ಗೌರಮ್ಮ ಮನೆಗೆ ಬಂದು ಚಪ್ಪಲಿ ತೆಗೆದ ತಕ್ಷಣ ಗೀತಾ, 'ಗೌರಮ್ಮ ಟೇಬಲ್ ಮೇಲೆ ಬಿಸಿ ಬಿಸಿ ಅಡಿಗೆ ಇದೆ. ಮೊದಲು ಊಟ ಮಾಡಿ ಒಂದಷ್ಟು ಮಲಗಿ ಸುಧಾರಿಸಿಕೊಳ್ಳಿ, ಪ್ರಯಾಣ ಮಾಡಿ ಬಂದಿದ್ದೀರಾ' ಇವತ್ತು ಏನೂ ಅಡಿಗೆ ಕೆಲಸ ಇಲ್ಲ' ಅಂದಳು
ಗೌರಮ್ಮನಿಗೂ ಸುಸ್ತು. ಮಾನಸಿಕ ಸುಸ್ತು. ಈ ಗೀತಮ್ಮ ಯಾರೋ ಏನೋ ಎಷ್ಟು ಒಳ್ಳೆಯವರು. ಅದೇ ನಿನ್ನೆ ಮಗನ ಮನೆಗೆ ಸುಸ್ತಾಗಿ ತಲುಪಿದಾಗ ಸೊಸೆ, 'ಅತ್ತೆ ಹೇಗೂ ನೀವು ಬಂದಿದ್ದಿರಲ್ಲ ಇವತ್ತು ಅಡಿಗೆ ಮನೆ ಜವಾಬ್ದಾರಿ ನಿಮ್ಮದೆ ಅಂತ ಸೋಫಾದ ಮೇಲೆ ಮಲಗಿ, ಟಿವಿ ಯ ರಿಮೋಟ್ ಹಿಡಿದು ಕೊಂಡು, ಹಾಕಿದ್ದ ಚೂಡಿದಾರ್ ಪ್ಯಾಂಟ್ ಹರಿದು ಹೋಗಿದ್ದರ ಪರಿವೆಯೇ ಇಲ್ಲದೆ, ಕಾಲ ಮೇಲೆ ಕಾಲು ಹಾಕಿ ಮಲಗಿದ್ದು..ಭಯಂಕರ ಸಿಟ್ಟು ಬಂದಿತ್ತು ಗೌರಮ್ಮನಿಗೆ.
ಗೀತಳ ಪರಿಚಯ ಆಗಿ ಸುಮಾರು ಆರು ತಿಂಗಳು ಕಳೆದಿವೆ. ಗೌರಮ್ಮನ ಗಂಡ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರು ಕೋಮಾಗೆ ಹೋಗಿದ್ದಾರೆ. ಗೀತಾ ಆ ಅಸ್ಪತ್ರೆಯಲ್ಲಿ ಡಾಕ್ಟರ್. ಗೌರಮ್ಮನ ಊರು ಕುಣಿಗಲ್ ಬಳಿಯ ಒಂದು ಊರು. ಜಮೀನು ಇದೆ. ಗಂಡ ಆರೋಗ್ಯದಿಂದಿರುವವರೆಗೆ ಅವರೇ ತೋಟವನ್ನು ನೋಡಿಕೊಳ್ತಾ ಇದ್ದಿದ್ದು. ಅದು ಈಗ ಅವರ ಇಬ್ಬರು ಮಗಂದಿರ ಸುಪರ್ದಿನಲ್ಲಿದೆ. ಗೌರಮ್ಮನ ಗಂಡನಿಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಆಗಲು ಹೇಳಿದಾಗ ಯಾರ ಮನೆಯಲ್ಲಿ ಇರುವುದು ಎಂದು ಆಕೆಗೆ ತಿಳಿಯಲಿಲ್ಲ. ಸಂಬಂಧಿಕರು ಪರಿಚಯಸ್ಥರು ಯಾರೂ ಇವರನ್ನು ತಮ್ಮಲ್ಲಿ ಬಂದು ಇರಲು ಹೇಳಲಿಲ್ಲ. ಎಷ್ಟು