November 28, 2011

ಭೇಟಿಯಾಗುವ ಮುನ್ನ ಕಣ್ಮರೆಯಾದ ಶ್ರೀ ನಾಗರಾಜ ಜವಳಿ

ಇವತ್ತು ಮಧ್ಯಾಹ್ನ  ನೀಲೇಶ ಜವಳಿ ಎಸ್ ಎಮ್ ಎಸ್ ’my chikkappa Nagaraj Javali expired today' ಓದಿದಾಗ ನನಗೆ ಅದು ತಲೆಗೆ ಹೋಗಲು ಎರಡು ನಿಮಿಷ ಗಳೆ ಬೇಕಾದವು.sms ಎಷ್ಟು ಹೊತ್ತಿಗೆ ಕಳುಹಿಸಿದ್ದು ಅಂತ ನಾನು ನೋಡಲಿಲ್ಲ. ಭಾನುವಾರ ಅಂದ್ರೆ ಒಂದಷ್ಟು ಕೆಲಸಗಳು, ಹಾಗೂ ನಾನು ಪ್ರವಾಸ ಕೈಗೊಂಡು ಮನೆಗೆ ಬಂದು ಕೆಲವು ದಿನಗಳಾಗಿವೆ, ಆದ್ದರಿಂದ ಕ್ಲೀನಿಂಗ್, ಅದು-ಇದು.... ಶ್ರೀಕಾಂತ ಗೆ ಹೇಳಿದಾಗ ಸ್ವಲ್ಪ ಹೊತ್ತು ಅವರೂ ಗರಬಡಿದವರಂತಾಗಿ ’what!! so sad' ಅಂದರು
ನಿನ್ನೆ ರಾತ್ರಿಯಷ್ಟೆ ನಾವು ಅವರ ಬಗ್ಗೆ ಮಾತನಾಡುತ್ತಿದ್ದೆವು. ತೀರ್ಥಹಳ್ಳಿಯಲ್ಲಿರುವ ಶ್ರೀಕಾಂತ ಕಸಿನ್ ಮಗಳು  ಅಪೂರ್ವ ಸಧ್ಯಕ್ಕೆ ನಮ್ಮ ಮನೆಯಲ್ಲಿ ಇದ್ದಾಳೆ. ಊಟ ಮಾಡ್ತಾ ಲೋಕಾಭಿರಾಮವಾಗಿ ತೀರ್ಥಹಳ್ಳಿ, ಅಲ್ಲಿನ ಸಾಂಸ್ಕೃತಿಕ ಚಟುವಟಿಕೆಗಳು,ನಾಟಕ-ಸಂಗೀತ ಕಾರ್ಯಕ್ರಮಗಳು, ಅದಕ್ಕೆ ಜನರ ಪ್ರತಿಕ್ರಿಯೆ, ಹೀಗೆ ಮಾತು ಬಂದಾಗ ನೀಲೇಶ ಜವಳಿಯ ನಾಟಕ ತಂಡ ’ನಟಮಿತ್ರರು’ ಅವರ ಚಿಕ್ಕಪ್ಪ ನಾಗರಾಜ ಜವಳಿ. ಇವರೆಲ್ಲ  ಮಾತಲ್ಲಿ ಹಾದು ಬಂದಿದ್ದರು, ಇವತ್ತು sms ಬಂದಾಗ ಒಂದು ಕ್ಷಣ ಮನಸ್ಸು ಹೌಹಾರಿದ್ದು  ಹೌದು.
