ಮೊನ್ನೆ ಮಕ್ಕಳಿಗೆ ಮಶ್ ರುಂ (Mushroom) ತಿನ್ನುವ ಮೂಡ್ ಆಯ್ತು ಅಂತ ಮನೆ ಬಳಿಯಿರುವ ತರಕಾರಿ ಅಂಗಡಿಗೆ ಹೋಗಿದ್ದೆ. ಅವನು ಮ್ಯಾಡಂ ತರಕಾರಿಗೆಲ್ಲ ರೇಟ್ ಕಡಿಮೆಯಾಗಿದೆ, ಅದು ತೆಗೊಳ್ಳಿ ಇದು ತೆಗೊಳ್ಳಿ ಅಂತ ಪೀಡಿಸ್ತಾ ಇದ್ದ. ಕೊನೆಗೆ ಬೆಂಡೆಕಾಯಿ ನೋಡಿ ಮೇಡಂ ಎಷ್ತು ಚೆನ್ನಾಗಿದೆ ಅಂದ. ಅದಕ್ಕೆ ನಾನು - ನಮ್ಮ ಮನೆಯವರು ಇದಕ್ಕಿಂತ ಚೆನ್ನಾಗಿರೋ ಬೆಂಡೆಕಾಯಿ ಸಂತೆಯಿಂದ ತಂದಿದ್ದಾರೆ ಅಂದೆ. ಅವನಿಗೋ ಸೋಜಿಗ. ಸರ್ ಸಂತೆಗೆ ಹೋಗ್ತಾರ ಮೇಡಂ??? ಹೂಂ ಅವರು ಊರಲಿಲ್ಲದಿದ್ದಾಗ ಮಾತ್ರ ನಾನು ನಿಮ್ಮ ಬಳಿ ತರಕಾರಿಗೆ ಬರೋದು ಗೊತ್ತ್ತಾಯ್ತಾ ಅಂದೆ. ಶ್ರೀಕಾಂತಗೆ ಸಂತೆಗೆ ಹೋಗಿ ತರಕಾರಿ ತರುವುದು favorite passtime.
ನಾವು ಬೆಂಗಳೂರಿಗೆ ಬರೋ ಮುಂಚೆ ಶ್ರೀಕಾಂತ ಗೆ ಎಲ್ಲೆಲ್ಲಿ ಟ್ರಾನ್ಸ್ಫರ್ ಆಗಿದೆಯೋ ಅಲ್ಲೆಲ್ಲ ನಾವೇ ತರಕಾರಿ ಬೆಳೆಸ್ತಿದ್ವಿ. ಮೊದಲಿಗೆ ನಾವು ತೀರ್ಥಹಳ್ಳಿಯಿಂದ ಕೂಪ್ಪಕ್ಕೆ ಹೋಗಿದ್ದೆವು. ಕೆಲವು ತಿಂಗಳು ತೀರ್ಥಹಳ್ಳಿಯಲ್ಲಿ ಅತ್ತೆ ಮಾವ- ಕೂಡು ಕುಟುಂಬದಲ್ಲಿ ಇದ್ದೆವು. ಅಲ್ಲಿ ನನ್ನ ಓದಿನ ಜತೆ ಮನೆಕೆಲಸ ಹಾಗೂ ಮನೆ ತುಂಬ ಮಂದಿ ಮಧ್ಯಾಹ್ನ ಊಟಕ್ಕೆ ಬರುವವರು, ಹಳ್ಳಿಯಿಂದ ತೀರ್ಥಹಳ್ಳಿ ಪೇಟೆ/ಸಂತೆಗೆ ಬಂದವರು, ನೆಂಟರು-ಇಷ್ಟರು ಅಂತ ಮನೆ ತುಂಬ ಜನರು. ನನಗೆ ಹೊತ್ತು ಹೋದದ್ದೆ ತಿಳಿಯುತ್ತಿರಲಿಲ್ಲ. ಶ್ರೀಕಾಂತ ಆಗ ಗ್ರಾಮೀಣಾಭಿವೃದ್ಧಿ ಅಧಿಕಾರಿ ಅಂತ ಬ್ಯಾಂಕ್ ನ ಕೊಪ್ಪದ ಶಾಖೆಗೆ ನೇಮಕಗೊಂಡಿದ್ದರು, ಕಛೇರಿಯಲ್ಲಿರುವುದ್ದಕ್ಕಿಂತ ಹಳ್ಳಿಗಳ ತಿರುಗಾಟ ಹೆಚ್ಚು ಇರುತ್ತಿತು. ಕ್ರಮೇಣ ರಾತ್ರಿ ಬರುವುದು ತುಂಬ ತಡವಾಗುತ್ತಿತ್ತು. ಕೊಪ್ಪಕ್ಕೆ ಬಂದು ಅಲ್ಲಿಂದ ತೀರ್ಥಹಳ್ಳಿಗೆ ಬರಬೇಕಿತ್ತು. ಆಗೆಲ್ಲ ಈಗಿನ ತರಹ ಬೀದಿ ದೀಪಗಳಿರುತ್ತಿರಲಿಲ್ಲ, ಮತ್ತು ಮಧ್ಯದಲ್ಲಿ ಎಲ್ಲಾದರೂ ಬೈಕ್ ಹಾಳಾಯಿತೆಂದರೆ, ಮನೆಗೆ ಬರಲು ಬೇರಾವ ವೆಹಿಕಲ್ ಕೂಡ ಸಿಗುತ್ತಿರಲಿಲ್ಲ. ಅದಕ್ಕೆ ಮಾವನವರು ಕೊಪ್ಪದಲ್ಲೇ ಮನೆ ಮಾಡಿ ಎಂದರು.
