March 16, 2012

ಆಟ ಒಂದೆssss ಆದ್ರೆ...??!!


ಮೇಲಿನ ಮನೆ ಪುಟ್ಟು ದಿಶಾಂತ ಗೆ ಈಗ ರಜೆ. ನಮ್ಮ ಮನೆಯಲ್ಲೇ ಇರುವುದು ಅವನು. ನಿಹಾ ಗೆ ಪರೀಕ್ಷೆಗೆ ತಯಾರಿ ನಡೆಸಲು ಕೆಲ ದಿನಗಳ ರಜೆ ಕೊಟ್ಟಿದ್ದಾರೆ. ಪುಟ್ಟನ ಜತೆ ದಿನಾ ಆಡಲಿಕ್ಕೆ ಅವನ ಮನೆಗೆ ಬರುತ್ತಿದ್ದ ಹುಡುಗಿಯರು ಡ್ಯಾನ್ಸ್ ಕ್ಲಾಸ್ ಸೇರಿದ್ದಾರೆ. ಹಾಗಾಗಿ ಆಡಲಿಕ್ಕೆ ನಮ್ಮ ಮನೆಗೆ ಬರುತ್ತಾನೆ. ಅಷ್ಟೆ ಅಲ್ಲ ಅವನಿಗೆ ಈಗ ಪುಟ್ಟ ತಮ್ಮ ಹುಟ್ಟಿದ್ದರಿಂದ ಅವನ ಅಮ್ಮ ಆ ಮಗುವಿನ ಲಾಲನೆಯಲ್ಲಿ ವ್ಯಸ್ತರಾಗಿತ್ತಾರೆಂದು ಕೆಲವೊಮ್ಮೆ ನಾನೇ ಪುಟ್ಟನ್ನ ನಮ್ಮ ಮನೆಗೆ ಕರೆಯುತ್ತೇನೆ.

ಅವನ ಹೊಸ ಆಟ ನನ್ನ ಶೋ ಕೇಸ್ ನಲ್ಲಿರೋ ಪುಟ್ಟ ಪುಟ್ಟ ಟೀ ಸೆಟ್ ನಿಂದ ಟೀ ಮಾಡಿಕೊಡುವುದು, ಮತ್ತು ಯಾರು ಅವನ ಜತೆ ಆಡುತ್ತಾರೋ..ಅದನ್ನ ಅವರು ಕುಡಿಯುವುದು. ಸುಮಾರು ಏಳೆಂಟು ಸಲ ಈ ಆಟ ಆಡಿಸುತ್ತಾನೆ.
ಆಟ ಹೀಗೆ ಆಡುವುದು.ನಾವು  ನಿದ್ದೆಮಾಡಿ ಎದ್ದು, ಹಲ್ಲುಜ್ಜಿ, ಸ್ನಾನ ಮಾಡಿ, ದೇವರಿಗೆ ನಮಸ್ಕಾರ ಮಾಡಿ, ಹಣೆಗೆ ವಿಭೂತಿ (ಅವರು ಲಿಂಗಾಯತರು) ಹಚ್ಚಿಕೋ ಬೇಕು. ಆಮೇಲೆ ಅವನು ’ರೀ ಬರ್ರಿ ಟೀ ಕುಡೀರಿ’ ಅಂತಾನೆ.

