May 25, 2011

Marriages are made in Heaven????

While i have acquired a host of tangis and tammas (brothers and sisters) courtesy my blog, Divya Mallya considers me as her mother. My two best blog friends Divya mallya and Sandeep Kamath are entering the nuptials on the 5th June 2011 at udupi.

Malavika and Niharika have made a special photoframe for them. touched it up a wee bit on artrage!!

Wishing both of them the Very best through out their life...for ever and for always!!!
The stand alone photoframe





:-)

May 7, 2011

ಮಾಲ್ತ್ಯಕ್ಕನ 100 and a tribute to Gurudev Rabindranath Tagore

ಇದು ನನ್ನ 100 ನೇ ಪೋಸ್ಟ್. ಇಷ್ಟು ಬರೀತಿನಿ ಅಂತ ನಾನು ಅಂದುಕೊಳ್ಳಲೆ ಇರಲಿಲ್ಲ. ನಾನಂತೂ ಓದುವುದರಲ್ಲೇ ತೃಪ್ತಳಾಗಿದ್ದೆ. ಶ್ರೀಕಾಂತ ಅವರದು  ಒಂದೆ ವರಾತ ಅದು ಎಷ್ಟಂತ ಓದುತ್ತೀಯೇ?? ಏನಾದ್ರು ಬರೀ ಬರೀ ಅಂತ. ಆಗ ರಂಗಶಂಕರಕ್ಕೆ ಹೋದಾಗಲೆಲ್ಲ ಅವರ ಪೋಸ್ಟರ್ ’ಬರೀರಿ’ ನೋಡಿ ನನಗೆ ನಗು ಬರುತ್ತಿತ್ತು.
ಮೊದಲ ಬರಹದ ಶ್ರೇಯ ನನ್ನ ಆಪ್ತ ಮಿತ್ರ ಅಪಾರರಿಗೆ ಸೇರುತ್ತೆ. ನಾನು ತೀರ್ಥಹಳ್ಳಿಗೆ ಚೌತಿಗೆ ಹೋಗಿ ಬಂದ ಮೇಲೆ ನನಗೆ ಅಟ್ಟದಲ್ಲಿ ಸಿಕ್ಕಕಬ್ಬಿಣದ ಟ್ರಂಕ್ ತುಂಬ ಪುಸ್ತಕ ಗಳ ಬಗ್ಗೆ animatedly -ವಿವರಿಸುತ್ತಿದ್ದಾಗ. ಎಷ್ಟು ಸೊಗಸಾಗಿ ಹೇಳಿದ್ರಿ. ಈಗ ನನ್ನ ಜತೆ ಮಾತಾಡಿದ ಹಾಗೇ ಬರೆದು ಕಳಿಸಿದ್ರೆ ನಮ್ಮ ವಿಜಯಕರ್ನಾಟಕದ ಭಾನುವಾರದ ಸಾಪ್ತಾಹಿಕ ಪುರವಣಿ’ಮನಸಿಗೆ ಬಂದಿದ್ದು’ ಸೆಕ್ಷನ್ ನಲ್ಲಿ ಹಾಕ್ತೀನಿ ಅಂದಿದ್ದರು. ಅವರು ಹಾಗೆ ಅಂದರು ಬರೆಯುವುದು ಯಾಕೋ ಬೇಜಾರು ಅನ್ನಿಸ್ತು. ಅಂತೂ ಅವರು ಎರಡು ಮೂರು ಸಲ ನೆನಪಿಸಿದ ಮೇಲೆ ಅದನ್ನು ಬರೆದು ಕಳುಹಿಸಿ ಮರೆತೂ ಬಿಟ್ಟೆ. ಪೇಪರ್ ನಲ್ಲಿ ಸುಧನ್ವಾ ದೇರಾಜೆಯವರು ಕೊಟ್ಟ ’ಅಟ್ಟದಲ್ಲಿ ಕೆಂಪು ಇಲಿ’ ಅನ್ನುವ ಮುದ್ದಾದ title ನಲ್ಲಿ ಬಂದ ಮೇಲೆ ಶ್ರೀಕಾಂತ ಅದನ್ನು ಓದಿ ’ನನಗೆ ಹೇಳೆ ಇಲ್ಲ, ಎಷ್ಟು ಚೆನ್ನಾಗಿ ಬರೆದಿದ್ದೀಯ’ ಅಂದಾಗ ಅದೇ ನನಗೆ ಸಿಕ್ಕಿದ ಬಹು ದೊಡ್ಡ ಶಹಭಾಸಗಿರಿ.ನಮ್ಮ ಅಫಿಸ್ ನವರು, ಆತ್ಮೀಯ ಮಿತ್ರರೆಲ್ಲ ಫೋನ್ ಮಾಡಿ ಅಭಿನಂದಿಸಿದರು. ನನ್ನ ಮುದ್ದು ಸೊಸೆಯಂದಿರು ತೀರ್ಥಹಳ್ಳಿ, ಹಾಸನ ದಿಂದ ಫೋನ್ ಮಾಡಿದಾಗ ಇನ್ನಷ್ಟು ಗಾಳಿಯಲ್ಲಿ ತೇಲಾಡಿದ್ದು ನಿಜ. ಈ ಪ್ರಸಂಗದ ನಂತರ ಅಪಾರ ರಘು ನನಗೆ ಬ್ಲಾಗ್ ಆರಂಭಿಸಲು ಹೇಳಿದರು. ಮೊದಲು ಬ್ಲಾಗ್ ಗೆ ಹೆಸರು ಸೂಚಿಸಿ ಅಂದೆ!!
ನಾನು ಮಕ್ಕಳು ಕೆಲವೊಮ್ಮೆ ಪಗಡೆಯಾಡ್ತೀವಿ. ಆ ಪಗಡೆ ಕಾಯಿಗಳು ಒಂದು ಪ್ಲಾಸ್ಟಿಕ್ ಚೀಲದಲ್ಲಿತ್ತು. ಅದು ಹರಿದು ಹೋಯ್ತು. ಕಾಯಿಗಳು ಚಿಲ್ಲಾಪಿಲ್ಲಿಯಾಗಿ ಎಲ್ಲ್ಲೆಂದರಲ್ಲಿ ಹರಡುತ್ತದೆಂದು ಮಾಲವಿಕ ಒಂದು ಪುಟ್ಟದಾದ ಸಂಚಿ ಚೀಲವನ್ನು ಹೊಲೆದಳು. ಅದನ್ನು ನೋಡಿದ ತಕ್ಷಣ, ನನಗೆ ನಮ್ಮ ಮನೆಗೆ ’ನಾನಿ’ ಗೆ ಸಹಾಯಕಳಾದ ರಾಜೀವಿಯ ಎಲೆ ಅಡಿಕೆ ಸಂಚಿ ನೆನಪು ಬಂದು, ನನ್ನ ಬಾಲ್ಯದ ದಿನಗಳೆಲ್ಲ ನೆನಪು ಬರಲು ಶುರು ಆಯಿತು. ಅರೇ ಸಿಕ್ಕೆ ಬಿಡ್ತಲ್ಲ ನನ್ನ ಬ್ಲಾಗ್ ಗೆ ಒಂದು ಹೆಸರು ಅಂತ ಕೂಡಲೆ ಒಂದು ಬ್ಲಾಗ್ ಶುರು ಮಾಡಿದ್ದು ಅಲ್ಲದೇ ಇವತ್ತು ಅದರ 100 ನೇ ಪೋಸ್ಟ್.
ಹಿಂದಿನ ವರ್ಷ ಜುಲೈನಲ್ಲಿ ಶ್ರೀಕಾಂತ ಗೆ dengue ಆಗಿ ಅವರು ಪುನಃ ಚೇತರಿಸಿಕೊಳ್ಳುವಾಗ ನನ್ನ ಬ್ಲಾಗ್ ಬರವಣಿಗೆ almost ನಿಂತೇ ಬಿಡ್ತಿತ್ತು. ಇ-ಮೈಲ್ ನಲ್ಲಿ ಬಹಳಷ್ಟು ಓದುಗರು ಯಾಕೆ ಬರೀತಿಲ್ಲ ಅಂತೆಲ್ಲ ಕೇಳ್ತಿದ್ದರು. ಅದರಲ್ಲಿ ಮಂಗಳೂರಿನ ಬಳಿಯ ಬಂಟ್ವಾಳದ ಓದುಗರು. ಅಪಘಾತದಲ್ಲಿ ಹೆಂಡತಿ ಮಕ್ಕಳನ್ನು ಕಳೆದುಕೊಂಡದ್ದಲ್ಲದೆ, ಅವರಿಗೆ ಸೊಂಟದಿಂದ ಕೆಳಗಿನ ಭಾಗ ಪೂರ್ತಿ immobile ಆಗಿದ್ದು ತಿಳಿಸಿದ್ದರು. ಅವರಿಗೆ ನನ್ನ ಬ್ಲಾಗ್ ತುಂಬಾ ಇಷ್ಟವಾಗುತ್ತಿತಂತೆ. ದಯವಿಟ್ಟು ಬರೆಯಿರಿ, ನನ್ನ ನೋವನ್ನು ಸ್ವಲ್ಪ ಮಟ್ಟಿಗೆ ಮರೆಯಲು ಸಹಾಯವಾಗುತ್ತೆ ಅಂದಾಗ ನಾನು ಪುನ: ಬರೆಯಲು ಶುರು ಮಾಡಿದ್ದು. ಇಲ್ಲದಿದ್ದರೆ ಸುಮ್ಮನಿದ್ದು ಬಿಡುತ್ತಿದ್ದೆ. ಯಾಕೋ ಸ್ವಲ್ಪ ಸಮಯ ತುಂಬ distressed/depressed  ಆಗಿದ್ದೆ, silent ಆಗಿದ್ದೆ. ಅಲ್ಲಿವರೆಗೆ ನಾನು ಜೀವನವನ್ನು ಸೀರಿಯಸ್ ಆಗಿ ತೆಗೆದುಕೊಂಡಿರಲೇ ಇಲ್ಲ ಅನ್ನಿಸುತ್ತೆ. ಈಗ of course i am the same old ಮಲ್ಲಿ, ಮಲ್ಲು, ಮಾಲ್ತಿ ಅಕ್ಕ  etc.. :-)
 ಇವತ್ತು ರಾಷ್ಟ್ರಕವಿ ರಬೀಂದ್ರನಾಥ ಠಾಕೂರರ 150 ಜಯಂತಿ ಕೂಡ. ಅವರ ಕಥೆ(ಗೀತಾಂಜಲಿ,ಕಾಬುಲಿವಾಲ, ಗೋರಾ, ಚಾರುಲತ, ಕವನಗಳ (where the mind is without fear and the head is held high ಈಗಲೂ ನನಗೆ ಬಾಯಿಪಾಠ ಇದೆ), ನಾಟಕಗಳ ಮತ್ತು ನಮ್ಮ ರಾಷ್ಟ್ರಗೀತೆ ’ಜನ ಗಣ ಮನ’ ಬಗ್ಗೆ ಎಲ್ಲರಿಗೂ ಗೊತ್ತು. ಅವರು ಚಿತ್ರಕಾರರೂ ಹೌದು ಎಂದು ಸುಮಾರು ಜನರಿಗೆ ತಿಳಿದಿರಲಿಕ್ಕಿಲ್ಲ. ಅವರು ಸುಮಾರು 3000 ದಷ್ಟು ಚಿತ್ರಗಳನ್ನು ಬರೆದಿದ್ದಾರಂತೆ. ನಮ್ಮ ಸಂಸ್ಥೆ synergy to solutions (S2S, Bangalore) ಒಡಿಶಾ (Orissa) ದಲ್ಲಿರುವ ಟಾಟಾ ರಿಫ್ರಾಕ್ಟರಿಸ್ ಗೆ consultants. ಈ ವರ್ಷದ ಅವರ ಡೆಸ್ಕ್ ಟಾಪ್ ಕಾಲೆಂಡರ್ ಪೂರ್ತಿ ಟಾಗೋರರು ರಚಿಸಿದ ಚಿತ್ರ ಹಾಗೂ ಕೆಲವು ಹಳೆಯ ಫೋಟೊಗಳಿವೆ.ನನಗಿಷ್ಟವಾದ ಕೆಲವನ್ನು ನಾನು ಸ್ಕ್ಯಾನ್ ಮಾಡಿ ಹಾಕಿದ್ದೇನೆ. enjoy
@ ಸುಶ್ರುತ ದೊಡ್ಡೇರಿ: ಅವಧಿಯಲ್ಲಿ ಮಾಲ್ತ್ಯಕ್ಕ ಪದೇ ಪದೇ setting ಬದಲಾಯಿಸಿ ತೊಂದರೆ ಕೊಡುತ್ತಾರೆ ಎಂದು ಬರೆದಿದ್ದೀರಿ. ಈ ಸಲ ಸುಮಾರು ದಿನಗಳಾದ ಮೇಲೆ ಹೊಸ mast head ಹಾಕ್ತಾ ಇದ್ದೀನಿ.:-)

