April 27, 2012

ಹಮೆ ಜೀನೆ ದೋ ನಮಗೂ ಹಕ್ಕಿದೆ

ಚಿಕ್ಕಂದಿನಲ್ಲಿ ಮುಂಬೈನಲ್ಲಿದ್ದಾಗ, ಇವರನ್ನು ನೋಡಿ ಹೆದರುತ್ತಿದ್ದೆ. ಮನೆಯಲ್ಲೂ, ನಾವು ದೊಡ್ಡವರ ಮಾತು ಕೇಳಿಸಕೊಳ್ಳದಿದ್ದರೆ, ನೋಡು ನಿಮಗೆ ’ಹಿಜಡಾ’ ಗಳಿಗೆ ಕೊಟ್ಟು ಬಿಡುತ್ತೇವೆ ಅಂತ ಹೆದರಿಸುತ್ತಿದ್ದರು. ಹಿಜಡಾ ಗಳು ಗುಂಪಿನಲ್ಲಿ ಬರುತ್ತಿದ್ದರು. ಬಿಲ್ಡಿಂಗ್ ನ ಫ್ಲ್ಯಾಟ್ ನ ಬಾಲ್ಕನಿಯಿಂದ ಪುಟ್ಟ ಮಕ್ಕಳ ಲಂಗೋಟಿ ಒಣಗುವುದು ಕಂಡರೆ ಸಾಕು ಎಲ್ಲರೂ ಗಟ್ಟಿ ಚಪ್ಪಾಳೆ ಸದ್ದು ಮಾಡುತ್ತ ಆ ಮನೆಯವರಿಗೆ ಬೆದರಿಸುತ್ತಿದ್ದರು. ದುಡ್ಡು ಕೊಡಿ ಅಥವಾ ನಾವು ನೀವಿಲ್ಲದಿದ್ದಾಗ ಬಂದು ನಿಮ್ಮ ಮಗುವನ್ನು ಎತ್ತಿಕೊಂಡು ಹೋಗುತ್ತೇವೆ ಎಂದು. ಹಣ ಕೊಟ್ಟಿದ್ದು ಕಡಿಮೆಯಾದರೆ ಬೈಗಳನ್ನು ಹಾಕುತ್ತ ಹೊರಟುಬಿಡುತ್ತಿದ್ದರು.
ಆದರೆ ಕೆಲವು ಸಮುದಾಯದವರು ಗಂಡು ಮಗು ಹುಟ್ಟಿದ ಸಂದರ್ಭ, ಅಥವ ಮದುವೆ ಯಲ್ಲಿ ಅವರನ್ನು ಕರೆಯಿಸಿ ಅವರಿಂದ ಹಾಡು ನೃತ್ಯಗಳನ್ನು ಮಾಡಿಸಿ, ದುಡ್ಡು ಕೊಟ್ಟು ಕಳುಹಿಸ್ತ್ತಾರೆ. ಇದರಿಂದ ಆ ಸಮುದಾಯದವರಿಗೆ ಶುಭವಾಗುತ್ತದೆ ಎಂಬ ನಂಬಿಕೆ.
ತಿಳುವಳಿಕೆ ಬಂದ ಮೇಲೆ ಅವರ ಬಗ್ಗೆ ಅಷ್ಟು ಭೀತಿಯಿರಲಿಲ್ಲ. ರಿಕ್ಷಾದಲ್ಲಿ ಹೋಗುವಾಗ ಸಿಗ್ನಲ್ ನಲ್ಲಿ ನಿಂತು ಹಣಕ್ಕಾಗಿ ಪೀಡಿಸುವುದನ್ನು ನೋಡುತ್ತಿದೆ. ಹೆಂಗಸರಿಗೆ ಅಷ್ಟು ತೊಂದರೆ ಕೊಡುತ್ತಿರಲಿಲ್ಲ. ಗಂಡಸರು ಇದ್ದರೆ ’ಅರೇ, ದೇ ನಾ..ಅಂತ ಕಿಚಾಯಿಸಿ ಶರ್ಟ್ ನ ಜೇಬಿಗೆ ಕೈ ಹಾಕುವುದೋ, ತಲೆ ಮುಟ್ಟುವುದೋ ಇಂತಹುದ್ದನ್ನೆಲ್ಲ ಮಾಡುತ್ತಿದ್ದರು. ಗಂಡಸರು ಹೆದರಿಕೊಂದು ದುಡ್ಡು ಕೊಟ್ಟು ಬಿಡುತ್ತಿದ್ದರು.
ನಮ್ಮ ಸಂಸ್ಥೆಯಿಂದ ಇತ್ತೀಚಿಗೆ ನಾವು 'ಲಿಂಗತ್ವ ಅಲ್ಪಸಂಖ್ಯಾತರ ಸಾಮಾಜಿಕ ಸೇರ್ಪಡೆ-ಸವಾಲುಗಳು ಅವಕಾಶಗಳು ’ ಎನ್ನುವ ಒಂದು ದಿನದ ಕಮ್ಮಟ ಹಮ್ಮಿಕೊಂಡಿದ್ವಿ.  ಅನ್ಯಲಿಂಗಿ/ದ್ವಿಲಿಂಗಿ ಅಂತ ಕರೆಯಲ್ಪಡುವ ಇವರಿಗೆ ಸಾಮಾಜಿಕ ಸ್ಥಾನಮಾನ ಹಾಗೂ ಅವರನ್ನು ಸಮಾಜದ ಮುಖ್ಯವಾಹಿನಿಯಲ್ಲಿ ಸೇರ್ಪಡಿಸುವ ಬಗ್ಗೆ ಒಂದು ಕಮ್ಮಟ (workshop). ನಮ್ಮ ಸಂಸ್ಥೆಯ ಬಗ್ಗೆ ನನಗೆ ತುಂಬ ಹೆಮ್ಮೆಯಿತ್ತು. ಆದರೆ ಈ ಒಂದು ಕಾರ್ಯಕ್ರಮ ಆದಮೇಲೆ ಅದು ನೂರ್ಮಡಿ ಜಾಸ್ತಿಯಾಗಿದೆ.
ಅವರಿಗೆ ಒಂದು ಅಸ್ತಿತ್ವವೇ ಇಲ್ಲ. ಖೇದದ ವಿಷಯವೆಂದರೆ ಜನ ಗಣತಿ ನಡೆಸುವಾಗ ಇವರನ್ನು ಗಣನೆಗೆ ತೆಗೆದುಕೊಳ್ಳದೆ ಇದ್ದು ಅವರ ಅಸ್ತಿತ್ವದ ಅಂಕಿ ಸಂಖ್ಯೆ ಭಾರತ ದೇಶದಲ್ಲಿ ಲಭ್ಯವಿಲ್ಲವೆಂದು, ಅಂದು ನಮ್ಮೋಡನೆ ಇದ್ದ ಬಿ.ಟಿ ವೆಂಕಟೇಶ,- ಇವರು ಹನ್ನೆರಡು ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾಗಿ ನ್ಯಾಯಕ್ಕಾಗಿ  ಹೋರಾಡುತ್ತಿದ್ದಾರೆ,- ಹೇಳಿದರು . ಅನ್ಯ ಲಿಂಗಿಯರ ವಿರುದ್ಧ ಹಲವಾರು  ಕೇಸ್ ಗಳನ್ನು ಶ್ರೀ ವೆಂಕಟೇಶ ಅವರು  ಗೆಲ್ಲಿಸಿಕೊಟ್ಟಿದ್ದಾರೆ.