ದಿನ ಅಂತ ಹೀಗೆ ಅವರು ಆಸ್ಪತ್ರೆಯಲ್ಲಿರುವುದು. ಮಗಂದಿರಿಬ್ಬರೂ ಸರಿಯೇ ಸರಿ. ಅಪ್ಪನನ್ನು ಆಸ್ಪತ್ರೆಗೆ ದಾಖಲು ಮಾಡಿ, ಹಣಕಾಸನ್ನು ಕಟ್ಟಿ, ಇವಳ ಕೈಗೂ ಸ್ವಲ್ಪ ಹಣ ಕೊಟ್ಟು ಊರಿನ ದಾರಿ ಹಿಡಿದವರು, ಅಪರೂಪಕ್ಕೆ ಫೋನ್ ಮಾಡಿ, 'ಅಪ್ಪ ಹೇಗಿದ್ದಾರೆಂದು ಕೇಳಿ ಕೈ ತೊಳ್ಕೋತಾರೆ. ಗೌರಮ್ಮನದು ಕಷ್ಟಪಟ್ಟು ದುಡಿಯುವ ಜೀವ. ಆಸ್ಪತ್ರೆಯಲ್ಲಿ ಹೊತ್ತೇ ಹೋಗದು. ಆಗ ಪರಿಚಯವಾದವರು ಲೇಡಿ ಡಾಕ್ಟರ್ ಗೀತ. ಚಟುವಟಿಕೆಯ ಹೆಂಗಸು. ಸಾದಾ ಕಾಟನ್ ಸೀರೆಯಲ್ಲಿ ಚಂದದ ನಗು ಮುಖದ ಡಾಕ್ಟರ್. ಒಂದು ಸಲ ವಾರ್ಡ್ ಬಾಯ್ ಗೆ 'ಇವತ್ತು ಅಡಿಗೆ ಮಾಡಕ್ಕೆ ಪುರುಸೊತ್ತಾಗಲಿಲ್ಲ, ಹೊರಗಿನಿಂದ ಏನಾದರೂ ತಂದು ಕೊಡು ಅಂತ ಹೇಳ್ತಿದ್ದಾಗ ಅವರ ಕಣ್ಣು ಗೌರಮ್ಮನ ಮೇಲೆ ಹೋಯಿತು. ' ನೀವು ಏನಾದರೂ ತೆಗೊಳ್ತೀರಾ ಅಮ್ಮ, ಅಂತ ಕೇಳಿದರು' ಆದರೆ ಗೌರಮ್ಮ ಆಗಲೇ ಕ್ಯಾಂಟೀನ್ ನಿಂದ ಊಟ ತರಿಸಿ ಊಟ ಮಾಡಿಯಾಗಿತ್ತು.
ವಾರ್ಡ್ ಬಾಯ್ ತಂದುಕೊಟ್ಟಿದ್ದ ಊಟದಲ್ಲಿ ಕಾಲು ಭಾಗ ಕೂಡ ಊಟ ಮಾಡದೇ ಇದ್ದುದ್ದು ನೋಡಿ ಗೌರಮ್ಮನ ಕರುಳು ಚುರುಕ್ ಎಂದಿತು. 'ಅಲ್ಲ ದಿನ ಇಡೀ ಓಡಾಟ ಅಷ್ಟು ಊಟ ಸಾಕೇ ಡಾಕ್ತ್ರಮ್ಮ' ಅಂತ ತಡಿಯಲಾರದೇ ಕೇಳಿದಳು. "ಈ ಕ್ಯಾಂಟೀನ್ ಊಟ ಮಾಡುವುದಕ್ಕಿಂತ ಉಪವಾಸ ಇರುವುದೇ ಲೇಸು. ಒಂಚೂರು ಚೆನ್ನಾಗಿಲ್ಲ. ನಾನು ಆದಷ್ಟು ಮನೆಯಿಂದಲೇ ನನ್ನ ಊಟ ತರುವುದು. ಆದರೆ ನಿನ್ನೆ ರಾತ್ರಿಯಿಡೀ ಎಮರ್ಜೆನ್ಸಿ ಕೇಸ್ ಗಳಿದ್ದರಿಂದ ನಾನಿನ್ನೂ ಮನೆಗೆ ಕೂಡ ಹೋಗಿಲ್ಲ. ಒಬ್ಬ್ಬರ ದೇಹಸ್ಥಿತಿ ತುಂಬ ಬಿಗಡಾಯಿಸಿದೆ. ಅದು ಸರಿಯಾಗಿ ಒಂದು