August 27, 2012

ಕಾಕಸ್ಪರ್ಶ (ಮರಾಠಿ ಸಿನಿಮಾ)- ಒಂದು ವಿಲಕ್ಷಣ ಪ್ರೇಮ ಕತೆ

SPOILER ALERT : ಇದು ಸಿನಿಮಾದ review ಅಲ್ಲ. ಚಿತ್ರಕತೆಯನ್ನು 90 % as is ಬರೆದಿದ್ದೇನೆ. ಈ ಚಿತ್ರವನ್ನು ನೀವು ಮುಂದೇನಾದರೂ ವೀಕ್ಷಿಸುವುದಿದ್ದರೆ ಖಂಡಿತ ಇದನ್ನು ಓದಬೇಡಿ.........

ಪೋಸ್ಟ್ ನ ಕೆಳಗಡೆ on line ಸಿನಿಮಾ ನೋಡಲು ಬೇಕಾದ ಲಿಂಕ್ ಕೊಟ್ಟಿದ್ದೇನೆ

ಈ ಚಿತ್ರದ ಕತೆಯು ಸ್ವಾತ್ಯಂತ್ಯ್ರ ಪೂರ್ವ ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಸ್ಥಿತವಾಗಿದೆ. ಈ ಕತೆಯ ಮುಖ್ಯ ಪಾತ್ರ  ಹರಿ ದಾದಾ*. ಮಹಾರಾಷ್ಟ್ರದ ಒಂದು ಮಧ್ಯಮ ವರ್ಗದ ಕೃಷಿ ಅವಲಂಬಿತ ಬ್ರಾಹ್ಮಣ  ಕುಟುಂಬ. ಮನೆಯ ಸಂಪೂರ್ಣ ಜವಾಬ್ದಾರಿ ಹರಿದಾದಾ (ಸಚಿನ್ ಖೇಡೇಕರ್) ನ ಮೇಲೆ. ಹರಿ ದಾದಾ ಅವನ ತಮ್ಮ -ಮಹಾದೇವನ ಮದುವೆ ಮಾಡಲು ಹೊರಡುತ್ತಾನೆ. ತಮ್ಮನ ಹೆಂಡತಿ ಉಮಾ (ಪ್ರಿಯಾ ಬಾಪಟ್) ಇನ್ನೂ ಬಾಲೆ. ರಜಸ್ವಲೆಯಾದ ನಂತರ ಅವರ ಮೊದಲ ರಾತ್ರಿಯ ಮಿಲನ ಸಂಭ್ರಮದ ಫಲಶೋಧನಾ ಪೂಜೆ, ಮಹಾದೇವನ ಕಾಯಿಲೆಯಲ್ಲೂ ಅದ್ದೂರಿಯಾಗಿ ಜರಗುತ್ತದೆ. ಆದರೆ ರಾತ್ರಿ (ಮೊದಲ ರಾತ್ರಿ) ಮಹಾದೇವ ಅಸುನೀಗುತ್ತಾನೆ. ಪುಟ್ಟ ಹೆಂಡತಿ ಮದುವೆ/ ಸಂಬಂಧ ಏನು ಅನ್ನುವುದು ಗೊತ್ತಾಗುವ ಮುಂಚೆಯೆ ವಿಧವೆಯಾಗುತ್ತಾಳೆ. ಅಪರಕರ್ಮದ 10 ನೇ ದಿನ ಕಾಗೆಗೆ ಪಿಂಡ ಇಟ್ಟಾಗ ಅದು ಸ್ವೀಕರಿಸುವುದಿಲ್ಲ.ಪುರೋಹಿತರು, ಸೇರಿದ ಜನರು ತಲೆಗೊಂದರಂತೆ ಉಪಾಯಗಳನ್ನು ಹೇಳುತ್ತಾರೆ. ಆದರೆ ಹರಿ ದಾದಾ ಕಾಗೆಗೆ ಕೈ ಮುಗಿದು ಏನೋ ಬೇಡುತ್ತಾನೆ. ಅಷ್ಟರಲ್ಲಿ ಪುರ್ ಅಂತ ಹಾರಿ ಬಂದು ಕಾಗೆ  ಪಿಂಡವನ್ನು ಸ್ಪರ್ಶಿಸುತ್ತದೆ. 
ಮನೆಯ ಹಿರಿಯ ವಿಧವೆ ಅಜ್ಜಿ (ಹರಿದಾದಾನ ತಂದೆಯ ಅಕ್ಕ, ಅರ್ಥಾತ್ ಹರಿದಾದಾನ ಅತ್ತೆ- ನಮೂ ಅತ್ಯಾ) 10 ನೇ ದಿನ ಕ್ಷೌರಿಕನನ್ನು  ಆಗಿನ ಸಂಪ್ರದಾಯದ ಪ್ರಕಾರ,ಉಮಾಳ ಕೇಶ ಮುಂಡನಕ್ಕೆ ಕರೆ ತರುತ್ತಾಳೆ. ಆಕೆ ಹಾಗೂ ಹರಿದಾದಾನ ಹೆಂಡತಿ , ತಾರಾ,ಅತ್ತು ಕೂದಲನ್ನು ತೆಗೆಸುವುದು ಬೇಡ ಅಂತ ರಚ್ಚೆ ಹಿಡಿದ ಉಮಾಳನ್ನು ದರದರನೆ ಮನೆಯಿಂದ ಎಳೆದು ತರುತ್ತಾರೆ.ಕ್ಷೌರಿಕ ಕತ್ತಿಯನ್ನು ಅವಳ ಕೂದಲ ಬಳಿಗೆ ತರಬೇಕೆನ್ನುವಷ್ಟರಲ್ಲಿ, ಅಲ್ಲಿಗೆ ಹರಿದಾದಾ ತಲುಪಿ ಕ್ಷೌರಿಕನನ್ನು  ಅವನ ಪರಿಕರಗಳ ಸಮೇತ ಅಲ್ಲಿಂದ ಬಿಸಾಕುತ್ತಾನೆ. ಇಡೀ ಊರಲ್ಲಿ ಗಲ್ಲು ಗುಸುಗುಸು.
ಹೀಗೆ ಒಂದು ದಿನ ಹರಿ ದಾದಾನ ಹೆಂಡತಿಗೆ ಹೊಟ್ಟೆಯಲ್ಲಿ ಗೆಡ್ಡೆ ಬೆಳೆದು, ಮಲಗಿದ ಕಡೆ ಆಗುತ್ತಾಳೆ. ಆಗ ಮನೆಯ ಸಂಪುರ್ಣ ಜಾವಾಬ್ದಾರಿ ಉಮಾಳ ಪಾಲಿಗೆ ಬೀಳುತ್ತೆ. ಅವಳಿಗೆ ಹರಿದಾದಾನ ಕೆಲಸ ಮಾಡುವಲ್ಲಿ ತುಂಬ ಆಸಕ್ತಿ. ಚೆಂದದ ಉಮಾಳ ಈ ಆಸಕ್ತಿಗಳನ್ನು ನೋಡಿ ಹರಿದಾದಾಳ ಹೆಂಡತಿ ಹೊಟ್ಟೆಕಿಚ್ಚು ಪಟ್ಟು ಇನ್ನಷ್ಟು ತನ್ನ ಆರೋಗ್ಯ ಹಾಳು ಮಾಡಿಕೊಳ್ಳುತ್ತಾಳೆ. ಸಾಯುವ ಮುನ್ನ ಗಂಡನನ್ನು ಕರೆದು, 'ನನಗೆ ಗೊತ್ತು ನಿಮಗೆ ಉಮಾಳ ಮೇಲೆ ವಿಪರೀತ ಪ್ರೀತಿ, ಅದು ನಿಮ್ಮ ಕಣ್ಣೋಟ, ನೀವು ಅವಳ ಬಗ್ಗೆ ತೋರಿಸುವ ವಿಶೇಷ ಆಸ್ಥೆಯಿಂದ ನನಗೆ ಗೊತ್ತಾಗಿ ಹೋಗಿದೆ. ನಾನಿನ್ನು ಉಳಿಯುವುದಿಲ್ಲ. ಯಾಕೆ ನೀವು ಅವಳನ್ನು ಮದುವೆಯಾಗಬಾರದು' ಅನ್ನುವ ಪ್ರಶ್ನೆಗೆ 'ಛೇ ಅಂತ ಆಲೋಚನೆ ನನ್ನ ಬಳಿ ಸುಳಿಯಲೇ ಬಾರದು' ಎಂದು ಬೇಸರದಿಂದ ಅಲ್ಲಿಂದ ಎದ್ದು ಹೋಗುತ್ತಾನೆ ಹರಿದಾದ' ಸ್ವಲ್ಪ ಹೊತ್ತಲ್ಲೆ ಉಮಾಳಿಂದ -ತನ್ನ ಸಂಸಾರ ಮನೆ ಮಕ್ಕಳನ್ನು ಯಾವತ್ತೂ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂಬ ಪ್ರಮಾಣ ಸ್ವೀಕರಿಸಿ ಹರಿದಾದಾನ ಹೆಂಡತಿ ಅಸುನೀಗುತ್ತಾಳೆ.
ಈ ಮೊದಲೇ ಹರಿದಾದಾನ ಪ್ರಗತೀಶೀಲ ವಿಚಾರಗಳಿಂದ ಸಿಟ್ಟಿಗೆದ್ದಿದ್ದ ಉಪಾಧ್ಯಾಯ, ಹರಿದಾದಾನ ಮೇಲೆ ಕಿಡಿ ಕಾರುತ್ತಿದ್ದ. ವಿಧವೆ ಉಮಾಳ ಕೇಶಮುಂಡನ ಮಾಡಿಸದೇ ಇದ್ದಿದ್ದರಿಂದ ಊರ ಜನರಿಂದ ಹರಿದಾದಾನ ಕುಟುಂಬದ ಮೇಲೆ  ಬಹಿಷ್ಕಾರ ಹಾಕಿಸಿದ್ದ. ಹರಿದಾದಾ ಕಾಶಿಯ ಮಹಾಪಂಡಿತರಿಂದ, -ಅವನಿಂದ ಗೊತ್ತಿದ್ದು-ಗೊತ್ತಿಲ್ಲ್ಲದೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ ಅಂತ ಮೂರು ರೂಪಾಯಿಯ ತಪ್ಪು ಕಾಣಿಕೆಯಿತ್ತು, ಮಹಾಪಂಡಿತರಿಂದ ಕ್ಷಮಾಪಣೆಯ ಪತ್ರ ಪಡೆದಿದ್ದರಿಂದ ಉಪಾಧ್ಯಾಯನಿಂದ ಅವನಿಗೆ ಏನೂ ಮಾಡಲಾಗದ ಪರಿಸ್ಥಿತಿ ಮಾತ್ರವಲ್ಲದೆ, ಊರಿನಲ್ಲಿ ಎರಡು ಬಣಗಳು ತಯಾರಾಗಿದ್ದವು.ಊರಿನ ಉಪಾಧ್ಯಾಯ (ಪುರೋಹಿತ) ಅವರನ್ನೊಳಗೊಂಡು ಎಲ್ಲರೂ ಉಮಾ ಹಾಗೂ ಹರಿದಾದಾಗೆ ಛೀಮಾರಿ ಹಾಕುತ್ತಾರೆ 'ಈಗ ಹೆಂಡತಿ ಸತ್ತ ಮೇಲೆ ನಿಮ್ಮ ವ್ಯಭಿಚಾರಕ್ಕೆ ಇನ್ನಷ್ಟು ಕುಮ್ಮಕ್ಕು ಸಿಕ್ಕಿದೆ. ನಿಮಗಿಬ್ಬರಿಗೆ ಹೇಳುವವರು ಕೇಳುವವರು ಯಾರೂ ಇಲ್ಲ'. ಅಷ್ಟಲ್ಲದೆ ಅವನು ಊರಿನ ಇತರ ಜನರನ್ನು ಸೇರಿಸಿ ಕೊಂಡು ಉಮಾ ಹಾಗೂ ಹರಿದಾದಾನ ಮೇಲೆ ಹಲ್ಲೆ ಎಸಗುತ್ತಾನೆ. ಅಷ್ಟರೊಳಗೆ ಅಲ್ಲಿಗೆ ಬಂದ ಹರಿದಾದಾನ ಆಪ್ತಮಿತ್ರ ,ಸ್ವಾತಂತ್ರ್ಯ ಚಳುವಳಿಗಾರ ಬಲವಂತ (ಮರಾಠಿಯಲ್ಲಿ ಬಳವಂತ್) ಅವನ ಸಂಗಡಿಗರೊಂದಿಗೆ ಬಂದು ಉಪಾದ್ಯಾಯ ಹಾಗೂ ಅವನ ಸಂಗಡಿಗರಿಗೆಲ್ಲ ಸದೆ ಬಡಿಯುತ್ತಾರೆ. ಅವರು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಹರಿದಾದಾ ಅವನಿಗೆ ಆಭಾರಿ ಎನ್ನುವಾಗ 'ಇವತ್ತು ನಾನಿಲ್ಲಿದ್ದೆ ನಿಮ್ಮನ್ನು ಸಂರಕ್ಷಿಸಿದೆ. ಇಲ್ಲದಿದ್ದರೆ ಅವರು ಉಮಾಳನ್ನು ಏನು ಮಾಡುತ್ತಿದ್ದರೋ ನಾನು ಊಹಿಸಲಾರೆ' ಅಂತ ಹೇಳಿ ಅವನು ಹೊರಟು ಬಿಡುತ್ತಾನೆ. ಮನೆಯ ಹಿರಿಯ ರಾದ  ವಿಧವೆ ನಮೂ ಅತ್ತೆ, ಹಾಗೂ ಹರಿದಾದಾನ ತಂಗಿ ಅವನಿಗೆ ಉಮಾಳನ್ನು ಮದುವೆಯಾಗಿ ಜನರ ಬಾಯಿಗೆ ಬೀಗ ಹಾಕಿಸು ವಂತೆ ಬುದ್ದಿವಾದ ಹೇಳುತ್ತಾರೆ. ಅವನು ಒಪ್ಪುವುದಿಲ್ಲ.
ಇವೆಲ್ಲ ಕಿರಿಕಿರಿಯೇ ಬೇಡ ಅಂತ ಅವನ ಮಗ ಸಂಕರ್ಷಣ್ ಗೆ ಸೂಕ್ತ ಕನ್ಯೆ ಹುಡುಕಿ ಮದುವೆ ಮಾಡಿಬಿಡುತ್ತಾನೆ. ಸಂಕರ್ಷಣ್ ಮತ್ತು ಅವನ ಹೆಂಡತಿಯ ಮಲಗುವ ಕೊಠಡಿಯಿಂದ ಬರುವ ಸದ್ದು ಮಾತುಗಳನ್ನು ಕೇಳಿಸಿಕೊಂಡು, ಉಮಾ ಅವರ ಕೋಣೆಯ ಹೊರಗೆ ಕೂತು ಅವರ ಮಾತುಕತೆಯನ್ನು ಆಲಿಸುತ್ತಿರುವಾಗಲೆ ಅಲ್ಲಿ ಹರಿದಾದಾನ ಆಗಮನವಾಗುತ್ತೆ. ಅವಳು ಹೆದರಿ ಮುಜುಗರದಿಂದ ಅಲ್ಲಿಂದ ಜಾಗ ಖಾಲಿ ಮಾಡುತ್ತಾಳೆ.
ಮರುದಿನ ಬೆಳಿಗ್ಗೆ ಮನೆಯ ಸಾಮಾನಿನ ಪಟ್ಟಿ ಅವಳು ನೀಡಲು ಬಂದು 'ನನ್ನ ನಿನ್ನೆ ರಾತ್ರಿಯ ನಡವಳಿಕೆಯಿಂದ ನಿಮಗೆ ಏನನ್ನಿಸಿತೋ, ಅದಕ್ಕೆ ಕ್ಷಮೆಯಿರಲಿ' ಅಂದಾಗ, ಅವನು ಮನೆಯ ಕೆಲಸದ ಆಳಿಗೆ ಗಟ್ಟಿ ದನಿಯಿಂದ ಕರೆದು ಇನ್ನು ಮುಂದೆ ಈ ಹೆಂಗಸು ನನ್ನ ಎದುರಿಗೆ ಬರಕೂಡದು. ಅವಳ ಮಾತನ್ನು ನೀನು ನನಗೆ ರವಾನಿಸಬೇಕು' ಎಂಬ ಫರ್ಮಾನು ಹೊರಡಿಸುತ್ತಾನೆ. ಈ ಮಾತಿನಿಂದ ಉಮಾಗೆ ತುಂಬ ಘಾಸಿ ಆಗುತ್ತೆ. ಅವಳು ಮೌನಿಯಾಗುತ್ತಾಳೆ.
ಒಂದು ದಿನ ಬಲವಂತ ಮನೆಗೆ ಬಂದಾಗ 'ಕಾಕಾ, ನಾನು ಪುಟ್ಟ ಹುಡುಗಿಯಾಗಿ ಈ ಮನೆಗೆ ಬಂದಾಗಲಿಂದ ನೀವು ನನ್ನನ್ನು ನೋಡಿದ್ದೀರಿ. ನಿಮ್ಮ ಮಿತ್ರ ನನ್ನ ಜತೆ ಮಾತು ಕತೆ ಬಿಟ್ಟಿದ್ದಾರೆ. ದಯವಿಟ್ಟು ಅವರು ಯಾಕೆ ಹಾಗೆ ನನ್ನ ಜತೆ ವ್ಯವಹರಿಸು ಯುತ್ತಾರಂತೆ ಕೇಳುವಿರಾ?'
ಅದಕ್ಕೆ ಬಲವಂತ್, 'ನೋಡು ಉಮಾ, ಹರಿದಾದಾ ಕಾರಣವಿಲ್ಲದೇ ಏನೂ ಮಾಡಲಾರ. ಮತ್ತು ನೀನು ಈ ಮಾತು ನನ್ನ ಜತೆ ಹೇಳಿದ್ದೀಯಾ ಅಂದರೆ, ಇದಕ್ಕೂ ಅವನು ಸಿಟ್ಟು ಮಾಡಿಕೋತಾನೆ' ಅನ್ನುವಷ್ಟರಲ್ಲಿ ಈ ಸಂಭಾಷಣೆಗಳನ್ನೆಲ್ಲ ಹರಿದಾದಾ ಕೇಳಿಸಿಕೊಂಡು ಅಗ್ಗಿರುತ್ತೆ. 'ಬಲವಂತ್, ನಾಚಿಕೆಯಾಗಲ್ಲವಾ? ಮನೆಯಲ್ಲಿ ಯಾವುದೇ ಗಂಡಸು ಇಲ್ಲದಿದ್ದಾಗ ಮನೆಯ ಸೊಸೆಯ ಜತೆ ಮಾತಾಡುತ್ತಾರಾ ಯಾರದರೂ?"
ಅದಕ್ಕೆ ಬಲವಂತ್, "ಈ ಹುಡುಗಿ ನನಗೆ ಮಗಳ ತರಹ'
"ಮಗಳ ತರಹ, ಮಗಳಲ್ಲವಲ್ಲ? ಇನ್ನು ಮುಂದೆ ನನ್ನನ್ನು ಸಂಪರ್ಕಿಸಬೇಕಾದಲ್ಲಿ ಎಲ್ಲಾದರೂ ಹೊರಗೆ ಸಿಗುವ, ನನ್ನ ಮನೆಗೆ ನೀನು ಕಾಲಿಡಕೂಡದು'
"ನಿನ್ನಂತಹ ಸಂಶಯಪಡುವವನಲ್ಲಿ ಮನೆಯೊಳಗೇನು, ಹೊರಗೂ ಸಿಗುವ ಅಪೇಕ್ಷೆ ನನಗಿಲ್ಲ 'ಎಂದು ಹೇಳಿ ದುರ್ದಾನ ಪಡೆದುಕೊಂಡವರ ಹಾಗೆ ಅಲ್ಲಿಂದ ಜಾಗ ಖಾಲಿ ಮಾಡುತ್ತಾನೆ ಬಲವಂತ್.
ಅದೇ ಸಿಟ್ಟಿನಲ್ಲಿ ಮರವನ್ನು ಕೊಡಲಿಯಿಂದ ಕಡಿಯುವಾಗ ತನ್ನ ಕಾಲಿಗೆ ತೀವ್ರ ಏಟು ಮಾಡಿಕೋತಾನೆ ಹರಿದಾದಾ. ರಾತ್ರಿ ನೋವಿನಿಂದ ನರಳುವಾಗ ಉಮಾ ಅವನ ಕಾಲಿಗೆ ಮುಲಾಮು ಹಚ್ಚುವಾಗ ಅವನಿಗೆ ಉಮಾಳಲ್ಲಿ ಪುಟ್ಟ ಹುಡುಗಿ 'ದುರ್ಗಾ'(ಮದುವೆ ಮುಂಚಿನ ಹೆಸರು. ಸಂಪ್ರದಾಯದ ಪ್ರಕಾರ ಅಲ್ಲಿ ಮದುವೆ ನಂತರ ಹೆಸರನ್ನು ಬದಲಾಯಿಸಲಾಗುತ್ತದೆ) ನೆನಪಾಗಿ ಅವಳ ಜತೆ ಸುಮಾರು ವರ್ಷಗಳ ಹಿಂದೆ ಮಹದೇವನಿಗೋಸ್ಕ್ರರ ಹೆಣ್ಣು ನೋಡಲು ಹೋದಾಗ ಅವಳ ಜತೆ ಆಡಿದ ಮಾತುಕತೆ, ಅವನ ಪ್ರಶ್ನೆಗೆ ಅವಳ ಚಿನ್ನಕುರುಳಿ ಉತ್ತರಗಳನ್ನು ನೆನಪಿಗೆ ತಂದುಕೊಂಡು ಕನವರಿಸುತ್ತಿರುತ್ತಾನೆ. ಆಗ ಉಮಾಳಿಗೆ ಹರಿದಾದಾ ಅವಳನ್ನು ಪ್ರೀತಿಸುವುದು ಅರ್ಥವಾಗುತ್ತೆ. ಅವನಿಗೆ ಮಂಪರು ಕಳೆದು  ಉಮಾಳನ್ನು ಅವನ ಬಳಿ ನೋಡಿ, ಅವನು ಮನೆಯ ಕೆಲಸದಾಳಿಗೆ, 'ಇನ್ನು ಮುಂದೆ ರಾತ್ರಿ ನನ್ನ ಕೋಣೆಯಲ್ಲೇ ಮಲಗು, ಯಾಕೋ ಒಬ್ಬನೆ ಮಲಗಲು ನನಗೆ ಹೆದರಿಕೆ ಶುರು ಆಗಿದೆ. '
