May 31, 2010

ನೀರ್ಗೊಜ್ಜು

ನೀರ್ಗೊಜ್ಜು: ಇದನ್ನು ಮಾಡುವ ಬಗ್ಗೆ, ಸೇವಿಸುವ ಬಗ್ಗೆ ಸುಶ್ರುತ ಅವರ ಚಿಕ್ಕ ಚೊಕ್ಕ ಪ್ರಬಂಧ ಓದಿದ ನಂತರವೇ ಮುಂದುವರೆಸಿ


ಶ್ರೀಕಾಂತ್ ಕಣ್ಣು ಮುಚ್ಚಿ divine divine ಅಂತ ಗುಣುಗುಣಿಸ್ತಾ ಅಪ್ಪೆ ಹುಳಿಯನ್ನು (ನೀರ್ಗೊಜ್ಜು) ಹೀರತಾ ಇದ್ರು. ದೈವ ಸಾಕ್ಷಾತ್ ಕಾರ ಅಥವಾ ಸಾಕ್ಷಾತ್ ಖಾರ ನಾ ಅಂತ ಗೊತ್ತಾಗಲಿಲ್ಲ. ಸರಕ್-ಬುರುಕ್-sound effect ಜತೆ ಅವರು enjoy ಮಾಡಿದ್ದಕ್ಕೆ ನಾನು, ಮಾಲವಿಕ, ನಿಹಾರಿಕಾ ಸಾಕ್ಷಿ.

ನೀರ್ಗೊಜ್ಜು ಸಖ್ಹತ್ kick ಕೊಟ್ಟಿರಬೇಕು ಯಾಕಂದ್ರೆ, ಊಟ ಆದಮೇಲೆ ಶ್ರೀಕಾಂತ್ ’ಬ್ರಾಹ್ಮಣ ಸಂತೃಪ್ತನಾದ- may god bless my wife for keeping my body and soul together, thank you malathi’ ಅಂತ ಇಂಗ್ಲಿಷ್ ನಲ್ಲಿ ಆಶೀರ್ವಾದ ಬೇರೆ ಮಾಡಿದ್ರು.

ಸುಶ್ರುತನ recipe ಯಲ್ಲಿ ಸ್ವಲ್ಪವೇ ಬದಲಾವಣೆ ಮಾಡಿದ್ದೇನೆ. ಒಂದು, ಮಾವಿನ ಕಾಯಿಯನ್ನು ಸಣ್ಣದಾಗಿ ಕತ್ತರಿಸುವ ಬದಲು, ಅದನ್ನು ತುರಿದು ಹಾಕಿದೆ. ಮತ್ತು mixie ಯಲ್ಲಿ ಹಾಕುವ ಬದಲು ರುಬ್ಬುವ ಕಲ್ಲಿನ ಉಪಯೋಗ ಮಾಡಿದೆ. ಒಗ್ಗರಣೆ ಹಾಕುವ ಮೊದಲು, ರುಬ್ಬಿದ ಪದಾರ್ಥವನ್ನು ಸೋಸಿದೆ.

ನನ್ನ ಹಾಗೂ ನನ್ನ ಹಳೇಯ ರುಬ್ಬುವ ಕಲ್ಲಿನ ನಂಟನ್ನು ಕಂಡ ನನ್ನ ಆಪ್ತರು ನನಗೆ relic, museum piece ಅಂತ ಹೆಸರು ಇಟ್ಟಿದ್ದಾರೆ.
ಗ್ರಾಮೀಣ ತಿಂಡಿಗಳನ್ನು (esp ಹಲಸಿನ ಎಲೆ ಕೊಟ್ಟೆ ಕಡುಬು, ಅರಸಿನ ಎಲೆ ಸಿಹಿ ಕಡುಬು, ಪತ್ರೋಡೆ etc) ಮಾಡುವಾಗ ನಾನು ನನ್ನ ರುಬ್ಬುವಕಲ್ಲಿನ ಮೇಲೆ ಹೆಚ್ಚು Dependant. ಯಾರು ಏನೇ ಹೇಳಲಿ, ರುಬ್ಬುವ ಕಲ್ಲಿನಲ್ಲಿ ರುಬ್ಬಿ ತಯಾರಿಸಿದ ಇಡ್ಲಿ, ದೋಸೆ, ಚಟ್ನಿ, ಮಸಾಲೆ, ಉಪ್ಪಿನಕಾಯಿ ತುಂಬಾ ರುಚಿ. :-)

ಉಪ್ಪಿನಕಾಯಿ ಮಾಡುವಾಗಲೂ ಹಾಗೆ ಮಿಕ್ಸಿ ಯಲ್ಲಿ ಹಾಕಿದರೆ ಬೇಗ ಹಾಳಾಗುತ್ತೇನೋ ಎಂಬ ಹೆದರಿಕೆ. ಮತ್ತು ಉಪ್ಪಿನಕಾಯಿಗೆ ರುಬ್ಬುವಾಗ ಅಡಿಕೆ ಹಾಳೆಯನ್ನು ಉಪಯೋಗಿಸ್ತೇನೆ. ಆಗ ಕೈಬೆರಳು ಉರಿಯುವುದೂ ಇಲ್ಲ, ಉಪ್ಪಿನಕಾಯಿನೂ sanitised condtion ನಲ್ಲಿ ತಯಾರಾದ ಹಾಗಾಗುತ್ತಲ್ಲವಾ?