ಅವರೂ ನಮ್ಮ ನಿಮ್ಮ ತರಹನೇ. ಪ್ರಕೃತಿಯ ಕ್ರೂರ ವಿಕೋಪಕ್ಕೆ ಹಾಗಾಗಿದ್ದಾರೆ ಅಷ್ಟೆ. ನಮ್ಮ ತರಹನೇ ನೋವು ನಲಿವು ಅನುಭವಿಸುತ್ತಾರೆ. ಅವರಿಗೂ ನಮ್ಮ ಹಾಗೆ ಜೀವಿಸುವ ಹಕ್ಕು ಇದೆ ಯಲ್ಲವೇ?
ಕಮ್ಮಟದಲ್ಲಿ ಭಾಗವಹಿಸಲು ಬಂದವರ ಹೇಳಿದಂತಹ ಮಾತುಗಳು:
"ಮ್ಯಾಡಂ ಮೂರು ಹೆಣ್ಣುಗಳ ನಂತರ, ತಂದೆ ತಾಯಿಯವರ ಪ್ರಾರ್ಥನೆ, ದೇವರ ವರಪ್ರಸಾದವೆಂಬಂತೆ ನಾನು ಹುಟ್ಟಿದೆ. ಹೆಸರು ’ಕುಮಾರ’ . ಆದರೆ ಯೌವನಾವಸ್ಥೆಗೆ ಬರುವ ಹೊತ್ತಿಗೆ ನನಗ್ಯಾಕೋ ನಾನು ಹೆಂಗಸು ಅನ್ನಿಸುವುದಕ್ಕೆ ಶುರು ಆಯ್ತು. ನನ್ನ ಹಾವ ಭಾವಗಳು, ನನ್ನ ಮನಸ್ಸಿನ ಭಾವನೆಗಳೆಲ್ಲ ಹೆಣ್ಣನ್ನೆ ಹೋಲುತ್ತಿದ್ದವು. ಪ್ಯಾಂಟ್ ಶರ್ಟ್ ಹಾಕಲು ಮುಜುಗರ ಅನ್ನಿಸುತ್ತಿತ್ತು. ಮನೆಯಲ್ಲೂ ಬೈ ಗಳು. ಗಂಡಾಗಿ ಹುಟ್ಟಿದಿಯ ಗಂಡಸಿನ ತರಹ behave ಮಾಡು ಅಂತ’. ಶಾಲೆಯಲ್ಲೂ ನಾನು ಕಲಿಯುವುದರಲ್ಲಿ ಮುಂದೆ. ಆದರೆ ಟೀಚರ್ ಗೆ ನನ್ನ ಜಾಣತನಕಿಂತ ’ಅದೇನು ಹೆಣ್ಣುಮಕ್ಕಳ ತರ ಮಾಡೋದು’ ಅಂತ ಬೈಯುವುದರಲ್ಲಿ ಹೆಚ್ಚು ಆಸಕ್ತಿ. ಇದನ್ನೆಲ್ಲ ನೋಡಿ ಕೊಂಡು ಮನಸ್ಸು ರೋಸಿ ಹೋಯ್ತು. ದೇಹ ಮನಸ್ಸಿನಲ್ಲಿ ಒಂದು ತರಹ ಒದ್ದಾಟ ಶುರು ಆಗಿ ತಡೆಯಕ್ಕಾಗದೇ ಹೆಣ್ಣುಮಕ್ಕಳ ಬಟ್ಟೇ ತೊಡಲು ಶುರು ಮಾಡಿದ ಮೇಲೆ ಮನೆಯಲ್ಲಿ ಹಿಂಸೆ ಜಾಸ್ತಿಯಾತು. ನಿನ್ನಿಂದ ನಿನ್ನ ಅಕ್ಕಂದಿರ ಭವಿಷ್ಯ ಹಾಳಗುತ್ತೆ, ಅದು , ಇದು ಅಂತ. ಕಾಟ ತಾಳಲಾರದೆ ನಾನು ಮನೆ ಬಿಟ್ಟು ಶಹರಕ್ಕೆ ಬಂದೆ. ಇಲ್ಲಿ ಸಮರ ಎನ್ನುವ ಗುಂಪಿನ ಬಗ್ಗೆ ತಿಳಿಯುವ ಮುನ್ನ ನಾನು sex worker ಆಗಿ ಮತ್ತು ಬೇಡಿಕೊಂಡು ಜೀವನ ನಡೆಸಿದೆ. ಸಮರ ಸೇರಿದ ಮೇಲೆ ನನಗೆ ಗೊತ್ತಾಗಿದ್ದು ನನ್ನ ತರಹ ಇನ್ನೂ ಸುಮಾರು ಜನರು ಇದ್ದಾರೆ ಅಂತ. ನಾನೀಗ sex change ಒಪರೇಶನ್ ಮತ್ತು ಹರ್ಮೋನ್ ರಿಪ್ಲೇಸಮೆಂಟ್ ಥೆರಪಿಯಿಂದ ಈ ತರಹ ಕಾಣುತ್ತೇನೆ.
ಇನ್ನೊಬ್ಬರು: ನಗುತ್ತ ನಗುತ್ತ ಹೇಳಿದರು "ನಮ್ಮ ಮನೆಯ ನಾಯಿಯನ್ನು ನನಗಿಂತ ಚೆನ್ನಾಗಿ ನೋಡಿಕೊಳ್ಳುತ್ತಾರೆ’ ಎಂದಾಗ ನಾನಂತು ಎಲ್ಲರ ಎದುರಿಗೆ ಅತ್ತುಬಿಟ್ಟೆ. ಕಣ್ಣೀರೊರೆಸಲು ಹೋಗಲಿಲ್ಲ.
ಇನ್ನೊಬ್ಬರ ಕತೆ: ನಾನು ಹೆಣ್ಣಾಗಿ ಹುಟ್ಟಿದೆ. ಎಂಟನೆ ತರಗತಿ ತನಕ ಸರಿಯಾಗೆ ಇದ್ದೆ. ಆ ಮೇಲೆ ಕೆಲವು ದೈಹಿಕ ಬದಲಾವಣೆಗಳು ಶುರುವಾದವು. ಆದರೂ ನನ್ನ ಓದನ್ನು ಮುಂದುವರೆಸಿ , ಟೀಚರ್ಸ್ ಟ್ರೈನಿಂಗ್ ಕೋರ್ಸ್ ಮಾಡಿದೆ. ಆದರೆ ಇಂಟರ್ವ್ಯೂ ನಡೆಯುವ ದಿನ, ಅಲ್ಲಿ ಕೇಳಿದರು, ಇದೇನು bio data ದಲ್ಲಿ ಹೆಣ್ಣಂತ ನಮೂದಿಸಿದೆ, ನಿಮಗೆ ನೋಡಿದರೆ ಗಡ್ಡ ಮೀಸೆ ಬಂದು ಬಿಟ್ಟಿದೆ. ಮಕ್ಕಳು ಹೆದರಿಕೊಂಡು ಬಿಟ್ಟಾವು ಅಂತ
ಇನ್ನೊಬ್ಬರಂತು ಮಾತಿಗಿಂತ ಮೊದಲೆ ಅಳಲು ಶುರು ಮಾಡಿದರು
