January 13, 2011

ಸಂಕ್ರಾಂತಿಗೆ special ಬೆಲ್ಲದ ಕಿಚಡಿ

ಸ್ವಲ್ಪ different ಆಗಿದೆ. ಹಿಂದಿನ ವರ್ಷದ ಪೊಂಗಲ್ ಗೆ ಹೆಸರು ಬೇಳೆ -ಅಕ್ಕಿ ಯ ಸಕ್ಕರೆ ಪೊಂಗಲ್ post ಮಾಡಿದ್ದೆ. ಈ ವರ್ಷ ಕೆಳಗೆ ಕೊಟ್ಟಿರುವಂತಹ ಕಿಚಡಿ ತಯಾರಿಸಿ. ನನ್ನ favorite.
ಹೆಸರು ಬೇಳೆ- 1/2 ಕಪ್
ದಪ್ಪ ರವೆ/ಲ್ಯಾಪ್ಸ್ಕಿ/ಕೇಸರಿ/ಬನ್ಸಿ ರವೆ - 1/2  ಕಪ್
ತಾಜ ತೆಂಗಿನ ತುರಿ - 1ಕಪ್
ಬೆಲ್ಲ- 1 and 1/2 ಕಪ್
ತಾಜಾ ತುಪ್ಪ - 1 ಟೇಬಲ್ ಚಮಚ
ಗೋಡಂಬಿ ಚೂರು, ಏಲಕ್ಕಿ,


ಹೆಸರು ಬೇಳೆಯನ್ನು ಪರಿಮಳ ಬರುವ ತನಕ ಹುರಿದು ಆಮೇಲೆ ನೀರಿನಲ್ಲಿ ನೆನೆಸಿಡಿ. ರವೆ ಯನ್ನು ಪಸೆ ಹಾಕದೆ ಎರಡು ಮೂರು ನಿಮಿಷ ಹುರಿದು ಪಕ್ಕಕ್ಕಿಡಿ. ಹತ್ತು ನಿಮಿಷ ನೆನೆದ ಹೆಸರು ಬೇಳೆಯನ್ನು, ರವೆ ಜತೆಗೆ ಮೂರು ಕಪ್ ನೀರುಹಾಕಿ, ಕುಕ್ಕರಿನಲ್ಲಿ ಬೇಯಿಸಿ. ಬೆಲ್ಲ ಒಂದು ಸರಿಗೆ ಪಾಕ ಬರುವ ತನಕ ಬಿಸಿ ಮಾಡಿ ಅದಕ್ಕೆ ಕಾಯಿ ತುರಿ ಹಾಕಿ ಎರಡು ನಿಮಿಷ ಕೈಯಾಡಿಸಿ ಆಮೇಲೆ ಬೆಂದ ಬೇಳೆ ಸೇರಿಸಿ , ಖಿಚಡಿ ದಪ್ಪಗಾಗುತ್ತ ಬಂದ ಹಾಗೆ,ಸ್ವಲ್ಪ ತುಪ್ಪದಲ್ಲಿ ಗೋಡಂಬಿ ಹುರಿದು ಇದಕ್ಕೆ ಬೆರೆಸಿ. ಏಲಕ್ಕಿ ಪುಡಿಯನ್ನು ಸೇರಿಸಿ, ಉಳಿದ ತುಪ್ಪವನ್ನು ಹಾಕಿ ಚೆನ್ನಾಗಿ ಬೆರೆಸಿ. ಬಿಸಿಯಿರುವಾಗಲೇ ತಿನ್ನಿ.
enjoy.
ಸಂಕ್ರಾಂತಿ ಹಬ್ಬದ ಶುಭಾಶಯಗಳು...
ಚಿತ್ರಗಳು : ಮಾಲವಿಕ
ವಿ.ಸೂ: ನಾನು ನೀರು /ತೆಳುಬೆಲ್ಲ ಉಪಯೋಗಿಸುವುದರಿಂದ ಒಂದು ವರೆ ಕಪ್ ಅಂತ ನಮೂದಿಸಿದ್ದೇನೆ. ಗಟ್ಟಿ ಬೆಲ್ಲ ಉಪಯೋಗಿಸುವುದಾರೆ ಅದನ್ನು ತುರಿದು ಎರಡು ಕಪ್ ನ ಅಂದಾಜು ಹಾಕಬಹುದು. (ಹಾಗೆ ಒಂದು ಸಲ ಬೆಲ್ಲ ಕಡಿಮೆಯಾದಾಗ ನಾನು ಮೇಲಿನಿಂದ ಸಕ್ಕರೆ ಬೆರೆಸಿದ್ದೂ ಇದೆ.) ಈಗ ಎಲ್ಲ ಅಂದಾಜಿನಲ್ಲೇ ಅಡುಗೆ.Practice makes perfect
for sakkare pongal click on the link below
http://malathisanchiyinda.blogspot.com/2010/01/blog-post.html
:-)


4 comments:

  1. We will try your pongal malathi avare.
    Wish U and UR family, a prosperous and joyfull
    "MAKARA SANKRANTI".
    - Badarinath, Sr. Cameraman, Kasturi Tv

    ReplyDelete
  2. ಇವತ್ತಿನ ವಿಶೇಷ `ಬೆಲ್ಲದ ಕಿಚಡಿ' ಅ೦ತ ತೀರ್ಮಾನಿಸಿದೀವಿ! ನಿಮಗೂ ಮಕರ ಸ೦ಕ್ರಾ೦ತಿಯ ಶುಭಾಶಯಗಳು.

    ReplyDelete
  3. nimma kichadi vidhaanakke dhanyavadagalu.mattu sankranti shubhaashayagalu.

    ReplyDelete