ಅವರು ನನ್ನ ಬ್ಲಾಗ್ ಓದುಗರೂ ಕೂಡ. ಶ್ರೀಕಾಂತ ಭಾವ ಯೋಗೇಶ ಜೋಯಿಸ್ ಮತ್ತು ನಾಗರಾಜ ಜವಳಿ ಆಪ್ತ ಮಿತ್ರರು. ಮಂಗಳೂರಿನ Canara College ನ ಪ್ರಾಂಶುಪಾಲರಾಗಿದ್ದ ಅವರು ವಿಶ್ರಾಂತ ಜೀವನವನ್ನು ಅವರ ಊರಾದ ತೀರ್ಥಹಳ್ಳಿಯಲ್ಲಿ ಕಳೆಯುತ್ತಿದ್ದರು. ಹಲವು ಮಿತ್ರರೊಡಗೂಡಿ ಪ್ರತಿ ದಿನ ಸಂಜೆ  ಇನ್ನೋರ್ವ ಮಿತ್ರರ ಮನೆಯ ಜಗಲಿಯಲ್ಲಿ ಅವರ ಬೈಠಕ್. ಶ್ರೀಕಾಂತ ಭಾವನವರಿಂದಲೆ ನನಗೆ ಗೊತ್ತಾಗಿದ್ದು ಅವರು ನನ್ನ ಬ್ಲಾಗ್ ಓದುಗರೆಂದು. ತೀರ್ಥಹಳ್ಳಿಯ ಬಗ್ಗೆ ಬರೆದಾಗಲೆಲ್ಲ ಅವರು ಯೋಗೇಶ ಅಣ್ಣನಿಗೆ ಓದಿ ಹೇಳುತ್ತಿದ್ದರಂತೆ. ಯೋಗೇಶ ಅಣ್ಣನವರಲ್ಲಿ ಕಂಪ್ಯೂಟರ್ ಇಲ್ಲ.ಅವರು ನನ್ನ ಬ್ಲಾಗ್ ಓದುತ್ತಾರೆಂದು ನಾನು ಮುಜುಗರ ಪಟ್ಟಿದ್ದೆ. ನಾಗರಾಜ ಜವಳಿಯವರಿಗೆ ಇಷ್ಟವಾದ ನನ್ನ ಪೋಸ್ಟ್ ’ಬಕುಳಾಬಾತ್ ಎಂಬ thriller' 
ನೀಲೇಶ ಪರಿಚಯ ನನಗೆ ಇತ್ತೀಚಿಗೆ facebook ನಲ್ಲಿ ಆಗಿದ್ದು.ಅವನು ಒಂದು ದಿನ ’ಈಗಷ್ಟೆ ವಸುಧೇಂದ್ರ ರ ’ನಮ್ಮಮ್ಮ ಅಂದ್ರೆ ನಂಗಿಷ್ಟ”ಪುಸ್ತಕ ಓದಿದೆ. ನೀವು ಓದಿದಿರಾ ಅಂತ ಕೇಳಿದಾಗ, ನನ್ನ ಬಳಿ ಅವರ ಎಲ್ಲ ಪುಸ್ತಕ ಇದೆ, ಎಲ್ಲವನ್ನೂ ನಾನು ಓದಿ ಇಷ್ಟ ಪಟ್ಟಿದ್ದೇನೆ ಅಂತ ಹೇಳಿ  ನನ್ನ ಪುಸ್ತಕದ collection ಬಗ್ಗೆ ಜಂಬ ಕೊಚ್ಚಿಕೊಳ್ತಾ ಇದ್ರೆ, ಅವನು, ನನ್ನ ಚಿಕ್ಕಪ್ಪನ ಬಳಿ 3000 ಸಾವಿರಕ್ಕಿಂತ ಹೆಚ್ಚು ಪುಸ್ತಕ ಇದೆ ಅಂತ ಹೇಳಿದಾಗ ನಾನು ಸುಮ್ಮನಾಗಿ ಬಿಟ್ಟೆ. ಆಗಿನಿಂದ ನನಗೆ ನಾಗರಾಜ ಜವಳಿಯವರ ಪುಸ್ತ್ಕಕಗಳನ್ನು ನೋಡಬೇಕು ಎಂಬ ಕುತೂಹಲ. ಹಾಗು ದೇಶಕಾಲ ಸಂಚಿಕೆಗಳೆಲ್ಲವೂ ಅವರಲ್ಲಿ ಲಭ್ಯವೆಂದು ಗೊತ್ತಾದ್ದರಿಂದ ನಾನು ಇಲ್ಲಿ ಆ ಪುಸ್ತಕಗಳನ್ನು subscribe ಮಾಡಿಲ್ಲ. ತೀರ್ಥಹಳ್ಳಿಗೆ ಹೋದಮೇಲೆ ಅವರಿಂದ ಪಡಕೊಂಡು ಓದಿದರಾಯಿತೆಂದು.
