ಒಂದು ಹಳೆ ಪೋಸ್ಟ್ ಹೊಸ ಸೇರ್ಪಡೆಯೊಂದಿಗೆ
ನಾಮಾವಳಿ
ನಾನು ಹುಟ್ಟೋ ಮುಂಚೆ, ಅಮ್ಮನಿಗೆ ಗಂಡು ಮಗು ಅಂತ ಖಾತ್ರಿಯಿತ್ತಂತೆ. ಏಳನೇ ತಿಂಗಳಲ್ಲಿ ಕನಸಲ್ಲಿ ಪುಟ್ಟ ಬಾಲಕೃಷ್ಣ ದನ ಕರು ಗಳೊಂದಿಗೆ ನಿಂತು ಕೊಳಲು ಬಾರಿಸುವುದನ್ನು ನೋಡಿದ್ದರಂತೆ. ಹಾಗೇ ಹೊಟ್ಟೆಯ ಗಾತ್ರ ನೋಡಿ ಮನೆಯಲ್ಲಿರುವ ಹಿರಿಯರೆಲ್ಲ ಗಂಡು ಮಗುವೆ ಹುಟ್ಟುವುದೆಂದು ಹೇಳಿದ್ದರಂತೆ. ಅದರಂತೆ ಅಮ್ಮ ಹುಟ್ಟಲಿರುವ ಮಗನಿಗೆ ’ಮಧುಸೂಧನ, ಕೃಷ್ಣಾನಂದ ಎಂದು ನಾಮಕರಣ ಮಾಡುವ ಕನಸನ್ನು ಇಟ್ಟುಕೊಂಡಿದ್ದಳು.
ಹೊರಗಡೆ ದೀಪಾವಳಿ ಪಟಾಕಿಯ ಸದ್ದಿನೊಂದಿಗೆ ನನ್ನ ಜನನ. ನೋಡಲು ಶ್ಯಾಮಲ ವರ್ಣವಾಗಿದ್ದರು, ಬಾಲಕೃಷ್ಣ ಆಗಿರದೇ, ನಾನು ಕೃಷ್ಣೆಯಾಗಿದ್ದೆ.ಅಮ್ಮನಿಗೆ ಎಷ್ಟು ಗಾಬರಿಯಾಯ್ತೆಂದರೆ..’ಇದು ನನ್ನ ಮಗುವಲ್ಲ. ನನಗೆ ಗಂಡು ಮಗು ಹುಟ್ಟಿರುವುದು ಅಂದು, ಬೇರೆಯವರ ಮಗು ಅಂತ ನನ್ನ ಮುಟ್ಟಲೇ ಇಲ್ಲ. ಸಧ್ಯ ನನ್ನ ಅದೃಷ್ಟ (?)ನರ್ಸ್ ಸಿಟ್ಟು ಗೊಂಡು ಇಲ್ಲಿ ಇವತ್ತು ಹುಟ್ಟಿದ್ದು ಮೂವರೂ ಹೆಣ್ಣು,ನಿಮ್ಮದು ಮೂರನೇದು ಅಂದ್ರಂತೆ,ಇಲ್ಲದಿದ್ದರೆ ನನ್ನನ್ನು exchange ಮಾಡ್ತಿದ್ದರೇನೋ? . ಹಾಲು ಉಣಿಸುವ ಅನಿವಾರ್ಯವಾದಾಗ ನನ್ನನ್ನ ಬಳಿಗೆ ಕರೆದುಕೊಂಡ್ರಂತೆ.
