’ಸ್ವರಾಜ್ಯ ಹಾ ಮಾಝಾ ಜನ್ಮ ಸಿದ್ಧ ಹಕ್ಕ ಆಹೆ ಆಣಿ ತೋ ಮಿ ಮಿಳವಣಾರಚ”- 'ಸ್ವರಾಜ್ಯ ನನ್ನ ಜನ್ಮ ಸಿದ್ದ ಹಕ್ಕು, ಅದನ್ನು ನಾನು ಪಡೆದೇ ತೀರುತ್ತೇನೆ' ಎಂಬ ಘೋಷಣೆ /ಘರ್ಜನೆ ಯಾರಿಗೆ ತಾನೆ ಗೊತ್ತಿಲ್ಲ?? ಇತಿಹಾಸ ಓದಿದ ಎಲ್ಲರಿಗೂ ಅವರು ಗೊತ್ತು ಹಾಗೂ ವೈಕೀಪಿಡಿಯಾದಲ್ಲೂ ಅವರ ಬಗ್ಗೆ ಸಾಕಷ್ಟು ಮಾಹಿತಿ ಸಿಗುತ್ತದೆ. 

ಆದರೂ..................
ಮಕ್ಕಳ christmas vacation ಗೆ ನಾವು ಗಣಪತಿ ಪುಲೇ (ಮಹಾರಾಷ್ಟ್ರ) ಗೆ ಹೋಗಿದ್ದೆವು. ದಾರಿಯಲ್ಲಿ ನಮಗೆ ರತ್ನಾಗಿರಿಯಲ್ಲಿರುವ ಲೋಕಮಾನ್ಯ ಬಾಲಗಂಗಾಧರ ಟಿಳಕ್ ರ ಮನೆ ನೋಡುವ ಅವಕಾಶ ಒದಗಿ ಬಂತು. ಇಲ್ಲಿವೆ ಅವರು ಹುಟ್ಟಿ ಬೆಳೆದ ಮನೆಯ ಕೆಲವು ಚಿತ್ರಗಳು. 300 ವರ್ಷದ ಹಳೆಯ ಮನೆಯನ್ನು ಪುರಾತತ್ವ ಇಲಾಖೆಯವರು ಅದರ ಮೂಲ facade ಹಾಳು ಮಾಡದೆ ನವೀಕರಿಸಿದೆ.
ಮರಾಠಿಯಲ್ಲಿ -ಲೋಕಮಾನ್ಯ ಬಾಳ್ ಗಂಗಾಧರ್ ಟಿಳಕ್. ಬಾಳ್ ಅಂದ್ರೆ ಮಗು. ಲೋಕಮಾನ್ಯ ಅಂದರೆ ಜನರಿಂದ ಮನ್ನಣೆ ಪಡೆದವರು.

ನಿಮಗಿದು ಗೊತ್ತಾ?
ಆದರೂ..................
ಮಕ್ಕಳ christmas vacation ಗೆ ನಾವು ಗಣಪತಿ ಪುಲೇ (ಮಹಾರಾಷ್ಟ್ರ) ಗೆ ಹೋಗಿದ್ದೆವು. ದಾರಿಯಲ್ಲಿ ನಮಗೆ ರತ್ನಾಗಿರಿಯಲ್ಲಿರುವ ಲೋಕಮಾನ್ಯ ಬಾಲಗಂಗಾಧರ ಟಿಳಕ್ ರ ಮನೆ ನೋಡುವ ಅವಕಾಶ ಒದಗಿ ಬಂತು. ಇಲ್ಲಿವೆ ಅವರು ಹುಟ್ಟಿ ಬೆಳೆದ ಮನೆಯ ಕೆಲವು ಚಿತ್ರಗಳು. 300 ವರ್ಷದ ಹಳೆಯ ಮನೆಯನ್ನು ಪುರಾತತ್ವ ಇಲಾಖೆಯವರು ಅದರ ಮೂಲ facade ಹಾಳು ಮಾಡದೆ ನವೀಕರಿಸಿದೆ.
ಮರಾಠಿಯಲ್ಲಿ -ಲೋಕಮಾನ್ಯ ಬಾಳ್ ಗಂಗಾಧರ್ ಟಿಳಕ್. ಬಾಳ್ ಅಂದ್ರೆ ಮಗು. ಲೋಕಮಾನ್ಯ ಅಂದರೆ ಜನರಿಂದ ಮನ್ನಣೆ ಪಡೆದವರು.
ಒಂದು ಸಲ ಮೇಸ್ಟ್ರು ತರಗತಿಗೆ ಬರಲು ವಿಳಂಬವಾಯಿತು. ಮಕ್ಕಳೆಲ್ಲ ಕಡಲೆಕಾಯಿ ತಿಂದು ಅದರ ಸಿಪ್ಪೆಯನ್ನು, ತರಗತಿ ತುಂಬ ಅಲ್ಲಲ್ಲಿ ಹಾಕಿದರು. ಮೇಸ್ಟ್ರು ತರಗತಿಗೆ ಬರಲು ಸಹಜವಾಗಿ ಅವರಿಗೆ ಸಿಟ್ಟು ಬಂದಿತು. ಯಾವೊಬ್ಬ ವಿದ್ಯಾರ್ಥಿ ಶೇಂಗಾ ಸಿಪ್ಪೆಯನ್ನು ತಾನು ಹಾಕಿದ್ದು ಎಂದು ಒಪ್ಪಿಕೊಳ್ಳಲು ಸಿದ್ದರಿರಲಿಲ್ಲ. ಮೇಸ್ಟ್ರು ಎಲ್ಲರಿಗೂ ಛಡಿ ಏಟು ಕೊಡುತ್ತ ಬಂದರು. ತಿಲಕ ರ ಬಳಿ ಬಂದಾಗ ಅವರು ತಮ್ಮ ಕೈ ಮುಂದೆ ಮಾಡಲು ನಿರಾಕರಿಸಿದರು. ತಾನು ತಪ್ಪು ಮಾಡಿಲ್ಲ ಅದಕ್ಕೆ ನಾನು ಏಟಿಗೆ ಅರ್ಹನಲ್ಲವೆಂಬುದೆ ಅವರ ವಾದ. ಹೋಗಲಿ ಬಿಡು, ತರಗತಿಯನ್ನು ಗಲೀಜು ಮಾಡಿದ ಹುಡುಗರ ಹೆಸರಾದರೂ ಹೇಳು ಅಂತ ಗುರುಗಳು ಹೇಳಿದಾಗ ಅದನ್ನೂ ಒಪ್ಪಲಿಲ್ಲ.........