ಹಂತಕ್ಕೆ ಬಂದ ಮೇಲೆ ನಾನು ಮನೆಗೆ ಹೋಗುವುದು. ಈಗ ಒಂದರೆಗಳಿಗೆ ಪಕ್ಕದ ಕಾಟ್ ನಲ್ಲಿ ಮಲಗುತ್ತೇನೆ" ಅಂತ ಅಲ್ಲೇ ಅಡ್ಡಾದರು. ಗೌರಮ್ಮ ಗಂಡನ ಬೆಡ್ಡ ಪಕ್ಕದಲ್ಲಿರುವ ಸಣ್ಣ ಬೆಂಚ್ ಮೇಲೆ ಮಲಗಿದರು. ಡಾಕಟ್ರಮ್ಮನ ಬಗ್ಗೆ ಇನ್ನಷ್ಟು ವಿಷಯ ತಿಳಿಯಲು ಅವರು ಕುತೂಹಲಿಗಳಾದರು
ಮರುದಿನ ವಾರ್ಡ್ ಬಾಯ್ ಅವರ ಗಂಡನಿಗೆ ಸ್ಪೋಂಜ್ ಬಾಥ್ ಕೊಡುವಾಗ,ಗೌರಮ್ಮ ನಿಧಾನವಾಗಿ ಡಾಕಟ್ರಮ್ಮ ನ ವಿಚಾರ ತೆಗೆದರು. ಅವರಿಗೆ ಗೊತ್ತಾಗಿದ್ದು ವಿಷಯ ಇಷ್ಟು. ಡಾಕಟ್ರಮ್ಮನ ಮನೆ ಇಲ್ಲೇ ಆಸ್ಪತ್ರೆ ಬಳಿ ಮತ್ತು ಅವರಿಗೆ ಮದುವೆಯಾಗದಿರುವುದು.ಡಾಕ್ಟ್ರಮ್ಮನ ಕನ್ಸಲೇಟಶನ್ ರೂಮ್ ಗೌರಮ್ಮನ ಗಂಡನ ವಾರ್ಡ್ ಪಕ್ಕದಲ್ಲೇ ಇದ್ದುದ್ದು. ಒಂದು ದಿನ ಸ್ವಲ್ಪ ವಿರಾಮವಾಗಿದ್ದಾಗ ಗೌರಮ್ಮ ಹೆದರುತ್ತ ಅವರ ಕೋಣೆಗೆ ಹೋದರು. 'ಒಂದು ಇಷಯ ಡಾಕ್ಟ್ರಮ್ಮ, ಅನ್ಯಥಾ ಭಾವಿಸದಿದ್ದರೆ ಹೇಳುತ್ತೇನೆ ಎಂದರು. ಅವರು ನಸುನಗುತ್ತ ಹೇಳಿ ಗೌರಮ್ಮ, ಗೌರಮ್ಮ ಅಲ್ಲವೇ ತಮ್ಮ ಹೆಸರು'? ಅಂದಳು. ಹೌದು. ನನಗೆ ಇಲ್ಲಿ ಕೂತು ಕೂತು ಬೇಜಾರು. ನಾನ್ಯಾಕೆ ನಿಮಗೆ ಅಡಿಗೆ ಮಾಡಿ ಕೊಡಬಾರದು?? ಒಂದು ಗಂಟೆಯ ಕೆಲಸ. ಅಡಿಗೆ ಮಾಡಿಟ್ಟು ಪಾತ್ರೆ ಬಳಸಿಟ್ಟು ವಾಪಸ್ ಆಸ್ಪತ್ರೆಗೆ ಮರಳುತ್ತೇನೆ. ಆಗಬಹುದೆ? ವಿಚಾರ ಮಾಡಿ.'ಓ ಅದಕ್ಕೇನಂತೆ ಮಾಡಬಹುದು. ಆದರೆ ನಿಮ್ಮ ಮನೆಯವರಿಗೆ ತಕರಾರಿರಬಾರದು ಅಷ್ಟೆ. ಮತ್ತು ನೀವು ನಮ್ಮ ಮನೆಯಲ್ಲೇ ಊಟ ಮಾಡಿ. ಹಾಗಾದರೇ ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ ಎಂದಳು. ಗೌರಮ್ಮನಿಗೆ ತುಂಬ ಖುಶಿಯಾಯಿತು.