ನನ್ನ ನಾಮಕರಣಕ್ಕೆ , ಕುಟುಂಬದ ಮೊದಲ ಹೆಣ್ಣು ಮಗು ಅಂತ (ನನ್ನ ದೊಡ್ಡಪ್ಪನಿಗೆ ಆಗಲೇ ಮೂರು ಗಂಡು ಮಕ್ಕಳು ಆಗಿದ್ದವು) ಗೋವೆಯಲ್ಲಿರುವ ನಮ್ಮ ಕುಲದೇವಸ್ಥಾಕ್ಕೆ ಒಯ್ದು ಹೆಸರಿಡುವುದೆಂದು ತಿರ್ಮಾನಿಸಿದರು. ನನ್ನ horro(r)scope ನಕ್ಷತ್ರದ ಗುಣಾಕಾರ ಭಾಗಾಕಾರ ಮಾಡಿ ’ಮ’ ದಿಂದ ಶುರುವಾಗುವ ಹೆಸರಿಡಬೇಕೆಂದು...ನಮ್ಮ ಕುಲದೇವತೆಯಾದ ’ಮಹಾಲಸಾ ನಾರಾಯಣಿ’ ಹೆಸರಿಟ್ಟರಂತೆ. ಆದರೆ ಮುಂಬಯಿಯಲ್ಲಿ, ಅದೂ ಶಾಲೆಗೆ ಆ ಹೆಸರು ಬೇಡವೆಂದು ಪುಟ್ಟದಾಗಿ ’ಮಾಲತಿ’ ಯಂತ ಹೆಸರು ಪುರೋಹಿತರೇ ಸೂಚಿಸಿದರು. ನನ್ನ ಅಜ್ಜ ಅದಕ್ಕೆ ಮೋಹಿನಿ ಸೇರಿಸಿದರು. ’ಮಾಲತಿ-ಮೋಹಿನಿ’ ಹೆಸರು ನನ್ನದಾಯಿತು. ಶಾಲೆಗೆ ಮಾಲತಿ ಹೆಸರು ನೋಂದಾಯಿಸಲಾಯಿತು. ಯಾಕೆ ಅಂದ್ರೆ ಮೋಹಿನಿಯಂದ್ರೆ ಹೆಣ್ಣು ಭೂತ/ದೆವ್ವವಂತೆ.
ಸರಿ, ಮದುವೆ ಆಗಿ ಕೂಡುಕುಟುಂಬಕ್ಕೆ ಬಂದೆ. ಅಲ್ಲಿ ನೋಡಿದ್ರೆ ಆಗಲೇ ನಾಲ್ಕು ಮಾಲತಿಯರು ಇದ್ರು. ಅವರನ್ನು distinguish ಮಾಡೋದು..ದೊಡ್ಡ ** ಮಾಲತಿ, ಮೆಳ್ಳೆ ಗಣ್ಣಿನ ಮಾಲತಿ, ಹೆಬ್ರಿ ಮಾಲತಿ, ಉದ್ದ ಮಾಲತಿ...ಸಧ್ಯ ನನಗೆ ಮಾತ್ರ ಶ್ರೀಕಾಂತ್ ನ ಮಾಲತಿ ಅಂತಿದ್ರು. ಆದರೆ ಅತ್ತೆಯವರು ನನ್ನನ್ನು special ಹೆಸರಿನಿಂದ ಕರೆಯುತ್ತಿದ್ದರು. ನಂದೀಪಾ ಅಂತ. ಒಟ್ಟು ನನ್ನನ್ನು ಮಲ್ಲು, ಮಾಲಿ, ಮಾಂಚು, ಮಲ್ಲಿಕಾಕಾ, ಮಾಲತಿಯಕ್ಕ ಅಂತೆಲ್ಲ ಕರೆಯುವವರು ಇದ್ದಾರೆ.
ಮದುವೆಯಾದ ಹೊಸತರಲ್ಲಿ ಊರ ದೇವಳಕ್ಕೆ ಹೋದಾಗ, ಇಬ್ಬರು ಮಹಿಳೆಯರು ನನ್ನ ಬಳಿಗೆ ಬಂದು, ಅದರಲ್ಲಿ ಒಬ್ಬ ಮಹಿಳೆ ಇನ್ನೊಬ್ಬ ಮಹಿಳಿಗೆ ನನ್ನನ್ನು ಪರಿಚಯಿಸುತ್ತ ’ಇವರು ನಮ್ಮ ರವೀಂದ್ರಣ್ಣನ ಹೆಂಡತಿ ಅಂತ ಹೇಳಿದ್ರು. ನನಗಂತೂ ಗಾಬರಿ. ನಾನು ’ಅಲ್ಲ, ಅಲ್ಲ ನಾನು