16 ವರ್ಷ ವಯಸ್ಸಿನ ತಿಲಕ್ ರಿಗೆ 10 ವರ್ಷದ ತಾಪೀಬಾಯಿ ಜತೆ ವಿವಾಹವಾಯಿತು. ತಿಲಕರು ಸಣಕಲಾದರೆ ಅವರ ಪತ್ನಿ ಮೈ ಕೈ ತುಂಬಿ ದುಂಡಗಿದ್ದರು. ಅವರ ಮಿತ್ರರೆಲ್ಲ ಅವರನ್ನು ಗೇಲಿ ಮಾಡುತ್ತಿದ್ದರು. ಇದರಿಂದ ಬೇಸತ್ತ ತಿಲಕ್ , ಗರಡಿ ಮನೆಗೆ ಹೋಗಲಾರಂಭಿಸಿದರು. ಕುಸ್ತಿ, ಮಲ್ಲಕಂಭ, ಈಜು,rowing, ಊಟ ತಿಂಡಿಯ ಕಡೆ ವಿಶೇಷ ಗಮನಕೊಟ್ಟು ಒಂದೇ ವರ್ಷದಲ್ಲಿ ದೃಢಕಾಯರಾದರು. ಆದರೆ ಇದರಿಂದ ಓದಿನ ಕಡೆ ಅವರ ಲಕ್ಷ್ಯ ಕಡಿಮೆಯಾಗಿ ಒಂದು ವರ್ಷ ನಪಾಸಾದರು. ಅವರ ವಾದ: ಒಂದು ವರ್ಷ ಹೋದರೇನಾಯಿತು, ಮುಂದಿನ ವರ್ಷಗಳಲ್ಲಿ ನನ್ನ ಅರೋಗ್ಯ ಕಾಪಾಡುವಲ್ಲಿ ಇದು ನನಗೆ ಸಹಾಯಕವಾಯಿತು.
:-)
ಮಾಲತಿ,
ReplyDeleteಒಳ್ಳೆ ಮಾಹಿತಿ ವಿವರಣೆಯೊಂದಿಗೆ ಫೋಟೋ ಸಹ ಬಹಳ ಚೆನ್ನಾಗಿದೆ....
ಚೆಂದದ ಲೇಖನಕ್ಕಾಗಿ ಅಭಿನಂದನೆಗಳು....
wow super photo's and good information
ReplyDeleteಮಾಲತಿ ಅವರೇ... :)
ReplyDelete"ಸ್ವರಾಜ್ಯ ನನ್ನ ಜನ್ಮ ಸಿದ್ದ ಹಕ್ಕು".... ಈ ಸಾಲಿಗೆ ತಿಲಕ್ ಅವರು ಏನೋ ಒಂದು ಶಕ್ತಿ ತುಂಬಿದ್ದಾರೆ...! ಕಡಲೆಕಾಯಿ ಸ್ಟೋರಿ ಸೂಪರ್...! ಒಳ್ಳೆಯ ಮಾಹಿತಿಯ ಸವಿ ಸಿಹಿಯನ್ನ ನೀಡಿದ್ದೀರಿ...
ನಿಮ್ಮವ,
ರಾಘು.
"ಸ್ವರಾಜ್ಯ ನನ್ನ ಜನ್ಮ ಸಿದ್ದ ಹಕ್ಕು"...
ReplyDeleteಸ್ವಾತಂತ್ರ್ಯಕ್ಕೋಸ್ಕರ ಹೋರಾಡಿದ ಮಹಾನ್ ಚೇತನಕ್ಕೆ ನನ್ನ ನಮನಗಳು....
ಮಾಹಿತಿಯುಕ್ತ ಚಿತ್ರಲೇಖನಕ್ಕೆ ಧನ್ಯವಾದಗಳು....
ತಿಲಕರಂತಹ ಮಹಾನ್ ವ್ಯಕ್ತಿಯೊಬ್ಬರು ವಾಸವಿದ್ದ ಮನೆಯನ್ನು ನಿಮ್ಮ ಮೂಲಕವಾದರೂ ನೋಡುವ ಅದೃಷ್ಟ ಕಲ್ಪಿಸಿದ್ದಕ್ಕೆ ಥ್ಯಾಂಕ್ಸ್! ಅದರ ಜೊತೆಗೆ ನಿಮ್ಮ ಸುಂದರ ಶೈಲಿಯ ಬರಹ! ಖುಶಿಯಾಯ್ತು. :-)
ReplyDeletemahiti sagrahisi tilisidakk danyavadavugalu
ReplyDelete