ಕೊಪ್ಪಕ್ಕೆ ಬಂದ ಮೇಲೆ ಶ್ರೀಕಾಂತ ಬೆಳಿಗ್ಗೆ 10.00 ಗಂಟೆಗೆ ಮನೆ ಬಿಟ್ಟರೆ ಬರುವುದು ರಾತ್ರಿ 12 ಅಥವ 1 ಗಂಟೆ ಆಗುತ್ತಿತ್ತು. ತೀರ್ಥಹಳ್ಳಿಯ ಮನೆಯ ಹಾಗೆ ಇಲ್ಲಿ ಸಮಯ ನೆ ಹೋಗುತ್ತಿರಲಿಲ್ಲ. ಮತ್ತು ಪರೀಕ್ಷೆಗೆ (ನಂದು 12 ನೇ ಕ್ಲಾಸ್ ಮುಗಿದದ್ದೆ ಮದುವೆಯಾಯ್ತು. ಹೆಚ್ಚಿನ ಓದಿಗೆ ಮುಂಬಯಿ university ಯ distance education ನಲ್ಲಿ sociology ಗೆ enroll ಆಗಿದ್ದೆ) ಎಷ್ಟು ಅಂತ ಓದುವುದು??ಅಕ್ಕ ಪಕ್ಕದವರೊಂದಿಗೆ ಮಾತನಾಡುವ ಅಂದ್ರೆ ನನಗೆ ಕನ್ನಡ ಬರುತ್ತಿರಲಿಲ್ಲ ಎಂಬುದು ಒಂದು ಕಾರಣವಾದರು ನಾನು ಹುಟ್ಟಾ introvert. ನನ್ನ ಪಾಡಿಗೆ ನಾನಿರುತ್ತಿದ್ದುದ್ದೆ ಹೆಚ್ಚು, ಮುಂಬೈನಲ್ಲೂ ಸಹ.