ಶ್ರೀಕಾಂತ್ ಶೆಣೈ ಹೆಂಡತಿ’ ಅಂದೆ. ಅದಕ್ಕೆ ಅವರು ಗಟ್ಟಿಯಾಗಿ ನಕ್ಕು, ’ ನಿನ್ನ ಶ್ರೀಕಾಂತ್ ನನ್ನು ನಾವು ರವೀಂದ್ರ ಅಂತ ಕರೆಯುವುದು” ಅಂದ್ರು. ಶ್ರೀಕಾಂತ್ ತಾಯಿ (ನನ್ನ ಅತ್ತೆ) ತವರು ಮನೆಯಲ್ಲಿ ಅವರನ್ನು ರವೀಂದ್ರ ಅಂತಲೇ ಸಂಭೋಧಿಸುವುದಂತೆ. ಸಂಜೆ ಅವರು ಮನೆಗೆ ಬಂದ ಮೇಲೆ,ಅವರಿಗೆ ಇನ್ನೂ ಯಾವ ಯಾವ ಹೆಸರಿದೆ ಹೇಳಿಬಿಡಿ ಅಂದೆ. ಶಾಲಾ ಸ್ನೇಹಿತರು ’ಕಾಟಿ’ ಅಂತ, ಅವರ ತಂದೆ (ನನ್ನ ಮಾವನವರು) ಕಂಠಿ ಎಂದೂ, ಕರೆಯುತ್ತಾರೆಂದು ತಿಳಿಯಿತು. :-)
ನನ್ನ ತಂಗಿ ಇರುವುದು ಅಮೇರಿಕದಲ್ಲಿ. ಅವಳಿಗೆ ಎರಡನೆ ಮಗು ಹುಟ್ಟುವಾಗಲೂ ಸ್ವಲ್ಪ ಈ ತರಹನೇ ಆಯ್ತು. ಅಲ್ಲಿ ಭ್ರೂಣ ಪರೀಕ್ಷೆ ಮಾಡಿ ಮಗುವಿನ ಲಿಂಗದ ಬಗ್ಗೆ ಹೇಳಿ ಬಿಡುತ್ತಾರೆ. ಆದರೆ ಅವಳ ಮಗುವಿನ ಪೊಸಿಷನ್ ಹಾಗೂ ಎರಡೂ ಕೈಗಳು ಅಡ್ಡ ಇದ್ದುದರಿಂದ ಎರಡು ಸ್ಕ್ಯಾನಿಂಗ್ ನಲ್ಲೂ ಮಗುವಿನ ಲಿಂಗದ ಬಗ್ಗೆ ಪತ್ತೆ ಹೆಚ್ಚಲಿಲ್ಲ. ಅಮ್ಮ ಜ್ಯೋತಿಷಿ ಹತ್ತಿರ ಹೋದಾಗ ಅವರು ’ಗಂಡು’ ಮಗುವೇ ಹುಟ್ಟುವುದೆಂದು ಭವಿಷ್ಯ ಹೇಳಿದ್ದರು. ನನ್ನ ತಂಗಿಗೂ ಗಂಡು ಹೆರುವ ಆಸೆ ಇತ್ತೇನೋ? ನನಗೆ ಗಂಡು ಮಗುವಿನ ಹೆಸರು ಮೈಲ್ ಮಾಡಲಿಕ್ಕೆ ಹೇಳಿದ್ದಳು. ನಾನು ಶ್ರೇಯಸ್ (Shreyas) ಅನ್ನುವ ಹೆಸರು ಸೆಲೆಕ್ಟ್ ಮಾಡಿದ್ದೆ. ಎಲ್ಲರಿಗೂ ಇಷ್ಟವಾಗಿತ್ತು. ಅಲ್ಲಿ ಮಗು ಹುಟ್ಟಿದ ಕೂಡಲೇ ನನಗೆ ಫೋನ್ ಮಾಡಿದ್ದಾಗ..’ಈಗ ಹೆಣ್ಣು ಮಗು ಹುಟ್ಟಿದೆಯಲ್ಲವ’, ’ಏನು ಮಾಡುವುದು’ ಅಂದಾಗ..ಅದರಲ್ಲೇನು ಮಹಾ, ’ಸ’ ತೆಗೆದು ಬಿಟ್ಟು ಶ್ರೇಯಾ (Shreya) ಮಾಡುವ ಅಂದೆ. ಈ ವರ್ಷ ಶ್ರೇಯಳ ಐದನೇ ಹುಟ್ಟಿದ ಹಬ್ಬದ ಸಡಗರ. ನಾನು ಇದನ್ನು ಪೋಸ್ಟ್ ಮಾಡುವಾಗ ಶ್ರೇಯಾ ಅಲ್ಲಿ ಹುಟ್ಟು ಹಬ್ಬ ಆಚರಿಸ್ತಾ ಇದ್ದಾಳೆ.