ಬಸ್ ನಲ್ಲಿ ಮುಂದಿನಿಂದ ಹತ್ತಿದರೆ, ಕಂಡಕ್ಟರ್ ಇದ್ಯಾಕೆ ಇಲ್ಲಿ ಹತ್ತಿದಿರಿ ಹಿಂದಗಡೆ ಹೋಗಿ ಅನ್ನುತ್ತಾರೆ, ಹಿಂದೆ ಹೋದರೆ ಮುಂದೆ ಕಳುಹಿಸುತ್ತಾರೆ, ನಾವೆಲ್ಲಿ ಹೋಗುವುದು? ಮಕ್ಕಳು ಕೂಡ ನನ್ನನ್ನು ವಿಚಿತ್ರವಾಗಿ ನೋಡಿದಾಗಲೆಲ್ಲ ಹಿಂಸೆ ಯಾಗುತ್ತೆ. ಪೋಲಿಸರಿಂದ ನಾನು ತುಂಬ ದೌರ್ಜನ್ಯಕ್ಕೆ ಒಳಗಾಗಿದ್ದೇನೆ. ಮೂರು ಸಲ ಆತ್ಮಹತ್ಯೆಗೆ ಪ್ರಯತ್ನಿಸಿದ್ದೇನೆ’. ಈಗ ಸಮರ ಸಂಸ್ಥೆಯಿಂದಾಗಿ ಸ್ವ್ಲಲ್ಪನಾದರೂ ಜೀವನಕ್ಕೆ ನೆಮ್ಮದಿ ಸಿಕ್ಕಿದೆ.
ಇವರಲ್ಲಿ ಉಳ್ಳವರು ಅಂದರೆ ದುಡ್ಡಿದವರು sex change operation (ಅಂದರೆ ಗಂಡಸಾಗಿದ್ದವರು ಹೆಣ್ಣಿನ ಭಾವನೆಗಳಿದ್ದಾಗ   ಪುರುಷ ಲಿಂಗವನ್ನು ಶಸ್ತ್ರಕ್ರಿಯೆ ಮೂಲಕ ತೆಗೆಸಿಬಿಡುವುದು) ಮಾಡಿಸಿಕೊಂಡು ನೋಡಲು normal ತರಹ ಇರುತ್ತಾರೆ.
ಅವರೆಲ್ಲರ ಅಹವಾಲು: "ನಮ್ಮನ್ನು ಗಣನೆಗೆ ತೆಗೆದುಕೊಳ್ಳಿ, ವೋಟರ್ಸ್ ಐ ಡಿ ಕೊಡಲಿ, ನಮಗೂ ಗ್ಯಾಸ್, ರಾಶನ್ ಮುಂತಾದ basic ಸೌಲಭ್ಯಗಳು ಒದಗಿಸಿದರೆ ನಾವು ಸಹ ಸಮ್ಮಾನ್ವಿತ ಜೀವನ ನಡೆಸಬಹುದು.ಜನರನ್ನು ಕಾಡಿ ಬೇಡಿ, ಹೆದರಿಸಿ ದುಡ್ಡು ತೆಗೆದುಕೊಳ್ಳುವುದು, sex work ಮಾಡದೆ ಜೀವನ ನಡೆಸಬಹುದು ಎಂಬ ಖಾತ್ರಿಯಿದೆ.ನಮ್ಮಲ್ಲೂ talented ಮಂದಿ ಇದ್ದಾರೆ. ಅವರಿಗೆ ಅವಕಾಶ ಕೊಡಿ" ಹೌದು ಕಾನೂನು ಓದಿದವರು, ಸುಂದರವಾದ ಕಸೂತಿ ಹಾಕುವವರ ಜತೆ ನಾನು ಕೆಲ ಹೊತ್ತು ಮಾತನಾಡಿದ್ದೇನೆ.
ನನ್ನ ಪ್ರಕಾರ ಇಲ್ಲಿ ಆಗಬೇಕಾಗಿರುವುದು awareness. ಸಾಮಾನ್ಯ ಜನತೆಗೆ ಇವರ ಬಗ್ಗೆ ತಿಳುವಳಿಕೆ. ಅವರ ಜತೆ ಬೆರೆದರೆ ಯಾವುದೇ ಕಾಯಿಲೆ ಬರಲ್ಲ. ಅವರು ಹಾಗಾಗಿದ್ದು ಅವರ ತಪ್ಪಲ್ಲ. ಮೊದಲಿಗೆ ಕುಟುಂಬದಿಂದ ಅವರಿಗೆ support ಸಿಗಬೇಕು. ಹಾಗಿದ್ದಲ್ಲ್ಲಿ ಅವರಿಗೂ ಸ್ವಲ್ಪ ನೆಮ್ಮದಿ. ಕುಟುಂಬದವರಿಗೆ ಸಮಾಜ ಏನೆನ್ನುತ್ತೇ ಅನ್ನುವ ಭೀತಿಯಿಂದ ಹಾಗೆ ವರ್ತಿಸುತ್ತಾರೆ. ಅವರಿಗೇನು  ಮನೆಗೆ ಕರೆದು ಮಣೆ ಹಾಕಿ ರಾಜೋಪಚಾರ ಮಾಡಬೇಕಾಗಿಲ್ಲ, ಅವರು ನಮ್ಮ ಹಾಗೆ ಅಂದು ಅವರ ಬಗ್ಗೆ ಸ್ವ್ಲಲ್ಪ ಕಾಳಜಿ ತೋರಿಸಬಹುದಲ್ಲವಾ?
ಇವರನ್ನು  ಹಿಜಡಾ, ಖೋಜಾ, ಛಕ್ಕಾ, ಸಿಕ್ಸರ್, ಕೆಲವರು ದೇವದಾಸಿ/ಜೋಗಪ್ಪ, ಕೊತಿ,ತಮಿಳ್ ನಾಡಿನಲ್ಲಿ ಅರವಣಿ, ಆಂಗ್ಲದಲ್ಲಿ hermaphrodites, Eunuchs, bisexual, transsexuals,transgenders, transvestite,doubledecker, crossdressers ಅಂತೆಲ್ಲ ಕರೆಯಲ್ಪಡುತ್ತಾರೆ. ಆದರೆ ಎಲ್ಲ ಪದಗಳು ಬೇರೆ ಬೇರೆ ಅರ್ಥ ಕೊಡುತ್ತವೆ. ಇಂಟರ್ ನೆಟ್ ನಲ್ಲಿ ಈ ಪದಗಳನ್ನು ಹುಡುಕಿ ಹೆಚ್ಚಿನ ಮಾಹಿತಿ ಪಡೆಯಬಹುದು.
ಕೆಳಗಿವೆ  ಕಮ್ಮಟದ ಚಿತ್ರಗಳು:
ಕಾರ್ಯಕ್ರಮ ಪ್ರಾರಂಭವಾಗುವ ಮುನ್ನ
ಮುಖ್ಯ ಅತಿಥಿಗಳ ಆಗಮನದ ಕ್ಷಣ
ಐಡಿಎಫ್ ನ ಮ್ಯಾನೆಜಿಂಗ್ ಟ್ರಸ್ಟಿ ಶ್ರೀ ವಿ ಎನ್ ಸಾಲಿಮಠ, ಮಂಜುಳಾ ಸಿ.- ಅಧ್ಯಕ್ಷರು, ಮಹಿಳಾ ಮತ್ತು ಮಕ್ಕಳ ಆಯೋಗ, ಶ್ರೀಮತಿ ಜಯಂತಿ ಖ್ಯಾತ ಸಿನಿಮಾ ತಾರೆ ಹಾಗೂ ಸಾಮಾಜಿಕ ಕಾರ್ಯಕರ್ತೆ,  hon. chief justice of Karnataka high court ಶ್ರೀಮತಿ ಮಂಜುಳಾ ಚೆಲ್ಲೂರ
ಅಕ್ಕಯ್ಯ /akai- ಸಂಗಮ ಸಂಸ್ಥೆಯ spokesperson

