June 27, 2010

ripple cake?????

ಬಿಸ್ಕತ್ತು ಅಲ್ಲ; ಕೇಕೂ ಅಲ್ಲ
ಮೊಟ್ಟೆಯಂತೂ ಇಲ್ಲವೇ ಇಲ್ಲ
oven ಸುದ್ದಿಬೇಡ, fridge ಮಾತ್ರ ಬೇಕು
ನಾನೇ ಇಟ್ಟ ಹೆಸರು ripple ಕೇಕು
ರುಚಿ ಬಗ್ಗೆ- ತಿಂದವನೆ ಬಲ್ಲ!!



ಸುಮಾರು ವರ್ಷಗಳ ಹಿಂದೆ, ಅಂದ್ರೆ ಆಗ ನಾನು 11 ನೆ ಕ್ಲಾಸ್ ನಲ್ಲಿ ಓದ್ತಿದ್ದೆ. ಊಟ ಮಾಡ್ತಾ ಟಿ.ವಿ ನೋಡ್ತಾ ಇದ್ದೆ. ಆಗ ಈ ಕೇಕೂ ಅಲ್ಲ ಬಿಸ್ಕತ್ತೂ ಅಲ್ಲದ ಒಂದು ತಿಂಡಿ ಮಾಡುವುದನ್ನು ಪ್ರಸಾರ ಮಾಡ್ತಾ ಇದ್ರು. ನಾನು ಎಷ್ಟು impress ಆದೇ ಅಂದರೆ, ಕೂಡಲೆ ಬಿಲ್ಡಿಂಗ್ ಕೆಳಗಡೆ ಇದ್ದ Shah Stores ನಿಂದ ಅದಕ್ಕೆ ಬೇಕಾದ ಪದಾರ್ಥಗಳನ್ನು ತೆಗೆದುಕೊಂಡು ಬಂದು ಮಾಡ್ದೆ. ಎಲ್ಲರೂ ತಿಂದು ವಾಹ ವಾಹ್ ಅಂದ್ರು. ಅಷ್ಟೆ ಅಲ್ಲ ,ಮನೆಗೆ ಭೇಟಿ ಇತ್ತ ಅಮ್ಮನ ಫ್ರೆಂಡ್ಸ್ ಗೂ ತಿನ್ನಿಸಿದೆ. ಅವರಿಗೂ ಅದು ಎಷ್ಟು ಇಷ್ಟ ಆಯ್ತೆಂದರೆ, ಬಿಲ್ಡಿಂಗ್ ನ ಸುಮಾರು ಮನೆಗಳಿಗೆ ಹೋಗಿ, ಅದನ್ನು ಮಾಡುವ ವಿಧಾನ ಹೇಳಿ ಕೊಡುವ ಆಹ್ವಾನ ಬಂತು. ನನಗೆ ಒಂದು ತರಹ celebrity status ಬಂತು.ಈ ಕೇಕ್ ನ speciality ಅದನ್ನು ಕಟ್ ಮಾಡುವ ವಿಧಾನದಲ್ಲಿದೆ.

ಮೊನ್ನೆ ಮಾಲವಿಕಳ ಫ್ರೆಂಡ್ ಹುಟ್ಟಿದಹಬ್ಬದದಿನದಂದು ’ಅಮ್ಮ ಕೇಕ್ ಬಿಟ್ಟು ಬೇರೆ ಏನಾದ್ರೂ ಹೊಸ ಸ್ವೀಟ್/ತಿಂಡಿ, attractive ಆಗಿರೋದು/easy ಆಗಿ ತಯಾರು ಮಾಡುವುದು.. ಹೇಳಿ ಕೊಡು ಅಂದ್ರೆ ಥಟ್ಟನೆ ಈ recipe ನೆನಪಿಗೆ ಬಂತು

ಮಾಡುವುದು ಅತ್ಯಂತ ಸುಲಭ

ಬೇಕಾಗುವ ಸಾಮಾನು:

1 ಪ್ಯಾಕ್ -ಮಾರಿ (Marie) ಬಿಸ್ಕತ್ (ಚಿಕ್ಕ ಪ್ಯಾಕ್)
ಎರಡು Table spoon ಡ್ರಿಂಕಿಂಗ್ chocolate
Icing sugar half packet
ಬೆಣ್ಣೆ

ಸ್ವಲ್ಪವೇ ನೀರಿನಲ್ಲಿ 2 t.sp ಡ್ರಿಂಕಿಂಗ್ ಚಾಕಲೇಟ್ ಪುಡಿಯನ್ನು ಹಾಕಿ ಕದಡಿ. ಒಂದೊಂದೆ ಬಿಸ್ಕತ್ ಅದರಲ್ಲಿ ಅದ್ದಿ ಒಂದರ ಮೇಲೊಂದು ಇಡುತ್ತಾ ಹೋಗಿ.

 ಬೆಣ್ಣೆಯಲ್ಲಿ 2- ಟೇಬಲ್ ಸ್ಪೂನ್ ಡ್ರಿಂಕಿಂಗ್ chocolate ಪುಡಿ ಹಾಗೂ ಐಸಿಂಗ್ ಶುಗರ್ ಮಿಕ್ಸ್ ಮಾಡಿ thick paste ಆಗುವ ತನಕ ಎರಡು ನಿಮಿಷ brisk ಆಗಿ beat ಮಾಡಿ. :-)

 ನಂತರ ಚಿತ್ರದಲ್ಲಿ ತೋರಿಸಿದ ಹಾಗೆ ಈ paste ಅನ್ನು ಬಿಸ್ಕತ್ ಲೇಯರ್ ಗೆ ಲೇಪಿಸಿ.



butter paper ಮೇಲಿಟ್ಟು ಅರ್ಧ ಗಂಟೆ fridge ನಲ್ಲಿಡಿ.

Fridge ನಿಂದ ತೆಗೆದ ಮೇಲೆ
ಆ ಮೇಲೆ ಅಡ್ಡಡ್ಡ ಕಟ್ ಮಾಡಿ. ಕೆಳಗಿನ ಚಿತ್ರದಲ್ಲಿದ್ದ ಹಾಗೆ!
ಕಟ್ಟ್ ಮಾಡಿದ ಕೂಡಲೇ ಸರ್ವ್ ಮಾಡಿದ್ರೆ ಬಿಸ್ಕತ್ ನ cripsness ಉಳಿದು ತಿನ್ನಲು ಮಜವಾಗಿರುತ್ತೆ.


value addition: ಮತ್ತೊಮ್ಮೆ ಮಾಡಿದಾಗ, Malavika applied a thin layer of mixed fruit jam in between the biscuits, the taste was super!! ಅವಳ ಕ್ಲಾಸಮೇಟ್ ಎದ್ರಿಗೆ ಆ ದಿನ ಅವಳೇ ಮಿಂಚಿಂಗ್. ಅವಳ ಮೂಲಕ ನನಗೂ ಒಂದಿಷ್ಟು thanks ಗಳನ್ನು ಕಳುಹಿಸಿಕೊಟ್ರು.

* alternatively drinking chocolate ಪುಡಿ ಕಡಿಮೆ ಹಾಕಿ, ಅದರ ಬದಲಿಗೆ ಸಕ್ಕರೆ ಪುಡಿ ಬೆರೆಸಬಹುದು. ಸಕ್ಕರೆಯನ್ನು ಅಂದಾಜಿನಲ್ಲೇ ಬಳಸುವುದು ಉತ್ತಮ.

ಚಿತ್ರದಲ್ಲಿ ನಿಹಾ ಈ ಕೇಕ್ ಮಾಡುವುದನ್ನು attempt ಮಾಡ್ತಾ ಇರೋದು. finishing ಅಷ್ಟು ಚೆನ್ನಾಗಿರದಿದ್ರೂ, ಟೇಸ್ಟ್ ಗೇ ಏನೂ ಮೋಸ ಆಗಲಿಲ್ಲ.
:-)