ಇತ್ತೀಚಿಗೆ ಕೆ.ಟಿ. ಗಟ್ಟಿ ಯವರ ಪುಸ್ತಕ ’ನಿನ್ನೆ, ಇಂದು,ನಾಳೆ’ ಬಿಡುಗಡೆ ಆಯ್ತು. ಸಮಾರಂಭಕ್ಕೆ ನಾನು ಹೋಗಿದ್ದೆ. ಕೆ.ಟಿ. ಗಟ್ಟಿ ಯವರ ಮತ್ತು ನಮ್ಮ ಕುಟುಂಬದ ಪರಿಚಯ ತುಂಬ ಹಳೇಯದು. ನಾನು ಹೋಗುವಾಗಲೇ ಸಭೆ ಯೆಲ್ಲ ಕಿಕ್ಕಿರಿದು ತುಂಬಿತ್ತು. ಕೂರಲು ಜಾಗ ಇರಲಿಲ್ಲ. ನಾನು, ಅವರ ಮಗ ಸತ್ಯಜಿತ್, ಹೊರಗಡೆ ನಿಂತಿದ್ದೆವು. ಆಗ ಇಬ್ಬರು ಹೆಣ್ಣುಮಕ್ಕಳು ಹೊರಗೆ ಬಂದರು. ಸತ್ಯಜಿತ್ ಅವರನ್ನು ಬಳಿಗೆ ಕರೆದು, apart from the fact that u three are ladies there is one more thing common among you' ಅಂತ ಹೇಳಿದರು. ನಾವು ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಏನೂ ಹೊಳೆಯಲಿಲ್ಲ. ಅಮೇಲೆ ಅವರೇ ನಗುತ್ತ malathi meet malathi and malathi ಅಂದು ಬಿಟ್ಟರು. ನಮ್ಮ ಮೂವರ ಹೆಸರು ಮಾಲತಿ ಅಂತ ಕೇಳಿ ಖುಶಿಯಾಯ್ತು. ಅವರಿಬ್ಬರು ಜರ್ನಲಿಸ್ಟ್.
ಕಾಕತಾಳೀಯವೆಂಬಂತೆ ಪುಸ್ತಕದಲ್ಲಿ ಕಂಡು ಬರುವ ಒಂದು ಪಾತ್ರದ ಹೆಸರು ’ಮಾಲತಿ’.
ನಾಲ್ಕು ತಿಂಗಳ ಹಿಂದೆ ನಿಹಾರಿಕಳ ಜತೆ RV Institute of Management ಗೆ ಹೋಗಿದ್ದೆ. ಅವಳ IIT -Madras entrance test ಗೆ ಸೆಂಟರ್ ಅಲ್ಲಿತ್ತು. ಮೂರು ಗಂಟೆಯ ಪರೀಕ್ಷೆ. ಪರೀಕ್ಷೆ ಆದಮೇಲೆ ನಾವು ಜಯನಗರ 4ಬ್ಲಾಕ್ ಗೆ ಶಾಪಿಂಗ್ ಹೋಗುವ ಪ್ಲಾನ್ ಹಾಕ್ಕೊಂಡಿದ್ವಿ. ಹಾಗಾಗಿ ಅವಳು ಕ್ಲಾಸ್ ಗೆ ಹೋದ ಮೇಲೆ ನಾನು ಅಲ್ಲೇ ಮೆಟ್ಟಿಲ ಮೇಲೆ ಓದುತ್ತ ಕೂತುಕೊಂಡಿದ್ದೆ. ಆಗ ಅಲ್ಲಿ ಬಂದ ಒಬ್ಬ ಮಹಿಳೆ ’ಕೊಂಕಣಿ’ ಅಂತ ವಿಚಾರಿಸಿದರು. ನನ್ನ ಕರೀಮಣಿ ಸರ ನೋಡಿ ಐಡೆಂಟಿಫೈ ಮಾಡಿದ್ರು. ನಾನು ’ಯಸ್’ ಅಂದೆ. ಹೆಸರು ಅಂತ ಕೇಳಿದ್ರು, ನಾನು- ಮಾಲತಿ ಶೆಣೈ ಅಂದೆ...ಅದಕ್ಕೆ ಅವರು ಜೋರಾಗಿ ನಕ್ಕು ನಾನು ಮಾಲತಿ ನಾಯಕ್ ಅಂದ್ರು. ಅವರು ಕೇರಳದಿಂದ ಮಗಳನ್ನು ಕರೆದುಕೊಂಡು ಪರೀಕ್ಷೆಗೆ ಬಂದಿದ್ರು. ಮಾಲತಿ ನಾಯಕ್ ವಜ್ರದ ಬಿಸಿನೆಸ್ ಮಾಡ್ತಾರಂತೆ. ಅವರ ಗಂಡ ಕೇರಳದಲ್ಲಿ ಬಂಗಾರದ ಶೋ ರೂಮ್ ಒಂದು ನಡೆಸುತ್ತಾರೆ, ಅದರಲ್ಲಿ ವಜ್ರದ section ನ ಸಂಪೂರ್ಣ ಜವಾಬ್ದಾರಿ ಇವರದಂತೆ. ನೋಡಲು ತುಂಬ smart ಆಗಿದ್ರು. ನಾನಂತು fully impressed.