ಬೆಳಗಾವಿಯಿಂದ  ಉಪ್ಪಿನಕಾಯಿ ಮಾಡಲು ತಂದ ಅಪ್ಪೆಮಿಡಿ ಹೇಗೂ ಇತ್ತು, ಕಾಕತಾಳೀಯವೆಂಬಂತೆ ಸುಶ್ರುತ ಅವರ article ವಿಜಯಕರ್ನಾಟಕ(ರವಿವಾರದ ಲವಲvk)ದಲ್ಲಿ ಬಂತು. ಅಂತೂ ಸುಶ್ರುತನ ನೀರ್ಗೊಜ್ಜು ಪ್ರಭಾವ-ಅದನ್ನು ತಯಾರಿಸಿದ್ದಷ್ಟೆ ಅಲ್ಲ, ನನ್ನಿಂದ ಇಷ್ಟೆಲ್ಲ ಬರೆಯುವಂತೆ ಕೂಡ ಮಾಡಿತು.

thanks Sushrutha!!

:-)

15 comments:

  1. ನೀರ್ಗೊಜ್ಜು ಸೂಪರ್
    ಯಾವಾಗ ಊಟಕ್ಕೆ ಬರಲಿ :)

    ReplyDelete
  2. ಮಾಲತಿ ಅಕ್ಕ..Nice write up:)).I agree to ur view..ನನ್ನ ಅಮ್ಮ, ಅತ್ತೆ ರುಬ್ಬುವಕಲ್ಲನ್ನು ಉಂಡೆ, ಪತ್ರೊಡೆ, ಉಪ್ಪಿನಕಾಯಿ ಮಾಡಲು ಇನ್ನು ಉಪಯೋಗಿಸುತ್ತಾರೆ..:))

    ReplyDelete
  3. "ರುಬ್ಬುವ ಕಲ್ಲಿನಲ್ಲಿ ರುಬ್ಬಿ ತಯಾರಿಸಿದ ಇಡ್ಲಿ, ದೋಸೆ, ಚಟ್ನಿ, ಮಸಾಲೆ, ಉಪ್ಪಿನಕಾಯಿ ತುಂಬಾ ರುಚಿ "

    ಇದು 200% ಸರಿ. ರುಬ್ಬುಗುಂಡಲ್ಲಿ ರುಬ್ಬಿ ಮಾಡಿದ ಚಟ್ನಿ ಬೇಗ ಹಳಸೋದಿಲ್ಲ, ಅದೇ Mixer ದು ಈ ಬೇಸಿಗೆಯಲ್ಲಂತೂ ಬೇಗ ಠುಸ್ ಆಗಿಬಿಡುತ್ತೆ. ರುಬ್ಬುಗುಂಡಿನ ಬಗ್ಗೆ ಮಾತಾಡಿದ್ದು ನಂಗೆ ’ಸಿಕ್ಕಾಪಟ್ಟೆ’ ಖುಷಿ ಆಯ್ತು.

    ReplyDelete
  4. ಮಾಲತಿ ಮೇಡಂ,
    ಇವತ್ತಿನ ದಿನವೇ ಸರಿಯಾಗಿಲ್ಲ! ಅಥವಾ ನಿಮಗೂ ನಮ್ಮ ಮೇಲೆ ಸಿತ್ತೆನಾದರೂ ಇದೆಯೋ ಹೇಗೆ?
    ಸುಶ್ರುತ ಸರ್, ನೀವೂ ಇಬ್ಬರು ಬರಿ ಬಾಯಲ್ಲಿ ನೀರಿಳಿಸಿಬಿಟ್ರಲ್ಲ!!!!!!
    ಅಂತೂ ಬರೀ ಅಸೆ ತೋರ್ಸೋದೆ ಆಯಿತು...........:(

    ReplyDelete
  5. ನಿಜ ಇದರ ರುಚಿಯೇ ಸೊಗಸು. ಇಂದಿನ ವಿಜಯಕರ್ನಾಟಕದಲ್ಲಿ ಸುಶ್ರುತ ಅವರ ಲೇಖನ ಓದಿದ್ದೆ

    ReplyDelete
  6. ನೀರ್ಗೊಜ್ಜು ನಿಜಕ್ಕೂ ಎಲ್ಲರಿಗೂ ಒಳ್ಳೆ ಸ್ಫೂರ್ತಿ ನೀಡಿದೆ .