ಈ ಮಾತನ್ನು ಕೇಳಿ ಉಮಾ ಇನ್ನಷ್ಟು ಘಾಸಿಗೊಳ್ಳುತ್ತಾಳೆ. ಇನ್ನಷ್ಟು ಮೌನಿಯಾಗುತ್ತಾಳೆ, ಕೂದಲನ್ನು  ಬಿಟ್ಟು, ಅವಳಿಗೆ ಅಂತ ಕೊಟ್ಟ ಹೊಸ  ಬಟ್ಟೆಗಳಿಂದ ಕೌದಿ ಹೊಲೆಯುವುದು, ಸುಮ್ಮನೆ ಮನೆಯ ಹೊರಗೆ ಮೆಟ್ಟಿಲಮೇಲೆ, ಬಾವಿಯ ಬಳಿ ಕೂರುವುದು ಇಂತದ್ದವನ್ನೆಲ್ಲ ಮಾಡುತ್ತಾಳೆ, ಇವೆಲ್ಲವನ್ನು ನೋಡಿಕೊಂಡು ಹರಿದಾದಾ ಸುಮ್ಮನಿರುತ್ತಾನೆ. ಸಂಕರ್ಷಣ್, ಮದುವೆಯಾಗಿ ಬೇರೆ ಊರಿನಲ್ಲಿರುವ  ತನ್ನ   ಅಕ್ಕನನ್ನು ಬರ ಹೇಳುತ್ತಾನೆ. ಅವರಿಬ್ಬರೂ ಸೇರಿ ಅವರ ಬಾಲ್ಯದ ಆಟಗಳನ್ನೆಲ್ಲ ನೆನಪಿಸಿಕೊಳ್ಳುತ್ತಾರೆ. ಚಿಕ್ಕವರಾಗಿದ್ದಾಗ ಉಮಾ ಅವರಿಗೋಸ್ಕರ ಕತೆ ಹೇಳುವುದು. ಕೂದಲು ಬಾಚಿ ಹೆರಳು ಹಾಕುವುದು ಮುಂತಾದವುಗಳು. 'ಬಾ, ನಿನಗೆ ಏನಾದರೂ ಓದಿ ಹೇಳಲೆ ಅಥವ ನಿನ್ನ ಕೂದಲು ಬಾಚಲೆ' ಎಂದು ಅವಳು ಕೇಳಿದಾಗ,  ಫಕ್ಕನೆ ಉಮಾ ಅವಳನ್ನು ಕೇಳುತ್ತಾಳೆ' ಕೋಣೆಯಲ್ಲಿ ಗಂಡ ಹೆಂಡತಿ ಕೂಡಿ ಏನು ಮಾಡುತ್ತಾರೆ? ನನಗೆ ಹೇಳು. ನನ್ನ ಗಂಡನನ್ನು ಕಳೆದುಕಂಡ ಮೇಲೆ ನನಗೆ ಏನೋ ಮಹತ್ವವಾದದ್ದನ್ನ ಕಳೆದುಕೊಂಡಿದ್ದೀನಿ ಅಂತ ಗೊತ್ತಾಗ್ತಾ ಇದೆ, ಆದರೆ ಅದೇನು ಅಂತ ನನಗೆ ಈ ವರೆಗೆ ತಿಳಿದಿಲ್ಲ. ಅವಳು (ಸಂಕರ್ಷಣ ನ ಅಕ್ಕ- ಹೆಸರು ನೆನಪಿಲ್ಲ) ಅಸಹ್ಯ ಪಟ್ಟುಕೊಂಡು ಅವಳ ಕೈಯನ್ನು ಕೊಡವಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾಳೆ. ಈ ಸಂಗತಿಯ ನಂತರ ಉಮಾ ಊಟ ನೀರು ಬಿಟ್ಟು ಬಿಡುತ್ತಾಳೆ. ಊರಿನ ವೈದ್ಯರು ಅವಳು ಏನನ್ನು ತಿನ್ನದಿದ್ದರೆ ಅವಳ ಜೀವಕ್ಕೆ ಅಪಾಯವಿದೆ, ಪೇಟೆಗೆ ಹೋಗಿ ದೊಡ್ಡ ಡಾಕ್ಟರ್ ಹತ್ತಿರ ಸೇರಿಸಬೇಕು ಅಂತ ಹೇಳುತ್ತಾನೆ. ಸಂಕರ್ಷಣ ಪೇಟೆಗೆ ಹೋಗುವ ತಯಾರಿ ನಡೆಸುವಾಗ 'ಈ ಒಂದು ರಾತ್ರಿ ಕಳೆಯಲಿ, ಅವಳು ಹೊಟ್ಟೆಗೆ ಏನಾದರೂ ತೆಗೆದುಕೊಳ್ಳಬಹುದು ಅಂತ ಹೇಳಿ, ರಾತ್ರಿ ಅವನ ಸ್ನೇಹಿತ ಬಲವಂತನ ಮನೆಗೆ ಬರುತ್ತಾನೆ, ಬಲವಂತನನ್ನು ಕಂಡು, 'ನಾನೇನು ನಿನ್ನ ಕ್ಷಮೆ ಕೇಳಲು ಬಂದಿಲ್ಲ, ಆದರೆ ಉಮಾ ಅನ್ನ ನೀರು ಬಿಟ್ಟು ಸಾಯುತ್ತಿದ್ದಾಳೆ, ನೀನಾದರೂ ಬಂದು ಅವಳಿಗೆ ತಿಳಿಹೇಳು...
ನೀನು ಕ್ಷಮೆಕೇಳಿದರೂ ನಾನೇನು ನಿನ್ನನ್ನು ಕ್ಷಮಿಸುತ್ತಿರಲಿಲ್ಲ, ನಡೆ ಉಮಾಳನ್ನು ನೋಡುವಾ ಅಂತ ಇಬ್ಬರೂ ಮನೆಗೆ ಬರುತ್ತಾರೆ. ಉಮಾಳಿಗೆ 'ಬಲವಂತ್' ಒಂದು ಲೋಟದಲ್ಲಿ ಪೂಸಿ ಮಾಡಿ ನೀರು ಕೊಡಲು ಹೋದಾಗ ಅವಳು ಅದನ್ನು ಕೊಡವಿ ಬೀಳಿಸುತ್ತಾಳೆ. ಬಲವಂತ ಸೋತವನಂತೆ, ಉಮಾಳನ್ನು ಜೀವದಿಂದುಳಿಸಲು ನಿನ್ನಿಂದ ಮಾತ್ರ ಸಾಧ್ಯ ಅಂತ ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ.
ಈಗ ಹರಿದಾದಾ ಉಮಾಳ ಕೋಣೆಗೆ ಹೋಗುತ್ತಾನೆ. ಉಮಾಳ ಬಳಿ 'ಹುಡುಗಿ ನೀನು ನನ್ನನ್ನು ಎಷ್ಟು ಪ್ರೀತಿಸುತ್ತಿ ಅಂತ ನಿನ್ನ ಕಣ್ಣುಗಳಲ್ಲಿದ್ದ ಆರಾಧನಾ ಭಾವನೆಯಿಂದಲೇ ನನಗೆ ಗೊತ್ತಾಗಿದೆ. ಆದರೆ ನಿನಗೆ ಗೊತ್ತಾ? ನಿನ್ನ ಗಂಡ ಮಹದೇವ ತೀರಿಕೊಂಡಾಗ ಕಾಗೆ ಅವನ ಪಿಂಡವನ್ನು ಸ್ಪರ್ಶಿಸಲಿಲ್ಲ. ನಾನೇ ಕೊನೆಗೆ ಕೈ ಮುಗಿದು 'ಮಹದೇವ ನೀನು ನಿನ್ನ ಹೆಂಡತಿಯಲ್ಲಿ ಎಷ್ಟು ಜೀವ ಇಟ್ಟಿದ್ದೆ ನನಗ್ಗೊತ್ತು. ಅವಳನ್ನು ಬೇರೆ ಯಾವ ಗಂಡಸು ಸ್ಪರ್ಶಿಸದಂತೆ ನೋಡಿಕೊಳ್ಳುವ ಆಣೆ ನಾನು ನಿನಗೆ ನೀಡುತ್ತೇನೆ' ಅಂದ ಮೇಲೆ ಮಹದೇವನ ಆತ್ಮ ಬಂದು ಪಿಂಡ ಸ್ವೀಕರಿಸಿದ್ದು. ಎಲ್ಲರೂ ಹರಿದಾದಾ ಆಧುನಿಕ ಮನೋಭಾವದಿಂದ ನಿನ್ನ ಕೇಶ ಮುಂಡನ ಮಾಡಲಿಲ್ಲ ಅಂದು ಕೊಂಡಿದ್ದರು. ಕೇಶ ಮುಂಡನ ಮಾಡುವವ ಗಂಡಸು. ಅವನು ನಿನ್ನನ್ನು ಸ್ಪರ್ಶಿಸದಿರಲಿ ಅಂತ ನಾನು ಅವನನ್ನು ಅನಾಮತ್ತು  ಎತ್ತಿ ಅಂಗಳದಿಂದ ಬಿಸಾಕಿದ್ದು, ಹಾಗೆ ನನ್ನ ಆಪ್ತಮಿತ್ರನ ಜತೆ ವೈರ ಮಾಡಿದ್ದು.ಈಗ ಅನ್ನಿಸ್ತಾ ಇದೆ ಸತ್ತ ಮಹಾದೇವನಿಗೆ ಇತ್ತ ವಚನವನ್ನು ಕಾಪಾಡಲು, ಜೀವಂತ ಇರುವ ನಿನ್ನನ್ನು ಸ್ವಲ್ಪ ಸ್ವಲ್ಪವಾಗಿ ಸಾಯಿಸಿದೆ ಅಂತ' ಎಂಥ ಹುಂಬ ನಾನು. ಈಗಿಂದೀಗಲೇ ನಾನು ನಿನ್ನನ್ನು ಮದುವೆಯಾಗುತ್ತೇನೆ. ಸ್ವಲ್ಪ ಕಾಯು ಈಗ ಬಂದೆ' ಅಂತ ಹೇಳಿ ಒಳಮನೆಯ ಪೆಟ್ಟಿಗೆಯಿಂದ ಅವನ ಹೆಂಡತಿಯ ಮಂಗಳಸೂತ್ರ ತೆಗೆದುಕೊಂಡು ಅವನು ಉಮಾಳ ಕೋಣೆಗೆ ಬರುವಷ್ಟರಲ್ಲಿ ಅವಳು ಅದೇ ನಗು ಮುಖದಿಂದ ಸಾವನ್ನಪ್ಪಿರುತ್ತಾಳೆ.
ಮುಂದೆ ಹರಿದಾದಾ ಬಲವಂತ ರು ಸೇರಿ ಅಬಲಾ ನಾರಿ ಕಲ್ಯಾಣ ಮಾರ್ಗದರ್ಶನ  ಕೇಂದ್ರ ಸ್ಥಾಪಿಸುತ್ತಾರೆ. ಸಂಕಷ್ಟದಲ್ಲಿರುವ ಹೆಣ್ಣುಮಕ್ಕಳಿಗೆ ಮಾರ್ಗದರ್ಶನ ನೀಡುವ ಕೇಂದ್ರ. ಆಗ ಅಲ್ಲಿಗೆ ಒಬ್ಬ ಹೆಣ್ಣುಮಗಳು ಬರುತ್ತಾಳೆ. 'ನಾನು ವಿಧವೆಯಾಗಿ ಎರಡು ವರ್ಷವಾಯಿತು. ಈಗ ನನಗೆ ಮರು ಬಾಳುವೆ ನೀಡಲು ಒಬ್ಬರು ಮುಂದೆ ಬಂದಿದ್ದಾರೆ. ಆದರೆ ಮದುವೆಯಾಗಲು ನಾವು ಎರಡು ತಿಂಗಳು ಕಾಯಬೇಕಾಗಿದೆ. ನನ್ನ ಗಂಡನ  ಮನೆಯಲ್ಲಿರಲು ಸರಿ ಕಾಣದೆ ಈಗ ನಾನು ಅದನ್ನು ತ್ಯಜಿಸಿದ್ದೇನೆ, ಮತ್ತು ನನ್ನನ್ನು ಮದುವೆಯಾಗುವವರ ಬಳಿ ಇರಲು ನಾನು ಹೋಗಲಾರೆ. ಸಧ್ಯಕ್ಕೆ ವಾಸಕ್ಕೆ ಒಂದು ಆಶ್ರಯ ಸಿಕ್ಕಿದೆ. ಆದರೆ ನನಗೆ ಸ್ವಲ್ಪ ಆರ್ಥಿಕ ಸಹಾಯ ಬೇಕಾಗಿದೆ' ಹೀಗೆ ಮಾತನಾಡುತ್ತಾ ಆಡುತ್ತ, ಆ ಹುಡುಗಿ ಊರಿನಲ್ಲಿ ಹರಿದಾದಾಗೆ ಸಾಕಷ್ಟು ಕಿರುಕುಳ ಕೊಟ್ಟ ಉಪಾಧ್ಯಾಯನ ಮಗಳು ಅಂತ ಗೊತ್ತಾಗುತ್ತೆ. ಹರಿದಾದಾ ಅವಳಿಗೆ ಅವನ ಹೆಂಡತಿಯ ಮಂಗಳಸೂತ್ರ ತಂದು ಕೊಟ್ಟು, ಅದನ್ನು ಮಾರಿ ಬಂದ ದುಡ್ಡನ್ನು ವಿನಿಯೋಗಿಸಲು ಹೇಳಿ ಬೀಳ್ಕೊಡುತ್ತಾನೆ. ಬಲವಂತ 'ನಿನ್ನನ್ನು ಅರ್ಥ ಮಾಡುವುದೇ ಕಷ್ಟ' ಅಂದಾಗ 'ಗೊತ್ತಾ ಬಲವಂತ್? ನಾನು ರಾತ್ರಿ ಮಲಗದೇ ಎಷ್ಟೋ ಕಾಲವಾಯಿತು' ಕಣ್ಣು ಮುಚ್ಚಿದರೆ ನನಗೆ ಉಮಾಳ ಮುಖವೇ ಕಾಣುತ್ತೆ. ನಾನು ಕೋಣೆಯಿಂದ ಮಂಗಳಸೂತ್ರ ತರುವಷ್ಟರಲ್ಲಿ ಅವಳು ಅಸುನೀಗಿದ್ದು ಯಾಕೆ ಗೊತ್ತ? ಅದು ಅವಳಿಗೆ ನನ್ನ ಮೇಲಿರುವ ಪ್ರೀತಿ. ನಾನು ಮಹದೇವನಿಗಿತ್ತ ಮಾತನ್ನು ನಾನು ಉಳಿಸಿಕೊಳ್ಳಬೇಕೆಂದು ಅವಳು ತನ್ನ ಜೀವ ತ್ಯಾಗ ಮಾಡಿದಳು. ನಾನು ಆ ಹುಡುಗಿಗೆ ಕೊಟ್ಟ ಮಂಗಳಸೂತ್ರದಿಂದ ಉಮಾಳಿಗೆ ಶಾಂತಿ ಸಿಕ್ಕಿದರೆ ನನಗೆ ಅಷ್ಟೇ ಸಾಕು. ನೋಡುವ ಇವತ್ತಾದ್ರೂ ನನಗೆ ಕಣ್ಣು ತುಂಬ ನಿದ್ದೆ ಬರಬಹುದು'.
ಕತೆಯ ಆಯ್ಕೆ, (ಬರೆದವರು ಉಷಾ ದಾತಾರ್) ಅದನ್ನು ಸೂಕ್ಷ್ಮತೆಯಿಂದ ಹೆಣೆದ ಬಗೆ ಹಾಗೂ ಚಿತ್ರೀಕರಣಕ್ಕೆ ಆಯ್ದ ಸ್ಥಳ (ಮಹಾರಾಷ್ಟ್ರದ ಕೊಂಕಣ್ ಪ್ರದೇಶ) ಎಲ್ಲವೂ ವಿಶಿಷ್ಟ. ಈ ಚಿತ್ರದಲ್ಲಿ ಇನ್ನೂ ಮೋಜಿನ ಪ್ರಸಂಗಗಳು, ಉಪಕತೆಗಳೂ ಇವೆ. ಎಲ್ಲವನ್ನೂ ಹೇಳಹೊರಟರೆ ಮಾಂಜ್ರೇಕರ್ ಅವರು ನನ್ನ ಬ್ಲಾಗ್ ಗೆ shoot at 'site' ಆರ್ಡರ್ ಕೊಡಬಹುದು. ಮಹಾರಾಷ್ಟ್ರದ ಬ್ರಾಹ್ಮಣ ಮನೆತನದ  ಆಚರಣೆಗಳನ್ನು, ಉದಾಹರಣೆ: ವಧುವನ್ನು ನೋಡಲು ಹೋಗುವುದು, ಮದುವೆ ನಿಶ್ಚಯವಾದ ಮೇಲೆ ವರ/ವಧುವಿನ ಮನೆಗಳಲ್ಲಿ ನಡೆಯುವ ತಂಟೆ ತುಂಟತನಗಳು, ಮದುಮಗಳು ಹೊಸ್ತಿಲಲ್ಲಿ ಅಕ್ಕಿ ಬೀಳಿಸಿ ಒಳ ಬರುವ ಸಂದರ್ಭದಲ್ಲಿ, ಗಂಡನ ಹೆಸರನ್ನು ಕವನದಲ್ಲಿ ಬಳಸಿ ಹೇಳಿ ಒಳಗೆ ಬರುವುದು, ಋತುಮತಿಯಾದ ಮೂರನೆ ದಿನ ನಡೆಯುವ ಕಲಾಪಗಳು, ಮದುಮಕ್ಕಳ ಮೊದಲ ರಾತ್ರಿಗೆ ಅನುವಾಗಿಸುವ ಕಾರ್ಯಗಳು , ಮರಣದ ನಂತರದ ಕ್ರಿಯೆಗಳನ್ನು ಸೂಕ್ಷ್ಮವಾಗಿ ತೋರಿಸಿದ್ದಾರೆ, ಆಗಿನ ಕಾಲದ ವೇಷಭೂಷಣಗಳನ್ನೂ ಚೆನ್ನಾಗಿ ತೋರಿಸಿದ್ದಾರೆ.  ಕೆಲವು ಕಡೆ ಸಂಗೀತ ಸ್ವಲ್ಪಕಿರಿಕ್ ಎಂದೆಣಿಸಿದರೂ ಅದನ್ನು ಕಡೆಗಣಿಸಬಹುದು. ಮತ್ತೆ ಫ್ಲಾಶ್ ಬ್ಯಾಕ್ ಹೋಗುವಾಗ ಕೆಲವೊಮ್ಮೆ ಕತೆಯlಲ್ಲಿ ತಾಳ ತಪ್ಪಿದ ಹಾಗೆ ಅನಿಸಿ ಸ್ವಲ್ಪ ಕಿರಿಕಿರಿಯಾಗುತ್ತದೆ especially ಮರಾಠಿ ಅರ್ಥವಾಗದವರಿಗೆ. ಹಾಡು ನೃತ್ಯ ಚೆನ್ನಾಗಿವೆ.
ಸ್ವಾತಂತ್ರ್ಯಪೂರ್ವ ಮಹಾರಾಷ್ಟ್ರದ (ಈಗಲೂ 85%) ಸಂಸ್ಕೃತಿ- ರೀತಿ ರಿವಾಜುಗಳನ್ನು, ತುಂಬ ನೈಜತೆಯಿಂದ ಹಿಡಿದಿಟ್ಟಿದ್ದಾರೆ ಮಹೇಶ ಮಾಂಜ್ರೆಕರ್ ಅವರು. ಸಿಮಿಮಾದ ಸೆಟ್ಟಿಂಗ್, ಕಾಸ್ಟ್ಯೂಮ್, ಸಂಭಾಷಣೆ, ಎಲ್ಲರ ಪಾತ್ರಾಭಿನಯ ಕೂಡ (ಒಟ್ಟಾರೆ ಟೀಮ್ ವರ್ಕ್ ಗೆ hats off) ನೈಜತೆಯಿಂದ ಕೂಡಿದೆ. ಆದರೂ ಈಗಿನ ಕಾಲದಲ್ಲಿ ಹಳೆಯ ಮೌಲ್ಯಗಳನ್ನು ಮಹೇಶ ಮಾಂಜ್ರೆಕರ್ ಎತ್ತಿ ಹಿಡಿದಿಡುವುದು ಎಷ್ಟು ಸಮಂಜಸ?
ಇಲ್ಲಿ ಕೆಲವು ಸಂಗತಿಗಳು ನನ್ನನ್ನು ಕಾಡಿವೆ:
ಹರಿದಾದಾಗೆ larger than life portrayal ಏನೋ ಕೊಟ್ಟಿದ್ದಾರೆ ಆದರೆ:
1. ಅವನು ಕಾಶಿಯ ಮಹಾನ್ ಪಂಡಿತರಿಗೆ ಕ್ಷಮಾಪಣೆ ಕೋರಿ ಪತ್ರ ಬರೆಯುವಾಗ ಮನೆಯ ವಿಷಯಗಳನ್ನು ಕೂಲಂಕುಷವಾಗಿ ತಿಳಿಸಿದ್ದಾನೆಯೇ?
2. ಅವನು ಮನೆಯ ಹೆಂಗಸರನ್ನು ತನ್ನ decision making ನಲ್ಲಿ ಯಾಕೆ ಅವಕಾಶ ನೀಡಲಿಲ್ಲ?? ಒಂದೆರಡು ಸಂದರ್ಭದಲ್ಲಿ ಉಮಾ ಮಾತನಾಡಲು ಪ್ರಯತ್ನಿಸಿದಾಗ 'ನಾನೇನು ಬಳೆ ತೊಟ್ಟುಕೊಂಡಿಲ್ಲ, ಹೆಂಗಸರ ಸಲಹೆ ಕೇಳಲು' ಅಂತ ಅವಳ ಬಾಯಿ ಮುಚ್ಚಿಸುತ್ತಾನೆ.
3. ಆಪ್ತ ಮಿತ್ರ ಬಳವಂತ್, ಉಮಾಳನ್ನು ಚಿಕ್ಕಂದಿನಿಂದ ಬಲ್ಲವನು, ಅವನಿಗೆ ಮನೆಗೆ ಇನ್ನು ಮುಂದೆ ಮನೆಗೆ ಬರುವುದು ಬೇಡ ಅಂದಿದ್ದು, ಕಕ್ಷಿದಾರನೊಬ್ಬ ಸಂಕರ್ಷಣ್ ನನ್ನು ಭೇಟಿ ಮಾಡಲು ಬಂದಾಗ ಅವನನ್ನು ಮನೆಯಿಂದ ಹೊರಗೆ ಕಳಿಸಿದ್ದು.. ತುಂಬ ಬಾಲಿಶವೆನಿಸಿತು.
3. ಪರಪುರುಷ ಅವಳನ್ನು ಮುಟ್ಟಬಾರದೇನೋ ಸರಿ, ಆದರೆ ಅವಳಿಗೆ ಮುಂದಿನ ವಿದ್ಯಾಭ್ಯಾಸ ಕೈಗೊಳ್ಳುವಲ್ಲಿ ಪ್ರೋತ್ಸಾಹಿಸಬಹುದಿತ್ತು.
4. and did he think he was immortal...ಆಕಸ್ಮಾತ್ ಅವನೇನಾದರೆ ತೀರಿಕೊಂಡಿದ್ದರೆ ಉಮಾಳ ಬಾಳು ಏನಾಗುತ್ತಿತ್ತು?(ಸಂಕರ್ಷಣ್ ಏನೋ ಒಳ್ಳೆಯವನಾಗಿರಬಹುದು, ಆದರೆ ಅವನ ಹೆಂಡತಿ?)  ಇದು ಒಂದು ತರಹ oppression ಅಲ್ಲವಾ?
ಒಟ್ಟಾರೆ  ಎಲ್ಲರೂ ಒಂದುಸಲ ನೋಡ ಬಹುದಾದ ಚಿತ್ರ. ನಾನು ಈ ಚಿತ್ರಕ್ಕೆ 5 ರಲ್ಲಿ 3.50 ಅಂಕಕೊಡುತ್ತೇನೆ.
"ಕಾಕಸ್ಪರ್ಶ- ಒಂದು ವಿಲಕ್ಷಣ ಪ್ರೇಮ ಕತೆ"
*ದಾದಾ: ಅಣ್ಣ