ಕೊಪ್ಪದಲ್ಲಿ ಮನೆಯ ಹಿಂಬದಿ ತುಂಬ ಜಾಗ ಇತ್ತು. ಶ್ರೀಕಾಂತ (ಮತ್ತೆ MSc- Agri ಮಾಡಿದ್ದು ಸುಮ್ಮನೇನಾ?) ಸಹಾಯ ಪಡೆದು ಸಾವಯವ ರೀತಿಯಲ್ಲಿ ತರಕಾರಿ ಬೆಳೆಸುವುದನ್ನು ಕಲಿತೆ. ಮೊದಲಿಗೆ ಕಾಂಪೋಸ್ಟ್ ಗುಂಡಿಗಳನ್ನು ತೋಡಿ ಕಾಂಪೋಸ್ಟ ಮಾಡಿದೆವು. ಶ್ರೀಕಾಂತ ಅದರಲ್ಲಿ ಎರೆಹುಳಗಳನ್ನು (earthworm) ತಂದು ಹಾಕಿದ ಮೇಲಂತು ನಮಗೆ ತುಂಬ ಫೈನ್ ಗೊಬ್ಬರನೂ ಸಿಗುತ್ತಿತ್ತು. it was fun. ಸಾವಯವ ಕೃಷಿಗೆ ಇತ್ತೀಚಿಗೆ ಹೆಚ್ಚು ಮಹತ್ವ ಬಂದಿದೆಯಾದರೂ ನಾವು ಹಾಗೂ ಶ್ರೀಕಾಂತ ಆಪ್ತ ಮಿತ್ರರು 25 ವರ್ಷದ ಹಿಂದೆನೆ ಇದರ ಬಗ್ಗೆ ಕಾಳಜಿ ಹೊಂದಿದ್ದೆವು. ಅಲಸಂದೆ, ತೊಂಡೆಕಾಯಿ. ಮೂಲಂಗಿ (ಈಗಲೂ ನನ್ನ ಓರಗಿತ್ತಿ ಹೇಳುತ್ತಾರ ’ನೀವು ಬೆಳೆಸಿದ ಮೂಲಂಗಿ ಟೇಸ್ಟ್ ಮತ್ತೇ ಎಲ್ಲೂ ಸಿಕ್ಕಿಲ್ಲ’’ ಅಂತ), ಬೀನ್ಸ್, ಬೆಂಡೆಕಾಯಿ, ಕೊತ್ತಂಬ್ರಿ ಸೊಪ್ಪು, ಬಸಳೆ ಮತ್ತು ಕುಂಬಳಕಾಯಿ. ಮೊದ ಮೊದಲು ಕುಂಬಳಕಾಯಿ ಚಿಕ್ಕ ಕಾಯಿ ಬಿಟ್ಟ ಕೂಡಲೆ ಹೆಗ್ಗಣವೋ, ಮೊಲವೋ ಬಂದು ಅದನ್ನು ಕೆಡಸಿ ಬಿಡುತ್ತಿತ್ತು. ಅದಕ್ಕೆ ಇನ್ನೊಂದು ಕಾಯಿ ಬಿಟ್ಟಾಗ, ಮನೆಯಲ್ಲಿದ್ದ ಹಾಳಾದ ಮಡಕೆಯೊಳಗೆ ಕುಂಬಳದ ಪುಟ್ಟ ಕಾಯಿಯನ್ನು ನಿಧಾನವಾಗಿ ಎತ್ತು ಹಾಕಿ, ಸಣ್ಣ ನೆಟ್ ಬಟ್ಟೆಯಿಂದ ಮುಚ್ಚಿದೆ. ನಮ್ಮ ಯೋಜನೆ ಸಫಲವಾಗಿ ಕುಂಬಳಕಾಯಿ ದೊಡ್ಡದಾಗ್ತಾ ಆ ಮಡಕೆ ಪೂರ್ತಿ ಒಡೆದು 18 ಕೆಜಿ ತೂಕದ ದೊಡ್ಡ ಕುಂಬಳಕಾಯಿ ಬೆಳೆದು ಬಿಟ್ಟಿತು. ಅಷ್ಟರಲ್ಲೆ ಶ್ರೀಕಾಂತ ಕಲೀಗ್ ಹಾಗೂ ನನ್ನ best friend ಪ್ರೇಮಾ ಶೆಟ್ಟಿ ಅವರ ಹೊಸ ಮನೆ ಕಟ್ಟಿಸಿ ಆಗಿ, ಗ್ರಹಪವೇಶಕ್ಕೆ ಆ ಕುಂಬಳಕಾಯಿ ತನಗೆ ಕೊಡಬೇಕೆಂದು ಕೇಳಿದರು. ನಾವು ಹೂಂ ಅಂತ ಅವರಿಗೆ ಕೊಟ್ಟು, ಆ huge ಕುಂಬಳಕಾಯಿ ಮನೆಯೆದುರಿಗೆ ಕಟ್ಟಿದಾಗ ಎಲ್ಲರ ಕಣ್ಣು ಅದರ ಗಾತ್ರದ ಮೇಲೆ. ಅಪ್ಪ ಅಮ್ಮ ತಮ್ಮ ಮುಂಬೈ ನಿಂದ ಬಂದಿದ್ದರು. ಅವರಿಗೂ ಕರೆದುಕೊಂಡು ಹೋಗಿ ಕುಂಬಳಕಾಯಿ ತೋರಿಸಿ ಶಹಬಾಸ್farmer ಅನ್ನಿಸಿಕೊಂಡೆ. :-) ಮತ್ತೆ ಗುಲಾಬಿ ಢೇರೆ ಹೂಗಳನ್ನು ಬೆಳೆಸಿದ್ದೆ.
ಮುಂಬಯಿಗೆ ಪರೀಕ್ಷೆಗೆ ಹೋದಾಗ ಮುಂಬಯಿನ ಖ್ಯಾತ strand book House ನಿಂದ ಗಾರ್ಡನಿಂಗ್ ಕುರಿತು ಒಳ್ಳೆ ಒಳ್ಳೆ coffee table books ಕೊಂಡು ತಂದಿದ್ದೆ. ಆದರೆ trial and error ಹಾಗೂ ಮಿತ್ರರ ಅನುಭವದಿಂದ ಪಾಠ ಕಲಿತದ್ದೆ ಹೆಚ್ಚು. ಅಚ್ಚುಕಟ್ಟಾಗಿ ಧೂಳು ಒರೆಸಿ ಪುಸ್ತಕಗಳನ್ನು ಕಪಾಟಿನಲ್ಲಿಡುತ್ತಿದ್ದೆ. ಹೊತ್ತುಕೊಂಡು ಬಂದದ್ದಕ್ಕಾದರೂ gardening books ತೆಗೆದು ನೋಡುವ ಅಂದ್ರೆ, ಅದರ ಹಾರ್ಡ್ ಬೈಂಡ್ ಬಿಟ್ಟರೆ, ಒಳಗಿನ ಹಾಳೆಗಳನ್ನೆಲ್ಲ ಗೆದ್ದಲು (termite) ತಿಂದು ಹಾಕಿತ್ತು. :-(
ಅ ಮೇಲೆ ಶ್ರೀಕಾಂತ ವರ್ಗವಾದ ಕಡೆಯೆಲ್ಲ, ಜಾಗ ಇದ್ದಕಡೆ ನಾನು ಮನೆಗೆ ಬೇಕಾಗುವ ತರಕಾರಿಯೆಲ್ಲ ಬೆಳೆಸುತ್ತಿದ್ದೆ. ನಿಂತು ಹೋಗಿದ್ದು ಬೆಂಗಳೂರಿಗೆ ಬಂದ ಮೇಲೆ. ಇಲ್ಲಿ ಕೆಲವು decorative ಗಿಡಗಳನಿಟ್ಟುಕೊಂಡಿದ್ದೆ ಮನೆಯ ಹೊರಗಡೆ, ಆದರೆ ಡ್ರೈನ್ ಸಿಸ್ಟಂ ಸರಿ ಇಲ್ಲದ್ದರಿಂದ ಸೊಳ್ಳೆಗಳು, ಅದರ ಮೇಲೆ ಶ್ರೀಕಾಂತ ಗೆ ಹಿಂದಿನ ವರ್ಷ ಡೆಂಗೆ ಬೇರೆ ಆದ ಮೇಲೆ ಎಲ್ಲ ಪಾಟ್ಸ್ ಗಳನ್ನು ಆಫಿಸ್ ಟೆರೆಸ್ ಗೆ ರವಾನಿಸಿದೆ. ಈಗ ಮಂಜಣ್ಣ ಮತ್ತು ಭೂತೇಶ ಅವನ್ನು ನೋಡಿಕೊಳ್ಳುತ್ತಾರೆ.