ತೀರಾ ಇತ್ತೀಚಿಗೆ ಹೆಗ್ಗೋಡಿನಲ್ಲಿ ನೀನಾಸಂ ಸಾಂಸ್ಕೃತಿಕ ಶಿಭಿರಕ್ಕೆ ನೀಹಾರಿಕ ಕೂಡ ಭಾಗವಹಿಸಿದ್ದಳು. ನಾನು ಶ್ರೀಕಾಂತ ಆ ಸಮಯ ತೀರ್ಥಹಳ್ಳಿಗೆ ಹೋಗುವುದಿತ್ತು. ಆಗ ನಾವು ಯಾವುದಾರರೊಂದು ಒಂದು ದಿನ  ನಾಟಕ ನೋಡಿ , ಮತ್ತು ನೀಹಾ ಳನ್ನು ಭೆಟಿಯಾದಾಗೂ ಆಯಿತೆಂದು ಅಲ್ಲಿಗೆ ಹೋಗಿ ಬರುವುದೆಂದು ತೀರ್ಮಾನಿಸಿದ್ದೆವು. ಆದರೆ ಇಲ್ಲಿಯ ಆಫಿಸಿನ ಹಲವು ಕೆಲಸಗಳ ಒತ್ತಡದಿಂದ ಹೋಗಲಾಗಲಿಲ್ಲ. ನೀಲೇಶ ಜವಳಿ ನನಗೆ ಕಾರ್ಯಕ್ರಮದ ಪಟ್ಟಿ ಕಳುಹಿಸುತ್ತೇನೆ ಅಂದಾಗ ನಾನು, ’ಬೇಡ, ನನ್ನ ಬಳಿ ಇದೆ, ಮತ್ತು ನಿಹಾ ಅಲ್ಲಿದ್ದಾಳೆ ಎಂದಾಗ, ನಾನು ಚಿಕ್ಕಪ್ಪ ಹೆಗ್ಗೋಡಿಗೆ ಹೋಗ್ತಾ ಇದ್ದೇವೆ, ನನಗೆ ಗೋರಾ ನೋಡ ಬೇಕಿತ್ತು ಆದರೆ ಚಿಕ್ಕಪ್ಪನಿಗೆ ಮರಾಠಿ ಸಂಗೀತ ನಾಟಕ”ಕತ್ಯಾರ್ ಕಾಳ್ಜಾತ್ ಘುಸ್ಲಿ’ ನೋಡಬೇಕಂತೆ, ನಾಳೆ ಹೋಗ್ತಾ ಇದ್ದೇವೆ ಅಂತ sms ಮಾಡಿದಾಗ, ನಾನು ’ನೋಡಿ ಹೇಳು ತಮ್ಮ, ಹಾಗೆ ನಿಹಾ ಗೆ ಹಾಯ್ ಹೇಳು’ ಚೆನ್ನಾಗಿದ್ದರೆ ನಾನು  ಎರಡು ದಿನ ಬಿಟ್ಟು ರಂಗಶಂಕರದಲ್ಲಿ  ಆ ನಾಟಕ ಪ್ರದರ್ಶನ ಇದೆ , ನೋಡುತ್ತೇನೆ’ ಅಂದಿದ್ದೆ. ಯಾಕಂದರೆ ನನಗೆ ಮರಾಠಿ ನಾಟಕಗಳು ಇಲ್ಲಿ ಸಿಗುವುದು ಕಡಿಮೆ. ಬಂದಾಗ ನಾನು ಆ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ. ನಮ್ಮ ಮನೆಯಿರೋದು ಮಹಾಲಕ್ಷ್ಮಿಪುರಂ ನಲ್ಲಿ, ಜೆ.ಪಿ. ನಗರಕ್ಕೆ ಹೋಗೋದು ಒಂದು ದೊಡ್ಡ ಸಾಹಸ.ಆದರೂ ತಪ್ಪಿಸಿಕೊಳ್ಳಲ್ಲ.
