ನಮ್ಮ ಕಿರಾಣಿ(grocery) ಅಂಗಡಿಯವನು- ಶ್ರಿ ವೆಂಕಟೇಶ್ವರ buy and save , ಸಂಕ್ರಾಂತಿ ಹಬ್ಬಕ್ಕೆ ಒಂದು ವಾರ ಇದೆ ಎನ್ನುವಾಗ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು , ಪುಟ್ಟ ಪುಟ್ಟ ಪ್ಲ್ಯಾಸ್ಟಿಕ್ ಡಬ್ಬಿಗಳನ್ನು ಅಂಗಡಿಯ ಮೆಟ್ಟಿಲಿನ ಮೇಲೆ ಒಂದು ಮರದ ಚಚೌಕಾರದ ಟೇಬಲ್ ಇಟ್ಟು ಮಾರುತ್ತಾನೆ. ನಾನು ಯಾವತ್ತು ಹಬ್ಬದ ಮುನ್ನಾ ದಿನ ಸಂಜೆ ಹೋಗಿ ಎಳ್ಳು ಬೆಲ್ಲ ಖರೀದಿಸುತ್ತೇನೆ. ಹಿಂದಿನ ವರ್ಷ ಹೀಗೆ ರಶ್ ನಲ್ಲಿ ನನ್ನ ಸರದಿಗಾಗಿ ನಾನು ನಿಹಾರಿಕಾ ಕಾಯ್ತಾ ಇದ್ವಿ. ನನ್ನ ಎದುರಿಗೆ ವಯಸ್ಸಾದ ಹೆಂಗಸೊಬ್ಬರು ನಿಂತಿದ್ದರು. ಉಟ್ಟಿದ ಸಿಲ್ಕ್ ಸೀರೆ ಸುಮಾರು wash ಕಂಡಿದ್ದು ಅಲ್ಲಲ್ಲಿ ಬಣ್ಣ ಮಾಸಿತ್ತು. ಕಿವಿಯಲ್ಲಿನ ವಜ್ರದ ಬೆಂಡೋಲೆ ಫಳ ಫಳ ಹೊಳೆಯುತ್ತಿತ್ತು. ಒಂದಾನೊಂದು ಕಾಲದಲ್ಲಿ ಆರ್ಥಿಕವಾಗಿ ಚೆನ್ನಾಗಿದ್ದಿರಬೇಕು. ಅವರು ಒಂದು ಪ್ಯಾಕೆಟ್ ಎಳ್ಳು ಬೆಲ್ಲ ಕೊಂಡು ಅದರ ಕ್ರಯ ಕೇಳಿದರು. ಅಂಗಡಿಯ ಹುಡುಗಿ 25 ರೂ ಅಂತ ಹೇಳಿದಳು. ಅವರು ಪರ್ಸ್ ತೆರೆದಾಗ ಅದರಲ್ಲಿದ್ದುದೇ 20 ರೂ ನೋಟು. ಅಂಗಡಿಯವನು ಚಿಕ್ಕ ಪ್ಯಾಕೆಟ್ ಇಡುವುದಿಲ್ಲ. ಸ್ವಲ್ಪ ಹೊತ್ತು ಆ ಅಜ್ಜಿ ಸುಮ್ಮನೇ ನಿಂತರು. ಆಮೇಲೆ ಪ್ಯಾಕೆಟ್ 20 ರೂ ಗೆ ಕೊಡುತ್ತಿಯಾ ಅಂತ ಆ ಹುಡುಗಿಗೆ ತುಂಬ ದೀನರಾಗಿ ಕೇಳಿದಾಗ ನನಗೆ ಕುರುಳು ಚುರ್ ಅಂದಿತು. ನಾನು ಹುಡುಗಿ ಬಳಿ ಸಾರಿ, ಅಜ್ಜಿಗೆ ಕೇಳಿಸದಹಾಗೆ- ಕೊಟ್ಟು ಬಿಡಿ 5 ರೂ ನಾನು ಕೊಡುತ್ತೇನೆ ಅಂದೆ. ಹುಡುಗಿ ಆ ಪ್ಯಾಕೆಟ್ ಆ ಅಜ್ಜಿಗೆ ಕೊಟ್ಟರು, ಅಜ್ಜಿ ಸಂತಸದಿಂದ ಆ ಹುಡುಗಿಗೆ ’ನಿನ್ನ ಹೊಟ್ಟೆ ತಣ್ಣಗಿರಲವ್ವ’ ಅಂತ ಹರಸಿ ಹೊರಟುಹೋದರು. ನನಗಂತೂ ಸಂಕ್ರಾಂತಿ ಹಬ್ಬ ಆಗಲೇ ಮಾಡಿದಷ್ಟು ಸಂಭ್ರಮ. ನೀಹಾರಿಕಾ ನನಗೆ ಅಲ್ಲೆ ಒಂದು hug ಸಹ ಕೊಟ್ಟಳು. ನನ್ನ ಖರೀದಿ ಎಲ್ಲ ಮುಗಿಸಿ ನಾನು ಮನೆಗೆ ಬಂದೆ.