ಎ. ರೇವತಿ  - ಅಂತರ್ ರಾಷ್ಟೀಯ ಖ್ಯಾತಿಯ ಪುಸ್ತಕ ಬರೆದವರು. A. Revathi is a writer, actor and activist based in Bangalore. She works with Sangama, a sexuality minorities human rights organization for individuals oppressed due to their sexual preference. She is the author of Unarvum Uruvamum (Feelings of the Entire Body); and her autobiography, The Truth about Me, is the first of its kind in English from a member of the hijra community. ಈ ಪುಸ್ತಕದ ಪ್ರಕಾಶಕರು penguin India
radioActiv ನಲ್ಲಿ RJ ಯಾಗಿ ಕೆಲಸ ನಿರ್ವಹಿಸುತ್ತಿರುವ ಪ್ರಿಯಾಂಕ. ಅವರು male to female transgender. ಅವರ ಬಲಕ್ಕೆ ಇರುವವರು ಚಾರ್ಲೀ( female to male transgender) documentaries ಮಾಡುತ್ತಾರೆ.
ಗ್ರಾಮ್ಯಾದ ಉತ್ಪನ್ನಗಳನ್ನು ವೀಕ್ಷಿಸುತ್ತಿರುವ ಗಣ್ಯರು
ನನ್ನ ಮೆಚ್ಚಿನ ತಾರೆಯೊಂದಿಗೆ (ಅವರ ಗುಳಿ ಬೀಳುವ ಕೆನ್ನೆಯ ಸಲುವಾಗಿ ನಾನು ಅವರ ಎರಡು ಮೂರು ಸಿನಿಮಾ ನೋಡಿದ್ದೇನೆ ಅಷ್ಟೆ.) ನಾನು ಮತ್ತು ಐಡಿಎಫ್ ಬಳಗ. ಅವರು ಈ ಕಾರ್ಯಕ್ರಮ ಕ್ಕೆ ಬಂದು  ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ  ಮನಸ್ಸಿಗೆ ತಟ್ಟುವಂತೆ ಮಾತನಾಡಿದರು. ನನಗೆ ಈಗ ಅವರ ಬಗ್ಗೆ ಇನ್ನೂ ಹೆಚ್ಚು respect. ಗುಂಪಿನಲ್ಲಿರುವ ಹಲವಾರು ಜನರ ಪರಿಚಯ ಇವರಿಗಿದ್ದು, ಅವರಲ್ಲಿ ಒಬ್ಬರು ತುಂಬ ರುಚಿಯಾದ ಬಿರಿಯಾನಿ ಮಾಡುತ್ತಾರೆಂದು, ತಮಿಳುನಾಡಿನಲ್ಲಿ ಸಿನಿಮಾ ಶೂಟಿಂಗ್ ಇದ್ದಾಗ ದಿನಾ ಅವರಿಗೋಸ್ಕರ ಬಿರಿಯಾನಿ ಮಾಡಿ ತರುತ್ತಿದ್ದರೆಂದು  ಪರಿಚಯಿಸಿದರು.
team IDF
ನವಜೀವನ ಕಾರ್ಯಕ್ರಮದ ನಿಜವಾದ force - ಗೋವಿಂದರಾಜನ್, ದೇಶಪಾಂಡೆ ಮತ್ತು ಸುಕನ್ಯ, ಕವಿತಾ,ಅರ್ಚನಾ, ಸುಜೀಂದ್ರ
Hivos: ನವಜೀವನ ಪ್ರಾಜೆಕ್ಟ್  -  IDF ಗೆ ಬೆಂಬಲಿಗ ಸಂಸ್ಥೆ
Sangama- NGO
Samara - community Based Organisation
ಇದನ್ನು rough ಆಗಿ as is ಮನಸ್ಸಿನಲ್ಲಿ fresh ಇದ್ದಾಗಲೇ ಬರೆದಿದ್ದೇನೆ. ಸರಿಯಾಗಿ ಮುಂದೆ ಬರೆಯುತ್ತೇನೆ.
* ಜಯಂತಿಯವರಿಗೆ ’ನಾನು ನಿಮ್ಮನ್ನು, ನಿಮ್ಮ ನಗು  ನೋಡಲು ಮಾತ್ರ ಸಿನಿಮಾ ನೋಡಿದ್ದೇನೆ, ಕತೆಯೆಲ್ಲ ಕೇಳಬೇಡಿ ಅಂತ ಹೇಳಿದಾಗ ಚಂದವಾಗಿ ನಕ್ಕು ನನಗೆ ಒಂದು huggy huggy ಕೊಟ್ಟರು. :-)))))))))))