June 21, 2010

ಹರಿವೆ ಸೊಪ್ಪಿನ ಸಾಸಿವೆ


ಮೊದಲಿಗೆ ಹೇಳಿ ಬಿಡ್ತೇನೆ. ಇದು recipe ನೂ ಅಲ್ಲ,ಹರಿವೆ ಸೊಪ್ಪಿನ ಮೇಲೆ ಬರೆದ ಥೀಸಿಸ್ ನೂ ಅಲ್ಲ

ಥೀಸಿಸ್ ಅಂದಾಗ ನೆನಪಾಯ್ತು. ಶ್ರೀಕಾಂತ್ MSc. ಆಗ್ರಿ ಯಲ್ಲಿದ್ದಾಗ ಕೆಂಪು ಹರಿವೆ ಸೊಪ್ಪಿನ (amaranthus)ಮೇಲೆ ಥೀಸಿಸ್ ಬರೆದಿದ್ರು. thesis submit ಮಾಡುವ ದಿನ ಪುಸ್ತಕ ಹುಡುಕಿದಾಗ, ಎಲ್ಲಿದೇ ಪುಸ್ತಕ? ಅವರ ಆತ್ಮೀಯ ಸ್ನೇಹಿತರ doberman ನಾಯಿ ’ಪೊಲ್ಲಿ”ಅದನ್ನು ಚಿಂದಿ ಚಿಂದಿ ಮಾಡಿ ಹಾಕಿತ್ತು. ಆದದ್ದು ಇಷ್ಟು. ಅವರ ಮನೆಗೆ ನೆಂಟರು ಬಂದಿದ್ದರು. ನೆಂಟರ ಪುಟ್ಟ ಮಗುವಿಗೆ ನಾಯಿ ಕಂಡರೆ ಹೆದರಿಕೆ. ಅದಕ್ಕೆ ಪೊಲ್ಲಿಯನ್ನು ರೂಮ ನಲ್ಲಿ ಕೂಡಿ ಹಾಕಿದ್ದರು. ಮನೆಯಿಡೀ freeಯಾಗಿ ಅಡ್ಡಾಡುವ ಪೊಲ್ಲಿ ಗೆ ಸಿಟ್ಟು ಬಂದು ಅದು ಶ್ರೀಕಾಂತ್ ಬರೆದ ಥೇಸಿಸ್ ಅನ್ನು ಹರಿದು ಹಾಕುವ ಮೂಲಕ ತೋರಿಸಿತ್ತು. ಶ್ರೀಕಾಂತ್ ಮಿತ್ರರ ಜತೆ ಒಂದೆರಡು ತಿಂಗಳು ಮಾತು ಆಡಲಿಲ್ಲವಂತೆ. :-) ಅದು ಇನ್ನೊಂದು episode.
***************
ಮಕ್ಕಳು ಊರಿಗೆ ಅವರ ಅಜ್ಜ-ಅಜ್ಜಿ-ಮಾಮನ ಜತೆ ಇರಲು ಒಂದು ವಾರದ ಮಟ್ಟಿಗೆ ಹೋಗಿದ್ದಾರೆ. ನೀಹಾ ಇದ್ದರೆ ಸಂಜೆ ನನಗೆ ಕಡ್ಡಾಯ walking. ನಿನ್ನೆ ಸಂಜೆ ಹೇಗೂ ನೀಹಾ ಇಲ್ಲ, ಮತ್ತು ಶ್ರೀಕಾಂತ್, ಕಂಪ್ಯೂಟರ್ ನಲ್ಲಿ ಯಾವುದೋ ಗಹನವಾದ ಕೆಲಸದಲ್ಲಿ ತೊಡಗಿದ್ರು. ನಾನು ಯಾರದೂ ತಂಟೆ ಇಲ್ಲದೇ ಒಂದು ಪ್ಲೇಟ್ ನಲ್ಲಿ ಹುರಿದ ಕಡ್ಲೇ ಬೀಜ ಇಟ್ಟುಕೊಂಡು, ಹೆಬ್ಬಾವಿನ ತರಹ ಮಲಕ್ಕೊಂಡು agatha Christie ಯ cards on the table ಓದ್ತಾ, ಕಡ್ಲೇ ಬೀಜ ಕಬಳಿಸುತ್ತ, hercule Poirot (the distinguishing feature of hercule poirot are his moustache and his egg shaped face)ಎಂಬ ಪತ್ತೆದಾರ ಇನ್ನೊಬ್ಬನ ಮೀಸೆ ಬಗ್ಗೆ ಹೊಟ್ಟೆಕಿಚ್ಚು ಪಡ್ತಿರಬೇಕಾದ್ರೆ...’ಮಾಲ್ತೀ’ ಅಂತ ಕರೆದ ಹಾಗೆ ಅನ್ನಿಸ್ತು. ಮತ್ತೆ ಛೆ ಇರಲಿಕಿಲ್ಲ ಅಂತ ಸುಮ್ಮನಾದೇ. ಅಷ್ಟರಲ್ಲೇ ಶ್ರೀಕಾಂತ್ ಸ್ವಲ್ಪ ಜೋರಾಗಿ ’ಮಾಲ್ತೀ, ’what happened to your walk?'ಅಂತ ಕೇಳಿದ್ರು. ಸ್ವಲ್ಪ ಹೊತ್ತು ನಾನು ಸುಮ್ಮನಿದ್ದೆ.ಇದೇನಪ್ಪ ಅಂತ??

ಕಿತಾಪತಿ ನೀಹಾ, ಅಪ್ಪನಿಗೆ sms ಮಾಡಿದ್ದಳು ’tell maman to go for her walk' ಅಂತ. ಅವಳನ್ನ ಮನಸ್ಸಲ್ಲೆ ಬೈದುಕೊಳ್ಳುತ್ತ:

’ಆಗಲೇ ವಾಕ್ ಹೋಗಿ ಬಂದೆ’ ಅಂದೆ.

ಎಲ್ಲಿ ಯಾವಾಗ?/

ಮನೆ ಹಿಂದಗಡೆ, ತೆಂಗಿನ ಕಾಯಿ ತರಲು. ಐದು ತೆಂಗಿನಕಾಯಿ

ಐದರ ಮೇಲೆ ಸ್ವಲ್ಪ ಹೆಚ್ಚೇ ಒತ್ತು ಹಾಕಿದೆ. ಐದಲ್ಲ , ಮಹಾ 50 ಕೆಜಿ ತರಹ.