ನಾನು ಬ್ಲಾಗ್ ಶುರು ಮಾಡಿದ ಮೇಲೆ ನನ್ನನ್ನು ಎಲ್ಲರು ಎಸ್. ಮಾಲತಿ ಅಂತ ಕನ್ ಫ್ಯುಸ್ (ತಲೆ ಕೆರೆದು ಕೆರೆದು ಗಾಯ ಆಯ್ತು confuse ಗೆ ಕನ್ನಡ ಪದ ಹೋಳೀತಿಲ್ಲ) ಮಾಡಿಕೊಂಡು ದೊಡ್ಡ ದೊಡ್ಡ emotional ಮೈಲ್ ಬರೀತಿದ್ರು. ನನ್ನ ಇ ಮೈಲ್ ಎಡ್ರಸ್ ನಾನು ಬ್ಲಾಗ್ ನಲ್ಲಿ ನಮೂದಿಸಿದ್ದೇನೆ. ಅವರ ಕವನ ಕತೆ ಎಲ್ಲ ಕಳಿಸೋವ್ರು. ನನಗೆ ನಿಜಕ್ಕೂ ಆಶ್ಚರ್ಯ ಆಗುತ್ತಿತ್ತು. ಕೆಲವು ಕವನಗಳ ತಲೆ ಬುಡ ಅರ್ಥ ಆಗುತ್ತಿರಲಿಲ್ಲ. ಡೌಬ್ಟ್ ಬಂದು ನನಗೆ ಯಾಕೆ ಕಳುಹಿಸಿದ್ದೀರಾ? high funda ಕನ್ನಡ ನನಗೆ ಅರ್ಥ ಅಗುವುದಿಲ್ಲ ಅಂತ ಕಳುಹಿಸಿದ ಮೇಲೆ ಅವರು ’ನೀವು ಕವಿಯತ್ರಿ/ dramatist ಎಸ್. ಮಾಲತಿ ಅಲ್ಲವಾ??ಅಂತ ಮರು ಮೈಲ್ ಕಳುಹಿಸಿದ್ರು. ಹಾಹಾಹಾ... ಎಸ್. ಮಾಲತಿ ಯಾರು ಅಂತ ತೀರ ಇತ್ತೀಚಿಗೆ ಗೊತ್ತಾಯಿತು.
ಮೊನ್ನೆ ನಿಹಾರಿಕಾ, ಅವಳ ಕಾಲೇಜು ಸ್ನೇಹಿತೆಗೆ ಯಾವುದೋ ವಿಷಯಕ್ಕೆ (ಅವರಿಬ್ಬರು ಹೆಗ್ಗೋಡಿನ ನಾಟಕದ ಕಮ್ಮಟದಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ.... ಬಹುಶಃ ಆ ಸಂದರ್ಭ) ’ಹೇ ನನ್ನ ಅಮ್ಮ ಬ್ಲಾಗ್ ಬರೀತಾರೆ’ ಅಂದಳಂತೆ. ಅದಕ್ಕೆ ಅವಳು ’ಹೌದಾ? ಏನು ಹೆಸರು’ ಅಂತ ಕೇಳಿದ್ದಕ್ಕೆ ಇವಳು ಮಾಲತಿ ಎಸ್. ಅಂದಿದ್ದಾಳೆ. ಅದಕ್ಕೆ ಆ ಹುಡುಗಿ ಗಟ್ಟಿ ದನಿಯಲ್ಲಿ ನೀನು ಎಸ್. ಮಾಲತಿಯವರ ಮಗಳಾ ? ಮೊದಲೆ ಯಾಕೆ ಹೇಳಿಲ್ಲಾ’ ಅಂದಾಗ ನಿಹಾರಿಕಾ ಗೆ ನನಗೆ ಮೈಲ್ ಬರುತ್ತಿರುವ ವಿಷಯ ಅವಳ ಜತೆಗೆ ಶೇರ್ ಮಾಡಿದ್ದ ನೆನಪಿಂದ ಅಲ್ಲ ಅಲ್ಲ ನನ್ನ ಅಮ್ಮನ ಪೂರ್ತಿ ಹೆಸರು ಮಾಲತಿ ಶೆಣೈ ಅಂದಳಂತೆ.