ನಾಟಕ ನೋಡಿದ ಮೇಲೆ ನೀಲೇಶ ಹಾಗೂ ನಿಹಾರಿಕಾ sms ಒಟ್ಟೊಟ್ಟಿಗೆ ಬಂದಿತ್ತು..
ನೀಲೇಶ: ನಾಟಕ ಸಕತ್ ಅಕ್ಕ...dont miss
ನಿಹಾರಿಕ: mommy marathi drama was awesome. you should watch ಅಂದಾಗ ಕೂಡಲೆ indianstage ನಲ್ಲಿ ಆನ್ ಲೈನ್ ಟಿಕೆಟ್ ಗೆ ಟ್ರೈ ಮಾಡಿದೆ, ಆದರೆ ಯಾಕೋ ಅದು ಸರಿ operate ಆಗ್ತಾ ಇರಲಿಲ್ಲ.ಮರುದಿನ ಬೆಳಿಗ್ಗೆ 9 ಗಂಟೆಯಿಂದ 9.30 ತನಕ ಕಿರಣ ವಟಿ ಯವರ ಸೆಲ್ ನಂಬರ್ ಗೆ (ನಾಟಕದ ಟಿಕೆಟ್ ಅವರಲ್ಲಿ ಲಭ್ಯವೆಂದು ನನಗೆ ಇ-ಮೈಲ್ ನಲ್ಲಿ ಬಂದಿತ್ತು) ಪ್ರಯತ್ನಿಸಿ, ಅವರು ಫೋನ್ ಎತ್ತುಕೊಳ್ಳದಿದ್ದಾಗ, ಏನಾದರಾಗಲಿ ರಂಗಶಂಕರಕ್ಕೆ ಹೋಗಿ ನೋಡುವುದು, ಟಿಕೆಟ್ ಸಿಕ್ಕರೆ ಸಿಗುತ್ತದೆ, ಇಲ್ಲದಿದ್ದರೆ shankaras ನಲ್ಲಿ ಯಾವುದಾದರು ಪುಸ್ತ್ತಕ, ಸಿ.ಡಿ ಕೊಂಡು, ಜಯನಗರ 4th ಬ್ಲಾಕ್ ಒಂದು ರೌಂಡ್ ಹಾಕಿ ಬರುವುದು ಅಂತ. 9.30 ವರೆ ಸುಮಾರಿಗೆ ಕಿರಣ ವಟಿಯವರೆ ಫೋನ್ ಮಾಡಿದಾಗ ನಾನು ಎರಡು ಟಿಕೆಟ್ ಬುಕ್ ಮಾಡಿದೆ.
ನಾಟಕ ನಾನು ಮಾತ್ರ ಅಲ್ಲ ಮಾಲವಿಕ ಕೂಡ ಎಂಜಾಯ್ ಮಾಡಿದಳು.ರಂಗಶಂಕರ jampacked. ಮರಾಠಿ ಮಾತನಾಡುವುವವರನ್ನು ಕಂಡು ನನಗೆ ಮುಂಬೈ ಗೆ ಹೋಗಿ ಬಂದಷ್ಟೇ ಖುಶಿ. ಮನೆಗೆ ಬಂದು ನಿಹಾ ಹಾಗು ನೀಲೇಶ ಇಬ್ಬರಿಗೂ ನನಗೆ ನಾಟಕ, ಅದರಲ್ಲಿನ ಹಾಡು ಎಲ್ಲವೂ ಇಷ್ಟವಾಯಿತು, ಮಾತ್ರವಲ್ಲ ಎಲ್ಲರ ಜತೆ ನಾನು ’once more’ ಕೂಗು ಹಾಕಿದ್ದನ್ನು sms ಮಾಡಿದೆ.