ಹತ್ತು ಹೆಜ್ಜೆ ಹೋಗಿದ್ದು walkಆ? ಏಳೇ ಸೋಂಬೇರಿ. ಇಬ್ಬರೂ ದೊಡ್ಡ walk ಹೋಗಿ ಬರುವಾ ಅಂತ ಶ್ರೀಕಾಂತ್ ಕರೆದಾಗ ಏನೇನೆಲ್ಲ ಸಬೂಬು ಹೇಳ್ದೆ. ಜಿಲೇಬಿ ಕೊಡಿಸ್ತೇನೆ ಅಂದಾಗ ನನ್ನ ಕಿವಿ ನೆಟ್ಟಗಾಗಿ, ಪುನಃ confirm ಮಾಡ್ಕೊಂಡು...ರೆಡಿಯಾದೆ.

ಶಂಕರಮಠ cross ಬಳಿ, ಶಂಕರಮಠದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮದ ಬಗ್ಗೆ ಪೋಸ್ಟರ್ ಒಂದನ್ನು ಅಂಟಿಸಿದ್ದರು. ಅದನ್ನು ಓದ್ತಾ ಶ್ರೀಕಾಂತ್ ಹತ್ತಿರ ಮಾತಾಡ್ತಾ ಇದ್ದೆ. ಎನೂ ಉತ್ತರ ಬಾರದಿದ್ದು ಪಕ್ಕದಲ್ಲಿ ತಿರುಗಿ ನೋಡಿದ್ರೆ..ಶ್ರೀಕಾಂತ್ ಎಲ್ಲಿ??ಗಾಯಬ್. ಆವಾಗಲೇ ಸಿಗ್ನಲ್ ದಾಟಿ ರಸ್ತೆ ಆಚೆ ಬದಿಗೆ ನಿಂತು ನನ್ನ ಬರುವಿಕೆಗೆ ಕಾಯ್ತಾ ಇದ್ದರು. ಸರಿ ಅಷ್ಟರಲ್ಲಿ ಪುನ: ಸಿಗ್ನಲ್ ಕೆಂಪಾಗಿದ್ದರಿಂದ, ನಾನು ಆ ಕಡೆ ಕ್ರಾಸ್ ಮಾಡಲು ಕಾಯ್ತಾ ಇದ್ದೆ. ಯಾರೋ ಗಟ್ಟಿಯಾಗಿ ಕೈ ಹಿಡಿದ್ರು. ನೋಡಿದ್ರೆ ಪುಟ್ಟ ಹೆಂಗಸು. ಪುಟ್ಟ ಹೆಂಗಸು ಯಾಕಂದ್ರೆ, ವಯಸ್ಸು 15-16 ದಾಟಿರಲಿಕ್ಕಿಲ್ಲ. ಮುಖ ಎಳಸಾಗಿತ್ತು, ಮದುವೆ ಯಾಗಿತ್ತು. ಕಾಲಿಗೆ ಸುತ್ತುಂಗುರ, ಎರಡು ಕೈಗಳಿಗೆ ಧಾರಾಳವಾದ ಹಸಿರು ಬಳೆ, ಎಡ ಕೈ ಬಳೆ ಎಡೆಯಿಂದ ಕಾಣಿಸಿದ ಹಚ್ಚೆ (tattoo), ಹಾಗೂ ಹಸಿರು ಸೀರೆಯುಟ್ಟು ಸೆರಗನ್ನು ತಲೆ ಮೇಲೆ ಎಳಕೊಂಡಿದ್ದಳು. ನಾನು ಅವಳನ್ನು study ಮಾಡ್ತಾ ಇದ್ರೆ, ಅವಳಿಗೆ ನನ್ನ ಕೈ ಹಿಡಿದಿದ್ದರ ಪರಿವೆಯೇ ಇರಲಿಲ್ಲ.pedestrian crossing ಸಿಗ್ನಲ್ ಆದ ನಂತರ ಇಬ್ಬರೂ ಆಚೆ ರಸ್ತೆ ತಲುಪಿದ್ವಿ. ’ಈಗ ನನ್ನ ಕೈ ಬಿಡಬಹುದು’ ಅಂದೆ, ಪಕ್ಕನೇ ನಾಚಿ ನನ್ನ ಕಡೇ ನೋಡಿದಾಗ, ಇಬ್ಬರೂ ವಿನಿಮಯ ಮಾಡಿಕೊಂಡ ಮುಗುಳ್ನಗು ಎಷ್ಟೊಂದು ಆತ್ಮೀಯತೆಯಿಂದ ಕೂಡಿತ್ತೆಂದರೆ ನನಗೆ ಆ ಕ್ಷಣ ಒಂದು ವಿಶೇಷವಾದ ದಿವ್ಯಾನುಭೂತಿಯಲ್ಲಿ ಮಿಂದಂತಾಯಿತು.

ಶ್ರೀಕಾಂತ್ ನ ಕೂಡಿ ನಗುತ್ತ ಮುಂದುವರೆಯುತ್ತಿದ್ದ ಹಾಗೆ ನಾನು ಗಕ್ಕಂತ್ ಪುನ: brake ಹಾಕಿ ನಿಲ್ಲ ಬೇಕಾಯಿತು, ಇಲ್ಲದಿದ್ದರೆ ನನ್ನ ಎದುರಿಗೆ ನಿಂತ ದಢೂತಿ ಮಹಿಳೆಗೆ ಡಿಕ್ಕಿ ಹೋಡಿತಿದ್ದೆ. ಪ್ರಶ್ನಾರ್ಥಕವಾಗಿ ಅವಳ ಕಡೆ ನೋಡಿದಾಗ, ’ಅಕ್ಕ, ಸೊಪ್ಪು ತಗಳ್ಳಿ’ ಅಂತ , ಅವಳ ಕೈಯಲ್ಲಿರೋ ಎರಡು ದೊಡ್ಡ ಚೀಲಗಳನ್ನು ನನ್ನ ಮುಂದೆ ಹಿಡಿದ್ಲು. ಇವಳಿಗೇನಪ್ಪ ನಾನು ಸೊಪ್ಪು ತಿನ್ನದೇ ನನ್ನಲ್ಲಿ ಏನಾದರೂ deficiency ಕಂಡಿತಾ?? ಅಂತ ಮನಸ್ಸಲ್ಲೆ ಅಂದು ಕೊಂಡು , ಬೇಡಮ್ಮ ಅಂದು ಬಿಟ್ಟು ಮುಂದೆ ನಮ್ಮ ವಾಕ್ ನ್ನು ಮುಂದುವರಿಸಿದೆವು. ರಾಜಾಜಿನಗರ ಒಂದನೇ ಬ್ಲಾಕ್ ನಲ್ಲಿ ಶ್ರೀ ಗಜಾನನ ಕಾಂಡಿಮೆಂಟ್ಸ್ ಹತ್ತಿರ ತಲುಪಿದಾಗ ಸಾರಿನ ಪುಡಿ ಖರ್ಚಾದುದರ ನೆನಪು ಬಂತು. ಅಲ್ಲಿ ಸಾರಿನ ಪುಡಿ ಖರೀದಿ ಮಾಡಿ,(ನನ್ನ famous ಸಾರಿನ secret) round about ದಾರಿಯಲ್ಲಿ ಪುನ:ಮನೆ ಕಡೆ ಹೊರಟ್ವಿ. aishwarya bakery ಬಳಿ ಬಂದಾಗ , ’ಬಾ, ಜಿಲೇಬಿ ತಗೊಳುವಾ’ ಅಂದ್ರು. ನನಗ್ಯಾಕೋ ಬೇಡ ಅನ್ನಿಸ್ತು.

ಇನ್ನೊಂದು ಕಡೆ ರಸ್ತೆ ಕ್ರಾಸ್ ಮಾಡಬೇಕಿತ್ತು. ಪುನ: ಯಾರೋ ನನ್ನ ಬಳಿ ಬಂದು ’ಅಕ್ಕ, ಸೊಪ್ಪು" ಅಂತ ಕೇಳಿಸ್ತು. ಅರೇ!! ನೋಡಿದ್ರೆ ಪುನ: ಅದೇ ಸೊಪ್ಪು ಮಾರುವ ಹೆಂಗಸು. ನಾನು ಗಟ್ಟಿಯಾಗಿ ನಕ್ಕಿದ್ದನ್ನು ನೋಡಿ, ’ಗೊತ್ತಾಗ್ ಲಿಲ್ಲ ಅಕ್ಕ, ಆವಾಗ್ಲೇ ನಿಮ್ಮನ್ನ ಒಂದು ಸಲ ಕೇಳಿದ್ದೆ ಅಲ್ಲವ?? ನಾನು ಹೌದೆಂದು ಗೋಣು ಅಲ್ಲಾಡಿಸಿದೆ.