    ReplyDelete
  7. hahaha super... ootakke barteevi naavu

    ReplyDelete
  8. thanks for recipe! slightly different from our method (south canara)

    ReplyDelete
  9. ಆಹಾ!! ಬಾಯಿ ಚಪ್ಪರಿಸಿಕೊಂಡು ತಿಂದೆ, ಅಲ್ಲ ಅಲ್ಲ ಓದ್ದೆ ಇದನ್ನು. ಒಂದ್ ಸಲ ಟ್ರೈ ಮಾಡ್ಲೇಬೇಕು.

    ನೀರ್ಗೊಜ್ಜುದಾತಾ ಸುಖೀಭವ.

    ReplyDelete
  10. bayaali neer bartha idhe.....ootakke naavu ready....

    ReplyDelete
  11. ha ha ha..taste ge yen madodu iga..
    Raaghu.

    ReplyDelete
  12. ಮಾಲತಿ, ನೀರ್ಗೊಜ್ಜು ..ಮಿಡಿ ಉಪ್ಪಿನಕಾಯಿ...ಮತ್ತೆ ಆಂಧ್ರ ಸ್ಪೆಶಲ್ ಗೊಂಗೂರ ಬ್ಯಾಚುಲರ್ಸ್ ಗೆ ಮತ್ತೆ ಫೋರ್ಸ್ಡ್ ಬ್ಯಚುಲರ್ಸ್ ಗೆ ...ವಾವ್ ..ಏನು ಪರಿಹಾರ...ಮತ್ತೆ ಸ್ವಾದ ಸಹಾ...

    ReplyDelete
  13. ಆಹಾ! ಈ ಬೆಂಗಳೂರಲ್ಲೂ ಈ ಕಾಲದಲ್ಲಿ ರುಬ್ಬುವ ಕಲ್ಲನ್ನು ಇಟ್ಟುಕೊಂಡು ಉಪಯೋಗಿಸುತ್ತೀರಾ ಅಂತ ತಿಳಿದು ಖುಷಿ ಆಯಿತು :) ನಾವೂ ಬಂದು ತಿಂದು ಹಾರೈಸುತ್ತೇವೆ 'ಅನ್ನದಾತ ಸುಖೀಭವ' ಅಂತ.. ರುಬ್ಬುವ ಕಲ್ಲಿನಲ್ಲಿ ತಯಾರಿಸಿನೇ ನೀರ್ಗೊಜ್ಜು ಮಾಡಿ ಕೊಡ್ತೀರಾ ತಾನೇ ?:D

    ReplyDelete
  14. ರುಬ್ಬುವ ಕಲ್ಲಿನ ಬಗ್ಗೆ ನಿಮ್ಮ ಮಾತು ನೂರಕ್ಕೆ ನೂರು ಸತ್ಯ. ಆಧುನಿಕ ಯಂತ್ರಗಳಿಂದ ಕಡೆದು ತಯಾರಿಸಿದ ತಿಂಡಿ ಗಿಂತ ರುಬ್ಬು ಕಲ್ಲಿನಲ್ಲಿ ಕಡೆದು ತಯಾರಿಸಿದ್ದಕ್ಕೆ ವಿಶೇಷ ರುಚಿ ಇರತ್ತೆ. ನಿಮ್ಮ ಕಳಕಳಿಗೆ ಧನ್ಯವಾದಗಳು. ಯಾವಾಗ ನನ್ನನ್ನು ಊಟಕ್ಕೆ ಕರೆಯುತ್ತಿರ ಅಂತ ದಾರಿ ಕಾಯುತ್ತಿದ್ದೇನೆ. ಆ ಸಮಯ ಬೇಗನೆ ಬರಲಿ ಎಂದು ಹಾರೈಸುತ್ತಿದ್ದೇನೆ :) :-) :-D

    ReplyDelete
  15. ಬರೀ ನೀರ್ಗೊಜ್ಜಿಗೇ ಫ್ಲಾಟೇ ಪತಿರಾಯ?
    ಇರಲಿಕ್ಕಿಲ್ಲ,
    ಅಪ್ಪೆಮಿಡಿಗೆಲ್ಲಿ ಬಂದೀತು
    ಮಿಡಿಯುವುದು ಏಕಾಂತದಲ್ಲಿ?
    ಅದೂ ಒಂದು ನೆಪ ಮೆಚ್ಚಿಸಲು
    ಅಪರೂಪಕೆ ಸಿಕ್ಕೋ ಕಾಂತೆಯನ್ನು...

    ಒಲಿದವಳು ಉಸಿರಿದರೂ ಅದೂ
    ದೇವಲೋಕದ ಅಪರೂಪದ ಭಾಷೆ
    ಮೆಚ್ಚುವವನಿಗೆ!

    ReplyDelete