ಹೀಗೆ ಒಂದು ದಿನ ಗೀತಾ, 'ಅಲ್ಲ ನೀವು ಆಸ್ಪತ್ರೆಯಲ್ಲಿ ಇದ್ದುಕೊಂಡು ಏನೂ ಮಾಡುವುದಕ್ಕಿಲ್ಲ. ನೋಡಲಿಕ್ಕೆ ನರ್ಸ್/ವಾರ್ಡ್ ಬಾಯ್ ಎಲ್ಲ ಇದ್ದಾರೆ. ರಾತ್ರಿ ಯಾಕೆ ಮುದುಡಿಕೊಂಡು ಆ ಬೆಂಚ್ ಮೇಲೆ ಮಲಗಬೇಕು. ನನ್ನ ಮನೆಯಲ್ಲಿ ಹೇಗೂ ಮೂರು ಕೋಣೆಗಳಿವೆ. ನೀವೂ ಅಡಿಗೆ ಮಾಡಿದ್ದಕ್ಕೆ ಹಣಕಾಸು ಇಸ್ಕೊಳ್ಳಲ್ಲಾ ಅಂತೀರಾ...ರಾತ್ರಿ ಇಲ್ಲೇ ಮಲಗಿ. ಆಕಸ್ಮಾತ್ ಆಸ್ಪ್ತತ್ರೆಗೆ ಧಾವಿಸ ಬೇಕಾದಲ್ಲಿ ಅದು ಕಾಲ್ನಡಿಗೆಯಲ್ಲಿ ಕ್ರಮಿಸುವಷ್ಟೇ ದೂರ. ಏನ್ಹೇಳ್ತೀರಾ ಗೌರಮ್ಮ?' ಗೌರಮ್ಮ ಒಪ್ಪಿ ರಾತ್ರಿ ಇವರ ಮನೆಯಲ್ಲೇ ಉಳಿಯಲು ಪ್ರಾರಂಭಿಸಿದರು.
ಗೀತಾಳ ಮೆನೆಯಲ್ಲಿ ತಂಗಲು ಶುರುಮಾಡಿದ ಸ್ವಲ್ಪ ದಿನಗಳ ನಂತರ , ಒಂದು ದಿನ ರಾತ್ರಿ ಗೀತಾ ಮತ್ತು ಗೌರಮ್ಮ ರಿಗೆ ಲೋಕಾಭಿರಾಮವಾಗಿ ಮಾತಾಡುವ ಅವಕಾಶ ಸಿಕ್ಕಿತು. ಗೌರಮ್ಮ, ಗೀತಳಿಗೆ - ಯಾಕೆ ಇನ್ನೂ ಮದುವೆ ಆಗಿಲ್ಲ ಅಂತ ಕೇಳಬಹುದೇ ಡಾಕ್ಟ್ರಮ್ಮ??' ಅದಕ್ಕೆ ಗೀತಾ ' ಒಹೋ ಅದಕ್ಕೇನಂತೆ. ನಾನೂ ಒಬ್ಬರನ್ನ ಪ್ರೀತಿಸಿದ್ದೆ. ಅವರೂ ಡಾಕ್ಟರ್. ಹಳ್ಳಿಗೆ ಹೋಗಿ ಅಲ್ಲಿ ಒಂದು ಕ್ಲಿನಿಕ್ ತೆರೆಯುವ ಯೋಜನೆಗಳನ್ನೆಲ್ಲ ಹಾಕ್ಕೊಂಡಿದ್ವಿ. ಬೇರೆಯವರ ಸೇವೆ ಮಾಡ್ತಾ ಮಾಡ್ತಾ ಅವರು ಅವರ ಆರೋಗ್ಯದ ಕಡೆ ನಿಗಾ ವಹಿಸದೇ ಒಂದು ದಿನ ತುಂಬ ಕಾಯಿಲೆ ಬಿದ್ದರು. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ತುಂಬ ವಿಳಂಬವಾಗಿತ್ತು. ಕೊನೆಯುಸಿರೆಳೆದುಬಿಟ್ಟರು, ಅಂದಳು ಗದ್ಗದಿತಳಾಗಿ' "ಅವರ ತರಹ ಇನ್ನೂ ಯಾರೂ ಸಿಕ್ಕಿಲ್ಲ ನನಗೆ. ಬಹುಶ: ಅವರ ನೆನಪಲ್ಲೇ ಜೀವನ ಸವೆಸುತ್ತೇನೆ" ಗೌರಮ್ಮ ಲೊಚಗುಟ್ಟಿ ಸುಮ್ಮನಾದರು.