 A veiled Woman Ink & Brush

 Dancing Girl pen & Ink
 The Flying Dove - Ink and Brush
 Five Friends - Pen & Ink
 Landscape - pen& Ink
 Mother & Child -Pen  Ink
self potrait -Ink & Brush 

 The couple -Pen & Ink


Photos scanned from Desk top calender of TATA Refractories Limited, Belpar, Jharsguda Distirct, Orissa
:-)

May 1, 2011

ಸಂಚಿಯಿಂದ ತೆಗೆದ ನೆನಪು - 6 Diamonds are forever

ಈ ಬರಹಕ್ಕೆ ಸ್ಪೂರ್ತಿ: ಕೆಳಗಿನ ಲಿಂಕ್ ನಲ್ಲಿದೆ


ನನ್ನ ಅತ್ತೆ -ಮಾವ ಶಾಂತಾ ಶೆಣೈ -ಟಿ.ವಿ. ಬಾಲಕೃಷ್ಣ ಶೆಣೈ

ಮದುವೆಗೆ ಮುಂಚೆ ನನ್ನದಿದ್ದಿದ್ದು ಎರಡೇ ಶರತ್ತು. ಗಂಡನಾಗುವವ ಸಿಗರೇಟ್ ಸೇದಬಾರದು ಮತ್ತು ನಾನು ಮೂಗುತಿ ಹಾಕಿಕೊಳ್ಳುವುದಿಲ್ಲವೆಂದು. ಶ್ರೀಕಾಂತ ಅವರಿಗೂ ಸಿಗರೇಟ್ ಅಂದ್ರೆ ನನ್ನಷ್ಟೆ ಅಸಹ್ಯ ಹಾಗು ನಾನು ಮೂಗುತಿ ಹಾಕಿಕೊಳ್ಳುವುದು ಅವರಿಗೂ ಇಷ್ಟವಿರಲಿಲ್ಲವೆಂದು ನನಗಂತೂ ನಿರಾಳ.

