ಬೆಂಗಳೂರಿಂದ ಮೈಸೂರು, ಅಲ್ಲಿಂದ ಗುಂಡ್ಲುಪೇಟೆ. ಗುಂಡ್ಲು ಪೇಟೆ ಯಿಂದ ಗೋಪಾಲಸ್ವಾಮಿ ಬೆಟ್ಟ ೧೫ ಕಿ.ಮಿ. ಶಿಖರವನ್ನೇರಲು 5 ಕಿ.ಮಿ ಅಷ್ಟು ಮಾರ್ಗ ಮೇಲೇರಬೇಕಾಗುತ್ತದೆ. ಸಮುದ್ರ ಮಟ್ಟದಿಂದ 1446 ಮೀ ಎತ್ತರದಲ್ಲಿರುವ ಈ ಬೆಟ್ಟ ಅತೀ ಸುಂದರವಾದ ಹಸಿರು ತಾಣ ಹೊಂದಿದೆ. ಬೆಟ್ಟದ ಬುಡದಲ್ಲಿನ ಚೆಕ್ ಪೋಸ್ಟ್ ನವರು ಪ್ಲ್ಯಾಸ್ಟಿಕ್ ಅಥವಾ ಪ್ರಾಣಿಗಳಿಗೆ ಹಾನಿ ಉಂಟು ಮಾಡುವಂತಹ ವಸ್ತುಗಳನ್ನು ತೆಗೆದು ಕೊಂಡು ಹೋಗಲು ಬಿಡುವುದಿಲ್ಲ.
ಹಳೆಯ ಕೋಟೆಯೊಂದರ ಒಳಗೆ ಈ ದೇವಸ್ಥಾನ ಸ್ಥಿತ ವಾಗಿದೆ. ಈಗ ಕೋಟೆ ಹೋಗಿ ಸಿಮೆಂಟ್ ನಿಂದ ಮಾಡಿದ ಕಾಂಪೌಂಡ್ ಒಳಗಿದೆ ಈ ದೇವಸ್ಥಾನ. ದೇವರ ಮೂರ್ತಿ ತುಂಬಾ ಚೆನ್ನಾಗಿದೆ. ದೇವಾಲಯದ ಎಡ ಬದಿಗೆ ಹೋದಾಗ airtel ನ ’ತಮಿಳುನಾಡಿಗೆ ಸ್ವಾಗತ’ ಎಂಬ ಎಸ್.ಎಮ್.ಎಸ್ ಬಂತು. ದೇವಸ್ಥಾನ ಬಲಬದಿಗೆ, ಅಂದರೆ ಸ್ವಲ್ಪ ತಗ್ಗಿನ ಪ್ರದೇಶಕ್ಕೆ ಹೋದಾಗ welcome to Kerala ಅನ್ನುವ ಅವರ ಎಸ್.ಎಮ್.ಎಸ್. ಬಂಡಿಪುರ್ ಅರಣ್ಯದಲ್ಲಿರುವ ಈ ಬೆಟ್ಟದಲ್ಲಿ , ಅಲ್ಲೆಲ್ಲ ಆನೆ ಓಡಾಡುತ್ತಿರುವ ಸಂಕೇತವಾಗಿ ಆನೆ ಲದ್ದಿ ಕಂಡೆವು.