ಹೀಗೆ ಒಂದು ದಿನ ರಾತ್ರಿ ಗೌರಮ್ಮನ ಯಜಮಾನರಿಗೆ ಶ್ವಾಸಕೋಶದ ಸೋಂಕು ತಗುಲಿ ದೇಹಸ್ಥಿತಿ ಸಿರಿಯಸ್ ಅಂತ ಆಸ್ಪತ್ರೆಯಿಂದ ಕರೆ ಮಾಡಿದರು. ಗೀತ ವಾಚ್ ಮನ್ ಗೆ ಗೌರಮ್ಮನನ್ನು ಆಸ್ಪತ್ರೆ ತನಕ ತಲುಪಿಸಲು ಹೇಳಿದಳು. ಮರು ದಿನ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಗೌರಮ್ಮನ ಯಜಮಾನರು ದೈವಾಧೀನರಾದರು. ಗೌರಮ್ಮ ನಿಗೆ ಗೀತಳನ್ನು ಕಾಣುವ ಆಸ್ಪದ ಸಿಗಲಿಲ್ಲ. ಅವರು ಕುಟುಂಬದವರ ಜತೆ ಕುಣಿಗಲ್ ಗೆ ಹೊರಟು ಬಿಟ್ಟರು. ಹಾಗೇ ಅವರ ಅಪರ ಕರ್ಮಗಳೆಲ್ಲವೂ ಮುಗಿಯಿತು.
ಇಷ್ಟು ದಿನ ಅತ್ತೆ ಮಾವ ಇಲ್ಲದ ಮನೆಯಂತ ಮನೆಯಲ್ಲಿ ಸೊಸೆಯಂದಿರದ್ದೆ ರಾಜ್ಯ. ಎಲ್ಲೆಂದರಲ್ಲೇ ಪಾತ್ರೆಗಳು, ಬಟ್ಟೆಗಳು. ಸೊಸೆಯಂದಿರು ದಿನವಿಡೀ ತಮ್ಮ ತಮ್ಮ ಕೋಣೆಯಲ್ಲಿ ಟಿವಿ ನೋಡುವುದರಲ್ಲಿ ತಲ್ಲೀನರು. ಅವರ ಮಕ್ಕಳನ್ನು ಸರಿಯಾಗಿ ಗಮನಿಸದಷ್ಟು ಅವರು ಟಿವಿ ಯೊಳಗೆ ಮಗ್ನರಾಗಿದ್ದರು. ರಾತ್ರಿ ಅವರ ಗಂಡಂದಿರು ತೋಟದಿಂದ ಮನೆಗೆ ತೆರಳಿದಾಗ ಅವರ ಬೇಕು ಬೇಡ, ಊಟ ಇತ್ಯಾದಿಗಳನ್ನೂ ಮುದಿ ಗೌರಮ್ಮನ ಪಾಲಿಗೆ ಬಿದ್ದಿತು.ಗೌರಮ್ಮನ ಕೆಲಸದಲ್ಲಿ ಸೊಸೆಯಂದಿರು ಕಿಂಚಿತ್ತೂ ಸಹಾಯ ಮಾಡ್ತಿರಲಿಲ್ಲ. ತೋಟದ ದೊಡ್ಡ ಮನೆ. ಹಾಗೇ ಕೆಲಸಗಳೂ ಬೇಕಾದಷ್ಟಿದ್ದವು.