so ಈಗ ಸ್ಟಫ್ಡ್ ಬೆಂಡೆಕಾಯಿ recipe . ಬೆಂಡೆಕಾಯಿ APMC yard ಮಾರುಕಟ್ಟೆಯಿಂದ :-)
300 ಗ್ರಾಂ ಎಳೆ (tender) ಬೆಂಡೆಕಾಯಿ
3 ಟೇಬಲ್/ ದೊಡ್ಡ ಚಮಚ ಕೊತ್ತಂಬರಿ ಬೀಜದ ಪುಡಿ
2 ಟೀ ಚಮಚ ಜೀರಿಗೆ ಪುಡಿ
1 ಅಥವ 11/2 ಚಮಚ ಕೆಂಪು ಮೆಣಸಿನ ಪುಡಿ
ಅರ್ಧ ಟೀ ಸ್ಪೂನ್ ಗರಂ ಮಸಾಲೆ ಪುಡಿ
ಸ್ವಲ್ಪ ಪುಡಿ, ಹಿಂಗು, ಉಪ್ಪು, ಚಿಟಿಕೆ ಸಕ್ಕರೆ, ಮಾವಿನಕಾಯಿ ಪುಡಿ (ಅಂಗಡಿಯಲ್ಲಿ ಆಮ್ ಚೂರ್ powder ಅಂತ ಸಿಗುತ್ತೆ) ಅಥವ ಇದರ ಬದಲಿಗೆ ಹುಣಸೆ ಹಣ್ಣಿನ ಪೇಸ್ಟ್ ಅಥವ ರಸ ಅಥವ ನಿಂಬೆ ರಸ ಕೂಡ ಹಾಕಬಹುದು) ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಇಡಿ
ಸ್ವಲ್ಪ ಎಣ್ಣೆ, ಒಗ್ಗರಣೆಗೆ ಜೀರಿಗೆ
ಸ್ವಲ್ಪ ಎಣ್ಣೆ, ಒಗ್ಗರಣೆಗೆ ಜೀರಿಗೆ
ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು, ಒರೆಸಿ, ಬುಡವನ್ನು ಕತ್ತರಿಸಿ ಉದ್ದಕ್ಕೆ ಕಟ್ ಮಾಡಿ ಹೀಗೆ. ಈಗಂತು ಕಣ್ಣು ಮುಚ್ಚಿ ಬೆಂಡೆಕಾಯಿಯನ್ನು ಕಟ್ ಮಾಡಬಹುದು. ಮೊದಲೆಲ್ಲ ಹುಳು ಇರುತ್ತೋ ಅಂತ ತುಂಬ ಪರೀಕ್ಷಿಸಬೇಕಿತ್ತು. ತರಕಾರಿಗಳಿಗೆ ಎಷ್ಟು ಔಷಧಿ ಸಿಂಪಡಿಸುತ್ತಾರೆಂದರೆ , ತರಕಾರಿ ಏನು ,ಏಳು ಜನ್ಮಕ್ಕೆ ನಮ್ಮ ಹೊಟ್ಟೆಯಲ್ಲಿ ಹೂಳ ಆಗಲಿಕ್ಕಿಲ್ಲ ಬಿಡಿ.
ಹೀಗೆ ಉದ್ದಕ್ಕೆ ಸೀಳಿ
ಮಸಾಲೆ ಪುಡಿಗಳ ಮಿಶ್ರಣ
ಹೀಗೆ ತುಂಬಿಸಿ
ಸ್ವಲ್ಪ ಅಗಲ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ ಒಗ್ಗರಣೆ ಕೊಟ್ಟು, ಅದರಲ್ಲಿ ತುಂಬಿಸಿದ ಬೆಂಡೆಕಾಯಿಗಳನ್ನು ಒಂದರ ಪಕ್ಕ ಒಂದು ಇಡಿ. ಮಸಾಲೆ ಪುಡಿ ಏನಾದರು ಉಳಿದರೆ ಅದನ್ನು ಬೆಂಡೆಕಾಯಿ ಮೇಲೆ ಹಾಕಿ ಬಿಟ್ಟು, ಬಾವಡಿಯಿಂದ ಮುಚ್ಚಿ. (ಚಪಾತಿ ಕಾವಲಿ ಮೇಲೆ ಕೂಡ ಇದನ್ನು ಬೇಯಿಸಬಹುದು) 5 ನಿಮಿಷ ಬಿಟ್ಟು ಬೆಂಡೆಕಾಯಿಗಳನ್ನು ಕೈಯಾಡಿಸಿ. 15 ನಿಮಿಷದಲ್ಲಿ ರೆಡಿ. ನೀರುಳ್ಳಿ ಬೆಳ್ಳುಳ್ಳಿ ಹಾಕದೆ, ನಾವು ಹೆಚ್ಚಾಗಿ ಇದನ್ನು ಶ್ರಾವಣ ಮಾಸದಲ್ಲಿ ಮಾಡುತ್ತೇವೆ. ಶ್ರಾವಣದಲ್ಲಿ ಕೆಲವರು ನೀರುಳ್ಳಿ ಬೆಳ್ಳುಳ್ಳಿ ತಿನ್ನಲ್ಲ.
Stuffed Ladies finger ready
ಎಲ್ಲರಿಗೂ ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು
:-)
Mai,
ReplyDeleteGood one. Thanks. I will show this to Pallavi and ask her to do it.
Thanks,
Naveen.
naveen!!