ನಾವು ಮೂರು ಜನ ಅವನೊಂದಿಗೆ ಆಟ ಆಡುವಾಗ ನಮ್ಮ ಪ್ರತಿಕ್ರಿಯೆ ಹೀಗಿರುತ್ತದೆ

ನಾನು:
ಹೇ ಟೀ ಚೆನ್ನಾಗಿದೆ ಕಣೋ ಇವತ್ತು...ಅಥವಾ....ಇವತ್ತು ಟೀ ಗೆ ಸಕ್ಕರೆ ಕಡಿಮೆ.....ಅಥವಾ....ಇವತ್ತು ಟೀ ಗೆ ಹಾಲಿನ ವಾಸನೆ ಬರ್ತಾ ಇದೆ....ಅಂತಲೋ ಹೇಳುತ್ತೇನೆ.
ಕೆಲವೊಮ್ಮೆ ಆಫಿಸಿನ ಕೆಲಸ ಜಾಸ್ತಿ ಇದ್ದರೆ..ಪುಟ್ಟು ಇವತ್ತು ಒಂದೇ ಸಲ ಆಡೋದು ಅಂದ್ರೆ...ಅವನು , "ಹಂಗೆಲ್ಲ ಹೇಳಿದ್ರೆ ನಾಳೆಯಿಂದ ನಾನು ಆಡಕ್ಕೆ ಬರಲ್ಲ’ ಅಂತಾನೆ. ಆಗ ನಾನು ’ ಹೇ ಹಂಗೆಲ್ಲ ಹೇಳಬೇಡ್ವೋ, ನಂಗೆ ಬೇಜಾರಾಗತ್ತೆ, ಮತ್ತು ನಾನು ಯಾರು ಜತೆ ಆಡ್ಲಿ ಅಂತೆಲ್ಲ ಪೂಸಿ ಹೋಡಿತೀನಿ..

ನೀಹಾ:
ನನಗೆ ಪರೀಕ್ಷೆ ಇದೆ. ಒಂದೆ ಸಲ ಆಡೋದು ಅಂತಾಳೆ...ಅದಕ್ಕೆ ಅವನು ’ಇಲ್ಲ ನಾಲ್ಕ್ಸ್ ಸಲ ಆಡಬೇಕು...ಇಲ್ಲದಿದ್ದರೆ ನಾಳೆಯಿಂದ ನಾನು ಆಡಕ್ಕೆ ಬರಲ್ಲ...ಅಂದಾಗ ಹಾಗೆಲ್ಲ ಅನ್ನಬಾರದಲ್ಲ್ವಾ ಪುಟ್ಟು, . ನಿಹಾ compromise ಮಾಡ್ತಾಳೆ. "ಸರಿ ಎರಡು ಸಲ ಆಡೋದು, ಮತ್ತೆ ನನಗೆ ಕಡಿಮೆ ಮಾರ್ಕ್ಸ್ ಬಂದ್ರೆ ಶೆಣೈ ಅಂಕಲ್ ಬೈತಾರೆ’ ಅದಕ್ಕೆ ಅವನು ಹೂಂ...ಅಂತ ಅವರ ಆಟ ನಡಿತದೆ...

ಮಾಲು:
ಅವಳು ಅವನ ಜತೆ ಅಪರೂಪಕ್ಕೆ ಅವಳಿಗೆ ರಜೆ ಇದ್ದಾಗ ಆಡೋದು. ಎರಡು ಸಲ ಆಡಿದ ಮೇಲೆ ಅವಳು, ಹೋಗೋ, ಬೋರ್ ಆಟ..ಎಷ್ಟು ಸಲ ಆಡೋದು ಅಂದ್ರೆ ಅವನದ್ದು ಯಥಾ ಪ್ರಕಾರದ ವರಾತ ಶುರು: ನೋಡು ಅಕ್ಕ ಹಾಗೆಲ್ಲ ಹೇಳಿದ್ರೆ ನಾಳೆಯಿಂದ ನಾನು ಆಡಕ್ಕೆ ಬರಲ್ಲ, ಅಂದ್ರೆ ಅವಳು ’ಹೋಗ್ ಹೋಗು ಏನು ನನಗೆ ಬ್ಯ್ಲಾಕ್ ಮೈಲ್ ಮಾಡ್ತೀಯ ಅಂದ್ರೆ...ಅವನು ಸುಮ್ಮನಾಗಿಬಿಟ್ಟ. ಸ್ವಲ್ಪ ಹೊತ್ತು ಕಂಪ್ಯೂಟರ್ ನಲ್ಲಿ ice ಪ್ರಿನ್ಚೆಸ್ ಆಟ ಆಡಿ ಮನೆಗೆ ಹೋದ.