ಅಕ್ಕ ತುಂಬ ಕಷ್ಟ ಆಗಿದೆ. ಬಸ್ ಚಾರ್ಜ್ ಗಾಗುವಷ್ಟೂ ಕಾಸಿಲ್ಲ. ಏನಾದ್ರು ಸೊಪ್ಪು ತಗಳ್ಳಿ ಅಂದಳು. ಶ್ರೀಕಾಂತ್ ಕಡೆ ಬೆರಳು ಮಾಡಿ, ನಮ್ಮ ಮನೆ ಸೊಪ್ಪಿನ department ಅವರದ್ದು ಅಂದೆ. "ಅಣ್ಣ ಎಲ್ಲ ತರದ್ದು ಸೊಪ್ಪಿದೆ, ತಗಳಣ್ಣ ಅಣ್ಣ ಅಂತ ಗೋಗರೆದಳು. ದಂಟಿನ ಸೊಪ್ಪು 10 ರೂ ಗೆ ಮೂರು ಕಟ್ಟು ಅಂತ ಕೊಟ್ಟಳು. ಶ್ರೀಕಾಂತ್ ನಾಲ್ಕು ಕೊಡಿ ಅಂತ ಚೌಕಾಸಿಗೆ ನಿಂತರು. ನಾನು ಬೇಗ 10 ರೂ ಅವಳ ಕೈಗೆ ತುರುಕಿ, ಸೊಪ್ಪನ್ನು ಚೀಲದಲ್ಲಿ ಹಾಕಿ, ರಸ್ತೆಯ ಎರಡು ಬದಿ  ವಾಹನಗಳಿಲ್ಲದೆ ಖಾಲಿಯಿದ್ದರಿಂದ, ಶ್ರೀಕಾಂತ್ ಕೈಯನ್ನು ದರದರನೆ ಎಳೆದು, ಕ್ರಾಸ್ ಮಾಡಿ ಬಿಟ್ಟೆ. ಅವಳು ಅಷ್ಟು ದೂರದಿಂದ ’ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ ಅಕ್ಕೋ’ ಅಂತ ಕೂಗು ಹಾಕಿದಳು.

ಶ್ರೀಕಾಂತ್ ನಗುತ್ತ ನೋಡು ನಿನಗೆ ಆಶೀರ್ವಾದ ಮಾಡಿದ್ಲಲ್ಲ. ಖುಶಿಯಾಯ್ತಾ ಅಂತ ಕೇಳಿದ್ರು. ನಿನಗೆ ಮರಳು ಮಾಡಿ 10 ರೂ ಸೊಪ್ಪು ನಿನಗೆ ಮಾರಿದ್ಲು ಅಂದರು. ಅದಕ್ಕೆ ನಾನಂದೆ, ಪಾಪ ಮನೆಯಲ್ಲಿ ಏನು ಕಷ್ಟವೋ ಏನೋ, ಭಿಕ್ಷೆ ಬೇಡುವುದಕ್ಕಿಂತ ಸೊಪ್ಪು ತಾನೆ ಮಾರಿದ್ದು, ಏನೀಗ?? ಹಾಗೇ ಜಿಲೇಬಿಗಿಂತ ಸೊಪ್ಪು ದೇಹಕ್ಕೆ ಒಳ್ಳೆಯದು ಅಂತ ಇವತ್ತು ನಮ್ಮ ಮನೆಯಲ್ಲಿ ಹರಿವೆ ಸೊಪ್ಪಿನ ಸಾಸಿವೆ.ಅಷ್ಟೆ ಕತೆ.

by the way ಹರಿವೆ ಸೊಪ್ಪಿನ ಸಾಸಿವೆ ತುಂಬ ರುಚಿಯಾಗಿತ್ತು.

:-)

June 12, 2010

ಕಪ್ಪು ಬಿಳುಪು

ನಮ್ಮ ಮನೆಯಲ್ಲಿ ಮೊದಲ ಟೆಲಿವಿಷನ್ ತಂದಿದ್ದು 1985 ನಲ್ಲಿ, ಅದೂ second hand. ಕೆಲವರ ಮನೆಯಲ್ಲಿ ಆಗಲೇ ಬಣ್ಣದ ಟಿ.ವಿ. ಬಂದಿತ್ತು. ನನ್ನ ತಮ್ಮ excite ಆಗಿ ಎಲ್ಲರಿಗೂ ಹೇಳಿ ಬಂದಿದ್ದ. ಯಾರೋ ಒಬ್ಬರು ಕಲರ್ ಟಿ.ವಿ. ನಾ ಅಂತ ಕೇಳಿದ್ದಕ್ಕೆ ಹೌದು, ಆದರೆ ಅದರಲ್ಲಿ ಇರೋದೇ ಎರಡೆ ಬಣ್ಣ - ಕಪ್ಪು ಬಿಳುಪು ಅಂದಿದ್ದ. ಅವನು ನಮ್ಮ ಮನೆಯ official ಹಾಸ್ಯಗಾರ. ಯಾವಾಗಲೂ ನಗಿಸುತ್ತಿರುತ್ತಾನೆ. ಅವನಿದ್ದರೆ ಮನೆಯಲ್ಲಾ ಗೌಜು ಗದ್ದಲ. ನನ್ನ favorite ತಮ್ಮ ಅಂತ ಬೇರೆ ಹೇಳಬೇಕಿಲ್ಲವಲ್ಲ.