ಮದುವೆ ಆಗಿ, ಕೆಲವು ದಿನಗಳಾದ ಮೇಲೆ, ಒಂದು ದಿನ ಮಧ್ಯಾಹ್ನ ಮನೆಕೆಲಸಗಳನ್ನೆಲ್ಲ ಮುಗಿಸಿ ನನ್ನ ಮೊದಲನೇ ವರ್ಷದ ಪದವಿ ಪರೀಕ್ಷೆಗೆ ಓದಲು ಕುಳಿತಾಗ, ಅತ್ತೆ ಮೇಲಿನ ತಮ್ಮ ಕೋಣೆಗೆ ನನ್ನನ್ನು ಕರೆದರು. ಅವರ ಟ್ರಂಕನ್ನು ಬಿಡಿಸಿ, ತಡಕಾಡಿ (ಅವರಿಗೆ ಕಣ್ಣಲ್ಲಿ ದೃಷ್ಟಿಯಿರಲಿಲ್ಲ, ಹಾಗೂ ಕಿವಿ ಕೂಡ ಮಂದವಾಗಿ ಕೇಳಿಸುತ್ತಿತ್ತು, ತುಂಬ ಗಟ್ಟಿಯಾಗಿ, ಅವರ ಕಿವಿಗೆ ಹತ್ತಿರವಾಗಿ ಮಾತಾಡಬೇಕಿತ್ತು) ಒಂದು ಸ್ಟೀಲ್ ಡಬ್ಬಿ ಹೊರಗೆ ತೆಗೆದರು. ಅದರ ಮುಚ್ಚಳ ನಿಧಾನವಾಗಿ ತೆರೆದು ಅದರಲ್ಲಿಂದ ಒಂದು necklace ತೆಗೆದುಕೊಟ್ಟರು. ಹಳೆ ಕಾಲದ ನೆಕ್ ಲೇಸ್ ಗೆ ಮಧ್ಯದಲ್ಲಿ ದೊಡ್ಡ ಕೆಂಪು ಹರಳು.ನನ್ನ ಅತ್ತೆ ತುಂಬ ಶ್ರೀಮಂತ ಮನೆತನದವರು. ಅವರ ಬಳಿಯಿದ್ದ ರಾಶಿ ಬಂಗಾರವನ್ನು ಅವರು ತಮ್ಮ ಮಕ್ಕಳು ಸೊಸೆಯಂದಿರಿಗೆ ಕೊಟ್ಟು ಈ ಕೊನೆಯಲ್ಲಿ ಅವರ ಬಳಿ ಉಳಿದಿದ್ದ ಬಂಗಾರವನ್ನು ನನಗಾಗಿ ತೆಗೆದಿಟ್ಟಿದ್ದರು. ನೀನು ಮೂಗುತಿ ಹಾಕಿಕೊಂಡಿದ್ದೀಯಾ ಅಂತ ಕೇಳಿದರು?? ನಾನು ತಗ್ಗಿದ ದನಿಯಲ್ಲಿ ಇಲ್ಲ ಅಂದೆ. ಅದು ಅವರಿಗೆ ಕೇಳಿಸದೆ ಅವರು ಪ್ರಶ್ನೆಯನ್ನು ಪುನರುಚ್ಛಿಸಿದರು. ನನಗೋ ಮಾತು ಮೊದಲೆ ಕಡಿಮೆ, ಅದರಲ್ಲಿ ಕಿರುಚಿ ಉತ್ತರಹೇಳಬೇಕಾದ ಪ್ರಸಂಗಕ್ಕೆ ನನ್ನ ಕಿವಿ ಮುಖ ಎಲ್ಲ ಕೆಂಪು. (ಆಮೇಲೆ ನಾವು ಅವರ ಕೈ ಮುಟ್ಟಿ ಬೆರಳಿನ ಸಹಾಯದಿಂದ ಸಂಭಾಷಿಸಲು ಶುರುಮಾಡಿದ್ದ್ವು.) ಪೆಟ್ಟಿಗೆಯಲ್ಲಿ ಇನ್ನಷ್ಟು ತಡಕಾಡಿ ಒಂದು ಪುಟ್ಟ ಡಬ್ಬಿಯೊಂದನ್ನು ತೆಗೆದು ’ತೆರೆದು ನೋಡು’ ಅಂದರು. ಆ ಚಿಕ್ಕ ಪೆಟ್ಟಿಗೆಯಲ್ಲಿ ನೀಲಿ ಮಕಮಲ್ಲ ಮೇಲೆ ಇಟ್ಟಿದ್ದ ಮೂಗುಬಟ್ಟು ನೋಡಿ, ನನಗಂತು ಶಾಕ್. ಅಷ್ಟು ಹೊಳಪಿನ ಅಷ್ಟು ದೊಡ್ಡ ವಜ್ರ ನಾನು ನೋಡಿದ್ದು ಅದೇ ಮೊದಲು. (nestled on the blue velvet emitting a lovely aura was the most exquisite solitary diamond i had ever seen!!!ನೀಲಿ ಮಿಶ್ರಿತ (blue tinged) ವಜ್ರದ ಹೊಳಪೆ ಬೇರೆ. ಅತ್ತೆಯ ಕೋಣೆಯಲ್ಲಿನ ಮಂದ ಬೆಳಕಿಗೆ ಅದು ಲಕಲಕನೆ ಹೊಳೆಯುತ್ತಿತ್ತು. ಅದು ಅತ್ತೆಯ ಮನೆಯವರು ಹಲವಾರು ವರ್ಷಗಳ ಹಿಂದೆ ತಮಿಳುನಾಡಿನಿಂದ ತರಿಸಿದ್ದರಂತೆ. ಅದನ್ನೂ ನನಗೆ ಕೊಟ್ಟರು ಮೂಗುತಿ ಮಾಡಿಸಿಕೋ ಅಂತ. ಅಷ್ಟು ದೊಡ್ಡ ವಜ್ರದ ಹರಳಿನ ಮೂಗುತಿ ನಾನು ಹಾಕಿಕೊಂಡರೆ, ನನ್ನ ಮುಖನೆ ಕಾಣುತ್ತಿರಲಿಲ್ಲ ಬಿಡಿ. :-)ಇನ್ನೊಂದು ಪುಟ್ಟ ಹವಳದ ಮಕ್ಕಳಿಗೆ ಹಾಕುವ ಸರ ಬಿಟ್ಟರೆ ಅತ್ತೆಯ ಡಬ್ಬಿ ಖಾಲಿಯಾಗುತ್ತಿತ್ತು. ಆ ಸರ ಅವರ ಕೈ ಗೆ ತಾಗಿದೊಡನೆ, ಈ ಸರ ನಾನು ನಾಗಣ್ಣನ(ಶ್ರೀಕಾಂತ ಅಣ್ಣ) ಮಗುವಿಗೋಸ್ಕರ ಇಟ್ಟಿದ್ದೇನೆ. ನಿನ್ನ ಮಗುವಿಗೋಸ್ಕರ ಏನು ಇಲ್ಲವಲ್ಲ ಅನ್ನುತ್ತ ಬೇಜಾರು ಪಟ್ಟುಕೊಂಡರು. ನನಗೆ ಕೆಟ್ಟದನಿಸಿ, ನಾನು ಛೆ ಅದಕ್ಕೆಲ್ಲ ತಲೆಕೆಡಿಸ್ಕೋ ಬೇಡಿ.ನನಗೋಸ್ಕರ ಇಟ್ಟಿದ್ದ ಬಂಗಾರ ಬೇಕಾದ್ರು ನಿಮಗೆ ಇಷ್ಟ ಬಂದವರಿಗೆ ಕೊಡಬಹುದು ಎಂದೆ. ’ಇಲ್ಲ್ಲಅದು ನಾನು ಕಾಂತು (her name for Srikanth) ಹೆಂಡತಿಗೋಸ್ಕರ ಇಟಿದ್ದು. ಈದೀಗ ನಿನ್ನದೇ’. "ಹೇಗೂ ನಾನು ಇಲ್ಲೆ ಇರುತ್ತೇನೆ. ಬಂಗಾರ ಬಟ್ಟು ಎಲ್ಲ ನಿಮ್ಮ ಬಳಿ ಇರಲಿ" ಅಂತ ಹೇಳಿ, ಡಬ್ಬಿಗಳನ್ನು ಅದರ ಯಥಾ ಸ್ಥಾನಕ್ಕೆ ಇಡಲು ಸಹಕರಿಸಿ ನಾನು ಕೆಳಗೆ ಬಂದೆ.