ಕತೆ: ಉಷಾ ದಾತಾರ
ನಿರ್ದೇಶನ: ಮಹೇಶ ಮಾಂಜ್ರೆಕರ್
ಮುಖ್ಯ ಭೂಮಿಕೆಯಲ್ಲಿರುವವರು ಸಚಿನ್ ಖೇಡೇಕರ್ (ಹರಿದಾದಾ), ಪ್ರಿಯಾ ಬಾಪಟ್ (ಉಮಾ), ಕೇತಕಿ ಮಾಟೆಗಾಂವ್ಕರ್ (ದುರ್ಗಾ),
ಸಿನಿಮಾ ನೋಡಲು ಉತ್ಸುಕರಾಗಿದ್ದರೆ ಇಲ್ಲಿದೆ ಅದರ ಲಿಂಕ್ ಇದನ್ನು ಕಳುಹಿಸಿದವರು ಯು ಎಸ್ ನಿಂದ  ಶ್ರೀವತ್ಸ ಜೋಶಿಯವರು..
marathi movie kaaksparsha
(* ಕಾಗೆ animated , ಅಲ್ಲದೇ  ದುರ್ಗ(ಉಮಾಳ younger version) ಕಾಲಿಗೆ transparent nail enamel ಹಚ್ಚಿದ್ದಳು ಅನ್ನಿಸ್ತು)
:-)



August 25, 2012

ನಂಬಿಕೆ

ಪ್ರಖ್ಯಾತ ಪಂಡಿತರೊಬ್ಬರು ನದಿಯ ಆಚೆ ಬೀಡುಬಿಟ್ಟಿದ್ದರು. ಅಲ್ಲಿ ಒಂದು ಪುಟ್ಟ ಕುಟೀರ ಕಟ್ಟಿ ತಂಗಿದ್ದರು. ದಿನ ನಿತ್ಯ ಮುಂಜಾನೆ ಊರಿನ ಜನರೆಲ್ಲ ಅವರ ಕುಟೀರದ ಮುಂದೆ ಜಮಾಯಿಸಿ, ಈ ಲೋಕದ ಪರಿವೆಯೆ ಇಲ್ಲದೆ ಎರಡು ತಾಸು ಅವರ ಪ್ರವಚನ ಕೇಳುತ್ತಿದ್ದರು. ಆ ಊರಿನ ಜಮೀನ್ದಾರರು ನದಿ ಈಚೆ ಬದಿ ಇದ್ದರು. ಅವರ ಮನೆಯಿಂದ ದಿನ ನಿತ್ಯ ಆ ಪಂಡಿತರಿಗೆ ಶುದ್ದ ಹಾಲು ಕೊಟ್ಟು ಬರುವ ಕೆಲಸ ಮೋತಿ ಎಂಬ ಗೊಲ್ಲರ ಯುವತಿಯ ಪಾಲಿಗೆ ಬಿದ್ದಿತು. ಪ್ರತೀ ದಿನ  ಸೂರ್ಯೋದಯ ಆದ ಕೆಲ ಹೊತ್ತಿಗೆ ಅವಳು ದೋಣಿಯ ಮೂಲಕ ನದಿ ದಾಟಿ ಕುಟೀರಕ್ಕೆ ಹಾಲು ಕೊಟ್ಟು ಸ್ವಲ್ಪ ಹೊತ್ತು ಪಂಡಿತರ ಪ್ರವಚನ ಕೇಳಿ ಪುನ: ತನ್ನ ಊರಿಗೆ ದೋಣಿಯಲ್ಲಿ ನದಿ ದಾಟಿ ಮರಳುತ್ತಿದ್ದರು. ಹೀಗೆ ಒಂದು ದಿನ ಅವಳು ಪಂಡಿತರಿಗೆ ಹಾಲು ಕೊಟ್ಟು ಹೊರಡಲು ಅನುವಾದಾಗ ಪಂಡಿತರು ಅವಳನ್ನು ನಿಲ್ಲಿಸಿ, 'ನಾಳೆಯಿಂದ ನಾನು ಹೊಸದೊಂದು ವೃತವನ್ನು ಕೈಗೊಂಡಿದ್ದೇನೆ, ಆದ್ದರಿಂದ ನನಗೆ ಸೂರ್ಯೋದಯಕ್ಕೆ ಒಂದು ಗಂಟೆ ಮುಂಚೆಯೇ ಹಾಲು ಬೇಕಾಗುತ್ತದೆ." "ಓ, ಅದಕ್ಕೇನಂತೆ, ಹಾಗೆಯೇ ಆಗಲಿ' ಎಂದಳು ಮೋತಿ.

ಮರು ದಿನ ಅವಳು ಹೆದರುತ್ತಲೆ  ಪಂಡಿತರೆದುರಿಗೆ ಹೋಗಿ ನಿಂತಳು, ಪಂಡಿತರೇ ಕ್ಷಮಿಸಬೇಕು. ನಾನೇನೋ ಹೊತ್ತಿಗೆ ಮುಂಚೆ ನದಿ ತೀರದಲ್ಲಿ ಕಾಯುತ್ತಿದ್ದೆ. ಆದರೆ ದೋಣಿಯವನು ಬರಲೇ ಇಲ್ಲ. ಮತ್ತು ಮಳೆಗಾಲದಲ್ಲಿ ಸೂರ್ಯೋದಯಕ್ಕೆ ಮುಂಚೆ ನದಿ ನೀರಿಗೆ ಸೆಳೆತ ಜಾಸ್ತಿಯಂತೆ ಆದ್ದುದರಿಂದ ಅವನಿಗೆ ಬೆಳಿಗ್ಗೆ ಬೇಗನೆ ಬರಲಾಗುವುದಿಲ್ಲವಂತೆ. ಅದಕ್ಕೆ ಇವತ್ತು ವಿಳಂಬವಾಯಿತು.

ಪಂಡಿತರು, 'ಏನು ಇಲ್ಲಿಗೆ ಬರಬೇಕಾದರೆ ನೀನು ದೋಣಿಯನ್ನು ಅವಲಂಬಿಸಬೇಕೆ? ನನಗೆ ಗೊತ್ತಿರುವ ಮೂಲಗಳ ಪ್ರಕಾರ ಶ್ರೀ ವಿಷ್ಣುವಿನ ಹೆಸರು ಹೇಳಿದರೆ ನದಿ ದಾರಿ ಬಿಟ್ಟುಕೊಡುತ್ತದೆಯಂತೆ' ಅಂತ ತಮಾಷೆಗೆ ಹೇಳಿದರು. ಮೋತಿಗೆ ಅತ್ಯಾಶ್ಚರ್ಯ. ಮಹಾನ ಪಂಡಿತರು. ಜನರನ್ನು ಎರೆಡೆರಡು ಗಂಟೆಯ ಕಾಲ ಕೇವಲ ಅವರ ಮಾತನಿಂದ ಮಂತ್ರಮುಗ್ದರಾಗಿಸಿ  ಹಿಡಿದಿಟ್ಟುಕೊಳ್ಳುವವರು, ನನಗೆ, ಒಬ್ಬ ಹಾಲು ಹಾಕುವ ಗೊಲ್ಲಿತಿಗೆ ಇಷ್ಟು ದೊಡ್ಡ ಗುಟ್ಟೊಂದನ್ನು ಹೇಳುತ್ತಿದ್ದಾರೆ ಅಂತ ಧನ್ಯತಾ ಭಾವದಿಂದ 'ಈ ವಿಷಯ ನನಗೆ ಗೊತ್ತಿರಲಿಲ್ಲ' ಅಂತ ಅವಳು ಕೃತಜ್ಞತೆಯಿಂದ ಪಂಡಿತರ ಕಾಲಿಗೆ ಎರಗಿ, ಮನೆಗೆ ಹೊರಟು ಬರುತ್ತಾಳೆ.

ಮರುದಿನದಿಂದ ಸರಿ ಒಂದು ತಿಂಗಳು ಅವಳು ತಪ್ಪದೆ ಸುರ್ಯೋದಯಕ್ಕೆ ಒಂದು ಗಂಟೆ ಮುಂಚೆ ಹಾಲು  ಕುಟೀರಕ್ಕೆ ತಲುಪಿಸಿ ಬರುತ್ತಿದ್ದಳು. ಒಂದು ತಿಂಗಳು ಕಳೆದ ನಂತರ ಪಂಡಿತರು, "ಮೋತಿ ನನ್ನ ವ್ರತ ಮುಗಿದಿದೆ. ನಾಳೆಯಿಂದ ನೀನು ಮುಂಚಿನ ಹಾಗೆ ಸೂರ್ಯೋದಯದ ನಂತರ ಹಾಲನ್ನು ತಲುಪಿಸಬಹುದು. ಅದಲ್ಲದೇ ದೋಣಿಯವನಿಗೂ ನನ್ನ ಧನ್ಯವಾದ ತಿಳಿಸು. ನಿಮ್ಮಿಬ್ಬರಿಂದ ನನ್ನ ವ್ರತ ಸಾರ್ಥಕವಾಯ್ತು. ಅದಕ್ಕೆ ಮೋತಿ, 'ಪಂಡಿತರೆ, ನಿಮಗೆ ಇಷ್ಟು  ಬೇಗ ಮರೆತು ಹೋಯಿತೆ, ನಾನು ದೋಣಿಯವನ ಮೇಲೆ ಅವಲಂಬಿತ ವಾಗದೆ ದಿನ ನದಿ ನೀರಿನಲ್ಲಿ ನಡೆದುಕೊಂಡೆ ಬರುತ್ತಿದೆ, ನೀವು ಹೇಳಿಕೊಟ್ಟಿದ್ದ ಗುಟ್ಟಿನಿಂದ. ದೋಣಿಯವನು ಬರಲೇ ಇಲ್ಲ. ಆದರೆ ನಾಳೆಯಿಂದ ನಾನು ದೋಣಿಯಲ್ಲೆ ಬರುತ್ತೇನೆ, ಅಂತ ಹೇಳಿ ನದಿ ಬಳಿ ತೆರಳಿದಳು. ಪಂಡಿತರು, 'ಎಲಾ ಇವಳ ನನಗೆ ತಮಾಷೆ ಮಾಡುತ್ತಾಳೆಯೇ ಈ ಹಳ್ಳಿ ಹೆಂಗಸು?' ನೋಡೆ ಬಿಡುವ, ಅಂತ ಪಂಡಿತರು ಗೊಲ್ಲಿತಿಯನ್ನು ಹಿಂಬಾಲಿಸಿದರು.

ಗೊಲ್ಲಿತಿ ನದಿಯ ಬಳಿ ತೆರಳಿ ಭಯಭಕ್ತಿಯಿಂದ ನಮಸ್ಕರಿಸಿದಾಗ ನದಿ ಇಬ್ಭಾಗವಾಗಿ ಮಧ್ಯೆ ದಾರಿ ಮಾಡಿಕೊಟ್ಟಿತು. ಗೊಲ್ಲಿತಿ ಅದರಲ್ಲಿ ನಡೆಯುತ್ತ ಮುಂದೆ ಸಾಗಿದಳು, ಪಂಡಿತರು ಮೂರ್ಛೆ ಹೋದರು..
(faith can move mountains)

Translation of the story 
Crossing the River- from Tales  told by Mystics by Manoj Das (Sahitya Akademi)

August 24, 2012

Ladies ONLY

(ಕ್ಷಮಿಸಬೇಕು . ಕಣ್ತಪ್ಪಿನಿಂದ ಹಿಂದಿನ ವರ್ಷ ಮೇ ನಲ್ಲಿನ ಪೋಸ್ಟ್ no 1 ಪೊಸ್ಟ್ ಅಂತ ಬಂದುಬಿಟ್ಟಿದೆ..ಇನ್ನೊಮ್ಮೆ ಓದಲು ಏನೇನೂ ಅಡ್ಡಿಯಿಲ್ಲ..:-)))
ಒಬ್ಬಳೆ ಜರ್ನೀ ಮಾಡುವಾಗ ರೈಲಿನ on - ಲೈನ್ ಬುಕಿಂಗ್ ನಲ್ಲಿ ಲೇಡೀಸ್ ಅಂತ ಕೊಟ್ಟರೆ ಬೋಗಿಯ ಆ ಸೆಕ್ಷನ್ ನಲ್ಲಿ ಮಹಿಳೆಯರಿಗಾಗೇ ಮೀಸಲಿಡುತ್ತಾರೆ. ಇಲ್ಲಿನ ಅನುಭವಗಳು ಮಜವಾಗಿರುತ್ತೆ. ಇತ್ತೀಚಿಗೆ ನಾನು ಬೆಳಗಾವಿಗೆ ಬೆಳಗ್ಗಿನ ರೈಲಿನಲ್ಲಿ ಹೊರಟಿದ್ದೆ. ಆಗಿನ ಅನುಭವಗಳ ಬಗ್ಗೆ ಸುಮ್ಮನೆ ಒಂದಿಷ್ಟು: 

window seat

ಬಾಡಿ ಫಿಟ್ಟಿಂಗ್ ಜೀನ್ಸ್ ಮತ್ತು ಸ್ಲೀವ್ ಲೆಸ್ಸ್ ಕುರ್ತಿ ಹಾಕ್ಕೊಂಡು ಬಂದ ಮಹಿಳೆ. ಪಟ ಪಟನೆ ಸ್ಯೂಟ್ ಕೇಸ್ ನೆಲ್ಲ ಬರ್ತ್ ಕೆಳಗಡೆ ಇಟ್ಟು, ಲ್ಯಾಪ್ ಟಾಪ್ ಹೊರಗಡೆ ತೆಗೆದು ಅವಳ ಕೆಲಸದಲ್ಲಿ ನಿರತಳಾದಳು. ಅವಳ ಜತೆ ಇದ್ದ ಪುಟ್ಟ ಮಗಳನ್ನೂ ಮರೆತು. ನನ್ನದು ಯಾವಾಗಲೂ ಕಿಟಕಿ ಬಳಿ ಸೀಟ್. ನಾನು ಚಾಕೋಲೇಟ್ ತಿಂದು ಅದರ wrapper ನಿಂದ ಗೊಂಬೆ ಮಾಡ್ತಾ ಇದ್ದೆ. ಆ ಪುಟ್ಟ ಮಗು ಅದನ್ನು ನೋಡ್ತಾ ಇತ್ತು. ಕಿಟಕಿ ಹತ್ತಿರದ ಜಾಗ ತೋರಿಸಿ, ಇಲ್ಲಿ ಬಾ ಅಂತ ಸನ್ನೆ ಮಾಡಿದೆ. ಅವಳು ತನ್ನ ಅಮ್ಮನ ಮುಖ ನೋಡಿದಳು. ಅಮ್ಮನಿಗೆ ಈ ಲೋಕದ ಪರಿವೇ ಇರಲಿಲ್ಲ.ಆಮೇಲೆ ಅಮ್ಮನ ಕೈ ಅಲ್ಲಾಡಿಸುತ್ತ ’ಮೊಮ್ಮಿ, ಆಂಟಿ ಬಳಿ ಹೋಗಲಾ’? ಅಂದಳು. ಅದಕ್ಕೆ ಅವಳ ಅಮ್ಮ ಸಿಡುಕಿ ’ಚಿನ್ನು ಹೌ ಮನಿ ಟೈಮ್ಸ್ ಐ ಟೋಲ್ಡ್ ಯು ನಾಟ್ ಟು ಟಾಕ್ ಇನ್ ಕನ್ನಡ’ ಅಂದಾಗ ಮಗು ಬೆಪ್ಪಾಗಿ ’ಮೊಮ್ಮಿ ಕ್ಯಾನ್ ಐ ಸಿಟ್ ನಿಯರ್ ಆಂಟಿ’ ಅಂದಾಗ ಆ ಅಮ್ಮ ನನ್ನನ್ನು ಒಂದು ಸಲ ಮೇಲಿನಿಂದ ಕೆಳಗೆ ನೋಡ್ತಾ ಇರಬೇಕಾದ್ರೆ ನಾನು ಬೇಗ ಬೇಗ ’ಕ್ಯಾನ್ ಐ ಆಫರ್ ಹರ್ ಎ ಚಾಕೊಲೇಟ್ ’ಅಂತ ಕೇಳಿದೆ. ನನ್ನ ಸಂಪೂರ್ಣವಾಗಿ ಅವಲೋಕಿಸಿ, ನಾನು ಸೇಫ್ ಅಂತ ತಿಳಿದು ಮಗಳಿಗೆ ’ಗೋ’ ಅನ್ನುವ ಆದೇಶವಿಟ್ಟಳು.ಮಗು ನನ್ನ ಬಳಿ ಬಂದ ಮೇಲೆ ಅವಳಿಗೆ eclairs ಚಾಕೊಲೇಟ್ ಕೊಟ್ಟು, ಅವಳ ಹೆಸರು ಕೇಳಿದೆ. ಚಿನ್ಮಯಿ -ಹೆಸರಿನಷ್ಟೆ ಮುದ್ದಾಗಿದ್ದ ಮುದ್ದು ಮಗು’ ಅಜ್ಜಿ ಮನೆಗೆ ಹುಬ್ಬಳ್ಳಿಗೆ ಹೊರಟಿದ್ದಳು. ಅಷ್ಟರೊಳಗೆ ಚಿನ್ಮಯಿ ಅಮ್ಮನ ಅಫಿಸ್ ಕಲೀಗ ಬಂದರು, ಅವರ ಆಫಿಸ್ ನ ಕೆಲವು ಲಾಸ್ಟ್ ಮಿನಿಟ್ ಡೀಟೈಲ್ಸ್ ಡಿಸ್ಕಸ್ ಮಾಡಲು. ಅವರು ಅದೇ ಟ್ರೈನ್ ನ ಬೇರೆ ಕಂಪಾರ್ಟಮೆಂಟ್ ನಲ್ಲಿದ್ದಾರೆ ಅಂತ ಅವರ ಮಾತುಕತೆಯಿಂದ ತಿಳಿಯಿತು.