April 23, 2012

Maggi 20 minute noodles

ನಾನು ಮೊಟ್ಟ ಮೊದಲ ಬಾರಿಗೆ ಮ್ಯಾಗಿ ತಿಂದಿದ್ದು ಆರನೆ ತರಗತಿಯಲ್ಲಿದ್ದಾಗ. ಕೊನ್ವೆಂಟ್ ನಿಂದ ಫ್ರೀ ಎರಡು ಪ್ಯಾಕೆಟ್ ಕೊಟ್ಟಿದ್ದರು.ಅದನ್ನು ಹೇಗೆ ತಾಯಾರಿಸಬೇಕೆಂದು ಒಂದು ಪ್ರಾತ್ಯಕ್ಷಿ ಕೆ (Demo) ಕೂಡ ಮಾಡಿದರು. ಮನೆಗೆ ಬಂದ ಕೂಡಲೆ ನಾನಿ ಯನ್ನು ಪೀಡಿಸಿ ಬಿಸಿ ನೀರು ಮಾಡಿಸಿಕೊಂಡಿದ್ದೆ. ಮರಳುವ ನೀರಿನಲ್ಲಿ ಮ್ಯಾಗಿ ನೂಡಲ್ಸ್ ಹಾಕಿ , ಪ್ಯಾಕೆಟ್ ನಲ್ಲಿ ಕೊಟ್ಟ ಸೂಚನೆ ಪ್ರಕಾರ ಗಡಿಯಾರ ನೋಡಿಕೊಂಡು ಎರಡು ನಿಮಿಶ ಆದ ಮೇಲೆ ಅದನ್ನು ಕೆಳಗಿಳಿಸಿ, ಹರ ಸಾಹಸ ಮಾಡಿ ಬೆರಳಿನಿಂದಲೇ ತಿಂದಿದ್ದು. ಹಿಮ್ಮೇಳದಲ್ಲಿ ನಾನಿ ಹಾಗೂ ರಾಜೀವಿಯ ವರಾತ ಚಾಲೂ ಇತ್ತು, ಕ್ರಿಶ್ಚನ್ ಶಾಲೆಯಿಂದ ಕೊಟ್ಟಿದ್ದು, ಥೂ ಅದರಲ್ಲೇನಿರುತ್ತೋ ಹಾಳು-ಮೂಳು (ನನ್ನ ಅಜ್ಜನ ಮನೆಯಲ್ಲಿ ನಾವು vegetarian)  ಅಂತೆಲ್ಲ. ತಿಂದ ಸ್ವಲ್ಪ ಹೊತ್ತಿಗೆ ಗಳಗಳನೆ ವಾಂತಿ ಮಾಡಿ ಬಿಟ್ಟೆ. ಆಯ್ತು ನನ್ನ ಹಾಗೂ ಮ್ಯಾಗಿಯ ಉಸಾಬರಿ. ಆಮೇಲೆ ಎರಡು ಮೂರು ಸಲ ಶಾಲೆಯಲ್ಲಿ ಫ್ರೀ ಸ್ಯಾಂಪಲ್ ಪ್ಯಾಕೆಟ್ ಕೊಟ್ಟರೂ ನಾನದನ್ನು ತೆಗೆದುಕೊಳ್ಳುತ್ತಿರಲಿಲ್ಲ.

ನಾನಿಗೆ ಕ್ಯಾನ್ಸರ್ ಕಾಯಿಲೆ ಕಾಣಿಸಿಕೊಂಡ ಮೇಲೆ ನಾನು ಅಮ್ಮನ ಮನೆ ಅಂಧೇರಿಗೆ ಬಂದೆ. ಅಲ್ಲಿ ನನ್ನ ತಂಗಿ ಮ್ಯಾಗಿ ಮಾಡಿಕೊಂಡು ತಿನ್ನುತ್ತಿದ್ದಳು. ನಾನು ಒಂದು ದಿನ ಅವಳ ಜತೆ ತಿಂದೆ. ವಾಂತಿ ಗೀಂತಿ ಆಗಲಿಲ್ಲ. ಅಮೇಲೆ ಅದಕ್ಕೆ ತರಕಾರಿಗಳನ್ನೆಲ್ಲ ಹಾಕಿ ನನ್ನದೇ ಹಲವಾರು ವರ್ಷನ್ ನಲ್ಲಿ ವಾರಕ್ಕೊಂದು ಸರ್ತಿಯಾದ್ರು ಮ್ಯಾಗಿ ಮಾಡಿಕೊಂಡು ನಾವು ಮೂರು ಜನ ಮಕ್ಕಳು ತಿನ್ನುತ್ತಿದ್ದೆವು. ಒಬ್ಬ ತಮ್ಮನಿಗೆ ಅದು ಇಷ್ಟ ಆಗ್ತಿರಲಿಲ್ಲ. ಚೆನ್ನಾಗಿರುತ್ತಿತ್ತು ನಾನು ಮಾಡಿದ್ದು. ಅಪ್ಪ ಅಮ್ಮ ಮ್ಯಾಗಿ ಸುದ್ದಿಗೆ ಬರಲಿಲ್ಲ.



