆ')
ಕೆಲದಿನಗಳಾದ ಮೇಲೆ ಅವರ ಮೈಲ್ ಹೀಗಿತ್ತು:
ಮಾಲ್ತಿ, ಗೊತ್ತಾ ಪದೇ ಪದೇ ಅಣ್ಣ ಅತ್ತಿಗೆ ಯೇನಕ್ಕೆ ಬರ್ತಿದ್ರು ಅಂತ?? ಅಪ್ಪ ಮನೇನ ಅವರ ಹೆಸರಿಗೆ ಮಾಡಬೇಕಂತೆ' ಸಾಲ ಎಲ್ಲ ತೀರಿಸಿದೋನು ನಾನು. ಆದ್ರೂ ತಂದೆಗೆ ಅವನ ಮೇಲೆ soft corner ಇದೇಯೇನೋ ಎಂಬ ಗುಮಾನಿ'
ಅದಕ್ಕೆ ನಾನು, 'ಖಂಡಿತ ಅದಕ್ಕೆ ಅವಕಾಶ ಕೊಡಬೇಡಿ. ಮನೆಯನ್ನು ತಂಗಿ ಹೆಸರಿಗೆ ಮಾಡಲು ತಂದೆಗೆ ಸಲಹೆ ಕೊಡಿ' ಮತ್ತು ಅಪ್ಪ ಮನೆಯೇನಾದ್ರೂ ನಿಮ್ಮ ಅಣ್ಣನ ಹೆಸರಿಗೆ ಮಾಡಿದ್ರೆ, ನೀವು ಕಟ್ಟಿದ ಸಾಲದ ಹಣ ನಿಮ್ಮ ಅಣ್ಣ ನಿಮಗೆ ಕೊಡಬೇಕು' ಅಂತಂದೆ..ಕೊನೆಗೆ ತಂದೆ ಮಗಳ ಹೆಸರಿಗೆ ಮನೆ ಮಾಡುವುದೆಂದು, ಅವರ ಬಿಲ್ಡಿಂಗ್ ನಲ್ಲೇ ಇನ್ನೊಂದು ಫ್ಲ್ಯಾಟ್ ಸೇಲ್ ಗೆ ಬಂದಾಗ 'ಸಿ' ಅದನ್ನು ಬ್ಯಾಂಕ್ ಲೋನ್ ಪಡೆದುಕೊಂಡು ಅದನ್ನು ಖರೀದಿಸಿದ್ದಾರೆ. ಮದುವೆ ಆದ ಮೇಲೆ ಅಲ್ಲಿರುತ್ತಾರಂತೆ, ಸಧ್ಯಕ್ಕೆ ಬಾಡಿಗೆಗೆ ಕೊಟ್ಟಿದ್ದಾರೆ.