ದೇವರ ದರ್ಶನಕ್ಕೆ ಆ ದಿನ ತುಂಬ ಜನರಿದ್ದರು. ಕ್ಯೂ ಸಿಸ್ಟಮ್ ಇದ್ದುದರಿಂದ ಎಲ್ಲರಿಗೂ ಗರ್ಭಗುಡಿಯಲ್ಲಿ ಎರಡೆರಡು ನಿಮಿಷ time ಕೊಡಲಾಯಿತು. ತುಲಸಿ ಹಾಗೂ ಹೂವಿನ ಅಲಂಕಾರದಿಂದ ದೇವರ ಮೂರ್ತಿ ಕಾಣ್ತಿರಲಿಲ್ಲ. ಆದರೂ ಪುರೋಹಿತರು, ಮಾಲೆಗಳನ್ನು ಎತ್ತಿ ದೇವರ ಮಸ್ತಕ, ಕೊಳಲು, ದೇವರ ಪಾದದ ಬಳಿಯಿರುವ ವಿಗ್ರಹಗಳನ್ನು ತೋರಿಸಿ, ಗರ್ಭಗುಡಿಯ ಬಾಗಿಲ ಮೇಲಿಂದ ಒಸರುತ್ತಿದ್ದ ಹಿಮ/mist ನ್ನು ಮುಟ್ಟಲು ಅವಕಾಶ ಮಾಡಿಕೊಟ್ಟರು. ಅಲ್ಲಿಂದ ಸ್ವಲ್ಪ ನೀರನ್ನು ಭಕ್ತರ ಮೇಲೆ ಸಿಂಪಡಿಸಿದರು. ISKCON ನಿಂದ ಬಂದ ಗುಂಪು ಕೃಷ್ಣನ ಕೆಲವು ಗೀತೆಗಳನ್ನು ಸುಶ್ಯ್ರಾವ್ಯವಾಗಿ ಹಾಡಿತು.
ಬಿಸಿಲು ನೆರಳಿನಾಟದಲ್ಲಿ ಗುಡ್ಡದ ಬಣ್ಣವು change ಆಗ್ತಾ ಇದ್ದದ್ದು ನೋಡುವುದೇ ಒಂದು ಆಹ್ಲಾದಕರವಾದ ಅನುಭವ. ಎಷ್ಟೋ ಹೊತ್ತು ಅದನ್ನು ನೋಡುತ್ತ ಕುತಿದ್ದೆವು. ಇನ್ನೊಮ್ಮೆ ನಾವು ದೊಡ್ಡ ಗುಂಪುನ್ನು ಮಾಡಿ ಅಲ್ಲಿಗೆ ಹೋಗುವ plan ಹಾಕ್ಕೊಂಡಿದ್ದೇವೆ. ನೀವು ಎಂದಾದರೊಮ್ಮೆ ಭೇಟಿ ನೀಡಲೇ ಬೇಕಾದ ತಾಣ.
ಅಲ್ಲಿಂದ ಮೈಸೂರಿಗೆ ಬಂದು ದಸರಾ ಕರಕುಶಲ ಮೇಳಕ್ಕೆ ಹೋದೆವು. 200 ಕ್ಕಿಂತ ಹೆಚ್ಚು ಕರಕುಶಲ, ಬಟ್ಟೆ, ಪಾತ್ರೆ, ಆಟ, ತಿಂಡಿಗಳ ಮಳಿಗೆಗಳಿದ್ದವು. ಈ ವರ್ಷದ ವಿಶೇಷ ಆಕರ್ಷಣೆ ’snow ball’ ಅನ್ನುವ ಮಳಿಗೆ. ಸಂಜೆ ಅರಮನೆ ದೀಪಾಲಂಕೃತಗೊಂಡು ಮನಮೋಹಕ ದೃಶ್ಯ ಒದಗಿಸಿಕೊಟ್ಟಿತು. ದಸರಾ ಉತ್ಸವಕ್ಕೆ ಹೋದಾಗ ನಾವು ಇದನ್ನು ಮಿಸ್ ಮಾಡ್ಕೊಂಡಿದ್ದೆವು. ಡಿಸೆಂಬರ್ ತನಕ ನಡೆಯುತ್ತದೆ ಈ ಮೇಳ. ವಿವಿಧ ಆಟದಲ್ಲಿ ತಲ್ಲಿನ ಮಕ್ಕಳು ಹಾಗು ದೊಡ್ಡವರನ್ನು ನೋಡುವುದೂ ಮಜವಾಗಿತ್ತು.