ಸುಮ್ಮನೆ ಇದನ್ನೂ ನಿಮ್ಮ ಜತೆ ಶೇರ್ ಮಾಡುವ ಅನ್ನಿಸ್ತು ಅದಕ್ಕೆ...ಮತ್ತು ನನ್ನ ಬ್ಲಾಗ್ ನ ಹೊಸ ಓದುಗರು ಇದನ್ನು ಓದಿಲ್ಲ ಅಂತ ಭಾವಿಸುತ್ತ....
ಒಂದು ಗಮ್ಮತ್ತಿನ ವಿಷಯ: ನಮ್ಮ ಐಡಿಎಫ್ ಟೀಮ್ ಎಲ್ಲರೂ ಸೇರಿ ಯಶವಂತ ಸರದೇಶಪಾಂಡೆಯವರ ’ಸಹಿ ರಿ ಸಹಿ’ ನಾಟಕಕ್ಕೆ ಹೋಗಿದ್ವಿ. MTR ಕೂಪನ್ ಊಟ ಕೂಡ ಇತ್ತು ಟಿಕೆಟ್ ಜತೆಗೆ. ನಾವು ಲೋಕಾಭಿರಾಮವಾಗಿ ಮಾತಾಡುತ್ತ ಊಟದ ಹಾಲ್ ಕಡೆಗೆ ಸಾಗ್ತಾ ಇದ್ವಿ. ಸ್ಟೇಜ್ ಹತ್ತಿರ ಒಂದು ಸಣ್ಣ ಕುಂಡದಲ್ಲಿ ಆಲಂಕಾರಿಕ ಗಿಡ ಕಂಡು ಅದರ ಬಳಿಗೆ ಸಾಗಿದೆ. ನನ್ನ ಜತೆಗಿದ್ದವರು ಮುಂದೆ ಹೋಗಿದ್ದರು. ಯಶವಂತ ಸರದೇಶಪಾಂಡೆಯವರನ್ನು ಅವರ ಆಪ್ತೇಷ್ಟರು ನಾಟಕದ ಬಗ್ಗೆ ಅಭಿನಂದಿಸುತ್ತ ಇದ್ದರು. ನಾನು ಗಿಡದ ನೋಡಿ ಬಗ್ಗಲಿಕ್ಕು ಅವರು ’ಮಾಲತಿ’ ಅನ್ನೋದಕ್ಕೂ ಸರೀ ಹೋಯ್ತು, ನಾನು reflex ನಲ್ಲಿ ’ಓ’ ಅಂದೆ. ಆದರೆ ಅವರು ಕರೆದಿದ್ದು ಅವರ ಶ್ರೀಮತಿಯವರನ್ನು- ’ಮಾಲತಿ ಸರದೇಶಪಾಂಡೆ’ಯವರನ್ನು ನಾನು ಅವಸರದಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಿ ನಮ್ಮ ಜತೆಯವರೊಂದಿಗೆ ಸೇರಿಕೊಂಡೆ
:-)
sorry friends copy pasted ಅದಕ್ಕೆ ಹೀಗಿದೆ!!!!