ಇನ್ನು next passenger, ಕಾಲೇಜು ಹುಡುಗಿ ಅನ್ನಿಸುತ್ತೆ, ಬಂದು ಧಡ ಧಡನೆ ಮೇಲಿನ ಬರ್ತ್ ಮೇಲೆ ಅವಳ ಬ್ಯಾಗ ಬಿಸಾಕಿ, ತಾನು ಚಕಚಕನೆ ಮೇಲೆ ಹತ್ತಿ, ಬ್ಯಾಗಿನಿಂದ ಬೆಡ್ ಶೀಟ್ ತಗೆದು, ಮುಸುಕು ಹಾಕಿ ಮಲಕ್ಕೊಂಡೆ ಬಿಟ್ಲು. :-(

ನಾಲ್ಕೈದು ಸಲ ’ಅಲ್ಲಾಹ್ ಹಾಫೀಜ’ ಹೇಳಿನೂ ಟ್ರೈನ್ ಪಕ್ಕನೆ ನಿಂತ ವಯಸ್ಸಾದ ಅಜ್ಜ, ಅಜ್ಜಿಯನ್ನು ಬಿಟ್ಟು ಹೋಗಲು ಮನಸ್ಸು ಬಾರದೆ ಚಡಪಡಿಸುತ್ತಿದ್ದ.  ಅಭಿ ಆಪ ಘರ್ ಜಾಒ, ಚಿಂತಾ ನಕ್ಕೋ ಕರೂ’ ಅಂತ ಹೇಳ್ತಾನೆ ಇದ್ರು ಅಜ್ಜಿ. ಆಮೇಲೆ ಸ್ವಲ್ಪ ದನಿ ಏರಿಸಿ ಮನೆಗೆ ಹೋಗಲು ಹೇಳಿದಾಗ ಅವರು ಹ್ಯಾಪ್ ಮೋರೆಹಾಕೊಂಡು ’ಫೋನ್ ಕರೋ’ ಪಹುಂಚನೆ ಕೆ  ಬಾದ್ ಫೋನ್ ಕರೋ’ ಅಂತ ಬೋಗಿಯಿಂದ ದೂರ ಕಂಬದ ಮರೆಯಲ್ಲಿ ನಿಂತ ಅವರು ನನಗೆ ಕಾಣಿಸುತ್ತಿದ್ದರು. ಕೆಲ ನಿಮಿಶದ ನಂತರ ನನ್ನ -ಅಜ್ಜಿಯ ಕಣ್ಣು ಸಂಧಿಸಿದಾಗ ಮುಗುಳ್ ನಕ್ಕೆ. ಅದಕ್ಕೆ ಅವರು ’ಮೊದಲ ಸಲ ಒಬ್ಬಳೆ ಮುಂಬಯಿಗೆ ಹೊರಟಿದ್ದೇನೆ- ಮಗನ ಮನೆಗೆ, ನೀವೆಲ್ಲಿ ’ ಅಂತ ಕೇಳಿದ್ರು. ಅದಕ್ಕೆ ನಾನು ಬೆಳಗಾವಿಗೆ ಇಳಿಯುವುದಾಗಿ ಹೇಳಿ,ನಮ್ಮ ಕಂಪಾರ್ಟ್ ಮೆಂಟ್ ನಲ್ಲಿರುವ ಇತರೆ ಎರಡು ಹೆಂಗಸರ ಕಡೆ ಬೆಟ್ಟು ಮಾಡಿ, ಅವರೂ ಮುಂಬಯಿಗೆ ಹೊರಟಿದ್ದಾರೆ, ಹೆದರಿ ಕೊಳ್ಳುವ ಅವಶ್ಯಕತೆ ಇಲ್ಲ ಅಂದೆ. ಅವರಿಗೆ ಸಮಾಧಾನ ಆಗಿದ ಹಾಗೆ ಅನ್ನಿಸಿತು.

ನಾಲ್ಕನೆ ಪ್ಯಾಸೆಂಜರ್, ಇನ್ನೂ ಪ್ಲಾಟ್ ಫಾರ್ಮ್ ಮೇಲೆ ನಿಂತು ಅವಳ ಸ್ನೇಹಿತರ-ಸಂಬಂಧಿಕರ ಹಿಂಡಿನಲ್ಲಿ ಮಾತು ನಗುವಿನಲ್ಲಿ ತೊಡಗಿದ್ದಳು. ಟ್ರೈನ್ ನ ಸಿಳ್ಳೆ ಹೊಡೆದಾಗ ಆಕೆಯ ದೊಡ್ಡ ಕಣ್ಣುಗಳಲ್ಲಿ ದೊಡ್ಡ ದೊಡ್ಡ ಗಾತ್ರದ ಕಣ್ಣೀರು. ಅಲ್ಲಿದ್ದ ಹಿರಿಯರ ಕಾಲಿಗೆ ಎರಗಿ, ಕಂಪಾರ್ಟ್ ಮೆಂಟ್ ಒಳಗೆ ಬಂದು ಟ್ರೈನ್ ಹೊರಟ ಮೇಲೆ ಕೈ ಯನ್ನು ಅಷ್ಟು ಉದ್ದ ಹೊರಗೆ ಹಾಕಿ ಕೈ ಅಲ್ಲಾಡಿಸಿದ್ದೆ ಅಲಾಡಿಸಿದ್ದು. ಕರ್ಚೀಫ್ ನಿಂದ ಕಣ್ಣೂ ಮೂಗು ಒರೆಸಿ, ಅವಳ ಚೀಲಗಳನ್ನೆಲ್ಲ ನೀಟಾಗಿ ಇಟ್ಟಳು.ಒಬ್ಬ ಹುಡುಗಿಗೆ ಅಷ್ಟೊಂದು ಲಗ್ಗೇಜ್, ಸುಮಾರು ಏಳೆಂಟು ಬ್ಯಾಗ್ ಗಳಿದ್ದವು- ನನಗೆ ಅಚ್ಚರಿ ತಂದಿತು. ಅವಳೇ ಮೊದಲು ಮಾತಿಗೆ ಆರಂಭಿಸಿದಳು’ ಎಲ್ಲಿಗೆ ಹೊಂಟಿರ್ರೀ ಆಂಟಿ’?? ನಾನು- ಬೆಳಗಾಂ. ನಂದು ಧಾರವಾಡರೀ. ಆದರೆ ನಾನು ಮುಂಬಯಿಗೆ ಹೊಂಟೇನ್ರೀ. ನನಗೆ ಅಲ್ಲಿ ಕೆಲ್ಸ್ ಸಿಕ್ಕಿದೆ ರೀ. ನಾನು ನರ್ಸ್ ರೀ ಅಂತ ಒಂದೆ ಉಸುರಿಗೆ ಹೇಳಿ ಬಿಟ್ಲು. ಉದ್ದ ಜಡೆಯ, ಉದ್ದ ಮೂಗಿನ ಹುಡುಗಿ ಕ್ಯೂಟ್ ಆಗಿದ್ದಳು . ಆಮೇಲೆ ಮೊಬೈಲ್ ನಲ್ಲಿ ಎಸ್ ಎಮ್ ಎಸ್ ಶುರು ಹಚ್ಕೊಂಡ್ಲು.

ಇನ್ನೋರ್ವ ಹೆಂಗಸಿನ ಪತ್ತೇನೆ ಇರಲಿಲ್ಲ ಒಟ್ಟು ಆರು ಸೀಟ್ ಇರುತ್ತವೆ.

ಟ್ರೈನ್ ಬಿಟ್ಟಿದ್ದರಿಂದ, ನಮ್ಮ ಎದುರಿನ ಅಂದರೆ ಅಡ್ಡಕ್ಕೆ ಇರುವ ಸೀಟ್ ನಲ್ಲಿ ಒಬ್ಬ ಜವಾನ್ ಬಂದು ಕೂತಿದ್ದ. ಸೀಟು ಹುಡುಕುತ್ತಿರುವವರ, ಲಾಸ್ಟ್ ಮಿನಿಟ್ ಟ್ರೈನ್ ಬಿಟ್ಟಿದ್ದಾಗ ಸಿಕ್ಕ ಬೋಗಿಯಲ್ಲಿ ಹತ್ತಿಕೊಂಡವರ ಗಲಾಟೆ ಸಾಕಷ್ಟು ಇತ್ತು. ಅಷ್ಟರಲ್ಲಿ ಚಿನ್ನುಗೆ toilet ಅವಸರ ಆಯಿತು. ಅಮ್ಮನಿಗೆ ಹೇಳಿದಳು. ಅದಕ್ಕೆ ಅವಳ ಅಮ್ಮ ಈ ಸಲ ಕನ್ನಡದಲ್ಲೇ ಅವಳನ್ನು ಬೈದಳು. ’ಚಿನ್ನು ಎಷ್ಟು ಸಳ ಹೇಳೇನಿ, ಇಂಗ್ಲಿಶ್ಲೇ ಮಾತಾಡು ಅಂತ, ಅರ್ಥ ಆಗಂಗಿಲ್ಲೇನು? ಅಂತ ಜಬರಿಸಿ ಟಾಯ್ಲೆಟ್ ಗೆ ಕರೆದುಕೊಂಡು ಹೋದ್ಲು. ವಾಪಸ್ ಬಂದ ಮೇಲೆ ಆ ಜವಾನ್ ಜತೆ ಮಾತು ತೆಗೆದಳು. ಅವನ ಬ್ಯಾಗ್ ಅವಳ ಕಾಲಿಗೆ ತಗುಲಿದ್ದರಿಂದ, ಅವಳು ’ಭೈಯ್ಯ ಸಾಮಾನ್ ಊಪರ್ ರಖ್ಕೋ’ ಅಂದಳು. ಅವನು ಬ್ಯಾಗ್ ನ್ನು ಆಚೆಗೆ ಸರಿಸಿ’ ಅಭಿ ಬೇಟಿ ಕೆ ಸಾಥ್ ಕೌನ್ ಸಿ ಭಾಷಾ ಮೇ ಬಾತ್ ಕರ್ ರಹೆ ಥೆ’? ಅಂತ ಅದಕ್ಕೆ ಅವಳು ಓ ಹಮಾರ ಕರ್ನಾಟಕ್ ಕಾ ಭಾಷಾ ಕನ್ನಡ ಹೈ’ ಅಂತ ಶುರು ಮಾಡಿ, ಅವಳು ಕನ್ನಡ ಮೀಡಿಯಂ ಕಲಿತು, ಆಮೇಲೆ ಕೆಲಸ ಸಿಕ್ಕಾಗ ಅವಳಿಗೆ ಆದ ಕಷ್ಟಗಳನ್ನೆಲ್ಲ ಹೇಳಿಕೊಂಡು, ಕನ್ನಡ ಒಂದು ತರಹ useless ಭಾಷೆ ಅಂದಾಗ ನನಗೆ ನಿಜಕ್ಕೂ ಹಿಂಸೆ ಆಯ್ತು.

ಅಷ್ಟರೊಳಗೆ ಒಬ್ಬ ಧಡೂತಿ ದೇಹದ ಹೆಂಗಸು ಏದುಸಿರು ಬಿಡುತ್ತ ತನ್ನ ಜಾಗ ಹುಡುಕಿಕೊಂದು ನಮ್ಮ ಕಂಪಾರ್ಟ್ ಮೆಂಟ್ ಗೆ ಬಂದರು. ಬೆವರಿನಿಂದ ತೊಪ್ಪೆಯಾಗಿದ್ದರು. ಲೇಟಾಗಿ ತಲುಪಿ, ಯಾವುದೂ ಬೋಗಿ ಹತ್ತಿ ಅಂತು ತಮ್ಮ ಜಾಗಕ್ಕೆ ಬಂದು ತಲುಪಿದರು. ಬ್ಯಾಗ್ ಗಳನ್ನು ಬರ್ತ್ ಕೆಳಗಡೆ ತುರುಕಲು ನಾವೆಲ್ಲರೂ ಆಕೆಗೆ ಸಹಾಯ ಮಾಡಿದೆವು. ಸ್ವಲ್ಪ ಹೊತ್ತಿಗೆ ಟಿಟಿ ಬಂದು ನಮ್ಮ ಟಿಕೆಟ್ ಗಳನ್ನೆಲ್ಲ ಚೆಕ್ ಮಾಡಿ, ನೆಟ್ ನಲ್ಲಿ ಬುಕ್ ಮಾಡಿರುವವರದೆಲ್ಲ ಐ ಡಿ ಚೆಕ್ ಮಾಡಿದ್ರು. ಠಾಸ್ -ಪುಸ್ ಹೆಂಗಸಳ ಬಳಿ ಐಡಿ ನೇ ಇರಲಿಲ್ಲ. ಸುಮಾರೆಲ್ಲ ಸಬೂಬೆಲ್ಲ ಹೇಳಿದಳು. ಫ್ಲೈಟ್ ನಲ್ಲಿ ಹೋಗೋದಿತ್ತು, ಆದರೆ ಮಗಳನ್ನು ಅವಳ ಅಜ್ಜಿಯ ಹತ್ತಿರ ಬಿಡಬೇಕಾಗಿ ಟ್ರೈನ್ ನಲ್ಲಿ ಬಂದಿದ್ದು, ಆಫಿಸ್ ಹುಡುಗ ಟಿಕೆಟ್ ಬುಕ್ ಮಾಡಿದ್ದು, ಆಕೆಯ ಅಫಿಸ್ ಐಡಿ, ಅವಳ ದೊಡ್ಡ ಕಂಪನಿ ಹೆಸರು etc. ಆದರೂ 650/- ರೂ ಫೈನ್ ಬಿತ್ತು ಆಕೆಗೆ. ನಾನಂತೂ ಅವಳ ಮುಖ ನೋಡ್ಲಿಕ್ಕೆ ಹೋಗಲಿಲ್ಲ.

ಸ್ವಲ್ಪ ಹೊತ್ತಿಗೆಲ್ಲ ಧಡೂತಿ ಹೆಂಗಸು ನೋವಿನಿಂದ ಮುಲುಕಲು ಶುರು ಮಾಡಿದಳು. ಗುಜರಾತಿ ಹೆಂಗಸು. ಏನಾಯ್ತು ಅಂದೆ, ಕಾಲಿಗೆ ಕ್ರಾಂಪ್ಸ್ ಬಂದಿರಬೇಕು. ಕಾಲನ್ನು ರಿಲಾಕ್ಸ್ ಮಾಡಲು ಹೇಳಿ, ನವಿರಾಗಿ ಮಾಲಿಶ್ ಮಾಡಿದೆ. ನನ್ನ ಕೈಚೀಲ ದಲ್ಲಿ ಯಾವತ್ತೂ ಇರುವ ಝಂಡು ಬಾಲ್ಮ್ ಅವಳ ಕಾಲಿಗೆ ಲೈಟ್ ಆಗಿ ಹಚ್ಚಿದೆ. ಕಾಲನ್ನು ಸಡಿಲ ಬಿಟ್ಟು ಮಲಗಲು ಹೇಳಿದೆ. ಕೂಡಲೆ ಕಾಲು ನೋವು ಹೋಗಿ, ಅವರ ’ಥ್ಯಾಂಕ್ಯು ಬೇಟ” ಗೆ ಮುಗುಳ್ನಕ್ಕು ನಾನು ನನ್ನ ಪುಸ್ತಕ ಹೊರಗೆ ತೆಗೆದೆ. ಬೆಳಿಗ್ಗೆ ಬೇಗ ಎದ್ದಿದ್ದರಿಂದ ಚಿನ್ನು ಮತ್ತು ಇತರೆ ಪ್ಯಾಸೆಂಜರ್ ಗಳು ಆಗಲೇ ನಿದ್ದೆಗೆ ಹೋದರು. 
ನನ್ನ ಕೈ ಚೀಲದಲ್ಲಿ ಏನೇನು ಇರುತ್ತೆ: ಶ್ರೀಕಾಂತ ನನ್ನ ಹ್ಯಾಂಡ್ ಬ್ಯಾಗ್ ಗೆ handy bag/pandora's box ಅನ್ನೋದು. ಅದರಲ್ಲಿ ಒಂದು ಪುಸ್ತಕ, ನೀರಿನ ಬಾಟಲ್, ಸಾಬೂನಿನ ಸ್ಟ್ರಿಪ್(soap strip),ಹತ್ತಿ, ಬ್ಯಾಂಡ್ ಎಇಡ್,ಸೇಫ್ಟಿ ಪಿನ್,ಝಂಡು ಬಾಲ್ಮ್,, ನೋಟ್ ಪ್ಯಾಡ್, ಪೆನ್ ಮತ್ತು ಎರಡು ಮೂರು ಜ್ವರದ ಗುಳಿಗೆ ಇರುತ್ತೆ.

ಈಗ ಈ ಪೋಸ್ಟ್ ನ ಟೈಟಲ್ ಬಗ್ಗೆ

ಈ ತಿಂಗಳು ನನ್ನ ತಂಗಿ ಎಂಡ್ ಫ್ಯಾಮಿಲಿ ಯು.ಎಸ್ ನಿಂದ ಬರುತ್ತಿದ್ದಾರೆ. ತಂಗಿ ಗಂಡ ಸಂದೀಪ್ ಐದು ದಿನ ಇಲ್ಲಿದ್ದು ವಾಪಸ್ ಹೋಗುತ್ತಿದ್ದಾನೆ. ಆಮೇಲೆ ನನ್ನ ತಂಗಿ ಜ್ಯೋತಿ, ಅವಳ ಮಕ್ಕಳು - ನಿವೇದಿತಾ, ಶ್ರೇಯ, ನಾನು, ಮಾಲವಿಕ, ನಿಹಾರಿಕಾ ನೈನಿತಾಲ್ ಗೆ ಹೋಗ್ತಾ ಇದ್ದೇವೆ. ladies only... :-). ಇಲ್ಲಿಂದ ದೆಹಲಿ ವರೆಗೆ ಫ್ಲೈಟ್, ಅಲ್ಲಿಂದ ಟ್ರೈನ್- ಟ್ಯಾಕ್ಸಿ etc.

ಮೂರು ವರ್ಷದ ಹಿಂದೆ ನಾನು ಮಾಲು, ನಿಹಾ ಮತ್ತು ನನ್ನ ಅಮ್ಮ ಹೀಗೆ ನಾಲ್ಕು ಜನ ನಿರ್ಮಲ ಟ್ರಾವೆಲ್ಸ್ ನಲ್ಲಿ ಕೇರಳ ಕ್ಕೆ ಹೋಗಿದ್ವಿ. ಬಸ್ ನಲ್ಲಿರುವ co passengers ಎಲ್ಲ ಗಂಡ-ಹೆಂಡತಿ, ಮಕ್ಕಳು ಇರುವಂತಹ family ಯವರು,ನಾವು ನಾಲ್ಕು ಜನ ಹೆಣ್ಣು ಮಕ್ಕಳೆ ಅಂತ ಅವರ curiosity ನೋಡಬೇಕು...ಯಾಕೆ ಗಂಡ ಬಂದಿಲ್ಲ...ಮುಂತಾದ direct/indirect ಪ್ರಶ್ನೆಗಳು...ಮತ್ತೆ ನಾನು ಎಲ್ಲರಿಗೂ ಹೇಳಿದೆ, ನನಗೆ ಸೀ ಅಫ್ ಮಾಡಲು ಬಂದಿದ್ದರಲ್ಲ ಅವರು ನನ್ನ husband, ಅವರಿಗೆ ಆಫಿಸ್ ಕೆಲಸದಿಂದ ಪುರುಸತ್ತು ಇರಲಿಲ್ಲ ಅದಕ್ಕೆ ಬಂದಿಲ್ಲ ಅಂತ...ಮತ್ತು ನನ್ನ ತಂದೆ ಇತ್ತೀಚಿಗೆ ಎಲ್ಲೂ ಟ್ರಾವೆಲ್ ಕೈಗೊಳ್ಳಲ್ಲ ಅಂತ, ನನ್ನ ತಾಯಿಯನ್ನು ಜತೆಗಿರಲಿ ಅಂತ ಕರೆದುಕೊಂದು ಬಂದೆ- ಅಂತ  :-)

ಕಂಡಕ್ಟಡ್ ಟೂರ್ ನ ಕೆಲವು ಅಡ್ವಾಂಟೆಜ್ - ಹೋಟಲ್, ಊಟ, ನೋಡುವ ಸ್ಪಾಟ್ ಗಳ ಕಿರಿಕಿರಿಯಿರುವುದಿಲ್ಲವಾದರೂ, ಅವರು ಸೂಚಿಸಿದ ಸಮಯಕ್ಕೆ ಸರಿಯಾಗಿ ವಾಪಸ್ ಆಗಬೇಕು. explore ಮಾಡುವ ಅವಕಾಶ ಇರುವುದಿಲ್ಲ. ಸೋ ಈ ಸಲ ನೈನಿತಾಲ್ ಗೆ ನಾವು ನಾವೇ explore ಮಾಡ್ತಾ ಎಂಜಾಯ್ ಮಾಡ್ತೇವೆ. ಸಧ್ಯಕ್ಕೆ ಬ್ಲಾಗ್ ಗೆ ಬ್ರೇಕ್. ಇನ್ನು ಸೆಪ್ಟೆಂಬರ್ ನಲ್ಲಿ ಮೂಡ್ ಇದ್ದರೆ ಬ್ಲಾಗಿಸುತ್ತೇನೆ.