ಮಾಲತಿ,
ReplyDeleteಸುಂದರ ತಾಣ....ಸೊಗಸಾದ ಚಿತ್ರಗಳು(ಕ್ಯಾಮೆರಾ ಸರಿ ಇದಿದ್ರೆ ಇನ್ನು ಚೆನ್ನಾಗಿರುತ್ತಿತ್ತು).....ಒಳ್ಳೆ ನಿರೂಪಣೆಯೊಂದಿಗೆ ಉಣಬಡಿಸಿದಿರಿ....
"ಹಿಮವದ್ ಗೋಪಾಲಸ್ವಾಮಿ ಬೆಟ್ಟ" ಈ ಜಾಗದ ಬಗೆ ಕೇಳಿದ್ದೆ...ನೋಡಿರಲಿಲ್ಲ.....ಮುಂದೆ ಅವಕಾಶ ಸಿಕ್ಕಾಗ ನೋಡುವೆ...
ಪರಿಚಯಿಸಿದ್ದಕ್ಕೆ ಧನ್ಯವಾದಗಳು.....
ಮಹೇಶ್!
Dear Mahesh !!!!
ReplyDeletethank you. most of the time u r the first one to comment.
ಕ್ಯಾಮರ ಸರಿ ಇದ್ದಿದ್ದ್ರೆ ಚಿತ್ರಗಳು ಇನ್ನೂ ಚೆನ್ನಾಗಿರುತ್ತಿತ್ತು- ಅನ್ನುವುದು ಒಂದು myth. ನನಗೆ ನಿಜಕ್ಕೂ ಫೋಟೊ ತೆಗೆಯಲು ಬರುವುದಿಲ್ಲ, :-)
But certainly you should visit that spot!
ಮಾಲತಿ ಎಸ್.
Very good write-up! The pictures are also very nice though they are kind of small. ಹೀಗೇ sudden plans ಹಾಕ್ತಾ ಇರಿ ಅಂತ ಶ್ರೀಕಾಂತ್ ಅವರಿಗೆ ಹೇಳಬೇಕು -- ನೀವೆಲ್ಲಾ ಹೋಗಿ ನೋಡಿ ಸಂತೋಷ ಪಡುವುದರ ಜೊತೆಗೆ ನಿಮ್ಮ ಬರವಣಿಗೆಯ ಮೂಲಕ ನಮಗೂ ಆ ಅನುಭವ ಹೀಗೆ ಪ್ರಾಪ್ತವಾಗತ್ತೆ. :-)
ReplyDeletemahiti chennagide
ReplyDeleteಮಾಲತಿಯವರೆ,
ReplyDeleteನಿಮ್ಮ ಲೇಖನ ತುಂಬಾ ಚೆನ್ನಾಗಿದೆ ಜೊತೆಗೆ ನಾವು ಒಮ್ಮೆ ನೋಡಬೇಕೆನಿಸುತ್ತದೆ.
ಧನ್ಯವಾದಗಳು
thank you Srikanth B, harish and manasu
ReplyDelete:-)
malathi S
Malti, sorry for not coming for long to your blog.
ReplyDeleteOlleya photos (cell nalli tegedaddu anta gottagolla..).
nimage samaya siguttalla suttadoke ..Hats off Shrikanth.
nimma modala chitra..hege tegedaddu? chennagide effectu...
ಚೆನ್ನಾಗಿ ಬರೆದಿದ್ದೀರಿ..ಧನ್ಯವಾದಗಳು...
ReplyDeleteನಿಮ್ಮವ,
ರಾಘು.
ಚೆನ್ನಾಗಿದೆ
ReplyDeleteನಾವು ಒಮ್ಮೆ ನೋಡಬೇಕೆನಿಸುತ್ತದೆ
Dear Shree kar
ReplyDeleteu should visit this spot...i have not done great justice to it in my write up...u should reach there before 5 am
thank u for reading
:-)
ms