ಒಂದು ಗಮ್ಮತ್ತಿನ ವಿಷಯ: ನಮ್ಮ ಐಡಿಎಫ್ ಟೀಮ್ ಎಲ್ಲರೂ ಸೇರಿ ಯಶವಂತ ಸರದೇಶಪಾಂಡೆಯವರ ’ಸಹಿ ರಿ ಸಹಿ’ ನಾಟಕಕ್ಕೆ ಹೋಗಿದ್ವಿ. MTR ಕೂಪನ್ ಊಟ ಕೂಡ ಇತ್ತು ಟಿಕೆಟ್ ಜತೆಗೆ. ನಾವು ಲೋಕಾಭಿರಾಮವಾಗಿ ಮಾತಾಡುತ್ತ ಊಟದ ಹಾಲ್ ಕಡೆಗೆ ಸಾಗ್ತಾ ಇದ್ವಿ. ಸ್ಟೇಜ್ ಹತ್ತಿರ ಒಂದು ಸಣ್ಣ ಕುಂಡದಲ್ಲಿ ಆಲಂಕಾರಿಕ ಗಿಡ ಕಂಡು ಅದರ ಬಳಿಗೆ ಸಾಗಿದೆ. ನನ್ನ ಜತೆಗಿದ್ದವರು ಮುಂದೆ ಹೋಗಿದ್ದರು. ಯಶವಂತ ಸರದೇಶಪಾಂಡೆಯವರನ್ನು ಅವರ ಆಪ್ತೇಷ್ಟರು ನಾಟಕದ ಬಗ್ಗೆ ಅಭಿನಂದಿಸುತ್ತ ಇದ್ದರು. ನಾನು ಗಿಡದ ನೋಡಿ ಬಗ್ಗಲಿಕ್ಕು ಅವರು ’ಮಾಲತಿ’ ಅನ್ನೋದಕ್ಕೂ ಸರೀ ಹೋಯ್ತು, ನಾನು reflex ನಲ್ಲಿ ’ಓ’ ಅಂದೆ. ಆದರೆ ಅವರು ಕರೆದಿದ್ದು ಅವರ ಶ್ರೀಮತಿಯವರನ್ನು- ’ಮಾಲತಿ ಸರದೇಶಪಾಂಡೆ’ಯವರನ್ನು ನಾನು ಅವಸರದಲ್ಲಿ ಅಲ್ಲಿಂದ ಜಾಗ ಖಾಲಿ ಮಾಡಿ ನಮ್ಮ ಜತೆಯವರೊಂದಿಗೆ ಸೇರಿಕೊಂಡೆ
:-)
sorry friends copy pasted ಅದಕ್ಕೆ ಹೀಗಿದೆ!!!!
ಮಾಲತಿ ಮೋಹಿನಿ ಚಂದ ಇತ್ತಲ್ವ. ನಿಮ್ಮ ತಾಯಿಗೆ ಕೃಷ್ಣನ ಹೆಸರೇ ಬೇಕಿದ್ದರೆ ನಿಮಗೆ ಮೀರಾ ಅಂತ ಹೆಸರಿಟ್ಟಿದ್ದರೆ ಸಾರ್ಥಕ ಅರ್ಥ ಬರುತ್ತಿತ್ತು ಮಲತಿ ಅವರೇ.
ReplyDeleteನಂದಿಪಾ ಅಂದ್ರೆ ಏನು?
ಶ್ರೇಯಾಳ ಬದುಕು ಹಸನಾಗಲಿ.
ಇಂತಹ ಪುಸ್ತಕ ಬಿಡುಗಡೆ ಇದ್ದಾಗ, ನನಗೂ ಒಂದು ಎಸ್.ಎಂ.ಎಸ್ ಮಾಡಿದರೆ ನಾನೂ ಬಂದು, ಪುಸ್ತಕ ಕೊಂಡು ನಿಮ್ಮನ್ನೂ ನೆನೆಸಿಕೊಳ್ತೀನಿ ಅಲ್ವಾ?
ಎಸ್. ಮಾಲತಿ ಅಂತ ತಿಳಕೊಂಡು, ನಾನೇ ಉದ್ದುದ್ದ ಎಮೋಷನಲ್ ಮೈಲ್ ಮಾಡಿದ ’ಆ’ ಮಹಾನುಭಾವ. ಆದರೇನಂತೆ ನನಗೆ ಮಾಲತಿ ಶಣೈ ಅವರಂತಹ ಅದ್ಭುತ ಬಹು ವ್ಯಕ್ತಿತ್ವದ ಮಾತೃ ಹೃದಯದ ಅಕ್ಕ ಸಿಕ್ಕರು. ಅಷ್ಟೇ ಸಾಕು.
ಜೊತೆಗೆ ಅವರ ಬ್ಲಾಗು ಹಲವು ವಿಚಾರಗಳ ಕೋಶ.
ಪ್ರಿಯ ತಮ್ಮ ಬದರಿ!!