ಹಿಂದಿನ ವರ್ಷ ದೀಪಾವಳಿ ಸಮಯಕ್ಕೆ, ಒಂದು ಸಂಜೆ ನಾವು ಶಾಪಿಂಗ್ ಹೋಗಿ, ಇನ್ನೇನೂ ಹೋಟಲ್ ಗೆ ನುಗ್ಗಬೇಕು ಅನ್ನುವಷ್ಟರಲ್ಲಿ ಒಂದು ಎಸ್ ಎಮ್ ಎಸ್ ಬಂತು. 'ಮಾಲ್ತಿ ಸಿಗ್ನಲ್ ನಲ್ಲಿ ಕ್ರಾಸ್ ಮಾಡಲಿಕ್ಕೆ ನಿಂತ ನೀವು ನಾಲ್ಕೂ ಜನರನ್ನು ನೋಡಿದೆ. ನಿಮ್ಮನ್ನು ಮಾತನಾಡಿಸುವ ಅಂತ ನಾನು, ನನ್ನ ತಂಗಿ ಕ್ರಾಸ್ ಮಾಡಲಿಕ್ಕೆ ನಿಂತಿದ್ದೆವು. ಅಷ್ಟರೊಳಗೆ ನಿಮ್ಮಲ್ಲಿ ಯಾರೋ ಏನೋ ಅಂದಿದ್ದಕ್ಕೆ ನೀವು ನಾಲ್ಕು ಜನ ನಗ್ತಾ ಇದ್ರಿ, ಎದುರುಗಡೆಯಿಂದ ಬಂದ ವಾಹನದ ಬೆಳಕು ನಿಮ್ಮೆಲ್ಲರ ಮುಖದ ಮೇಲೆ ಪ್ರತಿಫಲಿಸಿ, ಅದು ಒಂದು ಸುಂದರ ಚಿತ್ರದ ತರಹ ಕಾಣಿಸಿತು. ಅದೇ ದೀಪಾವಳಿ ಹಬ್ಬ ಅನ್ನಿಸಿ ಎಷ್ಟು ಖುಶಿಯಾಯ್ತಂದರೆ, ಕಣ್ಣಲ್ಲೆ ನಿಮ್ಮ ಭಾವಚಿತ್ರವನ್ನು ತೆಗೆದು ನನ್ನ ಹೃದಯದಲ್ಲಿ ಇರಿಸಿಕೊಂಡೆ' it was a divine moment' ಅಂತ ಬರೆದಿದ್ದರು.(ಹೂಂ poet ಗಳು ಅವರಿಗೆ ಏನೇನು ಅನ್ನಿಸುತ್ತವೋ) "ಬನ್ನಿ ನಮ್ಮ ಜತೆ ಊಟಕ್ಕೆ".ಅಂತ ಮರು ಉತ್ತರ ಕಳಿಸಿದೆ. 'carry on malathi, i dont want to intrude in your family moment' ಅಂತ ಅವರಿಂದ ಮರು ಉತ್ತರ ಬಂದಿತ್ತು.
ಸರಿ ಈಗ ಇದನ್ನು ಹಂಚಿಕೊಳ್ಳಲ್ಲು ಕಾರಣ ಅವರ ಮೈಲ್. ಅವರಿಗೆ ಮದುವೆಯಾಗಿ ಮಗು ಕೂಡ ಆಗಿದೆ. ಒಂದು ಇಂಡಿಪೆಂಡೆಂಟ್ ಮನೆ ಖರೀದಿಸಿದ್ದಾರೆ. ಅಪ್ಪ, ಅಮ್ಮ, ತಂಗಿ (ಮದುವೆ ಮಾಡಿಕೊಳ್ಳುವುದಿಲ್ಲವಂತೆ) ಎಲ್ಲರೂ ಸೇರಿ ಇರುವಂತಹ ಮನೆ. ಗ್ರಹ ಪವೇಶಕ್ಕೆ invitation ಕಳಿಸಿದ್ದಾರೆ. ಹೆಂಡತಿ ಕೂಡ ಕೆಲಸಕ್ಕೆ ಹೋಗುತ್ತಿದ್ದಾರೆ. ಆಗ ಮಗುವನ್ನು ಸಂಭಾಳಿಸುವ ಕೆಲಸ ಅವರ ತಂಗಿ ಮಾಡುತ್ತಾರಂತೆ. ಹಾಗೇ ಅಣ್ಣನ ಮಗ ಈಗ pre schooler. ಅರ್ಧ ದಿನ ಶಾಲೆ ಮುಗಿಸಿಕೊಂಡು ಇವರ ಮನೆಗೆ ಬರೋದು. ಸಂಜೆ ಅಪ್ಪ ಅಥವ ಅಮ್ಮ ಬಂದು ಕರೆದುಕೊಂಡು ಹೋಗೋದಂತೆ. ಅವರು (ಅಣ್ಣ) ಕೂಡ ಅಲ್ಲೇ ಹತ್ತಿರದಲ್ಲಿ ಮನೆ ಖರೀದಿಸಿದ್ದಾರಂತೆ.