ನಿಹಾ smiley ಕಳಿಸಿದ್ದರೆ, ನೀಲೇಶ, ’ಅಕ್ಕ, ನನಗೆ ಅದರಲ್ಲಿನ ಎಲ್ಲ ಹಾಡುಗಳು ಬಾಯಿ ಪಾಠ ಆಗಿದೆ. ನಾನು ಚಿಕ್ಕಪ್ಪ ಹೆಗ್ಗೋಡಿಗೆ ಜೀಪ್ ಮಾಡಿಕೊಂಡು ಹೋಗಿದ್ವಿ. ದಾರಿಯಲ್ಲೆಲ್ಲ, ಹೋಗ್ತಾ ಬರುತ್ತಾ ಆ ಸಂಗೀತ ನಾಟಕದ ಆಡಿಯೋ ಕೇಳ್ತಾ ಹೋದ್ವಿ’ ಅಂತ ಮರು sms ಮಾಡಿದ. ನಾನು ನಾಗರಾಜ ಜವಳಿಯವರು ತಲೆದೂಗುತ್ತ, ವಾಹ!! ಅಂತ ಕೈ ಮೇಲೆತ್ತಿದ್ದು, ಪ್ರಯಾಣದ ಮಧ್ಯದಲ್ಲಿ ಗೋಳಿ ಬಜೆ ತಿಂದಿದ್ದು ಇಲ್ಲಿ ಕೂತು imagine ಮಾಡ್ತಾ ಇದ್ದೆ. ಮನಸ್ಸು ಎಷ್ಟು ವಿಚಿತ್ರ ಅನ್ನುವುದಕ್ಕೆ ಇದೂ ಕೂಡ ಒಂದು ನಿದರ್ಶನ- ನಾನು ನಾಗರಾಜ ಜವಳಿಯವರ ಬಗ್ಗೆ ಕೇಳಿದ್ದೇನೆ, ಅವರನ್ನು ನೋಡಿಲ್ಲ.. ಅವರ ಸಾಂಸ್ಕೃತಿಕ ಚಟುವಟಿಕೆ, ಅವರ ಅಗಾಧ ಪುಸ್ತಕದ collection, ಓದುವ ಹವ್ಯಾಸದ ಬಗ್ಗೆ ಯೋಗೇಶ ಅಣ್ಣನವರಿಂದ ಕೇಳಿದ್ದೇನೆ, ಆದರೆ ಅವರನ್ನು ಭೇಟಿಯಾಗುವುದನ್ನು ಮುಂದಕ್ಕೆ  ಹಾಕುತ್ತ ಬಂದಿದ್ದೆ. ತೀರ್ಥಹಳ್ಳಿಗೆ ಹೋದಾಗ ತೋಟದ ಕೆಲಸ, ಶ್ರೀಕಾಂತ ಅಕ್ಕನಿಗೆ (ಅವರಿಗೂ ವಯಸ್ಸಾಗಿದೆ) ಸ್ವಲ್ಪ ಮನೆ ಕೆಲಸದಲ್ಲಿ ಸಹಾಯ ಮಾಡುವುದು ಇದರಲ್ಲೇ ಸಮಯ ಹೋಗುತ್ತಿತ್ತು. ಈಗ ’ಛೆ’ ಅನ್ನಿಸುತ್ತಿದ್ದೆ.
 ಇದು ನನ್ನಕಡೆಯಿಂದ ಒಂದು ಪುಟ್ಟ  ಬ್ಲಾಗ್ ನಮನ ಕಣ್ಮರೆಯಾದ ನಾಗರಾಜ ಜವಳಿ ಮಾಮನವರಿಗೆ. ಮುಂದಿನ ಸಲ ತೀರ್ಥಹಳ್ಳಿಗೆ ಹೋದಾಗ ಅವರನ್ನು ಭೇಟಿಯಾಗಬೇಕೆಂದಿದ್ದೆ!!!