ReplyDeleteಹೌದು ಈಗ ನೆನಪಾಯ್ತು. ನೀವು ಬರೆದಿದ್ದೀರಿ. ಆದರೆ ಅದು ತುಂಬ ಚಿಕ್ಕ ಮೈಲ್. ಮತ್ತು ಒಂದು ಕವನ ಅಷ್ಟೆ!! ಆ ಮೂಲಕ ನಿಮ್ಮ ಪರಿಚಯ ಆಗಿದ್ದು ನನಗೂ ಸಂತೋಷ!!
ಇದು ಹಳೆಯ ಪೋಸ್ಟ್ ಮೊನ್ನೆ ಶ್ರೇಯ ತನ್ನ 7 ನೇ ಹುಟ್ಟುಹಬ್ಬ ಭಾರತದಲ್ಲಿದ್ದಾಗಲೇ ಆಚರಿಸಿದ್ಲು.
ನಮ್ಮಲ್ಲಿ ಮದುವೆ ಆದ ಮೇಲೆ ಹೆಣ್ಣಿನ ಹೆಸರನ್ನು ಬದಲಾಯಿಸುತ್ತಾರೆ. ನನಗೆ ನಂದಿತಾ ಹೆಸರನ್ನು ಇಟ್ಟಿದ್ದಾರೆ. ನಮ್ಮ ಅತ್ತೆಗೆ ’ದೀಪಾ’ ಅನ್ನುವ ಹೆಸರು ಬೇಕಿತ್ತಂತೆ, ಅದನ್ನೆ ನಂದೀಪಾ ಮಾದಿರಬಹುದು. ನಾನು ಯಾವತ್ತೂ ಅವರನ್ನು ಕೇಳಲಿಲ್ಲ :-)
ನನ್ನ ಬ್ಲಾಗ್ ಬಗ್ಗೆ ಒಳ್ಳೆಯ ಮಾತನಾಡಿದ್ದಕ್ಕೆ ನಾನು ನಿಮಗೆ ಆಭಾರಿ!!
thank you Badari!!
:-)
ಮಾಲತಿ ಎಸ್.
ಮಾಲ್ತಿ ಈಗ ನಾನು ಡಬ್ಬಲ್ ಕನ್ಫರ್ಮ್ ಮಾಡ್ಕೊಬೇಕಾಯ್ತು..ಯಾಕಂದ್ರೆ ಮೊನ್ನೆ ಆದ ಎಡವಟ್ ಮತ್ತೆ ಆದ್ರೆ..ಚನ್ನಾಗಿದೆ "ಮಾಲತಿ ನಾಮಚರಿತ" ಹೌದು ಮಾಲತಿ ಇದನ್ನ ರೀಪೋಸ್ಟ್ ಮಾಡೋಕೆ ಏನಾದರೂ ಕಾರಣ..?? ಅಥವಾ ಹಿನ್ನೆಲೆ...?....
ReplyDeletereasons for re-post?/
ReplyDeleteNiahrika's experience and another mail from s. malathi fan and also innasTu hosa additions ittu. adannu Odidraa?? :-)
thank you
ms
Enjoyed reading!
ReplyDeleteNice post. My mom had an elderly friend called Malathi Shenoy :). She used to call her Malthamma. She was also a konkani speaking lady who pampered us for some time when were kids. Just remembered her when I read this post
ReplyDeleteSwarna
Hi Malthi Nimma namavaligala sankashta odhi maja banthu.
ReplyDeleteVeda
Thank you Radhika, Swarna and Veda!!
ReplyDelete@ Swarna : that malathamma naane allaa taane?? srikanth calls me 'malathamma' when he needs me to do some chore for him urgently' and best friend Guru's mother also address me as 'malathamma:-) and ur comment reminded me of it.
:-)
malathi S
ಹಹಹ :)) ಅಕ್ಕಾ ಸಕ್ಕತ್ತಾಗಿದೆ ಲೇಖನ ನಕ್ಕು ನಕ್ಕು ಸಾಕಾಯ್ತು.. ಮಾಲತಿ... ಮಾಲತಿ.. ಎಸ್.. ಎಸ್ ಹಹಹ ಶ್ರೇಯಾಗೆ ಹುಟ್ಟು ಹಬ್ಬದ ಶುಭಾಶಯ ತಿಳಿಸಿ. ಒಂದೇ ಹೆಸರಿನವರು ಹೆಚ್ಚು ಜನ ಇದ್ದರೆ ಈ ರೀತಿ ನೆಡೆಯುತ್ತೆ .
ReplyDelete