ನನ್ನ ಜತೆ ದೇಶಕಾಲ -25, ಎಸ್. ಎಲ್. ಭೈರಪ್ಪನವರ ’ಗ್ರಹಣ’ ಮತ್ತು V.S. Ramachandran ಅವರ The tell-tale brain (ಸ್ವಲ್ಪ ಓದಿದ್ದೇನೆ. ತುಂಬ ಕುತೂಹಲಕಾರಿಯಾಗಿದೆ.  ನಿಹಾ ಪರೀಕ್ಷೆ ಮುಗಿದು ಅವಳು ಆ ಪುಸ್ತಕ ಓದುತ್ತಿದ್ದಾಳೆ) ಕೂಡ ಟ್ರಾವೆಲ್ ಮಾಡುತ್ತವೆ. Latest ದೇಶಕಾಲದ ಮುಖ ಪುಟ ನನಗೆ ಇಷ್ಟವಾಗಿದೆ. ಅದನ್ನು ಸ್ಕ್ಯಾನ್ ಮಾಡಿ ಹಾಕುತ್ತೇನೆ. sapna book house ನಲ್ಲಿ ಇನ್ನೂ ಹತ್ತು ಕಾಪಿಗಳಿದ್ದವು. ಆಸಕ್ತಿ ಉಳ್ಳವರು ಖರೀದಿಸಬಹುದು! ಕೇವಲ 100/- ರೂ.


Back cover page
so ಎಲ್ಲರಿಗೂ ಬೈ ಬೈ, ನಮಸ್ಕಾರ
:-)

August 19, 2012

ಏನ್ಕತೀ?

ಗೌರಮ್ಮ ಮನೆಗೆ ಬಂದು ಚಪ್ಪಲಿ ತೆಗೆದ ತಕ್ಷಣ ಗೀತಾ, 'ಗೌರಮ್ಮ ಟೇಬಲ್ ಮೇಲೆ ಬಿಸಿ ಬಿಸಿ ಅಡಿಗೆ ಇದೆ. ಮೊದಲು ಊಟ ಮಾಡಿ ಒಂದಷ್ಟು ಮಲಗಿ ಸುಧಾರಿಸಿಕೊಳ್ಳಿ, ಪ್ರಯಾಣ ಮಾಡಿ ಬಂದಿದ್ದೀರಾ' ಇವತ್ತು ಏನೂ ಅಡಿಗೆ ಕೆಲಸ ಇಲ್ಲ' ಅಂದಳು
ಗೌರಮ್ಮನಿಗೂ ಸುಸ್ತು. ಮಾನಸಿಕ ಸುಸ್ತು. ಈ ಗೀತಮ್ಮ ಯಾರೋ ಏನೋ ಎಷ್ಟು ಒಳ್ಳೆಯವರು. ಅದೇ ನಿನ್ನೆ ಮಗನ ಮನೆಗೆ ಸುಸ್ತಾಗಿ ತಲುಪಿದಾಗ ಸೊಸೆ, 'ಅತ್ತೆ ಹೇಗೂ ನೀವು ಬಂದಿದ್ದಿರಲ್ಲ ಇವತ್ತು ಅಡಿಗೆ ಮನೆ ಜವಾಬ್ದಾರಿ ನಿಮ್ಮದೆ ಅಂತ ಸೋಫಾದ ಮೇಲೆ ಮಲಗಿ, ಟಿವಿ ಯ ರಿಮೋಟ್ ಹಿಡಿದು ಕೊಂಡು, ಹಾಕಿದ್ದ ಚೂಡಿದಾರ್ ಪ್ಯಾಂಟ್ ಹರಿದು ಹೋಗಿದ್ದರ ಪರಿವೆಯೇ ಇಲ್ಲದೆ, ಕಾಲ ಮೇಲೆ ಕಾಲು ಹಾಕಿ ಮಲಗಿದ್ದು..ಭಯಂಕರ ಸಿಟ್ಟು ಬಂದಿತ್ತು ಗೌರಮ್ಮನಿಗೆ.

ಗೀತಳ ಪರಿಚಯ ಆಗಿ ಸುಮಾರು ಆರು ತಿಂಗಳು ಕಳೆದಿವೆ. ಗೌರಮ್ಮನ ಗಂಡ ಬೆಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅವರು ಕೋಮಾಗೆ ಹೋಗಿದ್ದಾರೆ. ಗೀತಾ ಆ ಅಸ್ಪತ್ರೆಯಲ್ಲಿ ಡಾಕ್ಟರ್. ಗೌರಮ್ಮನ ಊರು ಕುಣಿಗಲ್ ಬಳಿಯ ಒಂದು ಊರು. ಜಮೀನು ಇದೆ. ಗಂಡ ಆರೋಗ್ಯದಿಂದಿರುವವರೆಗೆ ಅವರೇ ತೋಟವನ್ನು ನೋಡಿಕೊಳ್ತಾ ಇದ್ದಿದ್ದು. ಅದು ಈಗ ಅವರ ಇಬ್ಬರು ಮಗಂದಿರ ಸುಪರ್ದಿನಲ್ಲಿದೆ. ಗೌರಮ್ಮನ ಗಂಡನಿಗೆ ಬೆಂಗಳೂರಿನ ಆಸ್ಪತ್ರೆಗೆ ದಾಖಲು ಆಗಲು ಹೇಳಿದಾಗ ಯಾರ ಮನೆಯಲ್ಲಿ ಇರುವುದು ಎಂದು ಆಕೆಗೆ ತಿಳಿಯಲಿಲ್ಲ. ಸಂಬಂಧಿಕರು ಪರಿಚಯಸ್ಥರು ಯಾರೂ ಇವರನ್ನು ತಮ್ಮಲ್ಲಿ ಬಂದು ಇರಲು ಹೇಳಲಿಲ್ಲ. ಎಷ್ಟು ದಿನ ಅಂತ ಹೀಗೆ ಅವರು ಆಸ್ಪತ್ರೆಯಲ್ಲಿರುವುದು. ಮಗಂದಿರಿಬ್ಬರೂ ಸರಿಯೇ ಸರಿ. ಅಪ್ಪನನ್ನು ಆಸ್ಪತ್ರೆಗೆ ದಾಖಲು ಮಾಡಿ, ಹಣಕಾಸನ್ನು ಕಟ್ಟಿ, ಇವಳ ಕೈಗೂ ಸ್ವಲ್ಪ ಹಣ ಕೊಟ್ಟು ಊರಿನ ದಾರಿ ಹಿಡಿದವರು, ಅಪರೂಪಕ್ಕೆ ಫೋನ್ ಮಾಡಿ, 'ಅಪ್ಪ ಹೇಗಿದ್ದಾರೆಂದು ಕೇಳಿ ಕೈ ತೊಳ್ಕೋತಾರೆ. ಗೌರಮ್ಮನದು ಕಷ್ಟಪಟ್ಟು ದುಡಿಯುವ ಜೀವ. ಆಸ್ಪತ್ರೆಯಲ್ಲಿ ಹೊತ್ತೇ ಹೋಗದು. ಆಗ ಪರಿಚಯವಾದವರು ಲೇಡಿ ಡಾಕ್ಟರ್ ಗೀತ. ಚಟುವಟಿಕೆಯ ಹೆಂಗಸು. ಸಾದಾ ಕಾಟನ್ ಸೀರೆಯಲ್ಲಿ ಚಂದದ ನಗು ಮುಖದ ಡಾಕ್ಟರ್. ಒಂದು ಸಲ ವಾರ್ಡ್ ಬಾಯ್ ಗೆ 'ಇವತ್ತು ಅಡಿಗೆ ಮಾಡಕ್ಕೆ ಪುರುಸೊತ್ತಾಗಲಿಲ್ಲ, ಹೊರಗಿನಿಂದ ಏನಾದರೂ ತಂದು ಕೊಡು ಅಂತ ಹೇಳ್ತಿದ್ದಾಗ ಅವರ ಕಣ್ಣು ಗೌರಮ್ಮನ ಮೇಲೆ ಹೋಯಿತು. ' ನೀವು ಏನಾದರೂ ತೆಗೊಳ್ತೀರಾ ಅಮ್ಮ, ಅಂತ ಕೇಳಿದರು' ಆದರೆ ಗೌರಮ್ಮ ಆಗಲೇ ಕ್ಯಾಂಟೀನ್ ನಿಂದ ಊಟ ತರಿಸಿ ಊಟ ಮಾಡಿಯಾಗಿತ್ತು.

ವಾರ್ಡ್ ಬಾಯ್ ತಂದುಕೊಟ್ಟಿದ್ದ ಊಟದಲ್ಲಿ ಕಾಲು ಭಾಗ ಕೂಡ ಊಟ ಮಾಡದೇ ಇದ್ದುದ್ದು ನೋಡಿ ಗೌರಮ್ಮನ ಕರುಳು ಚುರುಕ್ ಎಂದಿತು. 'ಅಲ್ಲ ದಿನ ಇಡೀ ಓಡಾಟ ಅಷ್ಟು ಊಟ ಸಾಕೇ ಡಾಕ್ತ್ರಮ್ಮ' ಅಂತ ತಡಿಯಲಾರದೇ ಕೇಳಿದಳು. "ಈ ಕ್ಯಾಂಟೀನ್ ಊಟ ಮಾಡುವುದಕ್ಕಿಂತ ಉಪವಾಸ ಇರುವುದೇ ಲೇಸು. ಒಂಚೂರು ಚೆನ್ನಾಗಿಲ್ಲ. ನಾನು ಆದಷ್ಟು ಮನೆಯಿಂದಲೇ ನನ್ನ ಊಟ ತರುವುದು. ಆದರೆ ನಿನ್ನೆ ರಾತ್ರಿಯಿಡೀ ಎಮರ್ಜೆನ್ಸಿ ಕೇಸ್ ಗಳಿದ್ದರಿಂದ ನಾನಿನ್ನೂ ಮನೆಗೆ ಕೂಡ ಹೋಗಿಲ್ಲ. ಒಬ್ಬ್ಬರ ದೇಹಸ್ಥಿತಿ ತುಂಬ ಬಿಗಡಾಯಿಸಿದೆ. ಅದು ಸರಿಯಾಗಿ ಒಂದು ಹಂತಕ್ಕೆ ಬಂದ ಮೇಲೆ ನಾನು ಮನೆಗೆ ಹೋಗುವುದು. ಈಗ ಒಂದರೆಗಳಿಗೆ ಪಕ್ಕದ ಕಾಟ್ ನಲ್ಲಿ ಮಲಗುತ್ತೇನೆ" ಅಂತ ಅಲ್ಲೇ ಅಡ್ಡಾದರು. ಗೌರಮ್ಮ ಗಂಡನ  ಬೆಡ್ಡ ಪಕ್ಕದಲ್ಲಿರುವ ಸಣ್ಣ ಬೆಂಚ್ ಮೇಲೆ ಮಲಗಿದರು. ಡಾಕಟ್ರಮ್ಮನ ಬಗ್ಗೆ ಇನ್ನಷ್ಟು ವಿಷಯ ತಿಳಿಯಲು ಅವರು ಕುತೂಹಲಿಗಳಾದರು

ಮರುದಿನ ವಾರ್ಡ್ ಬಾಯ್ ಅವರ ಗಂಡನಿಗೆ ಸ್ಪೋಂಜ್ ಬಾಥ್ ಕೊಡುವಾಗ,ಗೌರಮ್ಮ ನಿಧಾನವಾಗಿ ಡಾಕಟ್ರಮ್ಮ ನ ವಿಚಾರ ತೆಗೆದರು. ಅವರಿಗೆ ಗೊತ್ತಾಗಿದ್ದು ವಿಷಯ ಇಷ್ಟು. ಡಾಕಟ್ರಮ್ಮನ ಮನೆ ಇಲ್ಲೇ ಆಸ್ಪತ್ರೆ ಬಳಿ ಮತ್ತು ಅವರಿಗೆ ಮದುವೆಯಾಗದಿರುವುದು.ಡಾಕ್ಟ್ರಮ್ಮನ ಕನ್ಸಲೇಟಶನ್ ರೂಮ್ ಗೌರಮ್ಮನ ಗಂಡನ ವಾರ್ಡ್ ಪಕ್ಕದಲ್ಲೇ ಇದ್ದುದ್ದು. ಒಂದು ದಿನ ಸ್ವಲ್ಪ ವಿರಾಮವಾಗಿದ್ದಾಗ ಗೌರಮ್ಮ ಹೆದರುತ್ತ ಅವರ ಕೋಣೆಗೆ ಹೋದರು. 'ಒಂದು ಇಷಯ ಡಾಕ್ಟ್ರಮ್ಮ, ಅನ್ಯಥಾ ಭಾವಿಸದಿದ್ದರೆ ಹೇಳುತ್ತೇನೆ ಎಂದರು. ಅವರು ನಸುನಗುತ್ತ ಹೇಳಿ ಗೌರಮ್ಮ, ಗೌರಮ್ಮ ಅಲ್ಲವೇ ತಮ್ಮ ಹೆಸರು'? ಅಂದಳು. ಹೌದು. ನನಗೆ ಇಲ್ಲಿ ಕೂತು ಕೂತು ಬೇಜಾರು. ನಾನ್ಯಾಕೆ ನಿಮಗೆ ಅಡಿಗೆ ಮಾಡಿ ಕೊಡಬಾರದು?? ಒಂದು ಗಂಟೆಯ ಕೆಲಸ. ಅಡಿಗೆ ಮಾಡಿಟ್ಟು ಪಾತ್ರೆ ಬಳಸಿಟ್ಟು ವಾಪಸ್ ಆಸ್ಪತ್ರೆಗೆ ಮರಳುತ್ತೇನೆ. ಆಗಬಹುದೆ? ವಿಚಾರ ಮಾಡಿ.'ಓ ಅದಕ್ಕೇನಂತೆ ಮಾಡಬಹುದು. ಆದರೆ ನಿಮ್ಮ ಮನೆಯವರಿಗೆ ತಕರಾರಿರಬಾರದು ಅಷ್ಟೆ. ಮತ್ತು ನೀವು ನಮ್ಮ ಮನೆಯಲ್ಲೇ ಊಟ ಮಾಡಿ. ಹಾಗಾದರೇ ಮಾತ್ರ ನಾನು ಒಪ್ಪಿಕೊಳ್ಳುತ್ತೇನೆ ಎಂದಳು. ಗೌರಮ್ಮನಿಗೆ ತುಂಬ ಖುಶಿಯಾಯಿತು.

ಹೀಗೆ ಒಂದು ದಿನ ಗೀತಾ, 'ಅಲ್ಲ ನೀವು ಆಸ್ಪತ್ರೆಯಲ್ಲಿ ಇದ್ದುಕೊಂಡು ಏನೂ ಮಾಡುವುದಕ್ಕಿಲ್ಲ. ನೋಡಲಿಕ್ಕೆ ನರ್ಸ್/ವಾರ್ಡ್ ಬಾಯ್ ಎಲ್ಲ ಇದ್ದಾರೆ. ರಾತ್ರಿ ಯಾಕೆ ಮುದುಡಿಕೊಂಡು ಆ ಬೆಂಚ್ ಮೇಲೆ ಮಲಗಬೇಕು. ನನ್ನ ಮನೆಯಲ್ಲಿ ಹೇಗೂ ಮೂರು ಕೋಣೆಗಳಿವೆ. ನೀವೂ ಅಡಿಗೆ ಮಾಡಿದ್ದಕ್ಕೆ ಹಣಕಾಸು ಇಸ್ಕೊಳ್ಳಲ್ಲಾ ಅಂತೀರಾ...ರಾತ್ರಿ ಇಲ್ಲೇ ಮಲಗಿ. ಆಕಸ್ಮಾತ್ ಆಸ್ಪ್ತತ್ರೆಗೆ ಧಾವಿಸ ಬೇಕಾದಲ್ಲಿ ಅದು ಕಾಲ್ನಡಿಗೆಯಲ್ಲಿ ಕ್ರಮಿಸುವಷ್ಟೇ ದೂರ. ಏನ್ಹೇಳ್ತೀರಾ ಗೌರಮ್ಮ?' ಗೌರಮ್ಮ ಒಪ್ಪಿ ರಾತ್ರಿ ಇವರ ಮನೆಯಲ್ಲೇ ಉಳಿಯಲು ಪ್ರಾರಂಭಿಸಿದರು.

ಗೀತಾಳ ಮೆನೆಯಲ್ಲಿ ತಂಗಲು ಶುರುಮಾಡಿದ ಸ್ವಲ್ಪ ದಿನಗಳ ನಂತರ , ಒಂದು ದಿನ ರಾತ್ರಿ ಗೀತಾ ಮತ್ತು ಗೌರಮ್ಮ ರಿಗೆ ಲೋಕಾಭಿರಾಮವಾಗಿ ಮಾತಾಡುವ ಅವಕಾಶ ಸಿಕ್ಕಿತು. ಗೌರಮ್ಮ, ಗೀತಳಿಗೆ - ಯಾಕೆ ಇನ್ನೂ ಮದುವೆ ಆಗಿಲ್ಲ ಅಂತ ಕೇಳಬಹುದೇ ಡಾಕ್ಟ್ರಮ್ಮ??' ಅದಕ್ಕೆ ಗೀತಾ ' ಒಹೋ ಅದಕ್ಕೇನಂತೆ. ನಾನೂ ಒಬ್ಬರನ್ನ ಪ್ರೀತಿಸಿದ್ದೆ. ಅವರೂ ಡಾಕ್ಟರ್. ಹಳ್ಳಿಗೆ ಹೋಗಿ ಅಲ್ಲಿ ಒಂದು ಕ್ಲಿನಿಕ್ ತೆರೆಯುವ ಯೋಜನೆಗಳನ್ನೆಲ್ಲ ಹಾಕ್ಕೊಂಡಿದ್ವಿ. ಬೇರೆಯವರ ಸೇವೆ ಮಾಡ್ತಾ ಮಾಡ್ತಾ ಅವರು ಅವರ ಆರೋಗ್ಯದ ಕಡೆ ನಿಗಾ ವಹಿಸದೇ ಒಂದು ದಿನ ತುಂಬ ಕಾಯಿಲೆ ಬಿದ್ದರು. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ತುಂಬ ವಿಳಂಬವಾಗಿತ್ತು. ಕೊನೆಯುಸಿರೆಳೆದುಬಿಟ್ಟರು, ಅಂದಳು ಗದ್ಗದಿತಳಾಗಿ' "ಅವರ ತರಹ ಇನ್ನೂ ಯಾರೂ ಸಿಕ್ಕಿಲ್ಲ ನನಗೆ. ಬಹುಶ: ಅವರ ನೆನಪಲ್ಲೇ ಜೀವನ ಸವೆಸುತ್ತೇನೆ" ಗೌರಮ್ಮ ಲೊಚಗುಟ್ಟಿ ಸುಮ್ಮನಾದರು.

ಹೀಗೆ ಒಂದು ದಿನ ರಾತ್ರಿ ಗೌರಮ್ಮನ ಯಜಮಾನರಿಗೆ ಶ್ವಾಸಕೋಶದ ಸೋಂಕು ತಗುಲಿ ದೇಹಸ್ಥಿತಿ ಸಿರಿಯಸ್ ಅಂತ  ಆಸ್ಪತ್ರೆಯಿಂದ ಕರೆ ಮಾಡಿದರು. ಗೀತ ವಾಚ್ ಮನ್ ಗೆ  ಗೌರಮ್ಮನನ್ನು ಆಸ್ಪತ್ರೆ ತನಕ ತಲುಪಿಸಲು ಹೇಳಿದಳು. ಮರು ದಿನ ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೆ ಗೌರಮ್ಮನ ಯಜಮಾನರು ದೈವಾಧೀನರಾದರು. ಗೌರಮ್ಮ ನಿಗೆ ಗೀತಳನ್ನು ಕಾಣುವ ಆಸ್ಪದ ಸಿಗಲಿಲ್ಲ. ಅವರು ಕುಟುಂಬದವರ ಜತೆ ಕುಣಿಗಲ್ ಗೆ ಹೊರಟು ಬಿಟ್ಟರು. ಹಾಗೇ ಅವರ ಅಪರ ಕರ್ಮಗಳೆಲ್ಲವೂ ಮುಗಿಯಿತು.