ಒಂದು ದಿನ ಗೌರಮ್ಮ ವಿಪರೀತ ತಲೆ ನೋವಿಗೆ ತುತ್ತಾದರು. ಒಬ್ಬರಾದರೂ ಸೊಸೆ 'ಹೇಗಿದ್ದೀರಿ ಅತ್ತೆ' ಅಂತ ಕೇಳುವುದು ಬಿಡಿ ಅವರ ಕೋಣೆ ಕಡೆಗೂ ಹಾಯಲಿಲ್ಲ. ಬೆಳಗ್ಗಿನ ತಿಂಡಿ ಮಧ್ಯಾಹ್ನದ ಊಟ ಎಲ್ಲ ಹೊರಗಿನಿಂದಲೇ ತರಿಸಿ ತಿಂದು ಆಯ್ತು. ಒಬ್ಬ ಮಗ ಅಮ್ಮನಿಗೋಸ್ಕರ ಒಂದು ಬ್ರೆಡ್, ತಲೆನೋವಿಗೊಂದು ಮಾತ್ರೆ ಕೊಟ್ಟು ಹೊರಟು ಹೋದ. ಅಂತದ್ದರಲ್ಲೇ ಡಾಕ್ಟರ್ ಗೀತ ಗೌರಮ್ಮನಿಗೆ ಫೋನ್ ಮಾಡಿದರು. 'ಹೇಗಿದ್ದೀರಿ ಗೌರಮ್ಮ' ನೀವು ಊರಿಗೆ ಹೋಗುವ ಮುಂಚೆ ನಿಮ್ಮನ್ನು ಮಾತನಾಡಿಸಲೇ ಆಗಲಿಲ್ಲ. ನಾನು ಆ ದಿನ ಪೂರ್ತಿ ಎಮೆರ್ ಜೆನ್ಸಿ ಕೇಸ್ ಗಳನ್ನು ಅಟೆಂಡ್ ಮಾಡ್ತಾ ಇದ್ದೆ. ಈಗ ಮೂರು ದಿನ ರಜೆ ಹಾಕಿದ್ದೀನಿ ಊರಿಗೆ ಹೋಗಿ ಚಿಕ್ಕಪ್ಪನನ್ನು ನೋಡಿಕೊಂಡು ಬರೋಣವೆಂದು.ನಿಮ್ಮ ಕೆಲವು ಬಟ್ಟೆ ಬರೆ ಇಲ್ಲೇ ಉಳಿದಿವೆಯಲ್ಲ ಗೌರಮ್ಮ. ಆ ನೆವದಲ್ಲಿ ಒಂದೆರಡು ದಿನ ಬೆಂಗಳೂರಿಗೆ ಬಂದು ಹೋಗ ಬಹುದು. ಸ್ವಲ್ಪ ಹೊತ್ತು ಮೌನ ವಹಿಸಿ,- ಹಾಗೆ ನಿಮ್ಮ ಕೈ ಯಡುಗೆಯ ರುಚಿ ನೆನಪಾಯ್ತು'. ತಲೆ ನೋವಿನಿಂದ ನರಳುತ್ತಿರುವ ಗೌರಮ್ಮನಿಗೆ, ಗೀತಳ ಅಪ್ಯಾಯಮಾನವಾದ ದನಿ ಕೇಳಿ ಅಳು ಒತ್ತರಿಸಿ ಬಂತು. ನನ್ನ ಪಾಡು ಹೀಗಾಗಿದೆ. ಮೊದಲೆಲ್ಲ ಮಾವನವರ ಹೆದರಿಕೆ ಇತ್ತು ಸೊಸೆಯಂದಿರಿಗೆ. ಈಗ ಆಸ್ತಿ ಪಾಸ್ತಿ ಎಲ್ಲ ಅವರ ಪಾಲಿಗೆ ಬಂದ ಮೇಲೆ ಅವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ನನಗೆ ಬೇಜಾರು ಬಂದು ಬಿಟ್ಟಿದೆ. ಯಾವುದೇ ಆಶ್ರಮ ಸೇರಿಕೊಳ್ಳುವ ಆಸೆಯನ್ನು ಮಕ್ಕಳ ಮುಂದೆ ಇಟ್ಟಾಗ ಸೊಸೆಯಂದಿರು ಇಷ್ಟು ದೊಡ್ಡ ಗಂಟಲು ಮಾಡಿ, 'ಅದಕ್ಕೆಲ್ಲ ತುಂಬ ಕಾಸು ವ್ಯಯ ಆಗುತ್ತೆ. ತೆಪ್ಪಗೆ ಮನೆ ನೋಡಿಕೊಂಡು, ಅಡಿಗೆ ಮಾಡಿಕೊಂಡು ಇರಿ' ಅನ್ನುವುದೇ? ಇವತ್ತು ಸ್ವಲ್ಪ ಹುಷಾರಿಲ್ಲವೆಂದು ಮಲಗಿದರೆ ನನಗೆ ಹೊಟ್ಟೆಗೆ ಗತಿಯಿಲ್ಲ. ಮತ್ತೆ ನಿನ್ನೆ ರಾತ್ರಿ ಒಬ್ಬ ಸೊಸೆ ನನಗೆ ಬಂದು ಜೋರು ಮಾಡಿ, 'ಅತ್ತೆ, ನಿಜಕ್ಕೂ ಹುಷಾರಿಲ್ಲವಾ? ಅಥವಾ ನಾಟಕ ಆಡುತ್ತಿದ್ದೀರಾ? ಇನ್ನೂ ಮಲಗೇ ಇದ್ರೆ ನಿಮ್ಮನ್ನ ನಿಜಕ್ಕೂ ಯಾವುದಾದರೂ ಆಶ್ರಮಕ್ಕೆ ಸಾಗ ಹಾಕುವುದೇ ಸರಿ? ಅಷ್ಟಲ್ಲದೇ ಮಗ ಬಂದ ಕೂಡಲೇ ಇದೆ ಮಾತನ್ನ ಅವನಿಗೆ ಹೇಳಿದ್ದಾಳೆ. ಎಲ್ಲೋ ನನ್ನ ಮೇಲೆ ಕಿಂಚಿತ್ ಪ್ರೀತಿ ಇರಬೇಕು ಆ ಮಗನಿಗೆ, ಅವನು ಹೆಂಡತಿಯನ್ನು ಸರೀ ದಬಾಯಿಸಿದ. ಆದರೆ ಇದು ತುಂಬ ದಿನ ನಡೆಯುವ ಹಾಗೆ ಕಾಣಲ್ಲ. ಹೇಳಿ ಕೇಳಿ ಪ್ರೀತಿಸಿ ಮದುವೆಯಾಗಿದವ. ನನ್ನನ್ನು ಮನೆಯಿಂದ ಕಳಿಸುತ್ತಾನೆ ವಿನಃ ಹೆಂಡತಿಗೆ ಏನೂ ಹೇಳಲಾರ ಅಂತಲೇ ನನಗೆ ಅನ್ನಿಸುವುದು. ಅಷ್ಟು ಹೇಳಿ ಗೋಳೋ ಅಂತ ಅತ್ತರು ಗೌರಮ್ಮ
ಅದಕ್ಕೆ ಗೀತ, 'ನೋಡಿ ಗೌರಮ್ಮ, ಸಮಾಧಾನ ಮಾಡಿಕೊಳ್ಳಿ. ನಿಮ್ಮ ಅಭ್ಯಂತವೇನಿಲ್ಲದಿದ್ದರೆ ನೀವು ನಮ್ಮ ಮನೆಗೆ ಬಂದಿರಬಹುದು' ನಾನು ಅಮ್ಮನಿಲ್ಲದೇ ಬಾಳಿ ಬದುಕಿದವಳು. ನಿಮ್ಮನ್ನು ನನ್ನ ತಾಯಿ ತರಹನೇ ನಾನು ಕಂಡಿದ್ದೆ, ನೀವು ನನ್ನಲ್ಲಿದ್ದಾಗ. ಈಗಲೂ ನಮ್ಮ ಮನೆಗೆ ನಿಮಗೆ ಸ್ವಾಗತ. ಏನಂತೀರಾ? ಹಾಗೇ ಮುಂದಿನ ತಿಂಗಳು ಹದಿನೈದು ದಿನಗಳ ರಜೆ ಹಾಕಿದ್ದೇನೆ. ಅಮರನಾಥ ಯಾತ್ರೆ ಮಾಡಿ ಬರುವಾ ನಾನು ನೀವು?