ಮರು ದಿನ ಬೇರೆ ಎನೋ ಸಾಮಾನು ಬೇಕಾದ್ದರಿಂದ ಪುನಃ buy & save ಗೆ ಹೋದೆ. ಅಂಗಡಿ ಮಾಲೀಕ ’ಮೇಡಂ, ನಿನ್ನೆ ನೀವು ಐದು ರೂಪಾಯಿ ಆ ಅಜ್ಜಿ ಪರವಾಗಿ ಕೊಟ್ಟಿದ್ದನ್ನು ನಾನು ನೋಡ್ದೆ. ನನಗೆ ರಾತ್ರಿ ಇಡೀ ನಿದ್ದೆ ಬರಲಿಲ್ಲ, ಈ ಕೆಲಸ ನಾನೇ ಮಾಡಬಹುದಿತ್ತು. 5 ರೂ ನಿಂದ ನಾನೇನೂ ಬಡವನಾಗ್ತಿರಲಿಲ್ಲ. ತೆಗೊಳ್ಳಿ ಈ 5 ರೂ., ತಪ್ಪಾಗಿ ಭಾವಿಸಬೇಡಿ. ನನಗೆ ಸಮಾಧಾನ ಆಗುತ್ತೆ’ ಅಂತ ಹೇಳಿದರು.
ಮಜವಾಗಿತ್ತಲ್ಲವ ನನ್ನ ಹಬ್ಬ???
:-)
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಗಳು
happy sankarti
ReplyDeleteವಾಹ್! ಓದಿ ತುಂಬಾ ಖುಶಿಯಾಯ್ತು.
ReplyDeleteಇಂತಹ ಘಟನೆಗಳನ್ನು ನೋಡಿದಾಗ/ಕೇಳಿದಾಗೆಲ್ಲಾ ಒಂದು ರೀತಿಯ ಸಮಾಧಾನ ಆಗತ್ತೆ... ಜನರಲ್ಲಿ ಇನ್ನೂ ಮಾನವೀಯತೆ ಉಳಿದಿದೆ ಅಂತ. ಇದನ್ನು ನಾನು ನಿಮ್ಮ ಬಗ್ಗೆ ಹೇಳುತ್ತಿಲ್ಲ! ನೀವು ಎಂಥವರು ಅಂತ ನನಗೆ ಚೆನ್ನಾಗಿ ಗೊತ್ತು. Your noble act is quite obvious in the way you made sure the old lady didn't know what you did. :-) ನಾನು ಆ ವ್ಯಾಪಾರಿಯ ಬಗ್ಗೆ ಹೇಳ್ತಿದೀನಿ.
Thanks for sharing such a beautiful incident with us!
chennagidhe...
ReplyDelete"ಸಂಕ್ರಾಂತಿಯ ಹಾರ್ಧಿಕ ಶುಭಾಷಯಗಳು."
ಸಂಕ್ರಾತಿಯ ಶುಭಾಶಯಗಳು... :)
ReplyDeleteಒಳ್ಳೆಯ ಕೆಲಸ ಮಾಡಿದ್ದೀರಿ... ನೋಡಿ ಈಗ ಅಂಗಡಿಯನು ನಿಮ್ಮಿಂದ ಬುದ್ದಿ ಕಲಿತ....!
ನಿಮ್ಮವ,
ರಾಘು.
This is what called as "Making a difference!!" Good one - both incident and writ-up.
ReplyDeleteSuperb madam...!!!.
ReplyDeleteYou taught a beautiful lesson to many of us :).
thank you..
Happy Sankranti...
tadavaagi happy sankranti:)
ReplyDeleteಮಾಲತಿಯವರೆ....
ReplyDeleteವಿಷಯ ಬಹಳ ಸಣ್ಣದು ಅಂತ ಅನಿಸಿಬಿಡುತ್ತದೆ...
ಆದರೆ
ಅದರ ಪರಿಣಾಮ ಬಲು ದೊಡ್ಡದು...
ಐದು ರುಪಾಯಿ.. ನಿಮಗೂ.. ಅಂಗಡಿಯವನಿಗೂ.. ದೊಡ್ಡ ವಿಚಾರವಲ್ಲ..
ಆದರೆ..
ಆ ಅಜ್ಜಿಗೆ ಬಲುದೊಡ್ಡ ವಿಷಯ...
ಆ ಮುದಿ ಜೀವದ ಹಬ್ಬದ ಸಂಭ್ರಮ ಹೆಚ್ಚಿಸಿದ
ನಿಮಗೂ ಮತ್ತು ಅಂಗಡಿಯವನಿಗೂ ಅಭಿನಂದನೆಗಳು...
ನಿಮಗೂ..
ನಿಮ್ಮ ಮನೆಯವರಿಗೂ..
ನಿಮ್ಮ ಬ್ಲಾಗ್ ಓದುಗರಿಗೂ... ಸಂಕ್ರಾಂತಿಯ ಶುಭಾಶಯಗಳು...
u shown the way of humanity to that shop keeper and others tooo.he learnt something thats really good. thx for being my fren malathi.
ReplyDeleteಸಂಕ್ರಾಂತಿಯ ಶುಭಾಷಯಗಳು...ಒಳ್ಲೆಯ ಸ್ಥಳಪರಿಚಯ...ಧನ್ಯವಾದ
ReplyDeletesmall things make big difference...
ReplyDeleteಮೇಡಂ,
ReplyDelete೨೦೧೨ ರ ಸಂಕ್ರಾಂತಿಯ ಶುಭ ಹಾರೈಕೆಗಳು.
ಮನಸ್ಸು ತಟ್ಟುವ ಬರಹಗಳು. ನಿಮ್ಮ ಎಲ್ಲ ಬರಹಗಳನ್ನು ಓದುತ್ತ ಕುಳಿತಿದ್ದೀನಿ.
:-)
ReplyDeletethank you Srikanth MishrikOTi yavarige!!
because of u i read my post once again!!! hopefully my kannada has improved from last time.
will try and post something tomorrow
u made me happy though!!
malathi S