ಇಷ್ಟು ದಿನ ಅತ್ತೆ ಮಾವ ಇಲ್ಲದ ಮನೆಯಂತ ಮನೆಯಲ್ಲಿ ಸೊಸೆಯಂದಿರದ್ದೆ ರಾಜ್ಯ. ಎಲ್ಲೆಂದರಲ್ಲೇ ಪಾತ್ರೆಗಳು, ಬಟ್ಟೆಗಳು. ಸೊಸೆಯಂದಿರು ದಿನವಿಡೀ ತಮ್ಮ ತಮ್ಮ ಕೋಣೆಯಲ್ಲಿ ಟಿವಿ ನೋಡುವುದರಲ್ಲಿ ತಲ್ಲೀನರು. ಅವರ ಮಕ್ಕಳನ್ನು ಸರಿಯಾಗಿ ಗಮನಿಸದಷ್ಟು ಅವರು ಟಿವಿ ಯೊಳಗೆ ಮಗ್ನರಾಗಿದ್ದರು. ರಾತ್ರಿ ಅವರ ಗಂಡಂದಿರು ತೋಟದಿಂದ ಮನೆಗೆ ತೆರಳಿದಾಗ ಅವರ ಬೇಕು ಬೇಡ, ಊಟ ಇತ್ಯಾದಿಗಳನ್ನೂ ಮುದಿ ಗೌರಮ್ಮನ ಪಾಲಿಗೆ ಬಿದ್ದಿತು.ಗೌರಮ್ಮನ ಕೆಲಸದಲ್ಲಿ ಸೊಸೆಯಂದಿರು ಕಿಂಚಿತ್ತೂ ಸಹಾಯ ಮಾಡ್ತಿರಲಿಲ್ಲ. ತೋಟದ ದೊಡ್ಡ ಮನೆ. ಹಾಗೇ ಕೆಲಸಗಳೂ ಬೇಕಾದಷ್ಟಿದ್ದವು.

ಒಂದು ದಿನ ಗೌರಮ್ಮ ವಿಪರೀತ ತಲೆ ನೋವಿಗೆ ತುತ್ತಾದರು. ಒಬ್ಬರಾದರೂ ಸೊಸೆ 'ಹೇಗಿದ್ದೀರಿ ಅತ್ತೆ' ಅಂತ ಕೇಳುವುದು ಬಿಡಿ ಅವರ ಕೋಣೆ ಕಡೆಗೂ ಹಾಯಲಿಲ್ಲ. ಬೆಳಗ್ಗಿನ ತಿಂಡಿ ಮಧ್ಯಾಹ್ನದ ಊಟ ಎಲ್ಲ ಹೊರಗಿನಿಂದಲೇ ತರಿಸಿ ತಿಂದು ಆಯ್ತು. ಒಬ್ಬ ಮಗ ಅಮ್ಮನಿಗೋಸ್ಕರ ಒಂದು ಬ್ರೆಡ್, ತಲೆನೋವಿಗೊಂದು ಮಾತ್ರೆ ಕೊಟ್ಟು ಹೊರಟು ಹೋದ. ಅಂತದ್ದರಲ್ಲೇ ಡಾಕ್ಟರ್ ಗೀತ ಗೌರಮ್ಮನಿಗೆ ಫೋನ್ ಮಾಡಿದರು. 'ಹೇಗಿದ್ದೀರಿ ಗೌರಮ್ಮ' ನೀವು ಊರಿಗೆ ಹೋಗುವ ಮುಂಚೆ ನಿಮ್ಮನ್ನು ಮಾತನಾಡಿಸಲೇ ಆಗಲಿಲ್ಲ. ನಾನು ಆ ದಿನ ಪೂರ್ತಿ ಎಮೆರ್ ಜೆನ್ಸಿ ಕೇಸ್ ಗಳನ್ನು ಅಟೆಂಡ್ ಮಾಡ್ತಾ ಇದ್ದೆ. ಈಗ ಮೂರು ದಿನ ರಜೆ ಹಾಕಿದ್ದೀನಿ ಊರಿಗೆ ಹೋಗಿ ಚಿಕ್ಕಪ್ಪನನ್ನು ನೋಡಿಕೊಂಡು ಬರೋಣವೆಂದು.ನಿಮ್ಮ ಕೆಲವು ಬಟ್ಟೆ ಬರೆ ಇಲ್ಲೇ ಉಳಿದಿವೆಯಲ್ಲ ಗೌರಮ್ಮ. ಆ ನೆವದಲ್ಲಿ ಒಂದೆರಡು ದಿನ ಬೆಂಗಳೂರಿಗೆ ಬಂದು ಹೋಗ ಬಹುದು. ಸ್ವಲ್ಪ ಹೊತ್ತು ಮೌನ ವಹಿಸಿ,- ಹಾಗೆ ನಿಮ್ಮ ಕೈ ಯಡುಗೆಯ ರುಚಿ ನೆನಪಾಯ್ತು'. ತಲೆ ನೋವಿನಿಂದ ನರಳುತ್ತಿರುವ ಗೌರಮ್ಮನಿಗೆ, ಗೀತಳ ಅಪ್ಯಾಯಮಾನವಾದ ದನಿ ಕೇಳಿ ಅಳು ಒತ್ತರಿಸಿ ಬಂತು. ನನ್ನ ಪಾಡು ಹೀಗಾಗಿದೆ. ಮೊದಲೆಲ್ಲ ಮಾವನವರ ಹೆದರಿಕೆ ಇತ್ತು ಸೊಸೆಯಂದಿರಿಗೆ. ಈಗ ಆಸ್ತಿ ಪಾಸ್ತಿ ಎಲ್ಲ ಅವರ ಪಾಲಿಗೆ ಬಂದ ಮೇಲೆ ಅವರಿಗೆ ಹೇಳುವವರು ಕೇಳುವವರು ಯಾರೂ ಇಲ್ಲವಾಗಿದ್ದಾರೆ. ನನಗೆ ಬೇಜಾರು ಬಂದು ಬಿಟ್ಟಿದೆ. ಯಾವುದೇ ಆಶ್ರಮ ಸೇರಿಕೊಳ್ಳುವ ಆಸೆಯನ್ನು ಮಕ್ಕಳ ಮುಂದೆ ಇಟ್ಟಾಗ ಸೊಸೆಯಂದಿರು ಇಷ್ಟು ದೊಡ್ಡ ಗಂಟಲು ಮಾಡಿ, 'ಅದಕ್ಕೆಲ್ಲ ತುಂಬ ಕಾಸು ವ್ಯಯ ಆಗುತ್ತೆ. ತೆಪ್ಪಗೆ ಮನೆ ನೋಡಿಕೊಂಡು, ಅಡಿಗೆ ಮಾಡಿಕೊಂಡು ಇರಿ' ಅನ್ನುವುದೇ? ಇವತ್ತು ಸ್ವಲ್ಪ ಹುಷಾರಿಲ್ಲವೆಂದು ಮಲಗಿದರೆ ನನಗೆ ಹೊಟ್ಟೆಗೆ ಗತಿಯಿಲ್ಲ. ಮತ್ತೆ ನಿನ್ನೆ ರಾತ್ರಿ ಒಬ್ಬ ಸೊಸೆ ನನಗೆ ಬಂದು ಜೋರು ಮಾಡಿ, 'ಅತ್ತೆ, ನಿಜಕ್ಕೂ ಹುಷಾರಿಲ್ಲವಾ? ಅಥವಾ ನಾಟಕ ಆಡುತ್ತಿದ್ದೀರಾ? ಇನ್ನೂ ಮಲಗೇ ಇದ್ರೆ ನಿಮ್ಮನ್ನ  ನಿಜಕ್ಕೂ ಯಾವುದಾದರೂ ಆಶ್ರಮಕ್ಕೆ ಸಾಗ ಹಾಕುವುದೇ ಸರಿ? ಅಷ್ಟಲ್ಲದೇ ಮಗ ಬಂದ ಕೂಡಲೇ ಇದೆ ಮಾತನ್ನ ಅವನಿಗೆ ಹೇಳಿದ್ದಾಳೆ. ಎಲ್ಲೋ ನನ್ನ ಮೇಲೆ ಕಿಂಚಿತ್ ಪ್ರೀತಿ ಇರಬೇಕು ಆ ಮಗನಿಗೆ, ಅವನು ಹೆಂಡತಿಯನ್ನು ಸರೀ ದಬಾಯಿಸಿದ. ಆದರೆ ಇದು ತುಂಬ ದಿನ ನಡೆಯುವ ಹಾಗೆ ಕಾಣಲ್ಲ. ಹೇಳಿ ಕೇಳಿ ಪ್ರೀತಿಸಿ ಮದುವೆಯಾಗಿದವ. ನನ್ನನ್ನು ಮನೆಯಿಂದ ಕಳಿಸುತ್ತಾನೆ ವಿನಃ ಹೆಂಡತಿಗೆ ಏನೂ ಹೇಳಲಾರ ಅಂತಲೇ ನನಗೆ ಅನ್ನಿಸುವುದು. ಅಷ್ಟು ಹೇಳಿ ಗೋಳೋ ಅಂತ ಅತ್ತರು ಗೌರಮ್ಮ

ಅದಕ್ಕೆ ಗೀತ, 'ನೋಡಿ ಗೌರಮ್ಮ, ಸಮಾಧಾನ ಮಾಡಿಕೊಳ್ಳಿ. ನಿಮ್ಮ ಅಭ್ಯಂತವೇನಿಲ್ಲದಿದ್ದರೆ ನೀವು ನಮ್ಮ ಮನೆಗೆ ಬಂದಿರಬಹುದು' ನಾನು ಅಮ್ಮನಿಲ್ಲದೇ ಬಾಳಿ ಬದುಕಿದವಳು. ನಿಮ್ಮನ್ನು ನನ್ನ ತಾಯಿ ತರಹನೇ ನಾನು ಕಂಡಿದ್ದೆ, ನೀವು ನನ್ನಲ್ಲಿದ್ದಾಗ. ಈಗಲೂ ನಮ್ಮ ಮನೆಗೆ ನಿಮಗೆ ಸ್ವಾಗತ. ಏನಂತೀರಾ? ಹಾಗೇ ಮುಂದಿನ ತಿಂಗಳು ಹದಿನೈದು ದಿನಗಳ ರಜೆ ಹಾಕಿದ್ದೇನೆ.  ಅಮರನಾಥ ಯಾತ್ರೆ ಮಾಡಿ ಬರುವಾ ನಾನು ನೀವು?

ಏನೆಂದಿರಬಹುದು ಗೌರಮ್ಮ?????

:-) :-)

August 15, 2012

ಮಳೆಗಾಲ/ ಚಳಿಗಾಲಕ್ಕೆ ಒಂದು ಮಸ್ತ್ ಮಸ್ತ್ ಕಡಿ

ದಾಳಿಂಬೆ ಸಿಪ್ಪೆಯ ಕಡಿ (ಕೊಂಕಣಿ preparation)

at last ಮಳೆರಾಯ ನಮ್ಮ ಮೇಲೆ ಕರುಣೆ ತೋರಿಸಿ ಮಧ್ಯ ಮಧ್ಯ ಧೋ ಎನ್ನುವ ಮಳೆ ಸುರಿಸಿ ಬೆಂಗಳೂರನ್ನು ತಂಪಾಗಿಸಿದ್ದಾನೆ. thanks dude!. ಮಳೆಗಾಲ ಆದ್ರೂ ಕೊಡೆ ಇಲ್ಲದೇ ಓಡಾಡುವ ಜನರೇ ಜಾಸ್ತಿ. ಸಣ್ಣ ಪುಟ್ಟ ಮಳೆಗೆ ಕ್ಯಾ ರೆ ಅನ್ನದೇ ಧಾವಂತದ ನಡಿಗೆ, ಮಳೆ ಹನಿ ಜೋರಾದಾಗ ಮರ ದ ಬುಡ ಅಂಗಡಿ ಮುಂಗಟ್ಟೊಳಗೆ ತೂರಿಕೊಳ್ಳುವುದು ಅಥವ ನನ್ನ ಹಾಗೆ big bazaar, food world, hotel ಒಳಗೆ ಹೋಗಿನೂ ಒದ್ದೆಯಾಗುವುದನ್ನು ತಪ್ಪಿಸಬಹುದು.

ಹಾಂ ಮೊನ್ನೆ ಹೀಗೆ ಮಳೆ ಶುರು ಆದಾಗ MTR ಮಳಿಗೆಗೆ ನುಗ್ಗಿದೆ. Believe it or not ಸ್ಯಾಂಪಲ್ ಅಂತ ಬಿಸಿ ಬಿಸಿ ಜಿಲೇಬಿ ಮತ್ತು ಪನೀರ್ ಮಖ್ಖನ್ ಮಸಾಲಾ ಕೊಟ್ರು..ಮೀ ಎಂಜಾಯ್ಡ್..

ಮಳೆಯ ಜತೆ ಚಳಿ ಜ್ವರ ಕೆಮ್ಮು not necessarily in this order....ಹಾಗೂ ಕೆಲವೊಮ್ಮೆ ಕಲುಶಿತ ನೀರಿನಿಂದಾಗಿ ತಲೆದೋರುವ ಹೊಟ್ಟೆಯ ಶೂಲೆಗಳು. ಇವೆಲ್ಲರಿಂದ ತಪ್ಪಿಸಿಕೊಳ್ಳುವುದಕ್ಕಾಗಿ, ಹಾಗೂ  ಶೀತ ಜ್ವರದಿಂದಾಗಿ ನಾಲಿಗೆ ಜಡಗುಟ್ಟಿದ್ದರೆ ಇಗೋ ಇಲ್ಲಿದೆ ದಾಳಿಂಬೆ ಸಿಪ್ಪೆಯ ಕಡಿ


ಬೇಕಾಗುವ ಪದಾರ್ಥಗಳು
ಒಣಗಿದ ದಾಳಿಂಬೆ ಸಿಪ್ಪೆ (8-10 1 inch pieces), ತಾಜಾ ಹೆರೆದ ತೆಂಗಿನಕಾಯಿ, ಎರಡು ಕೆಂಪುಮೆಣಸು, ನಾಲ್ಕು ಕಾಳು ಮೆಣಸು, ಒಂದು ಟೀ ಸ್ಪೂನ್ ಜೀರಿಗೆ, ಹುರಿಯಲು ತುಪ್ಪ, ಹುಣಸೆ ಹುಳಿ, ಒಗ್ಗರಣೆಗೆ ಸಾಸಿವೆ ಕರಿಬೇವು or ಬೆಳ್ಳುಳ್ಳಿ  and last but not the least ಉಪ್ಪು
ತುಪ್ಪದಲ್ಲಿ ಜೀರಿಗೆ ಕಾಳುಮೆಣಸು ಕೆಂಪು ಮೆಣ್ಸು ಹುರಿಯಿರಿ. ಇದಕ್ಕೆ ಸಣ್ಣಕ್ಕೆ ಪೀಸ್ ಮಾಡಿದ ದಾಳಿಂಬೆ ಸಿಪ್ಪೆ ಬೆರೆಸಿ. ಘಂ ಅಂತ ಪರಿಮಳ ಬರುವ ತನಕ ಹುರಿಯಿರಿ. ತಣ್ಣಗಾದ ಮೇಲೆ ಕಾಯಿತುರಿ, ಹುಣಸೆಹಣ್ಣಿನೊಂದಿಗೆ ಉಪ್ಪು ಹಾಕಿ ನೈಸ್ ಆಗಿ ರುಬ್ಬಿ. ಎಷ್ಟು ಬೇಕು ಅಷ್ಟು ನೀರು ಹಾಕಿ ತೆಳ್ಳಗೆ ಮಾಡಿ. ಒಂದೆರಡು ಕುದಿ ಬಂದ ನಂತರ ಸಾಸಿವೆ ಕರಿಬೇವು ಅಥ್ವ ಬೆಳ್ಳುಳ್ಳಿಯ ಒಗ್ಗರಣೆ ಹಾಕಿ. ಬಿಸಿ ಬಿಸಿ ಅನ್ನದೊಂದಿಗೆ very good!!
in the pic: ಬೆಳ್ಳುಳ್ಳಿ ಒಗ್ಗರಣೆ ಹಾಕಿದ ಕಡಿ...

ವಿ.ಸೂ: ನಮ್ಮ ಇತ್ತೀಚಿಗಿನ ಮನೆಗೆ ಬೆಳಕು, ಗಾಳಿ, ಬಿಸಿಲು, ಬಿಸಿಲು ಮಚ್ಚು ಏನು ಇಲ್ಲ. ನಾನು ದಾಳಿಂಬೆ ಸಿಪ್ಪೆಯನ್ನು ಗ್ಯಾಸ್ ಸ್ಟವ್ ಕೆಳಗಡೆ ಇಟ್ಟು ಬಿಡೋದು. ಪೂರ್ತಿ ಅಡುಗೆ ಮುಗಿಸುವಷ್ಟರಲ್ಲಿ ಸಿಪ್ಪೆ ಒಣಗಿರುತ್ತೆ. ಅದನ್ನು ಗಾಳಿಯಾಡದ ಡಬ್ಬಿಯಲ್ಲಿ store ಮಾಡಿಡಿ. ಮೊನ್ನೆ ನಾನು ಮೈಕ್ರೋ ವೇವ್ ನಲ್ಲಿ ಸಿಪ್ಪೆಯನ್ನು ಒಣಗಿಸಿದ್ದು.
ಬಾಯಿ ಹುಣ್ಣು, ಹೊಟ್ಟೆ ನೋವು, ಮಧುಮೇಹಿಗಳಿಗೆ ಉತ್ತಮ ದಾಳಿಂಬೆ.

ಇದೋ ನಿಮಗೆ ಒಂದು ಹಣ್ಣಿನ ಪದ್ಯ..ಈ recipe ಒಂದಿಗೆ free....:-))ಕೊಳ್ಳಿರಿ ಮಧುಗಿರಿ ದಾಳಿಂಬೆ

ನಂಜನಗೂಡಿನ ರಸಬಾಳೆ
ತಂದಿಹೆ ಕೊಡಗಿನ ಕಿತ್ತಳೆ
ಬೀದರ ಜಿಲ್ಲೆಯ ಸೀಬೆಯ ಹಣ್ಣು
ಬೆಂಗಳೂರಿನ ಸೇಬಿನ ಹಣ್ಣು
ಕೊಳ್ಳಿರಿ ಹಿಗ್ಗನು ಹರಿಸುವವು
ಕಲ್ಲುಸಕ್ಕರೆಯ ಮರೆಸುವವು
ಕೊಳ್ಳಿರಿ ಮಧುಗಿರಿ ದಾಳಿಂಬೆ
ಬೆಳವಲ ಬಯಲಿನ ಸಿಹಿಲಿಂಬೆ
ಬೆಳಗಾವಿಯ ಸವಿ ಸಪೋಟ
ದೇವನಹಳ್ಳಿಯ ಚಕ್ಕೋತ
ನಾಲಿಗೆ ಬರವನು ಕಳೆಯುವವು
ದೇಹದ ಬಲವನು ಬೆಳೆಸುವವು
ಗಂಜಾಮ್‌ ಅಂಜೀರ್‌
ತುಮಕೂರ್ ಹಲಸು
ಧಾರವಾಡದ ಆಪೂಸು
ಮಲೆನಾಡಿನ ಅನಾನಸು
ಸವಿಯಿರಿ ಬಗೆಬಗೆ ಹಣ್ಣುಗಳ
ಕನ್ನಡ ನಾಡಿನ ಹಣ್ಣುಗಳ


~ (ಈ ಕವಿತೆ ಬರೆದವರು ಯಾರು??)
ಈ ಪ್ರಶ್ನೆ ಕೇಳಿ ಸುಮಾರು ದಿನದ ಮೇಲೆ ನಿನ್ನೆ ತಾರೀಕು: 25th September 2012 ಗೆ , ಯು.ಎಸ್ ನಲ್ಲಿರುವ ಮಿತ್ರ ಶ್ರೀವತ್ಸ ಜೋಶಿ ಈ ಕವಿತೆಯನ್ನು ಬರೆದವರು : ಕಯ್ಯಾರ ಕಿಞಣ್ಣ ರೈ ಅಂತ ತಿಳಿಸಿದ್ದಾರೆ. ಅವರಿಗೆ ಧನ್ಯವಾದಗಳು.

so ಹಣ್ಣು ತಿಂದು ಖುಶಿಯಾಗಿರಿ. ಎಲ್ಲರಿಗೂ 65 ನೇ ಸ್ವಾತಂತ್ರೋತ್ಸವದ ಶುಭಾಶಯಗಳು...ಪ್ರಣಬ್ ದಾ ಗೆ ಒಂದು goodluck ಹೇಳುವಾ??!!