ಐದು ವರ್ಷಗಳ ನಂತರ ಅವರು ತೀರಿಕೊಂಡಮೇಲೆ ನನ್ನ ಹಿರಿಯ ಅಕ್ಕ (ಒರಗಿತ್ತಿ) ಇನ್ನು ನಿನ್ನ ಬಂಗಾರದ ಜವಾಬ್ದಾರಿ ನಿನ್ನದೆ, ಹಾಗೂ ಅತ್ತೆಯ ಪೆಟ್ಟಿಗೆಯಲ್ಲಿದ್ದ ಸಾಮಾನು, ಸೀರೆಗಳೆಲ್ಲ ನೀನೆ ತೆಗೆದುಕೋ ಅಂದರು. ನಾನು ಸೀರೆಗಳನ್ನೆಲ್ಲ ಶ್ರೀಕಾಂತ ಅಕ್ಕಂದಿರು-ತಂಗಿಯರೊಂದಿಗೆ ಹಂಚಿಕೊಂಡೆ.ಅವರ ಪೆಟ್ಟಿಗೆಯಲ್ಲಿ ಶ್ರೀಕಾಂತ ಚಿಕ್ಕಂದಿನಲ್ಲಿ ಆಡುತ್ತಿದ್ದ ಹಲವಾರು ಗೊಂಬೆಗಳು, ಒಂದು porcelain ನ ಮೊಲ, ರಕ್ತಚಂದನದಲ್ಲಿ ಕೆತ್ತಿದ ಕುದುರೆ, ಕಪ್ಪು ಮಣ್ಣಿನ ಶಿವನ ಚಿಕ್ಕದಾದ ಮೂರ್ತಿ, ಕೋಳಿ, ಒಂದು ಬೆಳ್ಳಿಯ ಒಳಲೆ ಇತ್ಯಾದಿಗಳು ಇದ್ದುವು. ನಾನದನ್ನೆಲ್ಲ ನನ್ನ showcase ನಲ್ಲಿ ಇಟ್ಟುಕೊಂಡಿದ್ದೇನೆ.ಬಂಗಾರ ತಂದು ಬ್ಯಾಂಕ್ ಲಾಕರ್ ನಲ್ಲಿಟ್ಟೆ. ವಜ್ರದ ಉಂಗುರ ಮಾಡಿಸಿಕೊಂಡೆ. ಅದರ ಡಿಸೈನ್ ಕೂಡ ತುಂಬ ಹುಡುಕಿದ ನಂತರ, ಡಿಸೈನ್ ನಲ್ಲಿ ನನ್ನದೇ ಕೆಲವು modification ಮಾಡಿಸಿಕೊಂಡು, now i have the most beautiful diamond ring.ಆದರೆ ಅದು ನನ್ನ ಒರಟು ಬೆರಳಿಗೆ ಚಂದ ಕಾಣುವುದೆ ಇಲ್ಲ . :-(ಈಗ ಅದರ ಸ್ಥಾನ ಲಾಕರ್ ನಲ್ಲಿ. ಮೂಡ್ ಬಂದಾಗ ಅಥವಾ ತುಂಬ ಹತ್ತಿರದ ನೆಂಟರ ಮದುವೆಗೆ ಹಾಕಿಕೊಳ್ಳಲು ಬಂಗಾರ ತೆಗೆದುಕೊಂಡು ಬರಲು , ನಾವು ಮೂವರು (ನಾನು-ಅಕ್ಕ-ನೀಹು)ಬ್ಯಾಂಕ್ ಗೆ ಹೋದಾಗ, ಲಾಕರ್ ನ ಪ್ರೈವಸಿಯಲ್ಲಿ (ಒಂದು ಸಲಕ್ಕೆ ಒಬ್ಬರಿಗೆ ಮಾತ್ರ ಒಳಗಡೆ ಬಿಡುತ್ತಾರೆ)ನಾನು ತುಂಬ ಭಕ್ತಿಯಿಂದ ಆ ಉಂಗುರ ಹೊರಗೆ ತೆಗೆದು ಅದನ್ನು