:-(

November 24, 2011

ತಿಂಗಳ break ke baad :-)

’ನಮ್ಮ ಸಂಸ್ಥೆಯ welfare fund” ಪೋಸ್ಟ್ ಬರೆದ ಮೇಲೆ ಒಂದು ತಿಂಗಳು ನಿಮ್ಮ ಮೆದುಳು ತಿನ್ನಲ್ಲ ಅಂತ ರಜೆ ಸಾರಿದ್ದೆ. ಹಳೆ ಪೋಸ್ಟ್ ನಲ್ಲಿ ಕೆಲವೊಂದು ಕಾಗುಣಿತದ ತಪ್ಪುಗಳಿದ್ದವು. ಅದನ್ನು ಸರಿ ಪಡಿಸಲು ಎಡಿಟ್ ಮೋಡ್ ನಲ್ಲಿಟ್ಟಿದ್ದಷ್ಟೆ, ಅಷ್ಟರಲ್ಲಿ ಎಲ್ ಪಿ ಜಿ ಗ್ಯಾಸ್ ರಿಫಿಲ್ ನವನು ಬಂದಿದ್ದ. ಬಾಗಿಲು ತೆರೆದಿದ್ದರಿಂದ ಮೇಲಿನ ಮನೆ ಪುಟ್ಟು ದಿಶಾಂತ ಕೂಡ ಒಳಗೆ ಬಂದು ಸೀದ ಕಂಪ್ಯೂಟರ್ ಬಳಿ ಬಂದು ಕೂತ. ಅವನ ಗೇಮ್ಸ್ ಯಾವ ಫೋಲ್ಡರ್ ನಲ್ಲಿದೆ ಅಂತ ಅವನಿಗೆ ಗೊತ್ತು. ಅದನ್ನು ತೆರೆದು ಅವನು ಆಟ ಆಡಿ ಕೊಳ್ಳುತ್ತಿರುತ್ತಾನೆ. ನನಗೂ ನನ್ನ ಬ್ಲಾಗ್ ಸೈನ್ ಇನ್ ಆಗಿಟ್ಟಿದ್ದು ಮರೆತು ಹೋಯ್ತು. ಅವನು ಆಟ ಆಡುವಾಗಲೆ ’ಒಂದು ನಿಮಿಶ ಪುಟ್ಟಣ್ಣ; ನನ್ನ ಫೈಲ್ ಕ್ಲೋಸ್ ಮಾಡ್ತೀನಿ, ಆಮೇಲೆ ಆಡು ಅಂತ ಹೇಳಿ ನಾನು ಪಬ್ ಲಿಶ್ ಪೋಸ್ಟ್ ಕೊಟ್ಟು ಬಿಟ್ಟೆ. ಮರುದಿನದ ಪ್ರಯಾಣದ ಪ್ಯಾಕಿಂಗ್ ಮಾಡಿದೆ. ಅವನು, - ಇನ್ನೊಂದು ರುಂ ನಲ್ಲಿ ಬ್ಲಾಕ್ ಬೋರ್ಡ್ ಇದೆ. ಅಲ್ಲಿ chalk ನಿಂದ ಚಿತ್ರ ಬಿಡಿಸ್ತಾ ಇದ್ದ. ನಾನು ಪುನ: ಬ್ಲಾಗ್ ತೆರೆದು ನೋಡಿದ್ರೆ ಅದರಲ್ಲಿ ಅರ್ಧಕ್ಕಿಂತ ಜಾಸ್ತಿ delete ಆಗಿ ಬಿಟ್ಟಿತ್ತು. ಒಂದೆ ಸಲ ’ಪುಟ್ಟು’ ಅಂತ ಕಿರುಚಿದೆ. ಅವನು ಓಡೋಡಿ ಬಂದ ’ಯಾಕೋ ಆಂಟಿ ಬರೆದಿದ್ದೆಲ್ಲ delete ಮಾಡಿದ್ದಿ’ ಅಂದೆ...