ಇಷ್ಟೆಲ್ಲ ಪೀಠಿಕೆ ಯಾಕೆಂದರೆ ನನಗೆ ಕಪ್ಪು-ಬಿಳುಪು ಬಣ್ಣ ಇವತ್ತಿಗೂ ಇಷ್ಟ. ನನ್ನ ಬಟ್ಟೆಯ ಕಪಾಟಿನ ಬಾಗಿಲು ತೆರೆದರೆ ಅಲ್ಲಿರೋದೆ ಕಪ್ಪು / ಬಿಳಿ ಬಣ್ಣದ various shades ನ ಚೂಡಿದಾರ- ಸೀರೆಗಳು. ಅಮ್ಮ ಏನಾದರೂ shopping ಗೆ ನನ್ನ ಜತೆ ಬರುವುದಾದರೆ ಮೊದಲೇ ತಾಕೀತು ಮಾಡಿ ಬಿಡುತ್ತಾರೆ- ಕಪ್ಪು / ಬಿಳಿ ಬಣ್ಣದ ಬಟ್ಟೆ ತೆಗೆದುಕೊಳ್ಳಲಿಕ್ಕಿಲ್ಲ ಅಂತ. ಅಲ್ಲಿ ಹೋದ ಮೇಲೆ ಅಮ್ಮನೇ ನನಗೋಸ್ಕರ ಕಪ್ಪುಬಿಳಿ ಮಿಶ್ರಿತ ಬಣ್ಣದ್ದೆ ಬಟ್ಟೆ ತೆಗೆದುಕೊಳ್ಳೋದು. ಶ್ರೀಕಾಂತ್ ಕೂಡ ಅಕಸ್ಮಾತ್ ನನಗೆ ಬಟ್ಟೆ ತಂದರೆ ಅದೂ ಕಪ್ಪು-grey ಬಣ್ಣದ್ದಾಗಿರುತ್ತದೆ.

ಮತ್ತು black & white ಸಿನಿಮಾಗಳ ಬಗ್ಗೆ ಹೇಳಬೇಕೆ?? ಒಂದು ಸಂತಸದ ಸಂಗತಿಯೆಂದರೆ, ನನ್ನ ಇಬ್ಬರೂ teenage ಮಕ್ಕಳಿಗೂ ಕಪ್ಪು-ಬಿಳುಪು ಸಿನಿಮಾಗಳೆಂದರೆ ಇಷ್ಟ. ಒಟ್ಟಾಗಿ ನೋಡುವುದರೆಂದರೆ ಏನೋ ಒಂದು ಸಂಭ್ರಮ.

ಮತ್ತೆ ಎಲ್ಲದಕ್ಕಿಂತ ನನಗೆ ಜಾಸ್ತಿಇಷ್ಟ ನಮ್ಮ ಹಳೆಯ black & white ಫೊಟೊಗಳು. ಯಾಕೋ ಕಪ್ಪು ಬಿಳುಪು ಚಿತ್ರಗಳು sesnses ಗೆ comfortable ಆಗಿರುತ್ತೆ. ಮತ್ತು ಅಮ್ಮನ ಮನೆಗೆ ಹೋದಾಗಲೆಲ್ಲ ಅಪ್ಪ-ಅಮ್ಮನ ಮದುವೆ ಆಲ್ಬಮ್, ನನ್ನ ಮೊದಲನೆ ಹುಟ್ಟು ಹಬ್ಬದ ಆಲ್ಬಂ ನೋಡುವುದು ಇವತ್ತಿಗೂ ನನ್ನ favorite ಕೆಲಸ. ಒಂದು ಇಡೀ ದಿನ ಅದಕ್ಕೇ ಮೀಸಲು.ಅಮ್ಮ ತಮಾಶೆ ಮಾಡುವುದುಂಟು ’ಅಲ್ವೇ ನನ್ನ ಮದುವೆ ಸಮಯದಲ್ಲಿ(1966), ಫೋಟೊ ತೆಗೆದದ್ದೇ ವಿಶೇಷ, ಆದರೂ, ನಿನ್ನಷ್ಟು ನಾನೇ ಆ ಅಲ್ಬಂಗಳನ್ನು ನೋಡಿಲ್ಲ’ ಅಂತ

ಇಲ್ಲಿವೆ ಕೆಲವು ನನ್ನ ಮನೇದು. ಹೆಚ್ಚಿನದು ತೀರ್ಥಹಳ್ಳಿಯ ಶ್ರೀಕಾಂತ್ ಮನೆಯವರದ್ದು . ತೀರ್ಥಹಳ್ಳಿಯ ಕೆಲವು ಫೋಟೊಗಳನ್ನು  frame ನಿಂದ ಹೊರತೆಗೆದು scan ಮಾಡಿದ್ದೇನೆ.  ವಾಪಸ್ ಅದರಲ್ಲಿ ಕೂಡಿಸಲು ನನಗೆ ಬರುವುದಿಲ್ಲ. :-) ಇನ್ನು ಹೊಸ ಕಟ್ಟು ಹಾಕಿಸಬೇಕಷ್ಟೆ.
 


