June 17, 2012

ಬಾಳೆ ಮೋತೆ ಚಟ್ನಿ

ನಮ್ಮ ತೋಟದಲ್ಲಿನ ಒಂದು ಬಾಳೆಗಿಡ


ಒಂದು ಬಾಳೆ ಮೋತೆ, , ಕಾಯಿ ತುರಿ, ಕೆಂಪು ಮೆಣಸು, ಸಾಸಿವೆ, ಜೀರಿಗೆ, ಹುಣಸೆ, ಉಪ್ಪು , ಬೆಲ್ಲ
ಮಧ್ಯದಲ್ಲಿರುವ ಹೂಗಳನ್ನೂ ಚಟ್ನಿಗೆ ಬೆರೆಸಬಹುದು

ಮೊದಲಿಗೆ ಬಾಳೆ ಮೋತೆಯ ಹೊರಗಿನ ಕವಚಗಳನ್ನೆಲ್ಲ ತೆಗೆಯುತ್ತ ಹೋಗಿ ಕೊನೆಯಲ್ಲಿ ಹೀಗಿರುವ (ಚಿತ್ರದಲ್ಲಿದ್ದಂತೆ) 
ಸಿಗುತ್ತದೆ.


ಅದನ್ನು ಸಣ್ಣಕ್ಕೆ ಕತ್ತರಿಸಿ ನೀರಿನಲ್ಲಿ ಹಾಕಿಡಿ.

ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಜೀರಿಗೆ ಸಾಸಿವೆ ಹಾಗಿ ಸಿಡಿಸಿ. ಕೆಂಪು ಮೆಣಸಿನಕಾಯಿ ಹಾಕಿ, ಆಮೇಲೆ ನೀರಿನಿಂದ ಹಿಂಡಿತೆಗೆದ ಬಾಳೆಮೋತೆ ಚೂರುಗಳನ್ನು ಬೆರೆಸಿ, ಕೊನೆಯಲ್ಲಿ ಕಾಯಿ ತುರಿ ಬೆರೆಸಿ. ಸ್ವಲ್ಪ ಬಿಸಿಯಾದ ಮೇಲೆ ಕೆಳಗಿಡಿ. ತಣ್ಣಗಾದ ಮೇಲೆ ಇದಕ್ಕೆ ಹುಣಸೆ ಹಣ್ಣು, ಉಪ್ಪು, ಬೆಲ್ಲ ಹಾki ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಚಟ್ನಿ ರೆಡಿ.


ಕೊತ್ತಂಬರಿ ಸೊಪ್ಪು ,ಫೋಟೊ ತೆಗೆಯುವಾಗ ಸುಮ್ಮನೆ contrast ಇರಲಿ ಅಂತ ಇಟ್ಟಿದ್ದು..:-)
(ಬಾಳೆ ಮೂತಿ/ Inflorescence /banana heart  ಸಹ ಅನ್ನುತ್ತಾರೆ..)
ಬಾಳೆಗಿಡ ಒಂದು ತರಹ ಕಲ್ಪವೃಕ್ಷ ವೇ (though Vruksha means tree) ಅದರ ಎಲ್ಲ ಭಾಗಗಳು ಉಪಯೋಗಕ್ಕೆ ಬರುವಂತಹುದು. ಎಲೆ, ದಿಂಡು, ನಾರು, ಹೂ, ಹಣ್ಣು etc...

ಫೊಟೊ : ನಿಹಾರಿಕಾ ಶೆಣೈ

3 comments:

  1. ಒಳ್ಳೆಯ ರೆಸಿಪಿ ಕೊಟ್ಟಿದ್ದೀರಿ ಮಾಲತಿಯವರೆ,
    ಇಂದೇ ಪ್ರಯತ್ನಿಸಿ ನಿಮಗೆ ಫೀಡ್ ಬ್ಯಾಕ್ ಕೊಡುವೆ.

    ReplyDelete
  2. ಅಕ್ಕಾ,
    ಮಳೆಗಾಲದ ಆರಂಭಕ್ಕೆ ಬಾಲೆಮೂತಿ ಚಟ್ನಿ ಚನ್ನಾಗೇ ಇರುತ್ತೆ ಬಿಡಿ, ಹಳ್ಳಿಯಲ್ಲಿ ಇದ್ದಿದ್ದರೆ ಇವೆಲ್ಲಾ ಸ್ವಾಹ ಮಾಡ್ತಾ ಇದ್ದೆವು.............

    ಪಾಪ, ಬದರಿ ಸರ್ ಈ ರೆಸಿಪಿ ಪ್ರಯಣ ಮಾಡಿ ಸುದ್ಧಿಯೇ ಇಲ್ಲ!!!!!!!
    :) :) :)

    ReplyDelete
  3. praveen ella kaDe sigutte. nan tangige america dalli siguttante...
    Badari Bhaiyya ge ondu :-)
    malathi S

    ReplyDelete