ReplyDeletepallavi na makka manaantuchi sovni jallyaari sai!!!maiyye kayi kaam naa mhaNu!! hahaha
:-)
ms
'ತರಕಾರಿಗಳಿಗೆ ಎಷ್ಟು ಔಷಧಿ ಸಿಂಪಡಿಸುತ್ತಾರೆಂದರೆ , ತರಕಾರಿ ಏನು ,ಏಳು ಜನ್ಮಕ್ಕೆ ನಮ್ಮ ಹೊಟ್ಟೆಯಲ್ಲಿ ಹೂಳ ಆಗಲಿಕ್ಕಿಲ್ಲ ಬಿಡಿ.' ಗುಡ್ ಜೋಕ್! ಮಾಲತಿ, ನಿಮ್ಮ ನಿರೂಪಣಾ ಶೈಲಿ ಪಕ್ಕದಲ್ಲೇ ಕುಳಿತು ಹೇಳುವ೦ತಿರುತ್ತದೆ. ಅಭಿನ೦ದನೆಗಳು.
ReplyDeleteಅತ್ಯುತ್ತಮ ನಿರೂಪಣಾ ಶೈಲಿ. ನವಿರಾದ ಹಾಸ್ಯ ಮತ್ತು ಕಣ್ಣಿಗೆ ಕಟ್ಟುವಂತೆ ಬರೆದ ಲೇಖನ.
ReplyDeleteಬೆಂಡೇ ಕಾಯಿ ಟ್ರೈ ಮಾಡಿ, ಅಸ್ವಾದಿಸುತ್ತೇವೆ.
thank you Prabhamani & Badari
ReplyDelete:-)
malathi S
ಹೌದು ಉತ್ತಮ ನಿರೂಪಣೆ
ReplyDeleteನೀವು ಹೇಳೋ ವಿಷಯ ಒಂದಾದರೆ ಅದನ್ನು ಹೇಳೋಕೆ ಬಳಸಿ ಬರೋ ದಾರಿ ಚೆನ್ನಾಗಿರುತ್ತೆ.
_ನನ್ನ ಬ್ಲಾಗಿಗೂ ಬನ್ನಿ:ಚಿಂತನಾ ಕೂಟ
Hi idannu navu swalpa e-rulli huridu beresi madutteve, adu saha ruchiyagiruttade mattella samagrigalu same. Adre jeerige oggaraneya badlu sasive oggarane kododu 7 it requires swalpa jasthi enne. tumba dina aythu madi - egale tinnabekemba manassagutide- nice write up Malthi
ReplyDeleteveda
ಪಂಚಮ ವೇದಾ??!!!
ReplyDeleteನನಗೊತ್ತಿರೋದು ಬ್ಲಾಗ್ ವೇದ ಮಾತ್ರ.
thanks da for all the sweet comments and a big hats off to ur patience to read them all..
:-)
malathi S
ನಿಮಗೆ ಇನ್ನೊಂದಿಷ್ಟು ಕನ್ನಡ ಕಲಿಸೋಣ ಅನ್ನಿಸ್ತಿದೆ ..
ReplyDeleteMushroom = ಅಣಬೆ
university = ವಿಶ್ವವಿದ್ಯಾಲಯ
distance education = ದೂರಶಿಕ್ಷಣ
sociology ಗೆ enroll ಆಗಿದ್ದೆ = ಸೋಶಿಯಾಲಜಿ (ಸಮಾಜಶಾಸ್ತ್ರ)ಕ್ಕೆ ಸೇರಿಕೊಂಡಿದ್ದೆ.
introvert = ಒಳಮುಖಿ/ಅಂತರ್ಮುಖಿ
decorative = ಅಲಂಕಾರಿಕ
ನಿಮಗೂ ಕೃಷ್ಣಜನ್ಮಾಷ್ಟಮಿಯ ಶುಭಾಶಯಗಳು.
ಅಜಯ್ ಗುರುಗಳೆ!!
ReplyDeleteತುಂಬಾ ತುಂಬಾ ಧನ್ಯವಾದಗಳು.
ಆದರೆ ಒಂದು ಸಮಸ್ಯೆ. ನಮ್ಮ ತರಕಾರಿ ಅಂಗಡಿಯವನಿಗೆ ಅಣಬೆ ಗೊತ್ತಿಲ್ಲ ಮಶ್ರೂಮ್ ಗೊತ್ತು.
thanks Ajay. sincerely mean it.
Hope you had a great Gouri Ganesha Habba....
:-)
ms