ಏನೆಂದಿರಬಹುದು ಗೌರಮ್ಮ?????
:-) :-)

ತುಂಬಾ ಚೆನ್ನಾಗಿದೆ...ಎಷ್ಟೋ ಮನೆಗಳಲ್ಲಿ ಇವತ್ತಿಗೂ ನಡೆಯುವ ಜೀವಂತ ಸತ್ಯ..ಗೌರಮ್ಮ v l b very happy n pack her bags...i think... :)
ReplyDeletePoignant, realistic story.
ReplyDelete-- Kar
Our ancients in Bharatavarsha had come up with an excellent solution for this problem of younger generation neglecting their elders-- Vanaprasthashram or retiring to the woods.
ReplyDeleteAlas, where are the woods today to retire? :-)
ARam
Want Gauramma to say yes for the offer. But can it be true? Can someone find solace in another family than their own?
ReplyDeleteಗೌರಮ್ಮ ಹೊಸ ದಾರಿಯನ್ನು ಸ್ವೀಕರಿಸುವುದು ಒಳ್ಳೆಯದೆಂದು ನನಗೂ ಅನಿಸಿತು.
ReplyDeleteಉತ್ತಮ ನಿರೂಪಣೆ.
Sumathi Hegde (Munna), Shree Kar, ARam, Radhika and Badari
ReplyDeletethank you
:-)
ms
Malthi nange Gowramma avla swantha maneyalle irbeku antha ansotte. Eshtandru adu avla mane, gandana nantara aasthi avlige thane baruvudu, adanne astravannagi ittukondu paristhitiyannu sari padiskolbahudittu."Janarige matina pettu, daddarige etina pettu" anno hage Kutantrada makkalu soseyandirige pata kalsi tanu bali badukida maneyalle saadyavadashtu kala swatantravagi badukuva dari madikollabahudu.V
ReplyDeleteyoo hoo dearest V..cheers to u!
ReplyDeletei will let Gowramma know about your view after she returns from her Amarnath trip.( good one!)
:-))
mals
ಕತೆ ಮನ ಕಲಕುವಂತಿದೆ.ನಡೆದಿದ್ದಾ?
ReplyDeleteಡಾ. ಕೃಷ್ಣಮೂರ್ತಿಯವರೆ:
ReplyDeleteಹೌದು. ಅಲ್ಪ ಸ್ವಲ್ಪ ನಿಜ...
ಮಾಲತಿ ಎಸ್.
Story went a lot like a Ekta kapoor serial ( but faster!!) ur doctor narration reminded me of tanvi Azmi of Jeevan rekha
ReplyDeleteAnonymous ji
ReplyDeleteha ha i had to read it once to know what u were talking about. though i am not very familiar with Ekta Kapoor serials(have heard of them though) i did watch a few episodes of Jeevan Rekha (dhak dhak dhak dhak)...tanvi azmi is very beautiful.i remeber AK Hangal too in the serial and he or his wife used to ring a bell to alert the other or something like that..?? alwaa?
thanks once again..
:-)
ms