ಮದುವೆಯಾದ ಮೇಲೆ ಶ್ರೀಕಾಂತ ಬಳಿ ಯಾವುದೋ ಮಾತಿಗೆ ಮ್ಯಾಗಿ ಮಾತು ಎತ್ತಿದಾಗ ಛೀ, chiken feed..ಅದೇನು ತಿನ್ನೋದು ಅಂದಿದ್ದರಿಂದ ನಾನು ಕೊಪ್ಪದಲ್ಲಿ ನಮ್ಮದೇ ಬಾಡಿಗೆ ಮನೆಗೆ ಬಂದ ಮೇಲೆ ಅದನ್ನು ತಯಾರಿಸುತ್ತಿರಲಿಲ್ಲ. ಆದರೆ ತೀರ್ಥಹಳ್ಳಿಯಲ್ಲಿದ್ದಾಗ ಶ್ರೀಕಾಂತ ಅಕ್ಕನ ಮನೆಗೆ ಮಾವನವರ ಜತೆ ಪ್ರತೀ ಭಾನುವಾರ ಸಂಜೆ ಹೋಗುತ್ತಿದ್ದೆ. ಶ್ರೀಕಾಂತ ಅಕ್ಕನ ಮನೆಯಲ್ಲಿ ಟಿ.ವಿ ಯಿತ್ತು ಹಾಗಾಗಿ ಪ್ರತೀ ಭಾನುವಾರ ನನ್ನ ಹಾಗೂ ಮಾವನವರ ಸವಾರಿ ಅವರ ಮನೆಗೆ. ಮಾವನವರೋ ಉದ್ದಕ್ಕೆ, ನಾನು ಸಣಕಲು ಗಿಡ್ಡ ಪ್ರಾಣಿ. ನಾಚಿಕೊಂಡು ಕಣ್ಣು ಕೆಳಗಡೆ ರಸ್ತೆ ನೋಡ್ತಾ ,ರಾಜಠೀವಿಯಿಂದ ಸಾಗುತ್ತಿತ್ತು ನಮ್ಮ ಮೆರವಣಿಗೆ.ಮಾವನವರಿಗೆ ರಸ್ತೆ ಮಧ್ಯದಲ್ಲಿ ನಡೆಯುವ ಸ್ವಭಾವ. ದೊಡ್ಡ ವಾಹನಗಳೇನಾದರೂ ಬಂದರೆ ನಾನೇ ಎಷ್ಟೋ ಸಲ ಅವರನ್ನು ದರದರನೆ ಎಳೆದು ರಸ್ತೆ ಪಕ್ಕಕ್ಕೆ ತರುತ್ತಿದ್ದೆ. ಅನ್ನಕ್ಕನ ಮನೆ ತಲುಪಿದ ಮೇಲೆ ಮಾವ ಫಿಲ್ಮ್ ನೋಡುವುದರಲ್ಲಿ ಮಗ್ನರಾದರೆ, ನಾನು  ನನ್ನ ಪುಟ್ಟ ಸೊಸೆಯಂದಿರಿಗೆ ಮುಂಬಯಿನ ತಿನಿಸುಗಳನ್ನು ಮಾಡಿಕೊಡುತ್ತಿದ್ದೆ- ಪಾನಿಪೂರಿ, vegetable ಕೂರ್ಮ, ಐಸ್ ಕ್ರೀಮ್ (ಅವರ ಮನೆಯಲ್ಲಿ ಫ್ರೀಜ್ ಕೂಡ ಇತ್ತು),ರಾಜಮಾ ಮಸಾಲ,  ಮ್ಯಾಗಿ ಇತ್ಯಾದಿ. ಮ್ಯಾಗಿ ಮಾಡುತ್ತಿದ್ದುದ್ದೆ ಹೆಚ್ಚು, ’ಮಾಲತೆಕ್ಕ ನೀನು ಮಾಡಿದ ಮ್ಯಾಗಿ ಚೆನ್ನಾಗಿರುತ್ತೆ, ಅಪ್ಪನೂ ತಿನ್ನುತ್ತಾರೆ’ ಅಂತ ಮಾಡಿಸಿಕೊಳ್ಳುತ್ತಿದ್ದರು.

ಉಳಿದಂತೆ ನಾನು ನನ್ನ ಪದವಿ ಪರೀಕ್ಷೆಗೆ ಮುಂಬಯಿಗೆ ಹೋದಾಗಲೆಲ್ಲ, ಮ್ಯಾಗಿ ಮಾಡುವ ಕೆಲಸ ನನ್ನದೆ. ಮಹಾ ಸಂಭ್ರಮ ಆ ದಿನ. ಸ್ಟೈಲ್ ಆಗಿ ನೀರುಳ್ಳಿ ಕಟ್ ಮಾಡಿ, ಫ್ರೀsssಜ್ ಮಾಡಿದ ಬಟಾಣಿ ನೀರಿಗೆ ಹಾಕಿ, ಒಂದು ಕಡೆ ಗ್ಯಾಸ್ ನಲ್ಲಿ ನೀರು ಬಿಸಿ ಮಾಡಲು ಇಟ್ಟು, ಕ್ಯಾರಟ್, ಬೀನ್ಸ್, ದೊಣ್ ಮೆಣಸಿನಕಾಯಿ,ಕ್ಯಾಬೇಜ್, ಟೋಮ್ಯಾಟೋ ಸಪೂರಕ್ಕೆ ಕಟ್ ಮಾಡಿ ಇಡುತ್ತಿದೆ.ಅರ್ಧ ಟೀ ಸ್ಪೂನ್ ಬೆಣ್ಣೆಯಲ್ಲಿ ನೀರುಳ್ಳಿ ಕೆಂಪಗೆ ಹುರಿದು, ಉಳಿದ ತರಕಾರಿ ಹಾಕಿ, ಚಿಟಿಕೆ ಸಕ್ಕರೆ, ಗರಂ ಮಸಾಲೆ ಪುಡಿ ಬೆರೆಸಿ, ಆ ಮೇಲೆ tomato ಹಾಕಿ ಹುರಿದು, ಕುದಿಯುವ ನೀರು ಹಾಕುತ್ತಿದೆ. ಮ್ಯಾಗಿ ಪ್ಯಾಕ್ ನಲ್ಲಿರುವ ಮಸಾಲಾ ಪೌಡರ್ ಹಾಕಿ ಎರಡು ನಿಮಿಶ ಕೈ ಯಾಡಿಸಿ, ನೂಡಲ್ಸ್ ಸೇರಿಸುತ್ತಿದೆ. ಎರಡು ನಿಮಿಶ ಮುಚ್ಚಿಟ್ಟು, ಬಿಸಿ ಬಿಸಿ ಮ್ಯಾಗಿಯ ಬಾಣಲೆ ಟೇಬಲ್ ಮೇಲಿಟ್ಟು ನಾವು ಅದರ ಸುತ್ತಲೂ ಪವಡಿಸಿ, ಮ್ಯಾಗಿ ತಿನ್ನಲೆಂದೇ ಖರೀದಿಸಿದ ಮುಳ್ಳು ಚಮಚೆ ಉಪಯೋಗಿಸಿ..ತುಂಬ ಎಂಜಾಯ್ ಮಾಡುತ್ತಿದ್ದೆವು ಮಾಲತಿಯ 20 ಮಿನಿಟ್ಸ್ ಮ್ಯಾಗಿ ನೂಡಲ್ಸ್