ನನ್ನ ಮೊದಲನೇ ಹುಟ್ಟಿದ ಹಬ್ಬದಂದು


ನನ್ನ ತಂದೆ ತಾಯಿ ಜತೆ

ಮುಂಬಯಿನ ಘಾಟಕೋಪರ್ ನ ನಮ್ಮ ಪಕ್ಕದ ಮನೆಯ ಹುಡುಗ. ಬೇಡ್ spread ಹಾಗೂ pillow case ಮೇಲೆ ಅಮ್ಮ ಹಾಕಿದ ಕಸೂತಿ


ನಮ್ಮ ಪದ್ದತಿಯಲ್ಲಿ ಆರತಿ ಬೆಳಗಿಸಿ ನನ್ನ ಮೊದಲನೆ ಹುಟ್ಟು ಹಬ್ಬದ ಆಚರಣೆ, ನನ್ನ ನಾನಿ, ಅಮ್ಮ, ಅಪ್ಪ ಮತ್ತು ಆಜೋಬಾ. ನಾನು ಕೃಷ್ಣನ get-up ನಲ್ಲಿ. :-)


ಶ್ರೀಕಾಂತ ರ ಮೊದಲನೆ ಅಣ್ಣ ನವರ ಮದುವೆಯಂದು. ಶ್ರೀಕಾಂತ್ ಗೆ ಒಟ್ಟು ಮೂರು ಅಣ್ಣಂದಿರು


ಶ್ರೀಕಾಂತ್ ಅಕ್ಕ -ಅನುರಾಧ ಹಾಗೂ ಭಾವ ಯೋಗೇಶ ಜೋಯಿಸ್. ಈ ಮದುವೆ ದಿನದಂದು ಶ್ರೀಕಾಂತ್ ಉಪನಯನ ಕೂಡ.


ಎಡಬದಿಗಿರುವವರು ನನ್ನ ಅತ್ತೆ -ಅವರೊಂದಿಗೆ ಅವರ co-sisters


ಶ್ರೀಕಾಂತ್ cousin ರಾಧಾಕೃಷ್ಣ...ತಾಜ್ ಮಹಲ್ ಎದುರಿಗೆ


ಶ್ರೀಕಾಂತ್ ಅಕ್ಕ ಶ್ಯಾಮಲ..ಮೊದಲ ಸಲ sunglasses ಹಾಕಿಕೊಂಡಾಗ ತೆಗೆದ ಚಿತ್ರ.... ಇತ್ತೀಚಿಗೆ ದೈವಾಧೀನರಾದರು. :-(


ಶ್ರೀಕಾಂತ್ ಸೋದರತ್ತೆ, ಸೋದರಮಾವ..ಅವರ ಮಗ ನರಸಿಂಹಮೂರ್ತಿ


MSc agri friends ಜತೆ ಶ್ರೀಕಾಂತ್...ಕೂತುಕೊಂಡವರಲ್ಲಿ ಮಧ್ಯದವರು..:-) :-)



ಶ್ರೀಕಾಂತ್ ಸೋದರತ್ತೆ ಲಲ್ಲಮ್ಮ..ಸೋದರ ಮಾವ ಬಿ.ಎನ್. ಕಾಮತ್- ಶಿವಮೊಗ್ಗದವರು. ಸೋದರತ್ತೆ ಹಿಂದಿನ ತಿಂಗಳು ದೈವಾಧೀನರಾದರು. :-(


ನಮ್ಮ ಮಾವನವರು home guards ಸೇವೆಯಲ್ಲಿದ್ದಾಗ.

ಉದ್ದಿನ ಮೂಹೂರ್ತ.. ಶ್ರೀಕಾಂತ್ ಅಣ್ಣನ ಮದುವೆ


ವಧು-ವರರ ಕುಟುಂಬ ಎದುರುಗಾಣಿಸುವುದು..ಶ್ರೀಕಾಂತ್ ಅಣ್ಣನ ಮದುವೆ


ಮಾಲವಿಕ- photography trainee subbu cameraದಲ್ಲಿ




ಮಾಲು-ನೀಹಾ ಖ್ಯಾತ ಛಾಯಾಗ್ರಾಹರಾದ ಹಾಸನದ ಕೆ.ಪಿ. ಸತ್ಯನಾರಾಯಣ್ ನಮ್ಮಲ್ಲಿ ಬಂದಾಗ ತೆಗೆದಿದ್ದು.





:-)