ಇವತ್ತು ಅಂದರೆ ಆಗಸ್ಟ್ 17, 2012 ರಂದು ವಿಜಯಕರ್ನಾಟಕದಲ್ಲಿ ನನ್ನ ದಾಳಿಂಬೆ ಸಿಪ್ಪೆ ಕಡಿ ಪೋಸ್ಟ್ mention ಆಗಿದೆ. ನನ್ನ ಬ್ಲಾಗ್ ತಮ್ಮ ಬದರಿನಾಥ ಪಲವಳ್ಳಿಯವರು ಇದರ ಬಗ್ಗೆ ನನಗೆ alert ಮಾಡಿದ್ದು. Thanks Badari for noticing..
:-)

August 10, 2012

ಉಡುಪಿ ರುದ್ರಭೂಮಿಯ ಉಸ್ತುವಾರಿ ನೋಡಿಕೊಳ್ಳುವ- ವನಜಕ್ಕ

ಜೀವನೋಪಾಯಕ್ಕೆ ಹೊಸ ದಾರಿಯನ್ನು ಮಹಿಳೆ ಕೈಗೊಂಡರೆ ಅದು ನನ್ನ ಕುತೂಹಲ ಕೆರಳಿಸುತ್ತದೆ. ಭೈಯನವರ ಅಂತ್ಯಸಂಸ್ಕಾರ ಮುಗಿಸಿ ಬಂದ ಕೂಡಲೆ ಶ್ರೀಕಾಂತ ನನಗೆ ಹೇಳಿದ್ದು 'ಮಾಲತಿ ಅಲ್ಲಿ ಸ್ಮಶಾನ ನೋಡಿಕೊಳ್ಳುವವರು ಮಹಿಳೆ' ಅಂತ. ನನಗೆ ಸೋಜಿಗವೆನಿಸಿ ನಿಹಾರಿಕಳಿಗೆ ಈ ಸಂಗತಿಯನ್ನು ರವಾನಿಸಿದೆ
ಗಂಡ ಕುಡಿತದಿಂದ ತೀರಿಕೊಂಡಾಗ ಪುಟ್ಟ ಪುಟ್ಟ ಮೂರು ಮಕ್ಕಳನ್ನು ಕರೆದುಕೊಂದು ವನಜಕ್ಕ ಸ್ಮಶಾನಕ್ಕೆ ತಲುಪಿದರು. ಅಲ್ಲಿ ಒಂದು ಪುಟ್ಟ ಸೂರು ಕಟ್ಟಿ ಜೀವಿಸಲಾರಂಭಿಸಿದರು. ಗಂಡನ ಕಸುಬು ಇದೇ ಆಗಿತ್ತು. ಅವರು ವಿಪರೀತ ಕುಡಿತದಿಂದ ಆಸ್ಪತ್ರೆಗೆ ದಾಖಲಾದಾಗ, ವನಜಕ್ಕ ಸ್ಮಶಾನದಲ್ಲಿನ ಕಾಯಕಗಳನ್ನು ಮಾಡಲು ಉಪಕ್ರಮಿಸಿದರು. ಗಂಡ ಆರೋಗ್ಯದಿಂದಿದ್ದ್ದಾಗ ಅವರೊಡಗೂಡಿ ಕೆಲಸ ಮಾಡಿದ ಅನುಭವ ವನಜಕ್ಕನ ನೆರವಿಗೆ ಬಂತು. ನಿಹಾ ಮತ್ತು ಅವಳ ಸ್ನೇಹಿತೆ ಶೀತಲ ಭಟ್ ತೆಗೆದಿರುವ ಫೋಟೊಗಳು.

ವನಜಕ್ಕ- ಹಲವಾರು ಸಂಘ ಸಂಸ್ಥೆಗಳು ವನಜಕ್ಕನನ್ನು ಸಮ್ಮಾನಿಸಿವೆ


registration, ಹೆಸರು, ವಿಳಾಸ ಇತ್ಯಾದಿ


ದಹನ ಕ್ರಿಯೆಗೆ ಸಜ್ಜಾಗ್ತಾ ಇರೋದು

ಮೊದಲು ಭಾರವಾದ ಕಟ್ಟಿಗೆಗಳನ್ನೆಲ್ಲ ತೊಂದರೆ ಆಗುತ್ತಿತ್ತಂತೆ, ಈಗ drudgery reduction ಉಪಾಯಗಳಿಂದ ಕಟ್ಟಿಗೆಯ ಚಿಕ್ಕ ಚಿಕ್ಕ ತುಂಡುಗಳನ್ನು ಮಾಡಬಹುದಂತೆ

hmm what about poor people?? :-(


ಅವರ ಬಗ್ಗೆ ಪತ್ರಿಕೆಗಳಲ್ಲಿ ಬಂದಿದ್ದು ಸಂತೋಷದಿಂದ ತೋರಿಸಿಕೊಂಡಿದ್ದು





ದಹನಕ್ಕೆ ಎಲ್ಲ ರೆಡಿ


ಕೆಳಗಿನಿಂದ ಬೆಂಕಿ ಹೊತ್ತಿಸುತ್ತಿರುವುದು

ಸ್ಥಿತ ಪ್ರಜ್ಞತೆ ..ಏನೋ ಹಳೆಯ ನೆನಪುಗಳು

ಸಿಲಿಕೊನ್ ಬರ್ನರ್ನಿಂದ ಈಗ ಕೇವಲ ಅರ್ಧ ಗಂಟೆಯಲ್ಲಿ ಒಂದು ದೇಹ ಸುಡಬಹುದಂತೆ. ಏಕಕಾಲಕ್ಕೆ 5 ದೇಹವನ್ನು ಸುಡುವ ಸೌಕರ್ಯ ಇದೆ.

ಆಗಲೆ ಬಂದ ಇನ್ನೊಂದು ಶವ

ಹಳೆಯ ಕತೆಯನ್ನೆಲ್ಲ ನಿಹಾ-ಶೀತಲ್ ಜತೆ ಹಂಚಿಕೊಂಡಿದ್ದು

accident ನಲ್ಲಿ ತೀರಿಕೊಂಡ ಮೂವರು ಚಿಕ್ಕ ಮಕ್ಕಳ ದೇಹ ಸಂಸ್ಕಾರ ಮಾಡಿದ್ದು ಇನ್ನೂ ಅವರಿಗೆ ಕಾಡುತ್ತದೆಯಂತೆ..

Sharing a lighter moment with the family of the deceased

ಇನ್ನೊಂದು ಬಾಡಿ...ಹೇಗಲ್ಲವಾ?? ಭೈಯ್ಯನವರ ಅಂತ್ಯಸಂಸ್ಕಾರಕ್ಕೆ ಬಂದ ಯಾರೋ ಒಬ್ಬರು (ಹತ್ತಿರದ ಸಂಬಂಧಿಕರು) ಫೋನ್ ನಲ್ಲಿ 'ಇನ್ನೂ ಮಣಿಪಾಲದಿಂದ ಬಾಡಿ ಬಂದಿಲ್ಲ ಅಂದಾಗ ನನ್ನ ಜೀವ ಎಲ್ಲ ವಿಲಿವಿಲಿಗುಟ್ಟಿತ್ತು...ಭೈಯ್ಯ ಸಿರ್ಫ್ ಏಕ್ ಬಾಡಿ ಬನ್ ಕೆ ರೆಹ ಗಯೇ..ಅಂತ..ಛೆ! :-(


ಈ ಚಿತ್ರ ಬರಹದ ಶ್ರೇಯ ನಿಹಾರಿಕಾ ಹಾಗೂ ಶೀತಲ್ ಭಟ್ ಅವರಿಗೆ ಸೇರುತ್ತದೆ.' ನಮ್ಮ ಮಾನಸ' ಪತ್ರಿಕೆಯಲ್ಲಿ ಇವರ ಚಂದದ ಬರಹ ಬಂದಿದೆ.

ಮರುದಿನ ವನಜಕ್ಕ ಹೇಳಿದ ಸಮಯಕ್ಕೆ ಶ್ರೀಕಾಂತ, ಅವರ ಭಾವ ಎಲ್ಲ ಹೋದಾಗ ಅಪರ ಕ್ರಿಯೆಗೆ ಬೇಕಾದ ಅಸ್ತಿಗಳನ್ನು ನೀಟಾಗಿ ಜೋಡಿಸಿಟ್ಟಿದ್ದರಂತೆ. ಮನೆಯಿಂದ ಬರುವಾಗ ಒಂದು ಗೋಣಿ ಚೀಲ, ಒಂದು ಮುಚ್ಚಳ ಇದ್ದ ಡಬ್ಬ ಹಾಗೂ ಚಿಕ್ಕ ದಾರ ತರಲು ವನಜಕ್ಕ ಹಿಂದಿನ ದಿನ ವನಜಕ್ಕ ಸೂಚಿಸಿದ್ದರು.
ಸಾವು. ನೋವು, ಗೋಳು ಇವನ್ನೆಲ್ಲ ದಿನ ನಿತ್ಯ ನಿಭಾಯಿಸುವ Vanajakkaನಿಗೊಂದು hats off...ಹೇಳೋಣವೇ?


August 5, 2012

ಬ್ಲಾಗ್ ಲೋಕದಲ್ಲಿ ನನ್ನ 4 ನೇ ವರ್ಷ; ಅಜೋಬಾ ಹೇಳಿದ ಕತೆಗಳ ಸರದಿ

ಬರೆಯಲು ಶುರು ಮಾಡಿ  4 ನೇ ವರ್ಷಕ್ಕೆ ಕಾಲಿಡುತ್ತಾ ಇದ್ದೇನೆ. ಹೀಗೆ ಬರೆಯುತ್ತೇನೆಂದು ಯಾವತ್ತೂ ಅಂದು ಕೊಂಡಿರಲಿಲ್ಲ. ಈಗಾಗಲೇ ಓದುಗರು ನನ್ನ ಬ್ಲಾಗ್ ಗೆ ಭೇಟಿ ನೀಡಿದ್ದ ಸಂಖ್ಯೆ 31,350 ದಾಟಿದೆ . ಯಾವತ್ತಿನ ಹಾಗೆ ಇದರ ಶ್ರೇಯಸ್ಸು thatskannada ದ ಶ್ಯಾಮ್ (ನನ್ನ ಮೊಟ್ಟ ಮೊದಲ ಕನ್ನಡ ಬರಹ ಇವರು ಪ್ರಕಟಿಸಿದ್ದು)  ರಘು ಅಪಾರ(ನನಗೆ ಬ್ಲಾಗ್ ಬರೆಯಲು ಪ್ರೆರೇಪಿಸಿದ್ದಕ್ಕೆ) ,ವಿಜಯಕರ್ನಾಟಕ,  ಅವಧಿ ( ನನ್ನ ಕೆಲವು ಬರಹಗಳನ್ನು ಅವರ e-zine ಗೆ ಹಾಕ್ಕೊಂಡಿದ್ದಕ್ಕೆ,  ಸುಶ್ರುತ ದೊಡ್ಡೇರಿ (g-buzz/google+ isi ದಕ್ಕೆ, ಬದರಿನಾಥ ಪಲವಳ್ಳಿ (ಫೆಸ್ ಬುಕ್) ,ನಿಲುಮೆ, ಕೆಂಡಸಂಪಿಗೆ, ಶ್ರೀದೇವಿ ಕಳಸದ್ ಇವರಿಗೆ ಹೋಗುತ್ತದೆ.
ನನಗಂತೂ ಆಶ್ಚರ್ಯ. average ತೆಗೆದ್ರೆ ವಾರಕ್ಕ್ಕೆ ಒಂದು ಬರಹ ಬರೆದಿದ್ದೇನೆ. Several people have mentioned about the variety of topics..ಕೆಲವರು 'ತುಂಬಾ ಚೆನ್ನಾಗಿ ಬರೀತೀರಿ, ಆದರೆ ಗಡಿಬಿಡಿಯಿಂದ ಬರೆಯುವ ಹಾಗೆ ಕಾಣುತ್ತೆ,  ಅಂದರೆ,there is a scope for elabaroting ಅಂತ ಅನಿಸಲ್ವ ಅಂತ ಒಬ್ಬರು, ನನ್ನ ಇಷ್ಟದ ಕನ್ನಡದ ಖ್ಯಾತ ಬರಹಗಾರರು ಹೀಗೆ  ಬರೆದಿದ್ದರು.....
Dear Malathi,
I read your article on Cinema in Avadhi. It is very interesting. You have written it from your heart. And most importantly there is no political correctness. However I felt there were too many incidents and experiences crammed into one article. There is a lot of content there for you to explore "slowly". 
best,

********
 ಆದರೆ i am a woman in hurry. ತಮ್ಮ. ತಂಗಿ ಅವರ ಮಕ್ಕಳ ಜತೆ ಮಾತು-ಕತೆ, ಫೋನ್, ಇ/ಮೇಲ್, ಚ್ಯಾಟ್, ಶ್ರೀಕಾಂತ ಹಾಗೂ ಮಾಲವಿಕಾ ನಿಹಾರಿಕಾ ರನ್ನು ಗೋಳು ಹೊಯ್ಯುವ ಹೊಸ ಹೊಸ ಉಪಾಯಗಳು, ನನ್ನ ಸ್ಪೆಶಲ್ email friends  (ವೇದಾ, ಜ್ಯೋತಿ, ಸಂಧ್ಯಾ, ನಾಗಮಣಿ ಮತ್ತು ಶ್ರೀವತ್ಸ ಜೋಶಿ) ನಮ್ಮದೊಂದು ಗ್ರೂಪ್ ...ದಿನಾ ಮೈಲ್ ವಿನಿಮಯ ವಾಗುತ್ತಿರುತ್ತೆ, ಇವರ ಜತೆ ಹಾಗೂ ಫೇಸ್ ಬುಕ್ ನಲ್ಲಿ ಪರಿಚಯ ಆದ ಸ್ನೇಹಿತ ಸ್ನೇಹಿತೆಯರ ಜತೆ ಎಸ್ ಎಮ್ ಎಸ್ ಮಾತು, ಮತ್ತು ಹೊರಗಿನ, ಕೆಲವೊಮ್ಮೆ ಆಫಿಸ್ ನ ಕೆಲಸಗಳು, ನನ್ನ ಓದು, ಸಿನಿಮಾ ವೀಕ್ಷಣೆ ಇವೆಲ್ಲರ ಮಧ್ಯೆ ನಾನೇನು explore  ಮಾಡಲಿ?ನನ್ನಂತೆಯೆ ನನ್ನ ಬ್ಲಾಗ್ touch and go. ಬಹಳಷ್ಟು ಜನರು ಬ್ಲಾಗ್ ನಲ್ಲಿ ಕಮೆಂಟ್ ಹಾಕದೆ ಮೈಲ್ ಗೆ ಪತ್ರ ಬರೆಯುತ್ತಾರೆ. ಹಲವಾರು ಬಾರಿ 'ಯಾಕೆ ಆ ಮೈಲ್ ಗಳನ್ನೆಲ್ಲ ಒಟ್ಟು ಮಾಡಿ ಅವರ ಹೆಸರನ್ನು ಹಾಕದೆ ಬ್ಲಾಗ್ ನಲ್ಲಿ ಹಾಕಬಾರದು ಅನ್ನಿಸಿದಿದ್ದೆ. ಮತ್ತೆ 'ಅಲ್ಲ ಎಲ್ಲರೂ ಓದಬೇಕೆಂದಿದ್ದರೆ ಅವರು ಪೋಸ್ಟ್ ಕೆಳಗಡೆ ಕಮೆಂಟ್ ಹಾಕುತ್ತಿದ್ದರು, may be they want to share only with me' ಅಂತ ಎನ್ನಿಸಿ. i thought i will respect their views'..


ನನ್ನ ಟ್ರಾಕರ್ ಮುಂಬೈನಿಂದ, ದೆಹಲಿಯಿಂದ, ಉಡುಪಿಯಿಂದ, ಚೆನ್ನೈನಿಂದ ಮತ್ತು ಒಬ್ಬರು ಲಂಡನ್ ನಿಂದ systematic ಆಗಿ ನನ್ನ ಮೊದಲ ಪೋಸ್ಟ್ ನಿಂದ ಓದುವುದದನ್ನು ಕಂಡಿದ್ದೇನೆ. ಕೊನೆಗೆ ಲಂಡನ್ ಹಾಗೂ ಮುಂಬೈನವರು ಚೆಂದದ ಮೈಲ್ ಹಾಕಿ ಪ್ರತಿಕ್ರಿಯಿಸಿದಾರೆ. i am so happy...

was i right ಪೋಸ್ಟ್ ಅತೀ ಹೆಚ್ಚಿನ ಪ್ರತಿಕ್ರಿಯೆ ಬಂದಿತ್ತು ಮೈಲ್ ನಲ್ಲಿ. ಅವನ್ನು ಖಂಡಿತ ಒಂದು ಪೋಸ್ಟ್ ರೂಪದಲ್ಲಿ ಹಾಕುವ ಅಂದುಕೊಂಡಿದ್ದೆ, ಹೆಚ್ಚಿನವರು ಕಮೆಂಟ್ ದೊಡ್ಡದಿರುತ್ತೆ ಅಂತ ಮೈಲ್ ಕಳುಹಿಸಿದ್ದರು..ಆದರೆ ನಾನು ತಂಗಿ ಜತೆ ಮಾತನಾಡುತ್ತ ಯಾವುದೇ ಲಹರಿಯಲ್ಲಿ ಸ್ಪ್ಯಾಂ ಸೆಲೆಕ್ಟ್ ಮಾಡಿ ಡೀಲೀಟ್ ಮಾಡುವುದನ್ನು ಬಿಟ್ಟು ನನ್ನ ಪೂರ್ತಿ ಇನ್ ಬಾಕ್ಸ್ ಕ್ಲೀನ್ ಮಾಡಿಬಿಟ್ಟಿದ್ದು ಅಲ್ಲದೇ, ಟ್ರಾಶ್ ನೂ ಕ್ಲೀನ್ ಮಾಡಿ ಬಿಟ್ಟೇ....:-)

ನನ್ನ ಓದುಗ ತಮ್ಮನ ಒಂದು ತಕರಾರಿದೆ....what yaar your blog is only about you, you and you..ಅವನಿಗೆ ಏನು ಉತ್ತರ ಹೇಳಬೇಕೆಂದು ನನಗೆ ತೋಚೇ ಇಲ್ಲ...

ನನ್ನ ಮಿತ್ರ ಖ್ಯಾತ ಬರಹಗಾರರು ನನ್ನ ಪೋಸ್ಟ್ ಒಂದಕ್ಕೆ ಬಂದ ಕಮೆಂಟ್ ಓದಿ ಒಂದು ಎಸ್ ಎಮ್ ಎಸ್ ಹೀಗೆ ಕಳುಹಿಸಿದ್ದರು : Malathi, I just have fans but you have devotees..ಅಂತ.:-) ಇದನ್ನು ಓದಿ ನಾನು ಎರಡು ದಿನ ಗಾಳಿಯಲ್ಲಿ ತೇಲಾಡಿದ್ದು ನಿಜ.

ಒಂದು ಮೋಜಿನ ವಿಷಯ ನಿಮ್ಮ ಜತೆ ಶೇರ್‍ ಮಾಡ್ಲೇಬೇಕು:
ನಾನು ಶ್ರೀಕಾಂತ 'ದ ಪ್ಯಾಕ್'  ಸಿನಿಮಾ ನೋಡಲು ಯವನಿಕಾ ಗೆ ಹೋಗಿದ್ವಿ. ನಮ್ಮ ಹಿಂಬದಿ ಕೂತ ಮಹಿಳೆ ನನ್ನ ಬೆನ್ನಿಗೆ ಹೊಡೆದು' ಮಾಲತಿ ಶೆಣೈ' ಅಲ್ವಾ ಅಂತ ಕೇಳಿದರು. ನಾನು ತಿರುಗಿ ಅವರನ್ನು ನೋಡಿದೆ. ನನಗೆ ಅವರನ್ನೆಲ್ಲೂ ನೋಡಿದ ನೆನಪು ಇರಲಿಲ್ಲ..ಅವರೆ ಮುಂದುವರೆದು -ಇವರು ಶ್ರೀಕಾಂತ..ಮತ್ತೆ ಎಲ್ಲಿ ಮಾಲವಿಕಾ ನಿಹಾರಿಕಾ ಅಂತ ಕೂಡ ಸೇರಿಸಿದರು. ನಾನು ಅವರನ್ನೆ ನೋಡುತ್ತಿದ್ದೆ, ಮತ್ತು ಅವರೇ ನಕ್ಕು ನನ್ನ ಹೆಸರು...***** ನಾನು *****ಬ್ಯಾಂಕ್ ಎಂಪ್ಲಾಯಿ, ಆಫಿಸ್ ಗೆ ಹೋದ ಕೂಡಲೇ ನನ್ನ ಮೊದಲ ಕೆಲಸ ನಿಮ್ಮ ಬ್ಲಾಗ್ ಓದುವುದು..ಟೀ ಬ್ರೇಕ್, ಆಫಿಸ್ ನಿಂದ ಮನೆಗೆ ಹೋಗುವ ಮುನ್ನ ಕೂಡ ಓದುತ್ತೇನೆ, ಚಿಕ್ಕದಾಗಿ ಚೊಕ್ಕದಾಗಿ ಇರುತ್ತೆ, ಓದಕ್ಕೆ ಚೆನ್ನಾಗಿರುತ್ತೆ, ಮತ್ತು ನಿಮ್ಮ ತರಹ ನನಗೂ ವಸುಧೇಂದ್ರರ ಬರಹಗಳು ಇಷ್ಟ' .ನಿಮ್ಮ ಫಾಮಿಲಿ ನನ್ನ ಫ್ಯಾಮಿಲಿ ತರಹ ನೇ ಆಗೋಗಿದೆ'...ಮತ್ತು ಅವರ ಮಗ ಸಾಫ್ಟ್ವೇರ್‍ ಇಂಜಿನಿಯರ್ ಅವರನ್ನೂ ಪರಿಚಯಮಾಡಿಸಿದರು..ನನಗಂತೂ ಸಿಕ್ಕಾಪಟ್ಟೆ ಮುಜುಗರ..ಅದರ ಮಧ್ಯೆ ನಮ್ಮ ರಾಯರ 'malathi shenoy -the famous blogger' ಅನ್ನುವ ಕೀಟಲೆ ಬೇರೆ...