ನನಗೆ ಕಂಡಾಪಟ್ಟೆ ಸಿಟ್ಟು ಬಂದಿತ್ತು. ಅವನು ಮುಖ ಚಿಕ್ಕದು ಮಾಡಿ ನನ್ನ ಕಡೆ ನೋಡ್ತಾ ನಿಂತು ಬಿಟ್ಟ, ನಾನು ಸಿಟ್ಟಿಗೆದ್ದದ್ದು ಅವನು ನೋಡೇ ಇಲ್ಲ. ಕೂಡಲೆ ನನಗೆ ’ಛೆ’ ಅನ್ನಿಸ್ತು. ಮಹಾ ನಾನೇನು ಮಹಾ ದೊಡ್ಡ ಬರಹಗಾರಳೇನಲ್ಲ. ಹೋದರೆ ಹೋಯ್ತು. ಮತ್ತು ನೀಹಾ ಯಾವತ್ತೂ ಹೇಳ್ತಾಳೆ ಸಿಟ್ಟು ಬಂದಾಗ ಆಲೋಚನೆ ಮಾಡು. ಸಿಟ್ಟು ಯಾಕೆ ಬರುತ್ತೆ ಅಂದರೆ ತಪ್ಪು ನಮ್ಮದಿರುತ್ತೆ, ’ ಅವಳು ಹೇಳೋದು ಎಷ್ಟು ನಿಜ ಅಲ್ಲವಾ? ನಾನು ಸಿಸ್ಟಮ್ ನಿಂದ ಏಳುವ ಮುಂಚೆ save ಮಾಡಿ, ಸೈನ್ ಔಟ್ ಆಗಬೇಕಿತ್ತು. ನಾನು ಅವನಿಗೆ sorry ಹೇಳಿ ತಬ್ಬಿಕೊಂಡು ಬಿಟ್ಟೆ. ಅವನೂ ಅಷ್ಟೆ ಜೋರಾಗಿ ತಬ್ಬಿ sorry aunty ಅಂದ. ನಾನು ಅವನಿಗೋಸ್ಕರ ಅವನ ಇಷ್ಟದ್ದ ಚಾಕೊಲೇಟ್ ಐಸ್ಕ್ರೀಮ್ ತಂದು ಕೊಟ್ಟೆ.

:-)
ಒಂದು ತಿಂಗಳ ಟೂರ್ ಅಂತ ಹೋಗಿದ್ದೆ. ಆದರೆ ಶ್ರೀಕಾಂತ ರಾಯರು ಆಫ್ರಿಕಾ ಗೆ ಹೊರಟಿದ್ದಾರೆಂದು ಬೇಗ ಬರಬೇಕಾಯಿತು. ಅಷ್ಟೆ ಅಲ್ಲ ಶ್ರೀಕಾಂತ ಎರಡೆರಡು ದಿನಕ್ಕೆ ಫೋನ್ ಮಾಡ್ತಾ ಇದ್ರು. ಬೇಗ ಬಾ..ನೀನಿಲ್ಲದೆ ಇಲ್ಲಿ ಬೇಜಾರಾಗುತ್ತೆ ಅಂತ. ಅದಕ್ಕೆ ನಾನು ’ಮಹಾ ಮನೆಯಲ್ಲಿದ್ದಾಗ ಎದುರಿಗೆ ಇದ್ರು ಮಾತಾಡಕ್ಕೆ ಪುರುಸೊತ್ತು ಇರಲ್ಲ, ಯಾವಾಗ್ಲೂ ಮೊಬೈಲ್ ನಲ್ಲೆ ಮಾತಿಗೆ ತೊಡಗಿರ್ತೀರಾ ಅಂತ ನಾನು ಮುನಿಸು ತೋರಿಸಿದೆ. ಅದಕ್ಕೆ ನೀನು ಮನೆಯಲ್ಲಿದ್ದಾಗ ನಿನ್ನ ಹಾಡು, ಅಡಿಗೆ ಮನೆಯಲ್ಲಿ ಪಾತ್ರೆ-ಪರಡಿ ಕುಕ್ಕುವುದು, ಮಕ್ಕಳ ಜತೆ ಪ್ರೀತಿ-ಜಗಳ, ಅಮ್ಮ-ತಮ್ಮಂದಿರ ಜತೆ ಫೋನ್ ನಲ್ಲಿ ಮಾತಾಡುವುದೆಲ್ಲ, ತಮ್ಮನ ಮಗಳ ಜತೆ ಲಲ್ಲೆಗರೆಯುವುದು...