ನೇವರಿಸಿ, ಗಲ್ಲಕ್ಕೆ ಹಚ್ಚಿ ನೀಹಾ ಗೆ ಕೊಡ್ತೇನೆ. ಅವಳು ತನ್ನ ಬೆರಳಿಗೆ ಹಾಕಿ ಕೊಂಡು ’che my fingers are not beautiful at all. ಆ ಮೇಲೆ ಮಾಲವಿಕಾಳ ಸರದಿ. ಬ್ಯಾಂಕ್ ನ ಲಾಕರ್ ನಲ್ಲಿ ಒಂದು ಕನ್ನಡಿಯಿದೆ. ಯಾಕೆ ಅಲ್ಲಿ ಕನ್ನಡಿ ಇಟ್ಟಿರುತ್ತಾರೋ ನನಗೆ ಗೊತ್ತಿಲ್ಲ. ಮಾಲವಿಕ ತನ್ನ ಚಂದದ ಬೆರಳಿಗೆ ಉಂಗುರ ಹಾಕಿ ಕೊಂಡು, ಅವಳ ಭರತನಾಟ್ಯದ ಮುದ್ರೆಗಳನ್ನು ಮಾಡುತ್ತಾಳೆ. (ಅಲ್ಲಿ CCTV ಕ್ಯಾಮೆರಾ ಇದ್ದರೆ ಅವರಿಗೆ ಒಳ್ಳೆಯ entertainment.) it looks good only on my finger ಅಂತ ವಜ್ರದುಂಗುರವನ್ನು ಅವಳಿಗೋಸ್ಕರ ಬುಕ್ ಮಾಡ್ಕೊಂಡಿದ್ದಾಳೆ. ಅದನ್ನು ಪುನಃ ಲಾಕರ್ ನೊಳಗಿಟ್ಟು ಬರುವುದು ಹೆಚ್ಚು ಕಡಿಮೆ ಇದೇ dialogue ನಮ್ಮದು.
H.S. ವೆಂಕಟೇಶಮೂರ್ತಿಯವರ (ಲಿಂಕ್ ನಲ್ಲಿ ಕೊಟ್ಟಿದ್ದನ್ನು ಖಂಡಿತ ಓದಬೇಕು)ಅನಾತ್ಮಕಥನದ ಈ ಭಾಗ ಓದಿ ನನಗೆ ಇದು ಬರೆಯಬೇಕೆನಿಸಿತು. ಅವರ ಬರಹದ ಶೈಲಿ ಹೇಗಿದೆಯೆಂದರೆ ಓಡಿಸಾ (Orissa) ದಲ್ಲಿ ಬೆಳ್ಳಿಮೇಲೆ ನವಿರಾದ ,ಅತ್ಯಂತ ಸೂಕ್ಷ್ಮವಾದ ಕುಸುರಿಕೆಲಸ (silver filigree work)ಮಾಡ್ತಾರೆ- ಅದನ್ನು ನೆನಪಿಸುತ್ತೆ. ನನಗೆ ಅವರ ಬರಹ ತುಂಬ ಇಷ್ಟವಾಯ್ತು. ನಿಮಗೆ?
 
ಅತ್ತೆಯ ತವರು ಮನೆ -ಹರಳಿಮಠ. ತೀರ್ಥಹಳ್ಳಿಯಿಂದ ಕೊಪ್ಪಕ್ಕೆ ಹೋಗುವ ದಾರಿಯಲ್ಲಿ 10 ಕಿ.ಮೀ ದೂರ

ಮನೆಯ entrance.ಫೋಟೊದಲ್ಲಿರುವವರು ಕೃಷ್ಣ ,ಶ್ರೀಕಾಂತ cousin.  ರೆಡ್ ಆಕ್ಸೈಡ್ ನೆಲ ನೋಡಿ!! ಎಷ್ಟು ಚಂದ 
:-)