But major chunk of my thanks goes to my family Srikanth- akka- Nimpu who provide me stuffs for my blog. ಮತ್ತೆ ಈಗ ಎಲ್ಲಾದರೂ ಹೊರಗೆ ಹೊರಟರೆ ಶ್ರೀಕಾಂತ, 'ಕ್ಯಾಮರಾ ತೆಗೆದುಕೋ , ನಿನ್ನ ಬ್ಲಾಗ್ ಗೆ ಏನಾದರೂ ಮೆಟಿರಿಯಲ್ ಸಿಗಬಹುದು ಎನ್ನುತ್ತಾರೆ..:-))

ಸರಿ ಸಾಕಷ್ಟು ಆಯಿತು ಅನ್ನಿಸುತ್ತೆ ನನ್ನ ಬಗ್ಗೆ ನಾನೆ ಹೇಳಿಕೊಳ್ಳುವುದು.....

ಈಗ ಮುಂದಿನ ಪೋಸ್ಟ್ ಓದಿ....

ನಾನಿ ಹೇಳಿದ ಕತೆ ಆದ ಮೇಲೆ ಈಗ ಅಜ್ಜ ಹೇಳಿದ ಕತೆಯ ಸರದಿ.(ಇದನ್ನು ಮೆಚ್ಚಿ ಹಲವಾರು ಮೈಲ್ ಗಳು ಬಂದಿವೆ)

ನಮ್ಮ ಅಜ್ಜನಿಗೆ ದೈವದತ್ತವಾದ baritone ದನಿ ಇತ್ತು. ಮೈಕ್ ಬೇಕಿರಲಿಲ್ಲ. ಮುಂಬೈನ ಭಿವಂಡಿಯ ಮನೆಯಲ್ಲಿ ಪ್ರತಿ ಬುಧವಾರ ಅಜ್ಜ ಮರಾಠಿ ಭಾಗವತ ಓದುತ್ತಿದ್ದರು. ಬಿಲ್ಡಿಂಗ್ ನ ಹೆಂಗಸರು  ಅಜ್ಜನ ವಾಚನ ಕೇಳಲು ಬರುತ್ತಿದ್ದರು. ನಾನಂತು ಬುಧವಾರ ಯಾವಾಗ ಬರುತ್ತದೆ ಎಂದು ಕಾಯುತ್ತಿದೆ. ಯಾಕೆಂದರೆ ಆ ದಿನ ಅಮ್ಮ ಮಧ್ಯಾಹ್ನ ನಾನಿಯ ಮನೆಗೆ ಬರುತ್ತಿದ್ದರು. ಸಂಜೆಗೆ ಚನಾ ಉಸ್ಲಿ ಮಾಡುತ್ತಿದ್ದಳು. ಹಿಂಗಿನ ಘ್ಹಂ ಪರಿಮಳ,,ಅದಲ್ಲದೆ ಹದಿನೈದು ದಿನಕೊಮ್ಮೆ ಅಮ್ಮ ಬಂದಾಗ ಕೆಂಡದ ಮೇಲೆ ಬದನೆಕಾಯಿ ಸುಟ್ಟು ಅದರ ಬಜ್ಜಿ. ರಾತ್ರಿ ನಾನು ಬಿಸಿ ಅನ್ನಕ್ಕೆ ಬಜ್ಜಿ ಮತ್ತು ಹಾಲು ಬೆರೆಸಿ ಊಟ ಮಾಡುತ್ತಿದ್ದೆ. ಪ್ರತಿದಿನಕ್ಕಿಂತ ಆ ದಿನ ರಾತ್ರಿ ಸ್ವಲ್ಪ ಜಾಸ್ತಿ ನೆ ಊಟ ಮಾಡಿ ಸುಮಾರು 8 ವರ್ಷಗಳಾಗುವ ತನಕ ನಾನು ಇವತ್ತು ನನಗೆ ಎರಡು ಹೊಟ್ಟೆ ಬಂದಿದೆ ಅದಕ್ಕೆ ಜಾಸ್ತಿ ಊಟ ಮಾಡುತ್ತೇನೆ ಅನ್ನುತ್ತಿದ್ದೆ.

ಸರಿ ಅಜ್ಜ ತಮ್ಮ ಗಡಸು ಕಂಠದಿಂದ ಭಾಗವತ, ಅಥವಾ ಕೃಷ್ಣನ ಬಾಲಲೀಲೆಗಳ ಕತೆಗಳನ್ನು ಹೇಳುವಾಗ ಅಲ್ಲಿ ಸೇರಿದ ಹೆಂಗಸರೆಲ್ಲ ತನ್ಮಯರಾಗಿ ಕೇಳುತ್ತಿದ್ದರು. ಅದರಲ್ಲಿ ತ್ರಾಜೆಡಿ ವಿಷಯಗಳೆಲ್ಲ ಬಂದಾಗ ಅಜ್ಜ ನ ದನಿಯ ಆರ್ದ್ರತೆಗೆ ಹೆಂಗಸರೆಲ್ಲ ಅಳುತ್ತ, ಸುರುಕ್-ಬುರುಕ್ ಅಂತ ಸಿಂಬಳ ತೆಗೆದು ಸೆರೆಗಿಗೆ ಒರೆಸುದು, ಅಜ್ಜ ನ ಕತಾ ವಾಚನ ಮುಗಿದ ಮೇಲೆ ಅಮ್ಮ ದೊನ್ನೆಯಲ್ಲಿ ಹಾಕಿ ಕೊಟ್ಟ ಉಸ್ಲಿ , ಕೆಲವರು ಅದನ್ನು ಅಲ್ಲೆ ತಿಂದು, ಕೆಲವರು ಸೆರಗಿನಲ್ಲಿ ಮುಚ್ಚಿ ಅದನ್ನು ಮನೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆ ಮೇಲೆ 'ಜಾತೆ ಗ ಜಾನುಬಾಯಿ ಅಥವ ರುಕ್ಮಾಂಬಾಯಿ (ನನ್ನ ನಾನಿಗೆ ಎರಡು ಹೆಸರು ಜಾಹ್ನವಿ ಮತ್ತು ರುಕ್ಮಿಣಿದೇವಿ) ನನ್ನ ಅಜ್ಜ ಅವರನ್ನು ಜಾನಿ ಅಂತ ಕರೆದರೆ ಬಿಲ್ಡಿಂಗ್ ನ ಕೆಲವರು ಜಾನಿಬಾಯಿ, ಕೊಂಕಣಿಯವರೆಲ್ಲ ಜಾನೆಕಾ ಅಂತ, ನನ್ನ ಅಪ್ಪನ ಅಮ್ಮ (ಅಜ್ಜಿ) ಅವರನ್ನು ರುಕ್ಮಾಂಬಾಯಿ) ಎಂದು ಕರೆಯುತ್ತಿದ್ದರು.
ನನಗೆ ಸುಮಾರು ದೊಡ್ಡವಳಾಗುವತನಕ ಅಜ್ಜ ಕತೆ ಹೇಳಿದಾರೆ. ಕೆಲವು ರಾಮಾಯಾಣ ಮಹಾಭಾರತದ್ದದ್ದಾದರೆ ಕೆಲವು ಅವರದ್ದೆ ಕಲ್ಪಿತ  ಕತೆಗಳು.

ನನಗಿಷ್ಟವಾಗಿ ನಾನು ಹಲವಾರು ಬಾರಿ ಫರ್ಮಾಯಿಶ್ ಮಾಡಿ ಕೇಳಿದ  ಕತೆಗಳು:

ಕತೆ-1

ಅಕ್ಬರ್ ನ ಆಸ್ಥಾನದಲ್ಲಿ ಮಹಾನ್ ಗಾಯಕರು ತಾನ್ಸೇನ್ ಕೂಡ ಒಬ್ಬರು. ಒಂದು ಸಲ ಬಾದಶಾಹ್ ಅಕ್ಬರ್ ತನ್ನ ಮೊಮ್ಮ್ಕಕ್ಕಳೊಂದಿಗೆ ಆಟದಲ್ಲಿ ತೊಡಗಿದ್ದರಂತೆ. ಆಗ ತಾನ್ಸೇನ್ ಘಾಯಿ ಘಾಯಿ ಆಗಿ ಬಂದು ಏನೋ ವಿಷಯ ಹೇಳಿದರಂತೆ. ಅದಕ್ಕೆ ಅಕ್ಬರ್ ಅವರನ್ನು ಗದರಿಸಿ, 'ತಾನ್ಸೇನ್ ಹೇಳಿ ಕೇಳಿ ನೀವು ನನ್ನ ಆಸ್ಥಾನದ ಮಾಹಾನ್ ಗಾಯಕರು, ಹೇಳುವುದನ್ನು ಚಂದವಾಗಿ ರಾಗವಾಗಿ ಅರುಹಬೇಕು ತಿಳಿಯಿತೆ ಎಂದು ಹೇಳಿದರಂತೆ.
ಆಗ ತಾನ್ ಸೇನ್, ರಾಯರೆssss ಅಂತ ರಾಗವಾಗಿ ಸುಮ್ಮನಾದರಂತೆ
ಅಕ್ಬರ್ (ಅ) " ಹೇಳು ಸಮ್ರಾಟ್'
ತಾನ್ಸೇನ್ (ತಾ)' ರಾಯರೇssss ನಿಮ್ಮ
ಅ: ನಮ್ಮ?? ಏನು ನಮ್ಮ, ಹೇಳಿ
ತಾ: ರಾಯರೇsss ನಿಮ್ಮ ಕುದುರೆ...
ಅ: ನನ್ನ ಕುದುರೆ...ಹೌದು ದೇಶ ವಿದೇಶದಿಂದ ತಂದಿರೋದು...
ತಾ: ರಾಯರೇssss ನಿಮ್ಮ ಕುದುರೆ ಲಾಯಕೆ....
ಅ: ಇದೇನಿದು ತಾನ್ಸೇನ್? ಇದೊಳ್ಳೆ ಪ್ರಶ್ನೆ...ನನ್ನ ಕುದುರೆ ಲಾಯಕೆ?? ಅವು ಅರಬ್ಬಿ ಕುದುರೆಗಳು, ಗಾಳಿಗಿಂತ ವೇಗವಾಗಿ ಓಡುವ ಕುದುರೆ ಇಡೀ ಜಗತ್ತಿನ ನಾಲ್ಕೂ ದಿಕ್ಕಿನಲ್ಲಿ ಸಿಗಿವುದಿಲ್ಲ, ಅಂತಹ ಕುದುರೆಗಳಿಗೆ ನೀನು ಲಾಯಕೆ ಅಂತೆ ಕೇಳುವುದೆ?
ತಾ: ರಾಯರೇ ನಿಮ್ಮsssss ಕುದುರೆ ಲಾಯಕೆ ಬೆಂಕಿ
ಅ: ಏನು ಏನು? ಪುನ: ಹೇಳು..
ತಾ: ರಾಯರೇsss ನಿಮ್ಮ ssss ಕುದುರೆ ಲಾಯಕೆ ಬೆಂಕಿ ತಾಗಿದೆ'
ಅಕ್ಬರ್ ಆಳುಗಳನ್ನು ಬೇಗ ಬೇಗ ಕುದುರೆ ಲಾಯಕೆ ಕಳಿಸುವಷ್ಟರಲ್ಲಿ ಕುದುರೆಲಾಯಕ್ಕೆ ಬೆಂಕಿ ತಾಗಿ ಕರಕಲಾಗಿತ್ತು...
:-)

ಕತೆ-2

ಇದು ಅಕ್ಬರ್na ಆಸ್ಥಾನದಲ್ಲಿದ್ದ  ಬೀರಬಲ್ಲನ ಕತೆ ..ವಿಥ್ ಕೊಂಕಣಿ ಟ್ವಿಸ್ಟ್
ಆಸ್ಥಾನದ ಪಂಡಿತ ಮಹಾಶಯರು ಒಂದು ಸಲ ಅಕ್ಬರ್ ಬಾದಶಾಹರು ಬೀರಬಲ್ಲನಿಗೆ ಹೇಳಿ ಕಳುಹಿಸಿದ್ದಾರೆಂದು, ಹೇಳಲು ಬಂದಿದ್ದರು. ಪಂಡಿತರು ಅವರ ಮನೆ ತಲುಪಿದಾಗ ಬೀರಬಲ್ಲ ಸ್ನಾನ ಮಾಡುತ್ತಿದ್ದರು
"ಏನಿದು ಈ ಹೊತ್ತಿನಲ್ಲಿ ಸ್ನಾನ?'
ಏನಿಲ್ಲ ಮನುಷ್ಯರ ಹೊಲಸು (ಮಲ) ತುಳಿದಿದ್ದೆ, ಅದಕ್ಕೆ...
ಬೀರಬಲ್ಲನ ಮೇಲೆ ಹೊಟ್ಟೆಕಿಚ್ಚು ಪಡುತ್ತಿದ್ದ ಪಂಡಿತರು, 'ಛೆ, ಮಲ ತುಳಿದರೆ ಅಷ್ಟು ಭಾಗ ಕಾಲು ಕತ್ತರಿಸಬೇಕು' ಅಂತ ಸಲಹೆ ಕೊಟ್ಟು,ಗಹಗಹಿಸಿ ನಕ್ಕು,  ಅಕ್ಬರ್ ಮಹಾಶಯರ ನಿರೋಪವನ್ನು ಅವರು ಅಲ್ಲಿಂದ ನಿರ್ಗಮಿಸಿದರು
ಬೀರಬಲ್ಲನಿಗೆ ಸಿಟ್ಟು ಬಂದು ತಡಿ ಮಾಡುತ್ತೇನೆ ಈ ಪಂಡಿತನಿಗೆ ಅಂತ ಮನಸ್ಸಲ್ಲೆ ಲೆಕ್ಕ ಹಾಕಿದನು. ಪಂಡಿತರಿಗೆ ಕೆಸುವಿನ ಎಲೆ ಪ್ತತ್ರೋಡೆ ಇಷ್ಟ ಅಂತ ಈಡಿ ರಾಜ್ಯಕ್ಕೆ ಗೊತ್ತಿರುವ ವಿಷಯ. ಕೆಸುವಿನ ಎಲೆ ಅಂದ ಕೂಡಲೆ ಪಂಡಿತರ ಬಾಯಲ್ಲಿ ನೀರುರೂವುದು.
ಸರಿ ಮರುದಿನ ಬೀರಬಲ್ಲ ಮನೆಯ ಹಿಂಬದಿ ಜಾಗದಲ್ಲಿ ದೊಡ್ಡ ಗುಂಡಿ ತೋಡಿ, ಆ ಕೇರಿಯವರಿಗೆಲ್ಲ ಬಹಿರ್ದೆಸೆಗೆ ಎಲ್ಲರೂ ಮನೆಯ ಹಿಂಬದಿಯ ಗುಂಡಿಯನ್ನು ಬಳಸಬೇಕು ಎಂದು ಫರ್ಮಾನು ಹೊರಡಿಸಿದನು.ಎಲ್ಲರೂ ಖುಶಿಯಿಂದ ಅವರ ಗುಂಡಿಯನ್ನು ಬಳಸಿದರು. ಹದಿನೈದು ದಿನದಲ್ಲಿ ಗುಂಡಿ ತುಂಬಿತು. ಆಳುಗಳನ್ನು ಕರೆತಂದು ಬೀರಬಲ್ಲ ಆ ಗುಂಡಿಯ ಮೇಲೆ ತೆಳುವಾದ ಮಣ್ಣನ್ನು ಹರಡಿಸಿದ. ಗುಂಡಿಯ ಮಧ್ಯದಲ್ಲಿ ಕೆಲವು ಕೆಸುವಿನ ಎಲೆಯ  ಗೆಡ್ಡೆಗಳನ್ನು ಬಿಸಾಕಿದ. ಕೆಲವೇ ದಿನಗಲಲ್ಲೇ ಕಸುವಿನ ಎಲೆಗಳು ಆದವು, ಒಳ್ಲೆ ಗೊಬ್ಬರದಿಂದ ರಾಕ್ಷಸ ಗಾತ್ರದ ಕೆಸುವಿನ ಎಲೆಗಳು ಹುಟ್ಟಿಕೊಂಡವು. ಎಲ್ಲರ ಬಾಯಲ್ಲೂ ಈ ಕೆಸುವಿನ ಎಲೆಯ ಮಾತೇ...ಈ ವಿಷಯ ಪಂಡಿತರ ಕಿವಿಗೆ ಬೀಳಲು ಹೆಚ್ಚು ಹೊತ್ತು ಆಗಲಿಲ್ಲ. ಎಲಾ ಕಳ್ಳ ಬೀರಬಲ್ಲ ನನಗೆ ಹೇಳಲೇ ಇಲ್ಲ. ಇವತ್ತು ಹೇಗಾದರಾಗಲೀ ಏನಾದರು ನೆವ ಮಾಡಿ ಎಲೆಗಳನ್ನು ಪಡೆಯಬೇಕು. ಆಸ್ಥಾನದ ಕೆಲ್ಸಕ್ಕೆ ಹೋಗುವ ಮುನ್ನ ಎಲೆಗಳನ್ನು ತಂದು ಕೊಟ್ಟರೆ, ಹೆಂಡತಿ ಮಧ್ಯಾಹ್ನಕ್ಕೆ ಪತ್ರೋಡೆ ಮಾಡಿಡುತ್ತಾಳೆ ಅಂತ ಕನಸು ಕಾಣುತ್ತ ಬೀರಬಲ್ಲನ ಮನೆ ತಲುಪಿದರು ಪಂಡಿತ ಮಹಾಶಯರು.
ಬೀರಬಲ್ಲನ ಮನೆಯಲ್ಲು ಬೀರಬಲ್ಲ ಸ್ನಾನ ಮುಗಿಸಿ ಪೂಜೆಗೆ ಕುಳಿತಿದ್ದರು. ಅವನು ಪಂಡಿತರಗೆ 'ನೀವೆ ಎಷ್ಟು ಬೇಕೋ ಅಷ್ಟು ಎಲೆಗಳನ್ನು ಕೊಯ್ದುಕೊಳ್ಳಿ ಅಂದನು. ಮನೆಹಿಂದುಗಡೆ ಹೋಗಿ ನೋಡಿದರೆ ದೊಡ್ಡ ಗಾತ್ರದ ಕೆಸುವಿನ ಎಲೆಗಳು ಪಂಡಿತರನ್ನು ಅಣಕಿಸುತ್ತಿದ್ದವು. ಬೇಗೆ ಬೇಗನೆ ಮುಂಡನ್ನು ಮೇಲಕ್ಕೆ ಕಟ್ಟಿ ನಿಧಾನಕ್ಕೆ ಗುಂಡಿಯಲ್ಲಿ ಇಳಿದರೆ, ಪಂಡಿತರ ಸ್ವಲ್ಪ ದೊಡ್ಡದೇ ಎನ್ನುವ ಗಾತ್ರ ಪೂರ್ತಿ ಮಲದಲ್ಲಿ ಮುಳುಗಿ ಹೋಯಿತು. ಅಲ್ಲಿಂದಲೆ ಪಂಡಿತರು ಬೊಬ್ಬೆ ಹೊಡೆಯಲು ಶುರು ಮಾಡಿದರೆ, ಬೀರಬಲ್ಲ ಮಾತ್ರ ಕೂಲ್ ಆಗಿ 'ನಿಮ್ಮನ್ನು ಎಲ್ಲಿಯವರೆಗೆ ಕತ್ತರಿಸಬೇಕು ಈಗ, ಪಂಡಿತರೇ'? ಅಂತ ಕೇಳಿದ....

ನನ್ನ ಓದುಗ ಮಿತ್ರರಿಗೆಲ್ಲ ಹೃತ್ಪೂರ್ವಕ ಧನ್ಯವಾದಗಳು ಮತ್ತು Happy Friendship Day...

True friendship is like sound health; the value of it is seldom known until it is lost.” Charles Caleb Colton

:-)