ಉಜಿರೆಯಲ್ಲಿದ್ದಾಗ- ಬಹುಶ: ಮಾಲವಿಕ ಮೊದಲನೇ ಕ್ಲಾಸ್ ನಲ್ಲಿ ಓದುವಾಗ ಮ್ಯಾಗಿ ಮಾಡಲು ಶುರು ಮಾಡಿದ್ದೆ. ಸಂಜೆ ಹಸಿದುಕೊಂಡು ಬಂದಾಗ ಒಂದು ಸಲ ಮ್ಯಾಗಿ ಮಾಡಿದ್ದೆ. ಅವಳಿಗದು ಇಷ್ಟವಾಗಿದ್ದರಿಂದ ನಾನು ಆಗಾಗ್ಗ ಮ್ಯಾಗಿ ಮಾಡಲು ಶುರು ಮಾಡಿದೆ. ಶ್ರೀಕಾಂತ ಮೊದ ಮೊದಲು ಮೂಗು ಸಿಂಡರಿಸುತ್ತಿದ್ದರು- chicken feed ಜತೆ junk food ಪದದ ಪ್ರಯೋಗ ಕೂಡ ಮಾಡುತ್ತಿದ್ದರು. ಆದರೆ ನಾನು ಹಾಕಿರುವ ತರಕಾರಿಗಳ ಬಗ್ಗೆ ವಿವರಣೆ ಕೊಡುತ್ತಿದ್ದೆ. ನಾವು ಮ್ಯಾಗಿ ತಿನ್ನುವಾಗ ತುಂಬ sound effects ಮಾಡುತ್ತಿದ್ದೆವು..ಮ್ಮ್ಮ್ಮ್ಮ್ಮ್ ಸೂಪರ್, ಟೇಸ್ಟಿ , ಹೆವನ್ಲೀ (heavenly)...ಅಂತೆಲ್ಲ ಕಣ್ಣು ಮುಚ್ಚಿ ತುಂಬ ಆಕ್ಟಿಂಗ್ ಮಾಡುತ್ತಿದ್ದೆವು. ಶ್ರೀಕಾಂತ ಗೆ ಕರೀತಿರಲಿಲ್ಲ. ಒಂದು ದಿನ ನಾನೂ ಮಕ್ಕಳು ಮ್ಯಾಗಿ ತಿನ್ನುವಾಗ ಅವರು ಒಂದು ಪ್ಲೇಟ್ ಹಿಡಿದುಕೊಂಡು,ಒಳ್ಳೆ ಪರಿಮಳ ಬರ್ತಾ ಇದೆ ಅಂತ ಹೇಳಿ  ಸುಮ್ಮನೆ ನಮ್ಮ ಜತೆ ಕೂತು ಮ್ಯಾಗಿ ತಿಂದ್ರು....:-) ಅದಾದ ನಂತರ ನಾವು ಟೂರ್ ಟ್ರಿಪ್ ಅಂತೆಲ್ಲ ಹೋಗಿ ಬಂದ ನಂತರ ರಾತ್ರಿ ಅದೇ ನಮ್ಮ ಊಟ ಆಗಿರುತ್ತಿತ್ತು. ಅಷ್ಟೆ ಅಲ್ಲ ನಮಗೆ ಯಲ್ಲಿಗಾರ ಮತ್ತು ಅವರ ಕುಟುಂಬದ ಪರಿಚಯ ಆಗಿ ಪ್ರತೀ ವಾರ್ಯಾಂತದಲ್ಲಿ ಬೈಕ್ ಮೇಲೆ ಎಲ್ಲಾದರೂ ಹೋಗಿ, ರಾತ್ರಿ ನಾನು ’ಮ್ಯಾಗಿ ಮಾಡ್ತೇನೆ ತಿಂದು ಹೋಗಿ’ ಅಂತ ಅವರಿಗೂ ಮ್ಯಾಗಿಯ ಫ್ಯಾನ್ ಮಾಡಿ ಬಿಟ್ಟೆ. ತರಹಾವರಿ ಬಗೆಯ ಮ್ಯಾಗಿ ಮಾಡುತ್ತಿದ್ದೆನಾದ್ದರಿಂದ ಅದೂ ಯಾವತ್ತೂ ಬೋರ್ ಹೊಡಿಸಲಿಲ್ಲ.

ಈಗ ತಂಗಿ ಯು ಎಸ್ ನಲ್ಲಿರೋದು, ಅವಳು ಇಲ್ಲಿ ಬಂದಾಗಲೆಲ್ಲ ಒಂದು ದಿನ ನಾನು ಮಾಡುವ ಮ್ಯಾಗಿಯ ಸಂಭ್ರಮ,ಅವಳ ಪುಟಾಣಿ ಮಕ್ಕಳಿಗೆ ನಾನು ಮಾಡಿದ ಮ್ಯಾಗಿ ಇಷ್ಟ ಅಂತೆ. ಉಳಿದ ದಿನ ಮಾಲವಿಕ, ನಿಹಾರಿಕ ಅವಳ ಮಕ್ಕಳಿಗೆ ಮಾಡಿಕೊಡುತ್ತಾರೆ, ಆದರೆ ನಾನು ಮಾಡುವ ಮ್ಯಾಗಿ special ಅದರಲ್ಲಿ ದೊಡ್ಡ ಟೇಬಲ್ ಚಮಚ ಪ್ರೀತಿ ಕೂಡ ತುಂಬಿರುತ್ತೆ.