ಹಾಗೆ ಇನ್ನೊಂದು ಬಿಟ್ಟಿ ಸಲಹೆ ಕೊಡಲು ಮಾಲತಿ ಅಕ್ಕ ಮರೀಲಿಲ್ಲ...ತಂಗಿ ಹೆಸರಲ್ಲಿ ಎಕೌಂಟ್ ತೆರೆದು ಅವಳ ಖರ್ಚಿಗೆ ಅಂತ ಇಬ್ಬರೂ ಅಣ್ಣಂದಿರು ಸ್ವಲ್ಪ ದುಡ್ಡು ಹಾಕ್ತಾ ಇದ್ದರೆ ಅವಳಿಗೂ ನೆಮ್ಮದಿಯಲ್ಲವಾ ಅಂತ'
????All's well that ends well....
:-)
ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯಗಳು.

Great to hear ಸುಖಾಂತ್ಯ :))..God bless their family..
ReplyDeleteYes Vanitha..Amen and TOUCHWOOD....thanks for the comments in other posts too..
ReplyDelete:-)
malathakka
ಒಳ್ಳೆಯದಾಯಿತು. ಎಲ್ಲರೂ ಚೆನ್ನಾಗಿದ್ದರೆ ನಮಗೂ ಸಂತೋಷ.
ReplyDeleteNice narrative.
ReplyDelete- Shree Kar
ಮಾಲತಿ, ಫೇಸ್ ಬುಕ್ ನನಗೂ ಸನ್ಮಿತ್ರರನ್ನು ಕೊಟ್ಟಿದೆ. ಹಾಗೆ ನೋಡಿದರೆ ನನಗೆ ಮೊದ ಮೊದಲಿಗೆ ಫೇಸ್ ಬುಕ್ ಬಗ್ಗೆ ಒಳ್ಳೆಯ ಅಭಿಪ್ರಾಯವಿರಲಿಲ್ಲ..ಆದರೆ ಕಲಾ ಹಾಗೂ ಸಾಹಿತಿ ಮಿತ್ರರು ಅದನ್ನು ಬದಲಿಸಿದರು. ಇಲ್ಲಿ ಬಂದ ಮೇಲೆ ನಾನು ಎಷ್ಟೆಲ್ಲ ಕಲಿತೆ, ಏನೆಲ್ಲ ಹೊಸ ಕಲೆಗಳ ಬಗ್ಗೆ ಅರಿತೆ... ಇರಲಿ, ನಿಮ್ಮ cಯ ಕತೆ ತುಂಬಾನೆ ಚೆನ್ನಾಗಿದೆ. ನಿಮ್ಮ ಸ್ನೇಹ ಸದಾ ಹೀಗೆಯೇ ಇರಲಿ..ಅವರು ನೋಡಿದ ನಿಮ್ಮ ಕುಟುಂಬದ ದೀಪಾವಳಿಯ ಸಮಯದ ಪವಿತ್ರ ಚಿತ್ರ ಸದಾ ಬೆಳಗಲಿ..ಹಾಗೆಯೇ ಜೀವನವೂ ಸುಖಮಯವಾಗಿರಲಿ!
ReplyDeleteThank GOD...the story ended happily....
ReplyDeleteLots of wishes on GOWRIGANESHA FESTIVAL..... :-)
All is well that ends well :-)
ReplyDeleteBadari Bhaiyya, Shree Kar,Munna (sumathi Hegde), Radhika
ReplyDeleteSheila Nayak : Special thanks for the special comments.Everything has its pros and cons.I find Facebook is good Platform for persons to showcase their artistic ability..
:-)
thank u
Malthi neev yake ondu Aptha salaha kendra shuru madkobardu!! C kathe sukanthyavadadannu odi namgu samadanavenisitu.
ReplyDeleteV