ಇವೆಲ್ಲ ನನಗೆ background music  ತರಹ ಇರುತ್ತೆ, ಅದೇ ನನಗೆ ಸಮಾಧಾನ. ನೀನಿಲ್ಲದಾಗ ಎಲ್ಲ ಕಡೆ silence. ಮಕ್ಕಳು ತಮ್ಮಷ್ಟಕ್ಕೆ ಓದಿಕೊಂಡೊ ಏನೋ ಮಾಡುತ್ತಿರುತ್ತಾರೆ.....of course ನನಗೆ ಖುಶಿ ಯಾಗುತ್ತೆ ಅವರು ಆ ತರಹ ಹೇಳುವಾಗ.....ಅದಕ್ಕೆ ಬಂದು ಬಿಟ್ಟೆ. ಅಮ್ಮ ಮಾತ್ರ ಸಿಟ್ಟು ಮಾಡಿದ್ರು. ಮಕ್ಕಳು ದೊಡ್ಡವರಾಗಿದ್ದಾರೆ. ಅವರು ಮ್ಯಾನೇಜ್ ಮಾಡ್ತಾರೆ ನೀನು ತಿಂಗಳ ಕೊನೆಗೆ ಹೋಗು ಅಂತ :-)
ನನ್ನ fishbowl ನಲ್ಲಿರೋ ಮೀನು ಕೂಡ ನನ್ನನ್ನು ಮಿಸ್ ಮಾಡಿದ್ವು  ಅನ್ನಿಸುತ್ತೆ. ತುಂಬ ಚಟುವಟಿಕೆಯಿಂದ ನೀರಲ್ಲೇ ಸದ್ದಿನೊಂದಿಗೆ ತಿಪ್ಪರಲಾಗ ಹಾಕ್ತಾ ಇದ್ರು, ರಾತ್ರಿ ನಾನು fishbowl ಬಳಿ ಕೂತು ಓದುತ್ತಿರುವಾಗ (One hundred shades of White by Preeti Nair..ತುಂಬ ಚೆನ್ನಾಗಿದೆ ಅವರ ನಿರೂಪಣಾ ಶೈಲಿ). ನನಗೆ ತುಂಬ disturb ಆಗ್ತಾ ಇತ್ತು ಮೀನಿನ ಆಟದ ಸದ್ದು. ಅದಕ್ಕೆ ಅವರನ್ನು ಬೆಕ್ಕಿಗೆ ಆಹಾರವಾಗಿ ಕೊಡುತ್ತೇನೆಂದು ಹೆದರಿಸಿದೆ...:-) ನಿಹಾ ಮಲಗಿದ್ದಳು..ಇಲ್ಲದಿದ್ದರೆ ನನಗೆ sadist      ಅನ್ನುತ್ತಿದ್ದಳೋ ಏನೋ.
ಟೂರ್ ನ ಹೈ ಲೈಟ್ ಹಳೇ ಗೋವಾ ನೋಡಿದ್ದು. ಅದನ್ನು ಫೋಟೊ ಸಮೇತ ಇನ್ನೊಂದು ಪೋಸ್ಟ್ ನಲ್ಲಿ ಹಾಕ್ತೇನೆ.
ಸಧ್ಯಕ್ಕೆ ಇಷ್ಟೆ. Delete ಆಗಿದ್ದ ಹಳೆ ಪೋಸ್ಟ್ ಗೆ ಕಮೆಂಟ್ ಹಾಕಿದವರಿಗೆಲ್ಲ ಧನ್ಯವಾದಗಳು ಮತ್ತು sorry!!!