ಮಾಲವಿಕ ಅಂತೂ ಒಂದು ಹೆಜ್ಜೆ ಮುಂದೆ, ಮೈಕ್ರೋವೇವ್ ನಲ್ಲಿ ಎರಡೆ ನಿಮಿಷದಲ್ಲಿ ಮ್ಯಾಗಿ ಮಾಡಿಕೊಂಡು ತಿನ್ನುತ್ತಾಳೆ. ಆಕಸ್ಮಾತ ಬೆಳಿಗ್ಗೆ ಅವಳಿಗೆ ಲೇಟ್ ಆದ್ರೆ, ಮನೆಯಿಂದ ಒಂದು ಪ್ಯಾಕೆಟ್ ಮ್ಯಾಗಿ ಎತ್ತುಕೊಂಡು (ಮ್ಯಾಗಿಯ ಸ್ಟಾಕ್ (stock)  ಯಾವತ್ತೂ ಇರತ್ತೆ ಮನೆಯಲ್ಲಿ) ಹೋಗಿ ಅವಳು ಕೆಲಸ ಮಾಡುವಲ್ಲಿ ಮೈಕ್ರೋ ವೇವ್ ಇದೆ ಯಾದ್ದರಿಂದ ಅಲ್ಲೇ ಮಾಡಿಕೊಂಡು, ಅವಳ ಸಹೋದ್ಯೋಗಿಗಳ ಜತೆ ಶೇರ್ ಮಾಡಿಕೊಂಡು ತಿನ್ನುತ್ತಾಳೆ.

ಧನ್ಯವಾದಗಳು ಮ್ಯಾಗಿ.

ನನ್ನ ಆತ್ಮೀಯ ಮಿತ್ರರೊಬ್ಬರು ಒಂದು ಸಲ ಫೋನ್ ಮಾಡಿದಾಗ ನಾವು ಮ್ಯಾಗಿ ತಿನ್ನುತ್ತಿದ್ದೆವು. ಅವರು "ಏನು ಮಾಡ್ತಾ ಇದ್ದೀರಾ’ ಅಂತ ಕೇಳಿದಾಗ , ನಾನು ’ ಜಂಕ್ ಫುಡ್ ಕಬಳಿಸ್ತಾ ಇದ್ದೇವೆ’ ಅಂದಿದ್ದೆ..ಆಗ ಅವರು ’ಜಿಂಕೆ ಮರೀನಾ’ ಹಾಡನ್ನ್ನು ನಮಗೋಸ್ಕರ ’ಜಂಕಿ ಮರೀನಾ’ ಅಂತ ಬದಲಾಯಿಸಿ ಹಾಡಿದ್ದರು)
:-)
Picture of Maggie packet from the net.

April 20, 2012

Chowmahalla or the Four Palaces of Hyderabad

My friend Sandhya Vasanth is excited about the Hyderabad Festival and one of the music programmes was  held at the chowmahalla Palace. A jugalbandi between Pt Balamuralikrishna and Pt. Vishwamohan Bhat. This reminded me that I had promised her that i would put in the pictures of the palace.

The first two days of our Hyderabad visit were spent at Ushegaon-tumriguda villages near Adilabad  accompanied by Prof. Trilochan shastri of IIM, Bangalore. We were there on a study tour regarding the constitution of SHGs and their mode of functioning in Andhra Pradesh and to replicate  anything new from them in Karnataka. Though we were accompanied by our colleagues Kempegouda and Satish Kattimani, they did not come with us to the choumahalla, citing tiredness , as on the previous day we had been to the charminar and  had done some shopping at night and it was quite hectic to say the least.

Chaumahalla was the most favorite place i visited in Hyderabad. the watchman in the premise was kind enough to tell us the story of these four palaces. I always say a place is good or bad by the vibes/energies it gives out. My family members of course call me crazy..but thats how i am . This place has very good vibes and i spent more than half a day here. Enjoy the pictures

The Palace has a history which goes back to over a period of 200 years built by the Nizams of Hyderabad. the four palaces are named Afzal Mahal, Mehtab Mahal, Tahniyath Mahal and Aftaab Mahal. Great architectural splendour, a  sight for the sore eyes. The structures are the confluence of many architectural styles mostly persian though.The buildings and the gardens are  maintained quite well.

A view of the three palaces and the Khilwat Clock tower in the midst

At the entrance. The public toilet is housed here. Some repair work being undertaken


Loved the pot shaped light holders


Miniature of a palace in Silver

Boom
Me with the Nizam

The palm tree lined walk

the arches and the art

three of us with fountain and Darbar hall at the backdrop



The rest house for the visiting dignitaries on the south courtyard

Exact replica of the resting house on the northern courtyard


Inside the grand Darbar Hall also called the Khilwat mubarak





A view of the chandeliers

The Royal seat or the takt-e-nishan


A hand made print depicting the location of palaces and its garden in parchment paper



A room full of black and white pictures/painting showing the various people reigning Hyderabad and some of the palaces.

A close up of one of the chandeliers

Guard Bhaiyya said they have to be on their feet for eight hours at a stretch without any respite. Its totally inhuman if you ask me

Dont know what this is

Entrance to the armory

The grand Darbar Hall. Srikanth with his cell phone and me grring at him long distance :-) Private functions can be held at the hall said the guard

the Chou-shenoys at the choumahalla


Naked wrestlers - in marble

In the Nizams Armory- most of the pic in Srikanth's cell phone and that cell phone was lost. The armory has swords, sheaths, knives, khukri all well displayed , some with intricate designs.

Mannequins in royal attire



Hind entrance to the Palaces

Temple Trees in full bloom


Sri, me and akka

The clock tower to your right
A vintage car musuem housed in the premise. But nothing beats the vintage car museum of Dharmasthala

A closer view of the resting house

hah at last tired of the tour of the palaces we rest under the canopy of a shady tree with birds twittering away. But no breeze mind you

Miya, biwi aur beti no. 1. While me and Srikanth give a romantic pose Malavika is lost in a dream world of her own



the tasty fruit salad coated in malai. fruits were Sapota/Chikku, papaya and a a few pieces of pine apple.
One of our enjoyable jampacked office cum pleasure trips
This post is for you Sandhya Vasanth! Cilck on the pictures for a larger view
:-)
Photographs by Srikanth and Niharika