ನಾನು ಮಾಲವಿಕ ಳಿಗೆ ಕೇಳ್ದೆ...ಯಾಕೆ ಪಾಪ ಅವನಿಗೆ ಹಾಗಂದಿದ್ದು. ನಾವೆಲ್ಲ ಹೇಗೆ ಆಟ ಆಡ್ತೀವಿ ಅವನ ಜತೆ..ನೀನು ಹಾಗೆ ಆಡಬೇಕು ಅಂದ್ರೆ ಅವಳು ’ವ್ಹಾಟ್ ವೈ ಆರ್ ಯು ಟೀಚಿಂಗ್ ಹಿಮ್ ದ್ಯಾಟ್ ಹೀ ಕೆನ್ ಹ್ಯಾವ್ ಹಿಸ್ ಔನ್ ವೇ?’ ಯೇ ಹೋಗೆ ಎಷ್ಟು ಸಣ್ಣವನು (ನಾಲ್ಕು ವರಷ) ಅವನು..ಅಂದ್ರೆ  ಹೌದು ಈಗ ಅವನು ಸಣ್ಣವನು , ಲೇಟರ್ ಆನ್ ಹಿ ಇಸ್ ಗೋಯಿಂಗ್ ಟು ಗ್ರೋ ಅಪ್ ಆಂಡ್ ಹಿ ವಿಲ್ ಥಿಂಕ್ ಹಿ ಕ್ಯಾನ್ ಹ್ಯಾವ್ ಹಿಸ್ ಔನ್ ವೇ ಅಂದಾಗ ನಾನೇ ಸುಮ್ಮನಾದೆ.........

ಹಲವಾರು ವರ್ಷಗಳ ಹಿಂದೆ ನನ್ನ short film maker ಮಿತ್ರರೊಬ್ಬರು ನನಗೆ ನನ್ನ ಫಿಲ್ಮ್ ನಲ್ಲಿ ಆಕ್ಟ್ ಮಾಡ್ತೀರಾ ಅಂತ ಕೇಳಿದಾಗ ನಾನು ’even at gunpoint i dont think i will manage the A of acting ' ಅಂದಿದ್ದೆ..ಈಗ ಪುಟ್ಟು ನನ್ನಿಂದ ಸುಮಾರೆಲ್ಲ ಆಕ್ಟ್ ಮಾಡಿಸುತ್ತಾನೆ. ಅವನು ಟೈಲರ್ ಆದ್ರೆ..ನಾನು ಕಸ್ಟಮರ್..ಅವನು ಟೀಚರ್ ಆದ್ರೆ ನಾನು ಸ್ಟುಡೆಂಟ್..ಅವನು ಡಾಕ್ಟರ್ ಆದ್ರೆ ನಾನು ಪೇಷಂಟ್......

:-)
ಸುಮ್ನೆ ಒಂದು small post......blogger.com upgrade ಆಗ್ತಾ ಇದೆ ಅನ್ನಿಸುತ್ತೆ. ಕನ್ನಡದಲ್ಲಿ ಟೈಪ್ ಮಾಡಲಿಕ್ಕೆ ಸುಮಾರೆಲ್ಲ ತಲೆ ಖರ್ಚು ಮಾಡಬೇಕಾಯಿತು....
ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು in advance.....ಮುಂದಿನ ತಿಂಗಳು ನಮ್ಮ ಭೇಟಿ!!!!!!!

2 comments:

  1. >>> ಕನ್ನಡದಲ್ಲಿ ಟೈಪ್ ಮಾಡಲಿಕ್ಕೆ ಸುಮಾರೆಲ್ಲ ತಲೆ ಖರ್ಚು ಮಾಡಬೇಕಾಯಿತು....

    ಗೂಗಲ್ ಟ್ರಾನ್ಸ್ ಲಿಟರೇಶನ್ ಪುಟ ಉಪಯೋಗಿಸಿ ಕಾಪಿ ಪೇಸ್ಟ್ ಮಾಡಿ ಕನ್ನಡ ಬರೆಯುವುದು ನನ್ನ ಅಭ್ಯಾಸ.
    xxxxxxxxxx

    " ಹೌದು ಈಗ ಅವನು ಸಣ್ಣವನು , ಲೇಟರ್ ಆನ್ ಹಿ ಇಸ್ ಗೋಯಿಂಗ್ ಟು ಗ್ರೋ ಅಪ್ ಆಂಡ್ ಹಿ ವಿಲ್ ಥಿಂಕ್ ಹಿ ಕ್ಯಾನ್ ಹ್ಯಾವ್ ಹಿಸ್ ಔನ್ ವೇ"
    ನನ್ನ ಅಭಿಪ್ರಾಯವೂ ಅದೇ!

    xxxxxxxxx

    ನಿಮಗೂ, ನಿಮ್ಮವರೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.

    ReplyDelete
  2. Dear Anom!!
    thank you
    yes i did the copy paste thingy that is why the change in font size. will rectify it soon.....
    :-)
    ms

    ReplyDelete